AwardsCurrent AffairsSpardha TimesSports

ರಾಜೀವ್ ಗಾಂಧಿ ಖೇಲ್‍ರತ್ನ ಪ್ರಶಸ್ತಿ ಮರುನಾಮಕರಣ

Share With Friends

ಕ್ರೀಡೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಹಾಕಿ ಕ್ರೀಡೆಯ ಭಿಷ್ಮ ಮೇಜರ್ ದ್ಯಾನ್‍ಚಂದ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಖೇಲ್‍ರತ್ನಕ್ಕೆ ಮರುನಾಮಕರಣ ಮಾಡಿರುವುದನ್ನು ಘೋಷಿಸಿದೆ.

1991ರಿಂದಲೂ ರಾಜೀವ್‍ಗಾಂಧಿ ಹೆಸರಿನ ಖೇಲ್‍ರತ್ನವನ್ನು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ ನೀಡಲಾಗುತ್ತಿತ್ತು. 25 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಅದು ಒಳಗೊಂಡಿತ್ತು. ಅದರಲ್ಲಿದ್ದ ರಾಜೀವ್‍ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಬದಲಾಗಿ ಮೇಜರ್ ದ್ಯಾನ್‍ಚಂದ್ ಹೆಸರನ್ನು ಸೇರಿಸಲಾಗಿದೆ.

ಹಾಕಿ ಕ್ರೀಡೆಯ ಭಿಷ್ಮ ಎಂದೇ ಗುರುತಿಸಿಕೊಂಡಿರುವ ಧ್ಯಾನ್ ಚಂದ್ ಹೆಸರಿನಲ್ಲಿ 2002ರಿಂದಲೇ ಒಂದು ಪ್ರಶಸ್ತಿ ನೀಡಲಾಗುತ್ತಿತ್ತು. ಕ್ರೀಡೆಯಲ್ಲಿ ವೈಯಕ್ತಿಕ ಸಾಧನೆ ಮಾಡಿದವರಿಗೆ ಧ್ಯಾನ್‍ಚಂದ್ ಹೆಸರಿನ ಪ್ರಶಸ್ತಿ ನೀಡಲಾಗುತ್ತಿತ್ತು. ಈಗ ಅತ್ಯನ್ನತ ಪ್ರಶಸ್ತಿಗೆ ದ್ಯಾನ್‍ಚಂದ್ ಹೆಸರನ್ನು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಆಗಸ್ಟ್ ವೇಳೆಗೆ ಕ್ರೀಡಾ ಪ್ರಶಸ್ತಿಗಳು ಘೋಷಣೆಯಾಗುತ್ತವೆ.

# ಪ್ರಧಾನಿ ಮೋದಿ ಹೇಳಿದ್ದೇನು..?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದೇಶದ ಜನರ ಅಭಿಪ್ರಾಯ ಆಧರಿಸಿ ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

ಇಂದು ದೇಶವೇ ಹೆಮ್ಮೆ ಪಡುವ ದಿನ. ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‍ಚಂದ್ ಎಂದು ಮರುನಾಮಕರಣ ಮಾಡಲಾಗಿದೆ. ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ ಧ್ಯಾನ್‍ಚಂದ್‍ರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

# ಖೇಲ್‍ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ : 
ವರ್ಷ – ಪುರಸ್ಕೃತರು – ಕ್ರೀಡೆ
1991–1992-ವಿಶ್ವನಾಥನ್ ಆನಂದ್-ಚದುರಂಗ
1992–1993-ಗೀತ್ ಸೇಠಿ – ಬಿಲಿಯರ್ಡ್ಸ್
1993–1994- ಹೋಮಿ ಡಿ. ಮೋತಿವಾಲಾ ಮತ್ತು ಪಿ. ಕೆ. ಗರ್ಗ್ – ಯಾಚಿಂಗ್ (ತಂಡ)
1994–1995 – ಕರ್ಣಂ ಮಲ್ಲೇಶ್ವರಿ – ಭಾರ ಎತ್ತುವಿಕೆ
1995–1996 – ಕುಂಜರಾಣಿ ದೇವಿ – ಭಾರ ಎತ್ತುವಿಕೆ
1996–1997 – ಲಿಯಾಂಡರ್ ಪೇಸ್ – ಟೆನಿಸ್
1997–1998 – ಸಚಿನ್ ತೆಂಡೂಲ್ಕರ್ ಕ್ರಿಕೆಟ್
1998–1999 – ಜ್ಯೋತಿರ್ಮಯಿ ಸಿಕ್ದರ್ ಅಥ್ಲೆಟಿಕ್ಸ್
1999–2000 – ಧನರಾಜ್ ಪಿಳ್ಳೈ ಹಾಕಿ
2000–2001 – ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್
2001 – ಅಭಿನವ್ ಬಿಂದ್ರಾ ಶೂಟಿಂಗ್
2002  – ಕೆ. ಎಂ. ಬೀನಾಮೋಲ್ ಮತ್ತು ಅಂಜಲಿ ಭಾಗವತ್ – ಅಥ್ಲೆಟಿಕ್ಸ್ ಮತ್ತು ಶೂಟಿಂಗ್
2003 – ಅಂಜು ಬಾಬಿ ಜಾರ್ಜ್ – ಅಥ್ಲೆಟಿಕ್ಸ್ [೮]
2004 – ರಾಜ್ಯವರ್ಧನ್ ಸಿಂಗ್ ರಾಥೋಡ್ – ಶೂಟಿಂಗ್ [೯]
2005 – ಪಂಕಜ್ ಅಡ್ವಾ – ಬಿಲಿಯರ್ಡ್ಸ್ ಮತ್ತು ಸ್ನೂಕರ್ [೧೦]
2006 – ಮಾನವ್‌ಜಿತ್ ಸಿಂಗ್ ಸಂಧು – ಶೂಟಿಂಗ್ [೧೧]
2007 – ಮಹೇಂದ್ರ ಸಿಂಗ್ ಧೋನಿ – ಕ್ರಿಕೆಟ್ [೧೨]
2008 – ಪ್ರಶಸ್ತಿ ಇಲ್ಲ
2009 – ಮೇರಿ ಕೋಮ್ – ಮಹಿಳೆಯರ -ಬಾಕ್ಸಿಂಗ್ [೧೩]
2009 – ವಿಜೇಂದರ್ ಸಿಂಗ್ ಮತ್ತು ಸುಶೀಲ್ ಕುಮಾರ್ – ಬಾಕ್ಸಿಂಗ್ ಮತ್ತು ಕುಸ್ತಿ
2010 – ಸೈನಾ ನೆಹವಾಲ್ ಬ್ಯಾಡ್ಮಿಂಟನ್ [೧೪]
2011 – ಗಗನ್ ನಾರಂಗ್ ಶೂಟಿಂಗ್ [೧೫]
2012 – ವಿಜಯ್ ಕುಮಾರ್ ಮತ್ತು ಯೋಗೇಶ್ವರ್ ದತ್ – ಶೂಟಿಂಗ್ಮತ್ತು ಕುಸ್ತಿ
2013 – ರಂಜನ್ ಸೋಧಿ – ಶೂಟಿಂಗ್
2014 – ಪ್ರಶಸ್ತಿ ಇಲ್ಲ
2015 – ಸಾನಿಯಾ ಮಿರ್ಜಾ – ಟೆನಿಸ್

2016
ಪಿ. ವಿ. ಸಿಂಧು – ಬ್ಯಾಡ್ಮಿಂಟನ್
ದೀಪಾ ಕರ್ಮಾಕರ್ – ಜಿಮ್ನಾಸ್ಟಿಕ್ಸ್
ಜಿತು ರಾಯ್ – ಶೂಟಿಂಗ್
ಸಾಕ್ಷಿ ಮಲಿಕ್ – ಕುಸ್ತಿ

2017 –
ದೇವೇಂದ್ರ ಜಝಾರಿಯಾ – ಪ್ಯಾರಾ ಅಥ್ಲೆಟಿಕ್ಸ್
ಸರ್ದಾರ ಸಿಂಗ್ – ಹಾಕಿ

2018
ಮೀರಾಬಾಯಿ ಚಾನು – ಭಾರ ಎತ್ತುವಿಕೆ
ವಿರಾಟ್ ಕೊಹ್ಲಿ – ಕ್ರಿಕೆಟ್

2019
ದೀಪಾ ಮಲಿಕ್ – ಪ್ಯಾರಾಲಿಂಪಿಕ್ಸ್
ಬಜರಂಗ್ ಪುನಿಯಾ – ಫ್ರೀಸ್ಟೈಲ್ ಕುಸ್ತಿ

2020
ರೋಹಿತ್ ಶರ್ಮಾ – ಕ್ರಿಕೆಟ್
ಮರಿಯಪ್ಪನ್ ತಂಗವೇಲು – ಪ್ಯಾರಾಲಿಂಪಿಕ್ಸ್
ಮಾನಿಕಾ ಬತ್ರಾ – ಟೇಬಲ್ ಟೆನಿಸ್
ನೇಶ್ ಫೋಗಟ್ – ಕುಸ್ತಿ
ರಾಣಿ ರಾಂಪಾಲ್ – ಮಹಿಳೆಯರ ಹಾಕಿ

 

 

error: Content Copyright protected !!