Mental AbilitySpardha Times

ಮಾನಸಿಕ ಸಾಮರ್ಥ್ಯ : ಸಾಮ್ಯತಾ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳು

Share With Friends

ಸಾಮ್ಯತೆ ಎಂದರೆ ‘ಸಂಬಂಧಿಸಿದ’ ಎಂದು ಅರ್ಥ.  ಈ ವಿಧದ ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ನಾಲ್ಕು ಪದಗಳನ್ನು ಕಾಣುತ್ತೇವೆ. ಮೊದಲ ಎರಡು ಪದಗಳಿಗೆ ಒಂದೇ ರೀತಿಯ ಸಂಬಂಧವಿರುತ್ತದೆ. ಅದೇ ರೀತಿಯ ಸಂಬಂಧವು ನಂತರದ ಎರಡು ಪದಗಳಿಗೂ ಕಂಡುಬರುತ್ತದೆ. ಆ ಸಂಬಂಧವನ್ನು ಬಳಸಿಕೊಂಡು ಯಾವ ಪದವನ್ನು ಪ್ರಶ್ನೆಯಲ್ಲಿ ಬಿಟ್ಟಿರುತ್ತಾರೆ. ಅದನ್ನು ಕೊಟ್ಟಿರುವ  4 ಉತ್ತರಗಳಿಂದ ಸರಿಯಾದ ಸಂಬಂಧ ಹೊಂದಿರುವ ಒಂದು ಪದವನ್ನು ಆರಿಸುತ್ತೇವೆ.
 

#  ಈ ವಿಧದ ಪ್ರಶ್ನೆಗಳನ್ನು ಮುಖ್ಯವಾಗಿ 3 ವಿಧಗಳಾಗಿ ವಿಂಗಡಿಸುತ್ತೇವೆ.
1. ಪದ ಸಾಮ್ಯತೆ
2. ಸಂಖ್ಯಾ ಸಾಮ್ಯತೆ
3. ಅಕ್ಷರ ಸಾಮ್ಯತೆ

#  ಪ್ರತಿಯೊಂದು ವಿಧದ ಸಾಮ್ಯತಾ ಪರೀಕ್ಷೇಗಳಲ್ಲಿ ಮತ್ತೆ ನಾನಾ ವಿಧಗಳನ್ನು ಕಾಣುತ್ತೇವೆ.

1. ಪದ ಸಾಮ್ಯತೆ: ಈ ರೀತಿಯ ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ಅರ್ಥವಾಗುವಂತಹ ಪದಗಳನ್ನು ಕೊಟ್ಟಿರುತ್ತಾರೆ. ಸಾಮಾನ್ಯವಾಗಿ ಮೊದಲು ಎರಡು ಪದಗಳಿಗೆ ಒಂದು ರೀತಿಯ ಸಂಬಂಧವಿರುತ್ತದೆ. ಅದೇ ಸಂಬಂಧದ ಆಧಾರದ ಮೇಲೆ ಮೂರನೇ ಪದಕ್ಕೆ ಸರಿಹೊಂದುವ  4       ಪದವನ್ನು ಕಂಡು ಹಿಡಿಯಬೇಕು.
ಉದಾ:     ಧಾನ್ಯಗಳು: ಕಾರ್ಬೋಹೈಡ್ರೇಟ್: ಕಾಳುಗಳು:
ಎ. ಶರ್ಕರಪಿಷ್ಟ
ಬಿ. ಪ್ರೋಟಿನ್
ಸಿ. ಜೀವಸತ್ವ
ಡಿ. ಕೊಬ್ಬು
ಈ ಮೇಲಿನ ಉದಾಹರಣೆಯಲ್ಲಿ ಮೊದಲ ಎರಡು ಪದಗಳಿಗಿರುವ ಉದಾಹರಣೆಯನ್ನು ಗಮನಿಸಿ ಧಾನ್ಯಗಳಲ್ಲಿ ಹೆಚ್ಚಾಗಿರುವುದು ಕಾರ್ಬೋಹೈಡ್ರೇಟ್ ಹಾಗೇಯೇ ಕಾಳುಗಳಲ್ಲಿ ಹೆಚ್ಚಾಗಿರುವುದು ಯಾವುದು ಎನ್ನುವುದು ಇಲ್ಲಿನ ಪ್ರಶ್ನೆ? ಸುಲಭವಾಗಿ ಉತ್ತರ ಪ್ರೋಟೀನ್ ಎಂದಾಗುತ್ತದೆ.

#  ಪದ ಸಾಮ್ಯತಾ ಪ್ರಶ್ನೆಗಳಲ್ಲಿ ಮತ್ತೆ ಅನೇಕ ವಿಧಗಳನ್ನು ಕಾಣುತ್ತೇವೆ.

1. ಏಕ ಸಾಮ್ಯತೆ: ಈ ವಿಧಧ ಪ್ರಶ್ನೆಗಳಲ್ಲಿ ಮೊದಲ ಎರಡು ಪದಗಳಿಗಿರುವ ಸಂಬಂಧವನ್ನು ತಿಳಿದು ಮೂರನೇ ಪದಕ್ಕೆ ಅದೇ ಸಂಬಂಧದಲ್ಲಿ ಸರಿಹೊಂದುವ ಪದವನ್ನು ಕೊಟ್ಟಿರುವ ನಾಳ್ಕು ಪದಗಳಿಂದ ಸರಿಯಾದುದ್ದನ್ನು ಆರಿಸಿ ಬರೆಯಬೇಕು.
# ಉದಾಹರಣೆ ಪ್ರಶ್ನೆಗಳು
1. ಬಡಗಿ: ಮರ: ಕುಂಬಾರ:
ಎ. ಮಡಕೆ
ಬಿ. ಮಣ್ಣು
ಸಿ. ಪಿಂಗಾಣಿ
ಡಿ. ಕಲ್ಲು
ಉತ್ತರ: ಬಿ. ಮಣ್ಣು

2. ಬಾಂಬೆ: ಭಾರತದ ಹೆಬ್ಬಾಗಿಲು: ಬೆಂಗಳೂರು : ?
ಎ. ಕರ್ನಾಟಕದ ರಾಜಧಾನಿ
ಬಿ. ಸಿಲಿಕಾನ್ ಸಿಟಿ
ಸಿ. ಅತಿ ವೇಗವಾಗಿ ಬೆಳೆಯುತ್ತಿದೆ.
ಡಿ. ಸುಂದರ ನಗರ

3. ಘನ : ದ್ರವನ ಬಿಂದು : ದ್ರವ : ?
ಎ. ಕುದಿ ಬಿಂದು
ಬಿ. ಕರಗುವ ಬಿಂದು
ಸಿ. ಘನೀಭವನ ಬಿಂದು
ಡಿ. ಆವೀಕರಣ ಬಿಂದು
ಉತ್ತರ: ಕುದಿ ಬಿಂದು

4. ಟೈಪಾಯ್ಡ್ : ಬ್ಯಾಕ್ಟೀರಿಯಾ : ರೇಬಿಸ್: ?
ಎ. ವೈರಸ್
ಬಿ. ಪ್ರೋಟೋಸೋವಾ
ಸಿ. ಬ್ಯಾಕ್ಟೀರಿಯಾ
ಡಿ. ಶೀಲಿಂಧ್ರ
ಉತ್ತರ: ವೈರಸ್

5.ಚಂದ್ರ : ಉಪಗ್ರಹ : ಸೂರ್ಯ : ?
ಎ. ಗ್ರಹ
ಬಿ. ಧೂಮಕೇತು
ಸಿ. ನಕ್ಷತ್ರ
ಡಿ. ಉಪಗ್ರಹ
ಉತ್ತರ: ನಕ್ಷತ್ರ

2. ಜೋಡಿ ಸಾಮ್ಯತೆ   :
ಈ ವಿಧದ ಪ್ರಶ್ನೆಗಳೂ ಸಹ ಬಹುತೇಕ ಏಕ ಸಾಮ್ಯತೆ ವಿಧದ ರೀತಿಯೇ ಇರುತ್ತದೆ. ಆದರೆ ಇಲ್ಲಿನ ಒಂದು ವ್ಯತ್ಯಾಸವೆಂದರೆ ಪ್ರಶ್ನೆಯಲ್ಲಿ ಕೇವಲ ಎರಡು ಪದಗಳನ್ನು ಮಾತ್ರ ಕೊಡಲಾಗಿದೆ. ಆ ಎರಡೂ ಪದಗಳು ಪರಸ್ಪರ ಸಂಬಂಧವಿದೆ.
#  ಉದಾಹರಣೆ ಪ್ರಶ್ನೆಗಳು
1. ರೇಬೀಸ್ : ನಾಯಿ:
ಎ. ಮಲೇರಿಯಾ : ಪ್ಲಾಸ್ಮೋಡಿಯಂ
ಬಿ. ಟೈಪಾಯ್ಡ್ : ಬ್ಯಾಕ್ಟೀರಿಯಾ
ಸಿ. ಮೆದುಳುಜ್ವರ: ಹಂದಿ
ಡಿ. ಏಡ್ಸ್ : ವೈರಸ್
ಉತ್ತರ : ಸಿ. ಮೆದಳುಜ್ವರ : ಹಂದಿ

2. ಕ್ರಿಕೆಟ್ : ಬ್ಯಾಟ್ ::
ಎ. ಪುಟ್‍ಬಾಲ್ : ಬಾಲ್
ಬಿ. ಹಾಕಿ: ಗೋಲ್
ಸಿ. ಟೆನಿಸ್ : ರಾಕೆಟ್
ಡ. ಕಬ್ಬಡಿ : ಕೋರ್ಟ್
ಉತ್ತರ : ಸಿ. ಟೆನಿಸ್: ರಾಕೆಟ್

3. ಗುಹೆ : ಕಲ್ಲು ::
ಎ. ಇಗ್ಲೂ: ಮಂಜುಗಡ್ಡೆ
ಬಿ. ಮನೆ: ಸಿಮೆಂಟ್
ಸಿ. ಬಲ್ಬ್ : ವಿದ್ಯುತ್
ಡಿ. ಲೇಖನಿ: ಶಾಯಿ
ಉತ್ತರ : ಎ. ಇಗ್ಲೂ : ಮಂಜುಗಡ್ಡೆ

4. ಪಿಟ್ಯುಟರಿ : ಮೆದುಳು ::
ಎ. ಯಕೃತ್ತು : ಜಠರ
ಬಿ. ಹೃದಯ: ರಕ್ತ
ಸಿ. ಅಡ್ರಿನಲ್: ಮೂತ್ರಪಿಂಡ
ಡಿ. ಮೂಳೆ : ಅಸ್ಥಿಮಜ್ಜೆ
ಉತ್ತರ : ಅಡ್ರಿನಲ್: ಮೂತ್ರಪಿಂಡ

3. ಇಮ್ಮಡಿ ಸಾಮ್ಯತೆ : 
ಈ ವಿಧದ ಪ್ರಶ್ನೆಗಳಲ್ಲಿ ಮೊದಲ ಜೋಡಿಯಲ್ಲಿ ಒಂದು ಪದವನ್ನು ಕೊಟ್ಟಿರುತ್ತದೆ. ಮತ್ತೊಂದರ ಜಾಗದಲ್ಲಿ ಪದಕ್ಕೆ ಬದಲಾಗಿ !   ಎಂಬ ಸಂಕೇತವನ್ನು ಕೊಟ್ಟಿರುತ್ತದೆ. ಅದಕ್ಕೆ ಸಂಬಂಧಿಸಿದ ನಾಲ್ಕು ಉತ್ತರಗಳನ್ನು ಕೆಳಗೆ  !  ಎಂಬ ಸಂಕೇತದ ಮುಂದೆ ಕೊಟ್ಟಿರುತ್ತದೆ. ಹಾಗೇಯೇ ಎರಡನೇ ಜೋಡಿಯಲ್ಲಿಯೂ ಸಹ ಕೇವಲ ಒಂದು ಪದವನ್ನು ಮಾತ್ರ ಕೊಟ್ಟಿದ್ದು ಮತ್ತೊಂದು ಪದದ ಬದಲು  !! ಎಂಬ ಸಂಕೇತವನ್ನು ಕೊಟ್ಟಿರುತ್ತದೆ. ಅದಕ್ಕೆ ಸಂಬಂಧಿಸಿದ ನಾಲ್ಕು ಉತ್ತರ ಪದಗಳನ್ನು ಕೆಳಗೆ   !! ಎಂಬುದರ ಮುಂದೆ ಕೊಟ್ಟಿರುತ್ತದೆ.
#  ಉದಾಹರಣೆ ಪ್ರಶ್ನೆಗಳು
1.   ! : ನೀರು ಉಷ್ಣತಾಮಾಪಕ :  !!
! ಎ. ತೇವಾಂಶ
ಬಿ. ಮಳೆ
ಸಿ. ಮೋಡ
ಡಿ. ಕೃಷಿ
!!   ಪಿ. ಉಷ್ಣತೆ
ಕ್ಯೂ. ಪಾದರಸ
ಆರ್. ವೈದ್ಯರು
ಎಸ್. ಜ್ವರ
ಎ. ಬಿ ಕ್ಯೂ
ಬಿ. ಸಿ ಕ್ಯೂ
ಸಿ. ಸಿ ಆರ್
ಡಿ. ಬಿ ಎಸ್
ಉತ್ತರ : ಬಿ. ಸಿ (ಮೋಡ) ಕ್ಯೂ( ಪಾದರಸ)

2. ! ಹೂವು:: ಗೆಲಾಕ್ಸಿ :  !!
! ಎ. ತೋಟ
ಬಿ. ಸಸ್ಯ
ಸಿ. ಹಣ್ಣು
ಡಿ. ದಳಗಳು
!! ಪಿ. ಗ್ರಹಗಳು
ಕ್ಯೂ. ನಕ್ಷತ್ರಗಳು
ಆರ್. ಆಕಾಶ
ಎಸ್. ವಿಶ್ವ
ಎ. ಎ ಕ್ಯೂ
ಬಿ. ಎ ಆರ್
ಸಿ. ಸಿ ಆರ್
ಡಿ. ಡಿ ಕ್ಯೂ
ಉತ್ತರ : ಎ. ಎ( ತೋಟ) ಕ್ಯೂ ( ನಕ್ಷತ್ರಗಳು)

3. ! ತಾಜಮಹಲ್ : ಗೊಮ್ಮಟೇಶ್ವರ :: !!
! ಎ.ಷಹಜಹಾನ್
ಬಿ. ಮಮ್ತಾಜ್
ಸಿ. ಅಮೃತಶಿಲೆ
ಡಿ. ಆಗ್ರಾ
!! ಪಿ. ಚಾವುಂಡರಾಯ
ಕ್ಯೂ. ಶ್ರವಣಬೆಳಗೊಳ
ಆರ್. 57 ಅಡಿ
ಎಸ್. ಜೈನರು
ಎ. ಎ ಕ್ಯೂ
ಬಿ. ಬಿ ಎಸ್
ಸಿ. ಡಿ ಕ್ಯೂ
ಡಿ. ಎ ಎಸ್
ಉತ್ತರ : ಸಿ. ಡಿ( ಆಗ್ರಾ) ಕ್ಯೂ(ಶ್ರವಣಬೆಳಗೊಳ)

4. ಮುಮ್ಮಡಿ ಸಾಮ್ಯತೆ :
ಸಾಮಾನ್ಯವಾಗಿ ಈ ರೀತಿಯ ಪ್ರಶ್ನೆಗಳು ಮೂರು ಮೂರು ಪದಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಯಲ್ಲಿ ಒಂದಕ್ಕೊಂದು ಸಂಬಂಧವಿರುವ ಮೂರು ಪದಗಳು ಇರುತ್ತವೆ. ಮೊದಲು ಆ ಮೂರು ಪದಗಳಿರುವ ಸಂಬಂಧವನ್ನು ಅರ್ಥಮಾಡಿಕೊಂಡು ಅದೇ ರೀತಿಯ ಸಂಬಂಧವನ್ನು ಹೊಂದಿರುವ ಪದಗಳ ಸಮೂಹವನ್ನು ಉತ್ತರದಿಂದ ಆರಿಸಬೇಕು.
#  ಉದಾಹರಣೆ ಪ್ರಶ್ನೆಗಳು
1. ರಕ್ತ : ಕೆಂಪುರಕ್ತಕಣ :: ಹಿಮೋಗ್ಲೋಬಿನ್ :
ಎ. ಪುಸ್ತಕ : ಹಾಳೆ: ಪದ
ಬಿ. ಟೀ : ಹಾಲು : ಸಕ್ಕರೆ
ಸಿ. ಟೆಲಿವಿಷನ್ : ನ್ಯೂಸ್‍ಪೇಪರ್ : ಮನರಂಜನೆ
ಡಿ. ಕಾದಂಬರಿ : ನಾಟಕ : ಸಾಹಿತ್ಯ
ಉತ್ತರ : ಎ. ಪುಸ್ತಕ : ಹಾಳೆ : ಪದ

2. ಬಾಷ್ಷೀಕರಣ : ಮೋಡ : ಮಳೆ
ಎ. ಸೀನುವುದು : ಕೆಮ್ಮು : ನೆಗಡಿ
ಬಿ. ಅಪಘಾತ : ಗಾಯ : ನೋವು
ಸಿ. ಮೊಗ್ಗು : ಹೂವು : ಸುವಾಸನೆ
ಡಿ. ಶಿಕ್ಷಕ : ಶಾಲೆ : ವಿದ್ಯಾರ್ಥಿ
ಉತ್ತರ: ಬಿ. ಅಪಘಾತ : ಗಾಯ : ನೋವು

3. ಆಲೂಗಡ್ಡೆ : ಕಡಲೆಕಾಯಿ : ಬೆಳ್ಳುಳ್ಳಿ
ಎ. ಮಾವು : ಆಪೆಲ್ : ಸೀಬೆ
ಬಿ. ಇಟ್ಟಿಗೆ : ಸಿಮೆಂಟ್ : ಮನೆ
ಸಿ. ಏಡಿ : ಮೊಸಳೆ : ಆಮೆ
ಡಿ. ಪುಸ್ತಕ : ಪೆನ್ನು : ಬಳಪ
ಉತ್ತರ : ಸಿ. ಎಡಿ : ಮೊಸಳೆ : ಆಮೆ

5. ಏಕರೂಪ ಸಾಮ್ಯತೆ :
ಈ ರೀತಿಯ ಸಾಮ್ಯತೆಯ ಪರೀಕ್ಷೇಯಲ್ಲಿ ಪ್ರಶ್ನೆಯಲ್ಲಿ ಮೂರು ಅಥಾವಾ ಹೆಚ್ಚು ಪದಗಳನ್ನು ಕೊಟ್ಟಿರುತ್ತಾರೆ. ಅದು ಯಾವುದಕ್ಕೆ ಸೇರಲ್ಪಡುತ್ತದೆ ಎಮಬುದನ್ನು 4 ಪದಗಳ ಪೈಕಿ ಒಂದು ಸೂಚಿಸುತ್ತದೆ.
#  ಉದಾಹರಣೆ ಪ್ರಶ್ನೆಗಳು
1. ಕ್ಲಚ್ : ಬ್ರೇಕ್ : ಹಾರ್ನ್ :
ಎ. ಹ್ಯಾಂಡಲ್
ಬಿ. ಸ್ಕೂಟರ್
ಸಿ. ಅಪಘಾತ
ಡಿ. ಪೆಟ್ರೋಲ್
ಉತ್ತರ : ಬಿ. ಸ್ಕೂಟರ್

2. ಬೇರು : ಕಾಂಡ : ರೆಂಬೆ :
ಎ. ಮರ
ಬಿ. ಎಲೆ
ಸಿ. ಗೊಬ್ಬರ
ಡಿ. ಬೆಳಕು
ಉತ್ತರ : ಎಲೆ

3.ಭೂಮಿ : ಇಳೆ : ಧರಣಿ :
ಎ. ಪೃಥ್ವಿ
ಬಿ. ನೇಸರು
ಸಿ. ಮುಗಿಲು
ಡಿ. ರವಿ
ಉತ್ತರ : ಎ. ಪೃಥ್ವಿ

6.ಗುಣ ಸಾಮ್ಯತೆ   :
ಈ ರೀತಿಯು ಪ್ರಶ್ನೆಗಳು ಮೂರು ಅಥವಾ ಹೆಚ್ಚು ಪದಗಳನ್ನು ಒಳಗೊಂಡಿರುತ್ತದೆ. ಅವುಗಳ ನಡುವೆ ಇರುವ ಸಾಮಾನ್ಯ ಗುಣ ಅಥವಾ ಸಂಬಂಧವನ್ನು ವಾಕ್ಯರೂಪದಲ್ಲಿ ಕೊಡಲಾಗಿದೆ. ಸರಿಯಾದ ಗುನ ಅಥವಾ ಸಂಬಂಧವನ್ನು ಆರಿಸಿ ಬರೆಯಬೇಕು.
#  ಉದಾಹರಣೆ ಪ್ರಶ್ನೆಗಳು
1. ಮಂಗಳ : ಬುಧ : ಶುಕ್ರ
ಎ. ಇವು ವಿರುದ್ಧವಾದ ಚಲನೆಯನ್ನು ಹೊಂದಿಲ್ಲ
ಬಿ. ಇವು ಅಪಶಕುನ ಗ್ರಹಗಳು
ಸಿ. ಇವು ಭೂಮಿಗೆ ಸಮೀಪವಿರುವ ಗ್ರಹಗಳು
ಡಿ. ಇವು ಉಪಗ್ರಹವನ್ನು ಹೊಂದಿಲ್ಲದೆ ಗ್ರಹಗಳು
ಉತ್ತರ : ಸಿ. ಇವು ಭೂಮಿಗೆ ಸಮೀಪವಿರುವ ಗ್ರಹಗಳು

2. ಮೊಸಳೆ : ಊಸರವಳ್ಳಿ : ಹಾವು
ಎ. ಇವು ಸರೀಸೃಪಗಳು
ಬಿ. ಇವು ಗಟ್ಟಿಯಾದ ಕವಚವನ್ನು ಹೊಂದಿವೆ
ಸಿ. ಇವು ನೀರಿನ ಸಮೀಪ ವಾಸಿಸುತ್ತದೆ.
ಡಿ. ಇವು ದೇಹದ ಬಣ್ಣವನ್ನು ಬದಲಾಯಿಸುತ್ತಿರುತ್ತದೆ.
ಉತ್ತರ : ಎ. ಇವು ಸರೀಸೃಪಗಳು

3. ದೆಹಲಿ : ಆಗ್ರಾ : ಮಧುರಾ :
ಎ. ಇವು ವಿವಿಧ ರಾಜ್ಯಗಳ ರಾಜಧಾನಿಗಳು
ಬಿ. ಇವು ಹಿಂದುಗಳ ಪವಿತ್ರ ಸ್ಥಳಗಳು
ಸಿ. ಇಲ್ಲಿ ವಿಶ್ವವಿಖ್ಯಾತ ಸ್ಮಾರಕಗಳಿವೆ
ಡಿ. ಇವು ಯಮುನ ನದಿಯ ದಂಡೆ
ಮೇಲಿದೆ.
ಉತ್ತರ : ಡಿ. ಇವು ಯಮುನಾ ನದಿಯ ದಂಡೆ ಮೇಲಿದೆ.

 

 

 

 

 

 

Leave a Reply

Your email address will not be published. Required fields are marked *

error: Content Copyright protected !!