Friday, December 27, 2024
Latest:
Current AffairsSpardha Times

ದೆಹಲಿ ಕ್ರೀಡಾ ವಿವಿಯ ಮೊದಲ ಉಪಕುಲಪತಿಯಾಗಿ ಕರ್ಣಂ ಮಲ್ಲೇಶ್ವರಿ

Share With Friends

ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯನ್ನಾಗಿ ಮಾಜಿ ಒಲಿಂಪಿಕ್ಸ್ ಪದಕ ವಿಜೇತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿಯವರನ್ನು ದೆಹಲಿ ಸರಕಾರ ನೇಮಿಸಿದೆ.  2000 ರಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ‘ಸ್ನ್ಯಾಚ್’ ಹಾಗೂ ‘ಕ್ಲೀನ್ ಮತ್ತು ಜರ್ಕ್’ ವಿಭಾಗಗಳಲ್ಲಿ 110 ಕಿಲೋಗ್ರಾಂ ಹಾಗೂ 130 ಕಿಲೋಗ್ರಾಂಗಳನ್ನು ಎತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದರು.  ದಿಲ್ಲಿ ವಿಧಾನಸಭೆಯು 2019 ರಲ್ಲಿ ದಿಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು (ಡಿಎಸ್‌ಯು) ಸ್ಥಾಪಿಸುವ ಮಸೂದೆಯೊಂದನ್ನು ಅಂಗೀಕರಿಸಿತು. ಇದು ಕ್ರಿಕೆಟ್, ಫುಟ್‌ಬಾಲ್ ಹಾಗೂ ಹಾಕಿ ಸಹಿತ ಇತರ ಕ್ರೀಡೆಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತದೆ.

error: Content Copyright protected !!