ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
1. ನೊಬೆಲ್ ಪ್ರಶಸ್ತಿ
ಈ ಪ್ರಶಸ್ತಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ.
2. ಮ್ಯಾನ್ ಬುಕರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1968 ರಲ್ಲಿ ಬುಕರ್ ಕಂಪನಿ ಮತ್ತು ಬ್ರಿಟಿಷ್ ಪ್ರಕಾಶಕರ ಸಂಘದಿಂದ ಜಂಟಿಯಾಗಿ ಸ್ಥಾಪಿಸಲಾಯಿತು. ಇದೊಂದು ಪ್ರತಿಷ್ಠಿತ ಸಾಹಿತಿಕ ಪ್ರಶಸ್ತಿಯಾಗಿದೆ.
3. ಕಳಿಂಗ ಪ್ರಶಸ್ತಿ
ಈ ಪ್ರಶಸ್ತಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿದೆ.ಈ ಪ್ರಶಸ್ತಿಯನ್ನು ವಿಜ್ಞಾನದ ಬರಹಗಾರರಿಗೆ ಅಥವಾ ಸಂಪಾದಕರಾಗಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು
4. ಆಸ್ಕರ್ ಪ್ರಶಸ್ತಿ
ಈ ಪ್ರಶಸ್ತಿಗಳನ್ನು ಸಿನಿಮಾ ಕ್ಷೇತ್ರದ ಮಹತ್ತರ ಸಾಧನೆಗಾಗಿ ಪ್ರತಿ ವರ್ಷವೂ ನೀಡಲಾಗುತ್ತದೆ.ಇದು ಸಿನಿಮಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಮಟ್ಟದ ಪ್ರಶಸ್ತಿಯಾಗಿದೆ.
5. ರೈಟ್ ಲೈವ್ಲಿ ಹುಡ್ ಪ್ರಶಸ್ತಿ
ಈ ಪ್ರಶಸ್ತಿಯು 1980 ರಲ್ಲಿ ಸ್ವೀಡಿಸ್ – ಜರ್ಮನ್ ಬರಹಗಾರ ಜಾಕಬ್ ವೋನ್ ವೆಸ್ಕಲ್ರಿಂದ ಸ್ಥಾಪಿಸಲ್ಪಟ್ಟಿತು. ಇದು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಖ್ಯಾತವಾಗಿದ್ದು, ಇದನ್ನು ಇಂದಿನ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಯೋಗಿಕವಾಗಿ ಮತ್ತು ನೇರವಾಗಿ ದುಡಿದು ಮಹತ್ತರ ಸಾಧನೆಗೈದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
6. ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಈ ಪ್ರಶಸ್ತಿಯನ್ನು ಫಿಲಿಫೈನ್ಸ್ ಸರ್ಕಾರವು 1958 ರಲ್ಲಿ ಆ ದೇಶದ ದಿವಂಗತ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆಯವರ ಗೌರವಾರ್ಥ ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಸಾರ್ವಜನಿಕ ಸೇವೆ, ಸಮುದಾಯ ನಾಯಕತ್ವ, ಪತ್ರಿಕೋದ್ಯಮ, ಸರ್ಕಾರಿಸೇವೆ, ಸಾಹಿತ್ಯ, ರಚನಾತ್ಮಕ ಕಲೆ, ಮತ್ತು ಅಂತರಾಷ್ಟ್ರೀಯ ಅರಿವು ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿರುವ ಏಷ್ಯಾ ಖಂಡದ ದೇಶದ ವ್ಯಕ್ಕಿಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರತಿ ವರ್ಷವೂ ನೀಡಲಾಗುತ್ತದೆ.
7. ಸೈಮನ್ ಬೋಲಿವರ್ ಪ್ರಶಸ್ತಿ
ಈ ಪ್ರಶಸ್ತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಸ್ಥಾಪಿಸಿದ್ದು, ಇದನ್ನು ಎರಡು ವರ್ಷಕ್ಕೋಮ್ಮೆ ಸ್ವಾತಂತ್ರ್ಯ, ಪ್ರಜೆಗಳ ಘನತೆ ಮತ್ತು ಹೊಸ ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ನೆಮ್ಮದಿಯನ್ನು ಬಲಗೊಳಿಸುವ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
8. ಟೆಂಪ್ಲಟನ್ ಫೌಂಡೇಷನ್ ಪ್ರಶಸ್ತಿ
ಈ ಪ್ರಶಸ್ತಿಯನ್ನು 1972 ರಲ್ಲಿ ಟೆಂಪ್ಲಟನ್ ಫೌಂಡೇಷನ್ ಸ್ಥಾಪಿಸಿದ್ದು, ಇದನ್ನು ಧಾರ್ಮಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದವರಿಗೆ ನೀಡಲಾಗುತ್ತದೆ.