ಸೂಕ್ಷ್ಮಾಣುಜೀವಿಗಳಿಂದ ಬರುವ ರೋಗಗಳು
# ವೈರಸ್ಗಳಿಂದ ಉಂಟಾಗುವ ರೋಗಗಳು
1. ರೇಬೀಸ್ (ಹೈಡ್ರೋಪೋಬಿಯಾ)
• ವೈರಸ್- ರರ್ಬ್ಡೋವಿರಿಡೆ
• ಹರಡುವ ವಿಧಾನ – ಹುಚ್ಚುನಾಯಿ ಕಡಿತದಿಂದ
• ಪರಿಣಾಮ ಬೀರುವ ಅಂಗ – ಮಿದುಳು, ನರಗಳು
• ರೋಗ ಲಕ್ಷಣಗಳು – ಬುದ್ದೀಭ್ರಮಣೆ, ಜೊಲ್ಲು ಸುರಿಸುವುದು, ನೀರು ಕಂಡರೆ ಭಯ
2. ಪೋಲಿಯೋ
• ವೈರಸ್- ಪೋಲಿಯೋವೈರಸ್
• ಹರಡುವ ವಿಧಾನ – ನೀರು, ನೊಣ, ಸೊಳ್ಳೆಗಳಿಂದ ಬಾಯಿಯ ಮೂಲಕ
• ಪರಿಣಾಮ ಬೀರುವ ಅಂಗಗಳು- ನರಗಳು
• ರೋಗ ಲಕ್ಷಣಗಳು – ನರಗಳಿಗೆ ಸೊಂಕು, ತಗುಲಿದಾಗ ಸ್ನಾಯುಗಳ ಅಶಕ್ತವಾಗಿ ಅಂಗವಿಕಲತೆ ಉಂಟಾಗುತ್ತದೆ.
3. ಮಂಗನಬಾವು(ಮಂಪ್ಸ್)
• ವೈರಸ್ – ಮಫಪ್ಸ್ ವೈರಸ್
• ಹರಡುವ ವಿಧಾನ- ಜೊಲ್ಲುರಸದಿಂದ ಗಾಳಿಯ ಮೂಲಕ
• ಪರಿಣಾಮ ಬೀರುವ ಅಂಗ – ಲಾಲಾ ಗ್ರಂಥಿಗಳು
• ರೋಗ ಲಕ್ಷಣಗಳು – ದವಡೆಯ ಭಾಗದಲ್ಲಿ ಬಾವು, ರೋಗಿಯ ಮುಖ ಮಂಗನಂತೆ ಕಾಣುವುದು.
4. ಸೀತಾಳೆ ಸಿಡುಬು (ಚಿಕನ್ ಪಾಕ್ಸ್)
• ವೈರಸ್- ಚಿಕನ್ಪಾಕ್ಸ್ ವೈರಸ್
• ರೋಗ ಲಕ್ಷಣಗಳು- ಕೆಂಪು ಚುಕ್ಕೆಗಳು ಎದೆ ಮತ್ತು ಬೆನ್ನಿನ ಮೇಲೆ ಒಮ್ಮೆಲೇ ಕಾಣಿಸುವುದು.
5. ಕಾಲುಬಾಯಿ ರೋಗ
• ಹರಡುವ ವಿಧಾನ- ಸಂಪರ್ಕ ಮತ್ತು ಗಾಳಿ
• ಪರಿಣಾಮ ಬೀರುವ ಅಂಗ- ಕಾಲಿನ ಗೊರಸು ಮತ್ತು ನಾಲಿಗೆ
• ರೋಗ ಲಕ್ಷಣಗಳು -ಕಾಲಿನ ಗೊರಸುಗಳ ನಡುವೆ ಗುಳ್ಳೆಗಳಾಗುತ್ತವೆ, ನಾಲಿಗೆಯ ಮೇಲೆ ಗುಳ್ಳೆಗಳಾಗುತ್ತವೆ.
# ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳು
1. ಧನುರ್ವಾಯು(ಟೆಟಾನಸ್)
• ಬ್ಯಾಕ್ಟೀರಿಯಾ – ಕ್ಲಾಸ್ಟ್ರೀಡಿಯಂ ಟೆಟನಿ
• ಹರಡುವ ವಿಧಾನ- ತುಕ್ಕು ಹಿಡಿದ ಕಬ್ಬಿಣದ ವಸ್ತುಗಳಿಂದ ಗಾಯಗಳ ಮೂಲಕ
• ಪರಿಣಾಮ ಬೀರುವ ಅಂಗ – ಸ್ನಾಯುಗಳು
• ರೋಗ ಲಕ್ಷಣಗಳು- ಬಾಯಿ ತೆರೆಯಲು ಬರುವುದಿಲ್ಲ. ದವಡೆಯ ಸ್ನಾಯುಗಳು ಸೆಟೆದುಕೊಳ್ಳುವುವು. ಶರೀರ ಬಿಲಿಲನಂತೆ ಬಾಗಿ ಸಾವು ಸಂಭವಿಸುವುದು.
2. ಕ್ಷಯರೋಗ (ಟಿಬಿ)
• ಬ್ಯಾಕ್ಟೀರಿಯಾ- ಮೈಕ್ರೋಬ್ಯಾಕ್ಟೀರಿಯಂ ಟ್ಯುಬರ್ ಕುಲೋಸಿಸ್
• ಹರಡುವ ವಿಧಾನ – ಉಸಿರಾಟದ ಮೂಲಕ
• ಪರಿಣಾಮ ಬೀರುವ ಅಂಗ – ಶ್ವಾಸಕೋಶ
• ರೋಗ ಲಕ್ಷಣಗಳು – ವೀಪರೀತ ಕೆಮ್ಮು, ದೇಹದ ತುಕ ಕಡಿಮೆಯಾಗುವುದು, ಸದಾ ಆಯಾಸ
3. ಕಾಲರಾ
• ಬ್ಯಾಕ್ಟೀರಿಯಾ – ವಿಬ್ರಿಯೋ ಕಾಲರಾ
• ಹರಡುವ ವಿಧಾನ – ಕಲುಷಿತ ನೀರು, ಆಹಾರ, ಕೀಟಗಳ ಮೂಲಕ
• ಪರಿಣಾಮಬೀರುವ ಅಂಗ – ಕರುಳು
• ರೋಗಗಳ ಲಕ್ಷಣ – ವೀಪರೀತ ವಾಂತಿ- ಬೇಧಿ
4. ವಿಷಮಶೀತ ಜ್ವರ (ಟೈಫಾಯಿಡ್)
• ಬ್ಯಾಕ್ಟೀರಿಯಾ – ಸಾಲ್ಮೊನೆಲ್ಲಾ ಟೈಫಿ
• ಹರಡುವ ವಿಧಾನ – ಕಲುಷಿತ ನೀರು, ಆಹಾರ, ನೊಣಗಳ ಮೂಲಕ
• ಪರಿಣಾಮ ಬೀರುವ ಅಂಗ – ಕರುಳು
• ರೋಗಗಳ ಲಕ್ಷಣ – ಜ್ವರ, ಬಡಬಡಸುವಿಕೆ,ಮಲಬದ್ಧತೆ, ವಾಂತಿ-ಬೇದಿ, ಜ್ವರಕ್ಕೆ ತಕ್ಕಂತೆ ನಾಡಿಬಡಿತ ಏರುವುದಿಲ್ಲ.
5. ಕುಷ್ಟರೋಗ(ಲೆಪ್ರಸಿ)
• ಬ್ಯಾಕ್ಟೀರಿಯಾ – ಮೈಕೋ ಬ್ಯಾಕ್ಟೀರಿಯಂ ಲೆಪ್ರೆ
• ಪರಿಣಾಮ ಬೀರುವ ಅಂಗ – ಚರ್ಮ ಮತ್ತು ನರಗಳು
• ರೋಗ ಲಕ್ಷಣಗಳು – ಸ್ಫರ್ಶಜ್ಞಾನವಿಲ್ಲದ ಮಚ್ಚೆಗಳು, ಚರ್ಮದ ಮೇಲೆ ಬಿಳಿಕೆಂಪು ಬಣ್ಣದ ಕಲೆಗಳು, ಕೈ- ಕಾಲು ಬೆರಳಿನ ತುದಿಗಳು ಮೊಂಡಾಗಿರುವುದು.
6. ಪ್ಲೇಗ್
• ಬ್ಯಾಕ್ಟೀರಿಯಾ- ಯೆರ್ಸಿನಿಯಾ ಪೆಸ್ಟೀಸ್
• ಹರಡುವ ವಿಧಾನ – ಇಲಿಗಳು, ಚಿಹಟೆಗಳು ಕಚ್ಚುವುದರ ಮೂಲಕ
• ಪರಿಣಾಮಬೀರುವ ಅಂಗ- ದುಗ್ಧರಸ ಗ್ರಮಥಿಗಳು, ಶ್ವಾಸಕೋಶಗಳು
• ರೋಗ ಲಕ್ಷಣಗಳು- ಕಂಕುಳ ಕುತ್ತಿಗೆಯ ಭಾಗದಲ್ಲಿರುವ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಬೀಕರ ಸ್ವರೂಪದ ನ್ಯೂಮೋನಿಯಾ
7. ಅಂಥ್ರಾಕ್ಸ್ ( ನೆರಡಿ ಜ್ವರ)
• ಬ್ಯಾಕ್ಟೀರಿಯಾ – ಬೆಸಿಲಸ್ ಅಂಥ್ರಾಕ್ಸ್
• ಹರಡುವ ವಿಧಾನ- ಸಂಪರ್ಕದಿಂದ
• ಪರಿಣಾಮಬೀರುವ ಅಂಗ – ಸೀಳುಪಾದದ ಗೊರಸು ಕಾಲುಳ್ಳ ಪ್ರಾಣಿಗಳಿಗೆ
• ರೋಗ ಲಕ್ಷಣಗಳು- ಕಣ್ಣುಗಳು ಕೆಂಪಾಗಿ ನೀರು ಸುರಿಯುವುದು, ಮಲಬಧ್ಧತೆಯಿಂದ ಹೊಟ್ಟೆ ಊತ
8. ಗೊನೆರಿಯಾ : ಬ್ಯಾಕ್ಟೀರಿಯಾ – ನಿಸ್ಸೇರಿಯಾ ಗೊನೊರೋಯಿಯಾ
9. ಡಯೇರಿಯಾ : ಬ್ಯಾಕ್ಟೀರಿಯಾ – ಬ್ಯಾಸಿಲಸ್ ಕೋಲೈ
10. ಡಿಪ್ತೀರಿಯಾ : ಕೊರೆನಿ ಬ್ಯಾಕ್ಟೀರಯಂ ಡಿಪ್ತಿರಿಯೇ
11. ಇಂಪ್ಲೂಯೆಂಜಾ : ಬ್ಯಾಕ್ಟೀರಿಯಾ – ಹಿಮೋಫಿಲಿಸ್ ಇಂಪ್ಲಯೆಂಜಾ
12. ಜಾಂಡೀಸ್ : ಲೇಪ್ಟೋಸ್ಟಿರಾ ಸಿಟೆರೋ ಹಿಮೋರೇಜಿಯಾ
13. ನ್ಯೂಮೋನಿಯಾ : ಡಿಪ್ಲೋಕಾಕಸ್ ನ್ಯೂಮೋನಿಯಾ
14. ನಾಯಿಕೆಮ್ಮು : ಬೊರೆಡೆಲ್ಲಾ ಪರಟುಸಿಸ್
15. ವಿಷಾಹಾರ : ಕ್ಲೋಸ್ಟ್ರೀಡಿಯಂ ಬೊಟುಲಿನಂ
16. ಸಿಪಿಲಿಸ್ : ಟ್ರೆಪೋನಿಮಾ ಪಾಲಿಡಿಯಂ
# ಏಕಕೋಶ ಜೀವಿಗಳಿಂದ ಬರುವ ರೋಗಗಳು
ರೋಗ – ಏಕಕೋಶ ಜೀವಿ
1. ಮಲೇರಿಯಾ – ಪ್ಲಾಸ್ಮೋಡಿಯಂ ವೈವಾಕ್ಸ್
2. ಅಮೀಬಿಕ್ ಆಮಶಂಕೆ – ಎಂಟಮೀಬ
3. ನಿದ್ರಾರೋಗ – ಟ್ರೈಪನೋಸೋಮಾ
4. ಕಾಲಾ ಅಜಾರ್ – ಲೆಶ್ಮಾನಿಯಾ
5. ಜಿಯಾರ್ಡಿ ಯಾಸಿಸ್ – ಜಿಯಾರ್ಡಿಯಾ