ಮೀರಾಬಾಯಿ ಚಾನು ದಾಖಲೆ
• ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನ ಮೊದಲ ದಿನವೇ ಭಾರತಕ್ಕೆ ರಜತ ಪದಕದ ಸಂಭ್ರಮ ದೊರೆಯಿತು. ಈ ಸಂಭ್ರಮಕ್ಕೆ ಕಾರಣರಾದವರು ‘ಸೈಖೋಮ್ ಮೀರಾಬಾಯಿ ಚಾನು’.
• ಇವರು 49 ಕೆ.ಜಿ. ವಿಭಾಗದ ವೇಟ್ಲಿಪ್ಟರ್ ಸ್ಫರ್ಧೆಯಲ್ಲಿ ಒಟ್ಟು 202 ಕೆ.ಜಿ ಎತ್ತಿ ರಜತ ಪದಕವನ್ನು ಪಡೆದರು.
• ಈ ಸ್ಫರ್ಧೆಯಲ್ಲಿ ಚೀನಾದ ಜೀಹುಯಿ ಹೋವ್ ಒಲಂಪಿಕ್ಸ್ ದಾಖಲೆಯೊಂದಿಗೆ ಒಟ್ಟು 210 ಕೆ. ಜಿ ಭಾರ ಎತ್ತಿ ಚಿನ್ನ ಗೆದ್ದರೆ, 194 ಕೆ.ಜಿ ಎತ್ತಿದ ಇಂಡೋನೇಷ್ಯಾದ ಕಾಂಟಿಕಾ ಆಯಿಷಾ ಕಂಚಿನ ಪದಕ ಜಯಿಸಿದರು.
• ಭಾರತದ ಒಲಂಪಿಕ್ಸ್ ಇತಿಹಾಸದಲ್ಲಿ ಮೊದಲ ಸ್ಫರ್ಧಾದಿನವೇ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ‘ಮೀರಾಬಾಯಿ ಚಾನು’ ಹೆಸರಾದರು.
• ಮೀರಾಬಾಯಿಯವರು ಗೆದ್ದಿರುವ ಬೆಳ್ಳಿ ಪದಕ ಭಾರತದ ಪಾಲಿಗೆ ಸಿಕ್ಕಿರುವ 17 ನೇ ವೈಯಕ್ತಿಕ ಪದಕ ಹಾಗೂ 6 ನೇ ವೈಯಕ್ತಿಕ ಬೆಳ್ಳಿ ಪದಕವಾಗಿದೆ.
• ಒಲಂಪಿಕ್ಸ್ಗೆ ತೆರಳಿದ್ದ 127 ಭಾರತೀಯ ಕ್ರೀಡಾಪಟುಗಳ್ಳಲ್ಲಿ ಏಕೈಕ ವೇಟ್ಲಿಪ್ಟರ್ ಆಗಿದ್ದ 26 ವರ್ಷದ ಮೀರಾಬಾಯಿ ಬಹಳ ನೀರಿಕ್ಷೇಯನ್ನು ಹುಟ್ಟಿಸಿದ್ದರು.
• ಇವರ ಈ ಬೆಳ್ಳಿ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮೀರಾಬಾಯಿಯವರ ಕೋಚ್ “ ವಿಜಯ ಶರ್ಮ”.
• ಮೀರಾಬಾಯಿ ಸಾಧನೆ ಭಾರತದ ವೆಟ್ಲಿಪ್ಟಿಂಗ್ ವಿಭಾಗಕ್ಕೆ ಒಲಂಪಿಕ್ಸ್ನಲ್ಲಿ ದೊರೆತ ಗರಿಷ್ಠ ಗೌರವ. ಇದಕ್ಕೂ ಮೊದಲು 2000 ರಲ್ಲಿ ಸಿಡ್ನಿ ಒಲಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್ಲಿಪ್ಟಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
• ಮೀರಾಬಾಯಿ ಚಾನು ಅವರು 2016 ರ ರಿಯೊ ಒಲಂಪಿಕ್ಸ್ನಲ್ಲಿ ವಿಫಲಗೊಂಡಿದ್ದರು. ವೈಪಲ್ಯಕ್ಕೆ ಮನನೊಂದಿದ್ದ ಅವರು ಪದಕ ಗೆಲ್ಲುವ ಛಲವನ್ನು ಹೊಂದಿದ್ದರು.
• ಮಣಿಪುರ ರಾಜಧಾನಿ ಇಂಫಾಲಕ್ಕಿಂತ 20 ಕಿ.ಮೀ ದೂರದ ನಂಗ್ಪೊಕ್ ಕಕ್ಚಿಂಗ್ ಗ್ರಾಮದ ಬಡ ಕುಟುಂಬದ ಆರು ಮಂದಿ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ್ದ ಮೀರಾಬಾಯಿ ಚಾನು ಭಾರ ಎತ್ತುವ ಸಾಮಥ್ರ್ಯ ಗುರುತಿಸಿದವರು ಅವರ ಅಣ್ಣ. ತಂಗಿಯ ಸಾಮಥ್ರ್ಯ ಗಮನಿಸಿ ವೇಟ್ಲಿಪ್ಟರ್ ಆಗಲು ಅವರು ಪ್ರೇರೇಪಿಸಿದ್ದರು.