Monday, January 13, 2025
Latest:
GKScienceSpardha Times

ಲೇಸರ್ ಕಿರಣಗಳ ಬಗ್ಗೆ ನಿಮಗೆಷ್ಟು ಗೊತ್ತು..?

Share With Friends

➤ ಲೇಸರ್ ವಿಸ್ತೃತ ರೂಪ
ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ (Light amplification by stimulated emission of radiation)  ( ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ).
* ಲೇಸರ್ ಎನ್ನುವುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ.
1960ರಲ್ಲಿ ಮೊದಲ ಬಾರಿಗೆ ಥಿಯೋಡೋರ್ ಹೆಚ್. ಮೈಮೆನ್ ಎನ್ನುವವರು ಹ್ಯೂಜಸ್ ಲ್ಯಾಬೋರೇಟರಿಯಲ್ಲಿ ಲೇಸರ್ ನ್ನು ಉತ್ಪಾದಿಸಿದರು. ಇದರ ಮೂಲವು ಚಾರ್ಲ್ಸ್ ಹಾರ್ಡ್ ಟೌನ್ಸ್ ಮತ್ತು ಆರ್ಥರ್ ಲಿಯೋನಾರ್ಡ್ ಸ್ಕಾಲೋವ್ಸ್ ಎನ್ನವವರ ಸಿದ್ಧಂತವನ್ನು ಆಧರಿಸಿದ್ದಾಗಿತ್ತು. ಕೆಂಪು(660 & 635 nm), ಹಸಿರು (532 & 520 nm) ಮತ್ತು ನೀಲಿ(445 & 405 nm) ತರಂಗದೂರವನ್ನು ಹೊಂದಿರುತ್ತದೆ. ಲೇಸರ್ ಎಂಬುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ 10 8 ವಾಟ್ / ಸೆಂ.ಮೀ ^2 ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀರ್ಣದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.

➤ ಲೇಸರ್ ಬೆಳಕಿನ ಲಕ್ಷಣಗಳು
* ಇದು ಏಕವರ್ಣಿಯ – ಲೇಸರ್ ಬೆಳಕು ಒಂದೇ ಬಣ್ಣದಿಂದ ಕೂಡಿರುತ್ತದೆ.
* ಇದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುತ್ತದೆ. – ಸಾಮಾನ್ಯ ಬೆಳಕು ನೇರವಾಗಿ ಚಲಿಸುವುದಿಲ್ಲ. ಇದು ಚದುರುತ್ತದೆ. ಆದರೆ ಲೇಸರ್ ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ.
* ಲೇಸರ್ ಬೆಳಕು ಅಧಿಕ ತೀವ್ರವಾಗಿರುತ್ತದೆ. – ಸಾಮನ್ಯ ಬೆಳಕು ಅಷ್ಟು ತೀವ್ರವಲ್ಲ. ಏಕೆಮದರೆ ಇದರಲ್ಲಿ ಕಡಿಮೆ ಮತ್ತು ಹೆಚ್ಚು ಆವೃತ್ತಿಯ ಕಿರಣಗಳಿರುತ್ತವೆ.
ಉದಾ: ರೇಡಿಯೋ ತರಂಗ, ಸೂಕ್ಷ್ಮ ತರಂಗಗಳು ಅಷ್ಟು ಹೆಚ್ಚು ತೀವ್ರವಾಗಿರುವುದಿಲ್ಲ. ಆದರೆ ಲೇಸರ್ ಬೆಳಕಿನಲ್ಲಿ ಎಲ್ಲಾ ಕಣಗಳೂ ಹೆಚ್ಚು ತೀವ್ರವಾಗಿರುತ್ತದೆ.
* ಲೇಸರ್ ಬೆಳಕು ಸಂಸಕ್ತವಾಗಿರುತ್ತದೆ. – ಲೇಸರ್‍ನಲ್ಲಿ ಹೊರಬರುವ ಉತ್ಸರ್ಜಿತ ಪ್ರೋಟಾಮುಗಳು ಎಲ್ಲವೂ ಸಹ ಒಂದೇ ಸ್ಥಿತಿಯಲ್ಲಿರುತ್ತವೆ. ಹೆಚ್ಚು ಮತ್ತು ಕಡಿಮೆ ಆವೃತ್ತಿ ಇರುವುದಿಲ್ಲ.

➤ ಲೇಸರ್ ಬೆಳಕು ಮತ್ತು ಸಾಮಾನ್ಯ ಬೆಳಕಿಗೆ ಇರುವ ವ್ಯತ್ಯಾಸಗಳು
# ಲೇಸರ್ ಬೆಳಕು
1. ಇದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವುದು
2. ಇದು ಏಕವರ್ಣೀಯ.
3. ಲೇಸರ್ ಬೆಳಕು ಅಧಿಕ ತೀವ್ರವಾಗಿರುತ್ತದೆ.
4. ಲೇಸರ್ ಬೆಳಕು ಸಂಸಕ್ತವಾಗಿರುತ್ತದೆ.

➤  ಸಾಮಾನ್ಯ ಬೆಳಕು
1. ಇದು ಒಂದೇ ದಿಕ್ಕಿನಲ್ಲಿ ಚಲಿಸದೆ ಚದುರುತ್ತದೆ.
2. ಇದು ಬಹುವರ್ಣೀಯ
3. ಸಾಮಾನ್ಯ ಬೆಳಕು ಲೇಸರ್‍ನಷ್ಟು ತೀವ್ರವಾಗಿರುವುದಿಲ್ಲ.
4. ಸಾಮಾನ್ಯ ಬೆಳಕು ಅಸಂಸಕ್ತವಾಗಿರುತ್ತದೆ.

➤ ಲೇಸರ್ ಬೆಳಕಿನ ಉಪಯೋಗಗಳು
ರಾಮನ್ ಪರಿಣಾಮವನ್ನು ಕಂಡುಹಿಡಿದ ಬಳಿಕ ಕೆಲವು ಅಣುಗಳ ರಚನೆಯನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾದದ್ದು, ಅದಕ್ಕಾಗಿಯೇ ಸಿ.ವಿ.ರಾಮನ್ ಇವರಿಗೆ ನೋಬೆಲ್ ಪಾರಿತೋಷಕ ದೊರೆತದ್ದು ಸಂಗತಿ ನಮಗೆಲ್ಲರಿಗೂ ಚಿರಪರಿಚಿತ. ಆದರೆ ಲೇಸರ್ ಕಂಡುಹಿಡಿದ ಬಳಿಕ ರಾಮನ್ ಪರಿಣಾಮದ ಅನ್ವಯ ಇನ್ನಷ್ಟು ವಿಸ್ತಾರಗೊಂಡಿತು. ಬಹಳಷ್ಟು ಅಣುಗಳ ರಚನೆಯ ವಿನ್ಯಾಸವನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾಯಿತು. ಇದರರ್ಥ ಲೇಸರ್ ಬೆಳಕಿನ ಉಪಯೋಗ ಕೇವಲ ರಾಸಾಯನಿಕ ವಿಜ್ಞಾನದಲ್ಲಿ ಇದೆ ಎಂದಲ್ಲ. ಲೇಸರ್ ಬೆಳಕಿನ ಉಪಯೋಗಗಳನ್ನು ಆಧುನಿಕ ಸಾಮಾಜಿಕ ಹಿನ್ನೆಲೆಯಲ್ಲಿ ಹೀಗೆ ಪಟ್ಟಿ ಮಾಡಬಹುದು.

1. ಲೇಸರ್ ರೇಂಜಿಂಗ್‍ನಲ್ಲಿ ಬಳಸುತ್ತಾರೆ.
2. ಕಳುಚಿರುವ ಅಕ್ಷಿಪಟಲವನ್ನು ಸರಿಹೊಂದಿಸಿ ಬೆಸುಗೆ ಹಾಕಿ ದೃಷ್ಟಿಯನ್ನು ಉಳಿಸಲು ಲೇಸರ್ ದ್ಯುತಿ ಶಸ್ತ್ರಚಿಕಿತ್ಸೆಯಲ್ಲಿ ಲೇಸರ್ ಬಳಸಲಾಗುತ್ತದೆ.
3. ರಕ್ತ ರಹಿತ ಶಸ್ತ್ರಕ್ರಿಯೆಗಳಲ್ಲಿ (ಎಂಡೋಸ್ಕೋಪ್‍ಗಳನ್ನು ಬಳಸಿ ಜಠರದಲ್ಲಿ ಬೆಳೆದ ಗಡ್ಡೆಗಳನ್ನು ನಿರ್ನಾಮಗೊಳಿಸುವುದು) ಮೂತ್ರಕೋಶದ ಕಲ್ಲುಗಳನ್ನು ಕರಗಿಸುವುದು. ಮುಂತಾದ ವೈದ್ಯಕೀಯ ಕ್ಷೇತ್ರಗಳಲ್ಲಿ ಲೇಸರ್‍ನ ಬಳಕೆ ಹೆಚ್ಚಾಗಿದೆ.
4. ಇತ್ತಿಚೆಗೆ ಶವವಿಲ್ಲದೆ ಶವದ ಭಾಗಗಳ ಕುರಿತು ಪಾಠವನ್ನು ಮಾಡಲು ಲೇಸರ್ ಬಳಕೆ ಆರಂಭಗೊಂಡಿದೆ.
5. ದಂತ , ಕ್ಷಯ ಮತ್ತು ಚರ್ಮರೋಗಗಳ ಚಿಕಿತ್ಸಾ ವಿಧಾನದಲ್ಲಿ ಲೇಸರ್ ಬಳಸಲಾಗುವುದು.
6. ಲೇಸರ್‍ನಿಂದ ಕೈಗಾರಿಕೆಗಳಲ್ಲಿ ಕತ್ತರಿಸುವುದು, ಕೊರೆಯುವುದು ಮತ್ತು ಬೆಸುಗೆ ಹಾಕಲು , ಕೆಲವು ಭಾಗಗಳನ್ನು ಮುಟ್ಟದೆ ಅವುಗಳ ಮಾಪನ ಮಾಡಲು ಬಳಸುತ್ತಾರೆ.
7. ಲೇಸರ್ ಬೆಳಕನ್ನು ಆಪ್ಟಿಕಲ್ ಫೈಬರ್ ಕೇಬಲ್‍ಗಳಲ್ಲಿ ಬಳಸುತ್ತಾರೆ.
8. ವಾತಾವರಣದಲ್ಲಿನ ಮಾಲಿನ್ಯಕಾರಕಗಳನ್ನು ಅಳೆಯಲು ಲೇಸರ್ ಬಳಸುತ್ತಾರೆ.
9. ಮನೋರಂಜನೆಗಾಗಿ ಲೇಸರ್ ಲೈಟ್ ಶೋಗಳನ್ನು ಮಾಡಲಾಗುತ್ತದೆ.
10. ರಕ್ಷಣಾ ಕ್ಷೇತ್ರಗಳಲ್ಲಿ ಟಾರ್ಗೆಟ್‍ಗಳನ್ನು ಗುರುತಿಸಲು, ಮಿಸೈಲ್‍ಗಳ ಗುರಿಯನ್ನು ನಿರ್ಧರಿಸಲು, ವಿರೋಧಿಗಳ ಪಡೆಗಳನ್ನು ಕುರುಡಾಗಿಸಲು ಲೇಸರನ್ನು ಬಳಸಲಾಗುತ್ತದೆ.
11. ರಾಮನ್ ರೋಹಿತ ದರ್ಶಕದಿಂದ ಒಂದು ವಸ್ತುವಿನ ಅಣು ರಚನೆಯನ್ನು ತಿಳಿಯಲು ಲೇಸರ್‍ನ್ನು ಬಳಸಲಾಗುತ್ತದೆ.
12. ಹಾಲೋಗ್ರಫಿ ಮತ್ತು ಅದರ ಅನ್ವಯಗಳಲ್ಲಿ ಲೇಸರನ್ನು ಬಳಸಲಾಗುತ್ತದೆ.

➤ ಹಾಲೋಗ್ರಫಿ – ಒಂದು ವಸ್ತುವಿನ ಮೂರು ಆಯಾಮಗಳ ಚಿತ್ರವನ್ನು ಪಡೆಯಲು ಬಳಸಲಾಗುವ ತಾಂತ್ರಿಕತೆಯನ್ನು ‘ ಹಾಲೋಗ್ರಫಿ’ ಎನ್ನುವರು. ಒಂದು ವಸ್ತುವಿನ ಮೂರು ಆಯಾಮಗಳೆಂದರೆ, ಉದ್ದ, ಅಗಲ ಮತ್ತು ದಪ್ಪ. ಸಾಮಾನ್ಯ ಚಿತ್ರಗಳಲ್ಲಿ ಉದ್ದ ಮತ್ತು ಅಗಲ ಕಾಣಬಹುದು. ಆದರೆ 3ಡಿ ಚಿತ್ರಗಳಲ್ಲಿ ಮೂರು ಆಯಾಮಗಳನ್ನು ಕಾಣಬಹುದು. ಲೇಸರ್ ಬಳಸಿ 3ಡಿ ಚಿತ್ರ ತೆಗೆಯಬಹುದಾಗಿದೆ.

➤ ಲೇಸರ್ ರೇಂಜಿಂಗ್ – ಲೇಸರ್ ಪ್ರತಿಫಲಗಳನ್ನು ಬಳಸಿ ಎರಡು ವಸ್ತುಗಳ ದೂರವನ್ನು ನಿಖರವಾಗಿ ಕಂಡುಹಿಡಿಯುವ ತಾಂತ್ರಿಕತೆಯನ್ನು “ ಲೇಸರ್ ರೇಂಜಿಂಗ್” ಎನ್ನುವರು. ಭೂಮಿ ಮತ್ತು ಚಂದ್ರ ಇವುಗಳ ನಡುವಿನ ದೂರವನ್ನು ‘ ಲೇಸರ್ ರೇಂಜಿಂಗ್’ ತಾಂತ್ರಿಕತೆಯಿಂದ ಲೆಕ್ಕ ಹಾಕಲಾಗಿದೆ.

1969ರಲ್ಲಿ ಚಂದ್ರನ ಮೇಲೆ ಪ್ರಪ್ರಥವಾಗಿ ಮಾನವ ಹೆಜ್ಜೆಯಿಟ್ಟನು. ನೀಲ್ ಆರ್ಮ್‍ಸ್ಟ್ರಾಂಗ್, ಯೂರಿ ಗಾಗರಿನ್ ಮುಂತಾದ ಗಗನಯಾತ್ರಿಗಳು ಚಂದ್ರನ ಮೇಲೆ ಒಂದು ಲೇಸರ್ ಪ್ರತಿಫಲಕವನ್ನು ಇಟ್ಟು ಬಂದಿದ್ದರು. ಒಂದು ಲೆಸರ್ ಕಿರಣವನ್ನು ಭೂಮಿಯಿಂದ ಚಂದ್ರನಿಗೆ ಕಳಿಸಲಾಐಇತು. ಆ ಲೇಸರ್ ಕಿರಣ ಚಂದ್ರನ ಮೇಲಿಟ್ಟಿದ ಫ್ರತಿಫಲಕಕ್ಕೆ ತಾಗಿ ಪ್ರತಿಫಲನ ಹೊಂದಿ ವಾಪಸ್ಸು ಬಂದಿತು. ಲೇಸರ್ ಬೆಳಕಿನ ಕಿರಣ ಚಂದ್ರನವರೆಗೆ ಹೋಗಿಬರಲು ತೆಗೆದುಕೊಂಡ ಕಾಲವನ್ನು ತಿಳಿದು, ಅದರಿಂದ ಚಂದ್ರ ಮತ್ತು ಭೂಮಿಗಿರುವ ಅಂತರವನ್ನು ಲೆಕ್ಕಹಾಕಲಾಯಿತು.

error: Content Copyright protected !!