GK

ಮೇಕೆದಾಟು ಅಣೆಕಟ್ಟು ಯೋಜನೆ

Share With Friends

➤ ಕರ್ನಾಟಕ ಸರ್ಕಾರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲ್ಲಿದೆ. ಇದು ಸುಮಾರು 4.5 ಟಿಎಂಸಿ ನೀರನ್ನು ಸಂಗ್ರಹ ಮಾಡಬಲ್ಲ ಅಣೆಕಟ್ಟು ಯೋಜನೆಯಾಗಿದೆ.
➤ ಅಣೆಕಟ್ಟು ನಿರ್ಮಾಣ ಮಾಡಿ ಬೆಂಗಳೂರು, ರಾಮನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.
➤ ಈ ಯೋಜನೆ ಜಾರಿಯಾದರೆ ನೀರಿನ ಹರಿವು ಕಡಿಮೆಯಾಗಿ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಇದೆ.

➤ಅಣೆಕಟ್ಟು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿರುವ ವಿಷಯ ತಿಳಿದ ಸ್ಥಳೀಯರು ಗ್ರಾಮ ತೊರೆಯಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುವ ಆಶಯವನ್ನು ಅವರು ಹೊಂದಿದ್ದಾರೆ.
➤ಮೇಕೆದಾಟು ಪ್ರದೇಶವು ಪ್ರೇಕ್ಷಣಿಯ ಸ್ಥಳವಾಗಿದ್ದು ಪ್ರತಿನಿತ್ಯ ಸಾವಿರಾರು ಜನರು ಈ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

➤ಮೇಕೆದಾಟು ಹೆಸರು ಬಂದಿದ್ದು – ಮೇಕೆದಾಟು ಒಂದು ವಿಹಾರ ಸ್ಥಳ. ಕಾವೇರಿ ನದಿಯು ಅತ್ಯಂತ ರಭಸದಿಂದ ಹರಿದು ಬಂಡೆಗಳನ್ನು ಕೊರೆದು ವಿಚಿತ್ರ ಆಕಾರ ಮೂಡಿಸಿದೆ ಈ ಜಾಗದಲ್ಲಿ ಬಂಡೆಗಳ ಅಂತರ ಚಿಕ್ಕದಾಗಿದ್ದು, ಆಹಾರ ತಿನ್ನಲು ಹೋದ ಮೇಕೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟುತ್ತಿದ್ದವಂತೆ ಆದ್ದರಿಂದ ಈ ಸ್ಥಳಕ್ಕೆ “ಮೇಕೆದಾಟು” ಎಂಬ ಹೆಸರು ಬಂದಿದೆ.

➤ ಮೇಕೆದಾಟು ಯೋಜನೆಯ ಕುರಿತು ರಾಜ್ಯ ಸರಕಾರ ಸಲ್ಲಿಸಿದ ಯೋಜನಾಪೂರ್ವ ಕಾರ್ಯಸಾಧ್ಯತಾ ವರದಿಗೆ ಕೆಂದ್ರ ಜಲ ಆಯೋಗ ಸಮ್ಮತಿ ಸೂಚಿಸಿದೆ. ಆದಷ್ಟು ಬೇಗನೇ ವಿಸ್ತøತ ಯೋಜನಾ ವರದಿ ಸಲ್ಲಿಸಲು ತಿಳಿಸಿದೆ.

 

error: Content Copyright protected !!