ಯುಎಸ್ ಮಿಲಿಟರಿ ಚಾಪ್ಲಿನ್ ಪರೀಕ್ಷೆಯಲ್ಲಿ ಪದವಿ ಪಡೆದ ಮೊದಲ ಭಾರತೀಯ ಮುಸ್ಲಿಂ ಮಹಿಳೆ..!
ಸಲೇಹಾ ಜಬೀನ್ ಅಮೆರಿಕ ಮಿಲಿಟರಿಯ ವಾಯು ಸೇನೆ ಬೇಸಿಕ್ ಚಾಪ್ಲಿನ್ (ಪಾದ್ರಿ) ಕೋರ್ಸ್ನಲ್ಲಿ ಪದವಿ ಗಳಿಸಿದ ಮೊದಲ ಭಾರತೀಯ ಮುಸ್ಲಿಂ ಮಹಿಳೆ ಎನಿಸಿದ್ದಾರೆ. 14 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಬಂದ ಸಲೇಹಾ ಜಬೀನ್, ವಾಯುಪಡೆಯ ಬೇಸಿಕ್ ಚಾಪ್ಲೈನ್ ಕೋರ್ಸ್ನಿಂದ ಪದವಿ ಪಡೆದು ಯುಎಸ್ ಮಿಲಿಟರಿಯ ಮೊದಲ ಭಾರತ ಮೂಲದ ಮಹಿಳಾ ಮುಸ್ಲಿಂ ಪ್ರಾರ್ಥನಾಧಿಕಾರಿಯಾಗಿದ್ದಾರೆ. ಫೆಬ್ರವರಿ 5 ರಂದು ಐತಿಹಾಸಿಕ ಪದವಿ ಸಮಾರಂಭ ನಡೆದಿದೆ.
ಡಿಸೆಂಬರ್ನಲ್ಲಿ, ಜಬೀನ್ನನ್ನು ಚಿಕಾಗೋದ ಕ್ಯಾಥೊಲಿಕ್ ಥಿಯಲಾಜಿಕಲ್ ಯೂನಿಯನ್ನಲ್ಲಿ ಎರಡನೇ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಯಿತು ಮತ್ತು ರಕ್ಷಣಾ ಇಲಾಖೆಯಲ್ಲಿ ಮೊದಲ ಮಹಿಳಾ ಮುಸ್ಲಿಂ ಪ್ರಾರ್ಥನಾಧಿಕಾರಿಯಾದರು.
ಫೆ.5ರಂದು ನಡೆದ ಐತಿಹಾಸಿಕ ಘಟಿಕೋತ್ಸವ ಸಮಾರಂಭದಲ್ಲಿ ಜಬೀನ್ ಅವರು ಮಾತನಾಡಿ, ಇದೊಂದು ಅತ್ಯುತ್ತಮ ಅವಕಾಶ. ನನ್ನ ಜವಾಬ್ದಾರಿ ಅರಿತು ಕೆಲಸ ಮಾಡಲಿದ್ದೇನೆ. ಸೇವೆ ಮಾಡಲು ಬಯಸುವ ಯಾರಿಗಾದರೂ ಮಿಲಿಟರಿಯಲ್ಲಿ ಸ್ಥಾನವಿದೆ. ಆದರೆ, ನಾವು ಮಾಡಿದ ಸೇವೆ ಮುಂದಿನ ಪೀಳಿಗೆಗೆ ಒಂದು ಉದಾಹರಣೆಯಾಗಿರಬೇಕಷ್ಟೇ. ಅಲ್ಲದೆ, ನನ್ನ ಯಾವುದೇ ಧಾರ್ಮಿಕ ನಂಬಿಕೆಗಳಲ್ಲಿ ಅಥವಾ ನಿರ್ಣಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ. ನನ್ನನ್ನು ಗೌರವಿಸುವ ಜನರೊಂದಿಗೆ ನಾನು ಸದಾ ಇರುತ್ತೇನೆ ಎಂದಿದ್ದಾರೆ.