ಅನ್ಯಭಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)
ಕನ್ನಡ ಭಾಷೆಗೆ ಹಲವಾರು ಭಾಷೆಗಳಿಂದ ಪದಗಳು ಬಂದಿವೆ. ಬಂದ ಪದಗಳು ಕನ್ನಡ ಭಾಷೆಯೊಂದಿಗೆ ಬೆರೆತುಕೊಂಡು ಕನ್ನಡತನವನ್ನು ಯಥೇಚ್ಚವಾಗಿ ಸಂಸ್ಕೃತದಿಂದ ಪದಗಳು ಬಂದಿವೆ. ಅನ್ಯಭಾಷೆಯಿಂದ ಅನೃಭಾಷಾ ಪದಗಳು ಮೈಗೂಡಿಸಿಕೊಂಡಿವೆ. ಅನ್ಯಭಾಷೆಯಿಂದ ಬಂದ ಪದಗಳು ಎಂದು ಗುರುತಿಸಲಾರದಷ್ಟು ಕನ್ನಡೀಕರಣ ಹೊಂದಿರುವ ಪದಗಳ ಮೇಲೆ ಪ್ರತಿ ಬಾರಿಯ ಎಸ್.ಡಿ.ಸಿ., ಎಫ್.ಡಿ.ಸಿ. ಪರೀಕ್ಷೆಯಲ್ಲಿ ಐದರಿಂದ ಏಳು ಪ್ರಶ್ನೆಗಳವರೆಗೂ ಕೇಳಿದ್ದಾರೆ. ನಿಮ್ಮ ಉಪಯೋಗಕ್ಕೆ ಬರಲಿ ಎಂದು ಅಚ್ಚಗನ್ನಡ ಪದ ಸೇರಿದಂತೆ ವಿವಿಧ ಭಾಷೆಗಳಿಂದ ಕನ್ನಡ ಭಾಷೆ ಸ್ವೀಕರಿಸಿರುವ ಪದಗಳ ಪಟ್ಟಿಯನ್ನು ನೀಡಲಾಗಿದೆ.
✦ ಆಂಗ್ಲಭಾಷೆಯಿಂದ ಬಂದ ಪದಗಳು :
ಸೊಸಾಯಿಟಿ, ಪೆಟ್ರೋಲ್, ಕರೆಂಟ್, ಲೈಟ್, ಗವರಮೆಂಟ್, ಆರ್ದ್ರ್, ಹೈಸ್ಕೂಲ್ ಸೋಪ್, ವಾಚ್, ಟೆನಿಸ್, ಕ್ರಿಕೆಟ್, ಲಾಯರ್, ನಂಬರ್, ಥರ್ಮಾಮೀಟರ್, ಪೆನ್ಷನ್, ಪೊಲೀಸ್, ಬ್ರೆಡ್, ಬ್ಯಾಂಕ್, ಸಿಮೆಂಟ್, ಹಾಸ್ಟೆಲ್, ಕಾಲೇಜ್, ಸ್ಕೂಲ್, ಪೆನ್, ಲೈಟ್, ಪ್ಯಾನ್, ಬುಕ್, ಕೋರ್ಟ್, ರೋಡ್, ಚಕ್, ಪೋಸ್ಟ್ ಕಾರ್ಡ್, ಟಿಕೆಟ್, ಹೋಟೆಲ್, ರೂಂ, ಮೋಟರ್, ಸ್ಕೂಟರ್, ಆಫೀಸರ್, ಜೈಲು, ಡ್ರಸ್, ಶಟರ್, ಬೈಸಿಕಲ್, ಮಿಷನ್ ಡಿಗ್ರಿ ಡಾಕ್ಟರ್, ಟೀ ಪ್ಲಾನ್, ಬ್ರೆಡ್, ಕಾಫಿ, ಬೋರ್ಡ್ ಮುನಿಸಿಪಾಲಿಟಿ, ಕಾರ್ಪೋರೇಷನ್ ಪ್ರೆಸಿಡೆಂಟ್, ಚೇರ್ಮನ್, ಸೆಕ್ರೆಟರಿ. ರೈಲು, ಕೋರ್ಟ್, ಬ್ಯಾಂಕ್, ರೋಡು,ಚಕ್, ಪೊಲೀಸ್, ಪೋಸ್ಸು, ಟೇಬಲ್, ಕಾರ್ಡು, ಟಿಕೇಟ್, ಹೋಟೆಲ್, ರೂಂ, ಸ್ಕೂಲ್, ಕಾಲೇಜು, ಮೋಟರ್, ಸ್ಕೂಟರ್, ಆಫೀಸು, ಜೈಲು, ಡ್ರಸ್, ಶರ್ಟ್, ಬೈಸಿಕಲ್, ಮಿಷನ್, ಡಿಗ್ರಿ, ಡಾಕ್ಟರ್, ಹಾಸ್ಪಿಟಲ್, ಪ್ಲಾನ್ ಬ್ರೆಡ್, ಟೀ, ಕಾಫಿ, ಬೋರ್ಡ್, ಮುನಿಸಿಪಾಲಿಟಿ, ಕಾರ್ಪೋರೇಷನ್, ಪ್ರೆಸಿಡೆಂಟ್, ಚೇರ್ಮನ್, ಸೆಕ್ರಟರಿ, ಸೊಸೈಟಿ, ಪೆಟ್ರೋಲ್, ಕರಂಟ್, ಲೈಟ್, ಗವರಮೆಂಟ್, ಆರ್ಡ್ರ, ಹೈಸ್ಕೂಲ್, ಅಗ್ರಿಕಲ್ಡರ್, ಸೋಪ್, ರೇಡಿಯೋ, ಟಿ.ವಿ., ನೋಟ್ಬುಕ್, ಪ್ರಿನ್ಸಿಪಾಲ, ಲೈಬ್ರರಿ, ಪ್ರಿಂಟಿಂಗ್, ಡ್ರೈವರ್, ಕಂಡಕ್ಟರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಗ್ಯಾಸ್, ಅಡ್ವಾನ್, ಡಿಪಾಜಿಟ್, ಪಿಕ್ಟರ್, ಕಾಂಗ್ರೆಸ್, ಡೇರಿಫಾರ್, ಪೆನ್ಸಿಲ್, ಕಲರ್ಬಾಕ್ಸ್.
✦ ಫಾರಸಿ ಭಾಷೆಯಿಂದ ಬಂದ ಪದಗಳು :
ಗೋರಿ, ಗುಲಾಮ, ಕಮಾನು, ಅಬ್ಯಾರಿ, ದವಾಖಾನೆ, ದಲ್ಲಾಳಿ, ಜಾಮೀನು, ಕಾರಕೂನ, ನಮೂನೆ, ಪರದೆ, ಚೌಕಾಸಿ, ರೇಷ್ಮೆ ಸಿಪಾಯಿ, ಹವಾಲ್ದಾರ, ಶಹರಿ, ಕಮ್ಮಿ ಆಮದು, ಖನಿ, ಚಬಕ, ತುಪಾಕಿ, ತೋಪು, ಹಂಗಾಮಿ, ದಿವಾನ, ಲಕೋಟೆ, ವಕೀಲ, ಮುನ್ನಿ, ಕೊತವಾಲ, ಜವಾನ, ಪೇಶ್ವ,ಭಕ್ಷಿ, ಮಾಮೂಲದಾರ, ರಶೀದಿ, ವರದಿ, ಕರವಸ್ತ್ರ, ರುಮಾಲ, ದಫೇದಾರ, ಜಮೀನು, ಗಸ್ತಿ, ಬಂದೋಬಸ್ತು, ಪಾಯಕಾನೆ, ಖಜಾಂಚಿ, ಅಮಲ್ದಾರ, ಅರ್ಜಿ, ಕಿಲ್ಲಾ, ಕಚೇರಿ, ತಯಾರ್, ಕಾರ್ಖಾನೆ, ಸತ್ಕಾರ, ರೈಲ್, ಸಲಾಮು, ಕಾನೂನು, ರಸ್ತೆ, ಮಂಜೂರು, ಹುಕುಂ, ದರ್ಬಾರು, ನಕಲಿ, ಜಮೀನ್ದಾರ್, ಹಸ್ತೆ ಮಜಬೂತ್, ಸಾಹೇಬ್, ಉರ್ಸ್, ಹುದ್ವಾ, ಮಾಫಿ ಅಕ್ಷಲ್, ಖರ್ಚು, ರೋಮ್, ಅಂಜೂತ್, ಕುಮ್ಮಕ್ಕು.
✦ ಅರಬ್ಬಿ ಭಾಷೆಯಿಂದ ಬಂದ ಪದಗಳು :
ಅರಬ್ಬಿ, ಅಫೀಮು, ಊದುಬತ್ತಿ, ದಾವೆ, ಮೊಕದ್ದಮೆ, ಮಣ, ತಬಲ, ತಾರೀಖು, ದೀವಾಕು, ಹಾಜರಿ, ಹಿಸ್ಸೆ, ಖಜಾನೆ, ನಕಲಿ,
ಇನಾಮು, ಕಾಯಿದೆ, ಗಲೀಜು, ತಕರಾರು, ತರಬೇತು, ಮಸೀದಿ, ಹಜಾಮ, ಅಸಲು, ಕಸುಬು, ಕಾಗದ, ದಿನಸಿ, ನಕ್ಷೆ ಇಲಾಖೆ, ಕುರ್ಚಿ, ಪಿತೂರಿ, ಬಂದೂಕು, ಮುದ್ದಾಂ, ಸಲಕರಣೆ, ಸಾಬೂನು.
✦ ಹಿಂದೂಸ್ತಾನಿಯಿಂದ ಬಂದ ಪದಗಳು :
ದವಾಖಾನೆ, ಕಾಗದ, ಬಂದೂಕು, ಹುಜೂರು, ಖಾಮದ್, ಜನಾಬ್, ಮಹತ್ ಕೆಲ್ಲಾ, ಅರ್ಜಿ, ಕಛೇರಿ, ಯಾರಿ, ಬದಲಿ, ಸಕಾವರ,
ರೈಲ್, ಸುಬೇದಾರ್, ದಫೇದಾರ್, ಹವಾಲ್ದಾರ್, ದುಕಾನ್, ಅಂತಸ್ತು, ಇನಾಮು, ಕಂತು, ಕಾಮಗಾರಿ, ಕಂದಾಯ, ಕಾರ್ಖಾನೆ, ಕೊಠಡಿ, ಕಿಚ್ಚಡಿ, ಖಾಲಿ, ಗಡಿಯಾರ, ಚುನಾವಣೆ, ಜಮಖಾನ, ಟಪಾಲು, ತರಕಾರಿ, ಬಂದೋಬಸ್ತು, ಬಂಗಲೆ, ರಜೆ, ರೂಪಾಯಿ, ಪಲ್ಲಕ್ಕಿ, ಚರಂಡಿ, ಟೋಪಿ, ಕಿಟಕಿ, ಗಾಡಿ, ಗಾಬರಿ, ಚಕ್ಕುಬಂದಿ, ಮರಡಿ, ಕುರಾವಿ, ಅಮಲ್ದಾರ್, ಸಲಾಮು ಕಾನೂನು, ಜಮೀನು, ಮಂಜೂರ್, ಹುಕುಂ ದರ್ಬಾರ್, ಜಮೀನ್ದಾರ್, ಖಾಜಿ, ಗುಲಾಮ.
✦ ಪೋರ್ಚುಗೀಸ್ನಿಂದ ಬಂದ ಪದಗಳು :
ಮೇಜು, ಆಸ್ಪತ್ರೆ, ಬಟಾಣಿ, ಅಲಮಾರ, ಇಸ್ತ್ರಿ, ಮೇಸ್ತ್ರಿ, ಪಾಟಿ, ಪಿಸ್ತೂಲು, ರಸೀದಿ, ಸ್ಟಂಜು, ವರಾಂಡ, ಕಂದೀಲು, ಲ್ಯಾಟೀನು,
ಹಲಸಿನಕಾಯಿ, ಬಿಸ್ಕತ್ತು, ಪಾದ್ರಿ, ಸಾಬೂನು, ಟವೆಲ್ಲು, ಹರಾಜು, ಪಗಾರ, ಚಾವಿ, ಬಾವಿ, ತಂಬಾಕು, ಬೊಂಬು, ಪೆನ್ನು ಪಪ್ಪಾಯಿ, ಲಿಲಾವ್ ಪಗಾರ, ಹಾಸ್ಪಿಟಲ್.
✦ ಗ್ರೀಕ್ ರೋಮನ್ ಭಾಷೆಯಿಂದ ಬಂದ ಪದಗಳು :
ದೀನಾರ, ದ್ರಮ್ಮ ಕಾಸು, ಹೊರಾ, ಜಾಮಿತಿ, ಕೇಂದ್ರ, ದೋಖಾನಾ, ಸುರಂಗ, ನಿಷ್ಕ, ಯವನಿಕಾ, ಗದ್ಯಾಣ, ದಮ್ಮಡಿ, ಅತ್ರೋಸ್, (ಹೊಗೆ) ಧೂಮೋಸ್ (ಆತ್ಮ).