ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 7
1. ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ..?
ಎ. ರಾಜ್ಯ ವಿಧಾನಸಭೆಗಳಿಗೆ
ಬಿ. ರಾಜ್ಯ ವಿಧಾನಪರಿಷತ್ತುಗಳಿಗೆ
ಸಿ. ಸಂಸತ್ತಿನ ಉಭಯ ಸದನಗಳಿಗೆ
ಡಿ. ಸುಪ್ರೀಂಕೋರ್ಟಿಗೆ
2. ಒಂದು ರಾಜ್ಯದ ರಾಜ್ಯಪಾಲರಾಗಲು ಇತರ ಅರ್ಹತೆಗಳೊಂದಿಗೆ ವ್ಯಕ್ತಿಯೊಬ್ಬನಿಗೆ ಆಗಿರಬೇಕಾದ ವಯಸ್ಸೆಷ್ಟು..?
ಎ. 25 ವರ್ಷಗಳು
ಬಿ. 30 ವರ್ಷಗಳು
ಸಿ. 40 ವರ್ಷಗಳು
ಡಿ. 35 ವರ್ಷಗಳು
3. ಸಂವಿಧಾನದ ಯಾವ ವಿಧಿಯನ್ವಯ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು..?
ಎ. 356 ನೇ ವಿಧಿ
ಬಿ. 352 ನೇ ವಿಧಿ
ಸಿ. 368 ನೆ ವಿಧಿ
ಡಿ. 360 ನೇ ವಿಧಿ
4. ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಇರಬಹುದಾದ ಗರಿಷ್ಠ ಅಂತರ ಎಷ್ಟು..?
ಎ. ಒಂದು ವರ್ಷ
ಬಿ. 9 ತಿಂಗಳು
ಸಿ 6 ತಿಂಗಳು
ಡಿ. 3 ತಿಂಗಳು
5. 42 ನೇ ಸಂವಿಧಾನದ ತಿದ್ದುಪಡಿಯಲ್ಲಿ ಲೋಕಸಭೆಯ ಅವಧಿಯನ್ನು 6 ವರ್ಷಗಳಿಗೆ ಹೆಚ್ಚಿಸಲಾಗಿತ್ತು, ಅದನ್ನು ಯಾವ ತಿದ್ದುಪಡಿಯಲ್ಲಿ ಪುನ: 5 ವರ್ಷಗಳಿಗೆ ತಗ್ಗಿಸಲಾಯಿತು..?
ಎ. 52 ನೇ ತಿದ್ದುಪಡಿ
ಬಿ. 46 ನೇ ತಿದ್ದುಪಡಿ
ಸಿ. 44 ನೆ ತಿದ್ದುಪಡಿ
ಡಿ. 43 ನೇ ತಿದ್ದುಪಡಿ
6. ಸಂವಿಧಾನವು ಭಾರತದ ಸರ್ವೋಚ್ಛ ಕಾನೂನಾಗಿದ್ದು, ಅದು ಈ ಕೆಳಗಿನ ಯಾರಿಂದ ರಕ್ಷಿಸಲ್ಪಟ್ಟಿದೆ..?
ಎ. ಮಂತ್ರಿಮಂಡಲ
ಬಿ. ಸಂಸತ್ತು
ಸಿ. ಸುಪ್ರೀಂ ಕೋರ್ಟ್
ಡಿ. ಸಂವಿಧಾನ ರಚನಾ ಸಭೆ
7. ಈ ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ..?
ಎ. ಹಣಕಾಸು ಆಯೋಗ
ಬಿ. ಅಂತರ್- ರಾಜ್ಯ ಮಂಡಳಿ
ಸಿ. ರಾಷ್ಟ್ರೀಯ ಸಲಹಾ ಮಂಡಳಿ
ಡಿ. ಚುನಾವಣಾ ಆಯೋಗ
8. ಭಾರತದ ಉಪರಾಷ್ಟ್ರಪತಿಯವರನ್ನು ಅವರ ಸ್ಥಾನದಿಂದ ತೆಗೆದು ಹಾಕುವ ಸೂಚನೆಯನ್ನು ಎಲ್ಲಿ ಮಂಡಿಸಬಹುದು..?
ಎ. ಸಂಸತ್ತಿನ ಉಭಯ ಸದನಗಳು
ಬಿ. ಲೋಕಸಭೆ
ಸಿ. ರಾಜ್ಯಸಭೆಯಲ್ಲಿ ಮಾತ್ರ
ಡಿ. ಸಂಸತ್ತಿನ ಜಂಟಿ ಅಧಿವೇಶನ
9. ಕೇಂದ್ರ ಮುಂಗಡ ಪತ್ರವನ್ನು ಮೊದಲು ಎಲ್ಲಿ ಮಂಡಿಸಲಾಗಿತ್ತು..?
ಎ. ರಾಜ್ಯಸಭೆ
ಬಿ. ಲೋಕಸಭೆ
ಸಿ. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದಲ್ಲಿ
ಡಿ. ಸುಪ್ರೀಂಕೋರ್ಟ್
10. ಸಂಸತ್ ಸದಸ್ಯರ ವೇತನವನ್ನು ನಿರ್ಧರಿಸುವರು ಯಾರು..?
ಎ. ಸಂಸತ್ತು
ಬಿ. ಕೇಂದ್ರ ಮಂತ್ರಿಮಂಡಲ
ಸಿ. ಲೋಕಾಸಭಾಧ್ಯಕ್ಷರು
ಡಿ. ರಾಷ್ಟ್ರಪತಿಗಳು
11. ಸಂಸತ್ ಸದಸ್ಯರಲ್ಲದ ಈ ಕೆಳಗಿನ ಯಾರು ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಬಹುದು..?
ಎ. ಭಾರತದ ಮುಖ್ಯ ಚುನಾವಣಾ ಆಯುಕ್ತರು
ಬಿ. ಭಾರತದ ಅಟಾರ್ನಿ ಜನರಲ್
ಸಿ. ಭಾರತದ ಸಾಲಿಟರಿ ಜನರಲ್
ಡಿ. ಭಾರತದ ಮುಖ್ಯ ನ್ಯಾಯಾಧೀಶರು
12. ಭಾರತ ಸಂವಿಧಾನದ ಯಾವ ವಿಧಿಯು ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನಕ್ಕೆ ಅನುವು ಮಾಡಿ ಕೊಟ್ಟಿದೆ..?
ಎ. 108 ನೇ ವಿಧಿ
ಬಿ. 130 ನೇ ವಿಧಿ
ಸಿ. 120 ನೇ ವಿಧಿ
ಡಿ. 210 ನೇ ವಿಧಿ
13. ಭಾರತದ ರಾಷ್ಟ್ರಪತಿಗಳು ಎಷ್ಟು ಬಗೆಯ ತುರ್ತು ಪರಿಸ್ಥಿತಿಯ ಅಧಿಕಾರಿಗಳನ್ನು ಹೊಂದಿದ್ದಾರೆ..?
ಎ. ಎರಡು
ಬಿ. ಮೂರು
ಸಿ. ನಾಲ್ಕು
ಡಿ. ಐದು
14. ಯಾವ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತ್ತುಗೊಳಿಸಬಹುದು..?
ಎ. ರಾಷ್ಟ್ರೀಯ ತುರ್ತುಪರಿಸ್ಥಿತಿ
ಬಿ. ಹಣಕಾಸಿನ ತುರ್ತುಪರಿಸ್ಥಿತಿ
ಸಿ. ಯಾವುದೇ ಸಂದರ್ಭದಲ್ಲಿ
ಡಿ. ಯಾವುದೇ ಪರಿಸ್ಥಿತಿಯಲ್ಲಿ
15.ಈ ಕೆಳಗಿನ ಯಾರನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುವುದಿಲ್ಲ..?
ಎ. ಭಾರತದ ಮುಖ್ಯ ನ್ಯಾಯಾಧೀಶರು
ಬಿ. ಸೈನ್ಯದ ಮುಖ್ಯಸ್ಥರು
ಸಿ. ಲೋಕಸಭಾಧ್ಯಕ್ಷರು
ಡಿ. ವಾಯುಪಡೆಯ ಮುಖ್ಯಸ್ಥರು
# ಉತ್ತರಗಳು :
1. ಸಿ. ಸಂಸತ್ತಿನ ಉಭಯ ಸದನಗಳಿಗೆ
2. ಡಿ. 35 ವರ್ಷಗಳು
3. ಸಿ. 368 ನೆ ವಿಧಿ
4. ಸಿ 6 ತಿಂಗಳು
5. ಸಿ. 44 ನೆ ತಿದ್ದುಪಡಿ
6. ಸಿ. ಸುಪ್ರೀಂ ಕೋರ್ಟ್
7. ಸಿ. ರಾಷ್ಟ್ರೀಯ ಸಲಹಾ ಮಂಡಳಿ
8. ಸಿ. ರಾಜ್ಯಸಭೆಯಲ್ಲಿ ಮಾತ್ರ
9. ಬಿ. ಲೋಕಸಭೆ
10. ಎ. ಸಂಸತ್ತು
11. ಬಿ. ಭಾರತದ ಅಟಾರ್ನಿ ಜನರಲ್
12. ಎ. 108 ನೇ ವಿಧಿ
13. ಬಿ. ಮೂರು
14. ಎ. ರಾಷ್ಟ್ರೀಯ ತುರ್ತುಪರಿಸ್ಥಿತಿ
15. ಸಿ. ಲೋಕಸಭಾಧ್ಯಕ್ಷರು
# ಹಿಂದಿನ ಸಂಚಿಕೆಗಳನ್ನೂ ಓದಿ..
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 5
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 6