FDA ExamGKMultiple Choice Questions SeriesQUESTION BANKQuizSDA examSpardha Times

ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 5

Share With Friends

1. ಖಗೋಳ ವಿಜ್ಞಾನದ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ದಾಂತಿಕವು ಇವರಿಂದ ರಚಿಸಲ್ಪಟ್ಟಿದೆ…..
ಎ. ವರಾಹಮಿಹಿರ
ಬಿ. ಆರ್ಯಭಟ್ಟ
ಸಿ. ಸುಶ್ರುತ
ಡಿ. ಧನ್ವಂತರಿ

2. ಪ್ರೊ. ಮಾಧವ್ ಗಾಡ್ಗೀಳ್ ವರದಿಯು ಇದಕ್ಕೆ ಸಂಬಂಧಿಸಿದೆ..
ಎ. ಮಲೆನಾಡು ಸಂರಕ್ಷಣೆ
ಬಿ. ಪಶ್ಚಿಮ ಘಟ್ಟ ಸಂರಕ್ಷಣೆ
ಸಿ. ಉತ್ತರ ಒಳನಾಡು ಜಲಾಸಯನ ಸಂರಕ್ಷಣೆ
ಡಿ. ಕರಾವಳಿ ಸಂರಕ್ಷಣೆ

3. ಕೆಳಗಿನ ಯಾವ ಶಾತವಾಹನ ದೊರೆ ಗಾಥ ಸಪ್ತಸತಿ’ ಕೃತಿಯನ್ನು ರಚಿಸಿದನು?
ಎ. ಸಿಮುಖ
ಬಿ. ಗೌತಮಿಪುತ್ರ ಶಾತಕರ್ಣಿ
ಸಿ. ಹಾಲ
ಡಿ. 1 ನೇ ಶಾತಕರ್ಣಿ

4. ಚಾಲುಕ್ಯ ವಂಶದ ಸ್ಥಾಪಕರು ಯಾರು?
ಎ. ರಾಜ ಜಯಸಿಂಹ
ಬಿ. ಕೀರ್ತಿವರ್ಮನ್
ಸಿ. 2 ನೇ ತೈಲಪ
ಡಿ. ವಿಜಯಾಲಯ

5. ಈ ಕೆಳಗಿನ ಯಾವ ಬೆಳೆಯನ್ನು ಹರಪ್ಪ ನಾಗರಿಕತೆಯಲ್ಲಿ ಬೆಳೆಯುತ್ತಿರಲಿಲ್ಲ?
ಎ. ಸಾಸಿವೆ
ಬಿ. ಬಾರ್ಲಿ
ಸಿ. ಕಬ್ಬು
ಡಿ. ಎಳ್ಳು

6. ಯಾವ ಕೃತಿಯನ್ನು ಸಂಸ್ಕøತ ಭಾಷೆಯ “ ಪ್ರಥಮ ವಿಶ್ವಕೋಶ” ವೆಂದು ಪರಿಗಣಿಸಲಾಗಿದೆ?
ಎ. ಮಿತಾಕ್ಷರ
ಬಿ. ಜಾತಕತಿಲಕ
ಸಿ. ಗೋವಿದ್ಯಾ
ಡಿ. ಮನಸೋಲ್ಲಾಸ

7. ಮೂರನೆಯ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದ್ದವರು ಯಾರು?
ಎ. ವಿಶ್ವನಾಥರಾವ್
ಬಿ. ಮಾಧವ್‍ರಾವ್
ಸಿ. ಸದಾಶಿವರಾವ್
ಡಿ. ದತ್ತಾಜಿರಾವ್ ಸಿಂಧ್ಯ

8. 1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು?
ಎ. ಭಾರತ ಮತ್ತು ಪಾಕಿಸ್ತಾನ
ಬಿ. ಭಾರತ ಮತ್ತು ಚೀನಾ
ಸಿ. ಭಾರತ ಮತ್ತು ನೇಪಾಳ
ಡಿ. ಭಾರತ ಮತ್ತು ಶ್ರೀಲಂಕಾ

9. ರಾಜ್ಯನಿರ್ದೇಶಕ ತತ್ವಗಳನ್ನು ಈ ಕೆಳಗಿನ ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ. ಯು.ಎಸ್.ಎ
ಬಿ. ಇಂಗ್ಲೆಂಡ್
ಸಿ. ಫ್ರಾನ್ಸ್
ಡಿ. ಐರ್ಲೆಂಡ್

10. ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಅಸ್ಪøಶ್ಯತೆಯನ್ನು ರದ್ದು ಪಡಿಸುತ್ತದೆ?
ಎ. ವಿಧಿ 14
ಬಿ. ವಿಧಿ 19
ಸಿ. ವಿಧಿ 17
ಡಿ. ವಿಧಿ 21

11. ಭಾರತದ ಪ್ರಥಮ ಚುನಾವಣಾ ಆಯುಕ್ತರು ಇವರಲ್ಲಿ ಯಾರು?
ಎ. ಆರ್. ಕೆ. W್ರವೇದಿ
ಬಿ. ಸುಕುಮಾರ್ ಸೇನ್
ಸಿ. ಕೆ.ವಿ.ಕೆ ಸುಂದರಂ
ಡಿ. ಟಿ.ಎನ್. ಶೇಷನ್

12. ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಮಾನ್ಯತೆಯನ್ನು ನೀಡುವ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ?
ಎ. ಸಂಸತ್ತು

ಸಿ. ಭಾರತ ರಾಷ್ಟ್ರಪತಿಗಳು
ಡಿ. ಭಾರತದ ಮುಖ್ಯ ನ್ಯಾಯಾಧೀಶರು

13. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯರ ಸಂಖ್ಯೆ ಎಷ್ಟು?
ಎ. 3
ಬಿ.4
ಸಿ. 5
ಡಿ. 6

14. ಪಕ್ಷಾಂತರ ನಿಷೇಧ ಕಾಯ್ದೆ ಯಾವ ವರ್ಷದಲ್ಲಿ ಜಾರಿಗೆ ಬಂದಿತು?
ಎ. 1975
ಬಿ. 1985
ಸಿ. 1987
ಡಿ. 1990

15. ಭಾರತದ ರಾಷ್ಟ್ರಪತಿಯವರು ರಾಜೀನಾಮೆ ಸಲ್ಲಿಸುವುದಾದರೆ ರಾಜೀನಾಮೆ ಪತ್ರವನ್ನು ಯಾರಿಗೆ ನೀಡುತ್ತಾರೆ?
ಎ. ಸಭಾಪತಿ
ಬಿ. ಭಾರತದ ಪ್ರಧಾನಮಂತ್ರಗಳು
ಸಿ. ಭಾರತದ ಉಪರಾಷ್ಟ್ರಪತಿ
ಡಿ. ಸುಪ್ರೀ ಕೋರ್ಟಿನ ಮುಖ್ಯ ನ್ಯಾಯಾದೀಶ

16. ಆಲಿವ್‍ರಿಡ್‍ಲೇ ಅಮೆಗಳು ಸಾಮೂಹಿಕ ಮೊಟ್ಟೆ ಇಡುವ ಸ್ಥಳ ‘ಗಹಿರ್‍ಮಾತಾ’ ಇರುವುದು ಈ ಕಡಲ ತೀರದಲ್ಲಿ..
ಎ. ದಕ್ಷಿಣ ಒಡಿಶಾ
ಬಿ. ದಕ್ಷಿಣ ಕನ್ನಡ ಜಿಲ್ಲೆ
ಸಿ. ಉತ್ತರ ಅಂಡಮಾನ್
ಡಿ. ದಕ್ಷಿಣ ಕೇರಳ

17. ಭಾರತದ ಯಾವ ನಗರವು ದೊಡ್ಡ ಕಟ್ಟಡ ಮತ್ತು ಅಪಾರ್ಟ್‍ಮೆಂಟ್‍ಗಳಲ್ಲಿ ಸೋಲಾರ್ ಫಲಕಗಳ ಅಳವಡಿಕೆಯನ್ನು ಮೊಟ್ಟ ಮೊದಲು ಕಡ್ಡಾಯಗೊಳಿಸಿತು.?
ಎ. ಚೆನ್ನೈ
ಬಿ. ಹೈದರಾಬಾದ್
ಸಿ. ತಿರುವನಂತಪುರ
ಡಿ. ಕರೀಮ್‍ನಗರ

18. ಯಾವ ಪರ್ವತ ಶ್ರೇಣಿಗಳು ಥೆತೈಸ್ ಸಮುದ್ರವಿದ್ದಲ್ಲಿ ನಿರ್ಮಾಣವಾಗಿದೆ?
ಎ. ಹಿಮಾಲಯ
ಬಿ. ಅರಾವಳಿ
ಸಿ. ಹಿಂದೂ- ಕುಶ್
ಡಿ. ನೀಲಗಿರಿ

19. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು?
ಎ. ವೂಲಾರ್ ಸರೋವರ
ಬಿ. ಸುಪೀರಿಯರ್ ಸರೋವರ
ಸಿ. ವಿಕ್ಟೋರಿಯಾ ಸರೋವರ
ಡಿ. ಬೈಕಲ್ ಸರೋವರ

20. ಜೆಟ್ ವಿಮಾನದ ಕಾರ್ಯ ನಿರ್ವಹಣೆಯು ನ್ಯೂಟನ್‍ನ ಈ ನಿಯಮಕ್ಕೆ ಸಂಬಂಧಿಸಿದ್ದು..
ಎ. ಚಲನೆಯ ಮೊದಲನೆಯ ನಿಯಮ
ಬಿ. ಚಲನೆಯ ಎರಡನೇ ನಿಯಮ
ಸಿ. ಚಲನೆಯ ಮೂರನೆ ನಿಯಮ
ಡಿ. ಗುರುತ್ವ ನಿಯಮ

21. ಚಂದ್ರಗ್ರಹಣ ಯಾವಾಗ ಉಂಟಾಗುತ್ತದೆ?
ಎ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬರುವುದು
ಬಿ. ಚಂದ್ರ, ಸೂರ್ಯ ಮತ್ತು ಭೂಮಿ ನಡುವೆ ಬರುವುದು
ಸಿ. ಸೂರ್ಯ, ಭೂಮಿ ಮತ್ತು ಚಂದ್ರನ ನಡುವೆ ಬರುವುದು
ಡಿ. ಅಮಾವಾಸ್ಯೆ ದಿನ ಆಗುತ್ತದೆ.

22. ಸಮೀಪದೃಷ್ಟಿ ಇರುವ ಒಬ್ಬ ವ್ಯಕ್ತಿಯಲ್ಲಿ ಬಿಂಬವು ಅವನ ಕಣ್ಣುಗಳಲ್ಲಿ…
ಎ. ರೆಟಿನಾ ಮುಂಭಾಗದಲ್ಲು ಮೂಡುತ್ತದೆ.
ಬಿ. ರೆಟಿನಾ ಹಿಂಭಾಗದಲ್ಲಿ ಮೂಡುತ್ತದೆ.
ಸಿ. ರೆಟಿನಾ ಹಿಂಭಾಗದಲ್ಲಿ ಮೂಡುತ್ತದೆ.
ಡಿ. ಬಿಂಬ ಮೂಡುವುದೇ ಇಲ್ಲ.

23. ಸಾಗರದ ಆಳವನ್ನು ಮಾಪನ ಮಾಡುವ ಉಪಕರಣ ಯಾವುದು?
ಎ. ಸ್ಫೀಡೋಮೀಟರ್
ಬಿ. ಆಮ್ಮೀಟರ್
ಸಿ. ಫ್ಲಕ್ಸ್‍ಮೀಟರ್
ಡಿ. ಗಹನ ಮಾಪಕ

24. ನಿದ್ರಾರೋಗಕ್ಕೆ   ವಾಹಕ
ಎ. ಮನೆನೊಣ
ಬಿ. ಟ್ಸಿಟ್ಸಿನೊಣ
ಸಿ. ಮರಳುನೊಣ
ಡಿ. ಹಣ್ಣು ನೊಣ

25. ವಂಶವಾಹಿಯೊಂದು ಇನ್ನೊಂದು ವಂಶವಾಹಿಯ ಕಾರ್ಯ ಮರೆಮಾಡುವುದನ್ನು ಹೀಗೆನ್ನುತ್ತಾರೆ?
ಎ. ಪ್ರಭಾವಿ/ ಪ್ರಧಾನ
ಬಿ. ಎಪಿಸ್ಟಾಸಿಸ್
ಸಿ. ಅಪ್ರಭಾವಿ
ಡಿ. ವಿಂಗಡಿತ

[ ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 4 ]

# ಉತ್ತರಗಳು :
1. ಎ. ವರಾಹಮಿಹಿರ
2. ಬಿ. ಪಶ್ಚಿಮ ಘಟ್ಟ ಸಂರಕ್ಷಣೆ
3. ಸಿ. ಹಾಲ
4. ಎ. ರಾಜ ಜಯಸಿಂಹ
5. ಸಿ. ಕಬ್ಬು
6. ಡಿ. ಮನಸೋಲ್ಲಾಸ
7. ಸಿ. ಸದಾಶಿವರಾವ್
8. ಎ. ಭಾರತ ಮತ್ತು ಪಾಕಿಸ್ತಾನ
9. ಡಿ. ಐರ್ಲೆಂಡ್
10. ಸಿ. ವಿಧಿ 17

11. ಬಿ. ಸುಕುಮಾರ್ ಸೇನ್
12. ಬಿ. ಚುನಾವಣಾ ಆಯೋಗ
13. ಸಿ. 5
14. ಸಿ. 1987
15. ಸಿ. ಭಾರತದ ಉಪರಾಷ್ಟ್ರಪತಿ
16. ಎ. ದಕ್ಷಿಣ ಒಡಿಶಾ
17. ಡಿ. ಕರೀಮ್ನಗರ
18. ಎ. ಹಿಮಾಲಯ
19. ಡಿ. ಬೈಕಲ್ ಸರೋವರ
20. ಸಿ. ಚಲನೆಯ ಮೂರನೆ ನಿಯಮ

21. ಎ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬರುವುದು
22. ಎ. ರೆಟಿನಾ ಮುಂಭಾಗದಲ್ಲು ಮೂಡುತ್ತದೆ.
23. ಡಿ. ಗಹನ ಮಾಪಕ
24. ಬಿ. ಟ್ಸಿಟ್ಸಿನೊಣ
25. ಬಿ. ಎಪಿಸ್ಟಾಸಿಸ್

 

error: Content Copyright protected !!