ಭಾರತದಲ್ಲಿ ವಿವಿಧ್ದೋಶ ನದಿ ಕಣಿವೆ ಯೋಜನೆಗಳು
ಭಾರತದಲ್ಲಿ ಜಲಸಂಪನ್ಮೂಲಗಳ ಗರಿಷ್ಠ ಪ್ರಮಾಣದ ಉಪಯೋಗವನ್ನು ಪಡೆಯಲು ವಿವಿದ್ಧೋಶ ಯೋಜನೆಗಳನ್ನು ಕೈಗೊಳ್ಳಲಾಗಿದೆ.ಅದಕ್ಕಾಗಿ ನದಿ ಕಣಿವೆಯಲ್ಲಿ ಅದರ ಉಪನದಿಗಳನ್ನು ಒಳಗೊಂಡಂತೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
ಈ ಯೋಜನೆಗಳ ಮುಖ್ಯ ಉದ್ದೇಶಗಳೆಂದರೆ
1.ನೀರಾವರಿ ಸೌಲಭ್ಯವನ್ನು ಒದಗಿಸುವುದು.
2.ಜಲವಿದ್ಯುತ್ಚ್ಛಕ್ತಿಯ ಉತ್ಪಾದನೆಗೆ ಸಹಾಯ
3.ಪ್ರವಾಹ ನಿಯಂತ್ರಣ
4.ಮಣ್ಣಿನ ಸವಕಳಿ ತಡೆಗಟ್ಟುವುದು.
5.ಮೀನುಗಾರಿಕೆಯ ಅಭಿವೃದ್ಧಿ
6.ಒಳನಾಡಿನ ನೌಕಕಾಯಾನದ ಸೌಲಭ್ಯ
7.ಕೈಗಾರಿಕೆಗಳಿಗೆ ನೀರಿನ ಪೂರೈಕೆ
8.ಅರಣ್ಯಕೀರಣ
9.ಮನರಂಜನೆ, ಗೃಹಬಳಕೆಗೆ ನೀರನ್ನೊದಗಿಸುವುದು.
ಪ್ರಮುಖ ವಿವಿದ್ಧೋಶ ನದಿ ಕಣಿವೆ ಯೋಜನೆಗಳು
1.ದಾಮೋದರ ನದಿ ಕಣಿವೆ ಯೋಜನೆ
✦ದಾಮೋದರ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದ್ಧೋಶ ನದಿ ಕಣಿವೆ ಯೋಜನೆಯಾಗಿದೆ.
✦ಮೊದಲಿಗೆ ಇದು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಜೊತೆಗೂಡಿ ಕೈಗೊಂಡ ಯೋಜನೆಯಾಗಿದೆ.
✦ದಾಮೋದರ ನದಿಯ ಉಗಮಸ್ಥಾನ ಜಾರ್ಖಂಡಿನ ಛೊಟಾನಾಗಪುರ ಪ್ರಸ್ಥಭೂಮಿಯಲ್ಲಿದೆ.
✦ಈ ನದಿಯು ಪಶ್ಚಿಮ ಬಂಗಾಳದಲ್ಲಿ ಪ್ರವಾಹಗಳಿಂದ ಅಪಾರ ಹಾನಿಯನ್ನುಂಟು ಮಾಡುತ್ತಿತ್ತು.ಆದ್ದರಿಂದ ಇದನ್ನು ಪಶ್ಚಿಮ ಬಂಗಾಳದ “ಕಣ್ಣೀರಿನ ನದಿ” ಎಂದು ಕರೆಯುತ್ತಾರೆ.
✦ಈ ಯೋಜನೆಯ ಮುಖ್ಯ ಉದ್ದೇಶಗಳೆಂದರೆ ಪ್ರವಾಹ ನಿಯಂತ್ರಣ, ನೀರಾವರಿ, ಜಲವಿದ್ಯುತ್ ಉತ್ಪಾದನೆ, ಜಲಸಂಚಾg, ಮೀನುಸಾಕಣೆ,ಮನರಂಜನೆ, ಕಾಡುಗಳನ್ನು ಬೆಳೆಸುವುದು, ಮಣ್ಣಿನ ಸವಕಳಿಯನ್ನು ತಡೆಗಟ್ಟುವುದು.
2.ಭಾಕ್ರಾ-ನಂಗಲ್ ಯೋಜನೆ
ಈ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದ್ಧೋಶ ನದಿಕಣಿವೆ ಯೋಜನೆಯಾಗಿದೆ.
✦ಇದು ಪಂಜಾಬ್, ಹರಿಯಾಣ, ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
✦ಪ್ರವಾಹ ನಿಯಂತ್ರಣ, ಮಣ್ಣಿನ ಸವಕಳಿಯನ್ನು ತಡೆಯುವುದು,ನೀರಾವರಿ, ಜಲಸಂಚಾರ, ಜಲವಿದ್ಯುತ್ ಉತ್ಪಾದನೆ, ಕಾಡುಗಳನ್ನು ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ.
✦ಹಿಮಾಚಲಪ್ರದೇಶದ ಭಾಕ್ರಾ ಮತ್ತು ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಎರಡು ಪ್ರತ್ಯೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಭಾಕ್ರಾ ಅಣೆಕಟ್ಟು ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟೆಯಾಗಿದೆ. ಈ ಯೋಜನೆಯಿಂದ ದೆಹಲಿ ಹಾಗೂ ಹಿಮಾಚಲ ಪ್ರದೇಶಗಳು ಸಹ ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಸೌಲಭ್ಯಗಳನ್ನು ಪಡೆದಿದೆ.
✦ಈ ಜಲಾಶಯವನ್ನು “ ಗೋವಿಂದಸಾಗರ” ಎಂದು ಕರೆಯಲಾಗುತ್ತದೆ.
3.ಕೋಸಿ ಯೋಜನೆ
✦ಈ ಯೋಜನೆಯ ಮುಖ್ಯ ಉದ್ಧೇಶವೆಂದರೆ ಪ್ರವಾಹ ನಿಯಂತ್ರಣವಾಗಿದೆ. ನೀರಾವರಿ ಸೌಲಭ್ಯ, ಜಲವಿದ್ಯುತ್
✦ಕೋಸಿ ನದಿಯನ್ನು ಬಿಹಾರಿನ “ ಕಣ್ಣೀರಿನ ನದಿ” ಎನ್ನುತ್ತಿದ್ದರು.
✦ಈ ಯೋಜನೆಯು ಭಾರತ ಮತ್ತು ನೇಪಾಳ ರಾಷ್ಟ್ರಗಳ ಸಹಯೋಜನೆಯಾಗಿದೆ.
✦ಭಾರತ ಮತ್ತು ನೇಪಾಳಗಳ ಗಡಿಯಲ್ಲಿ ಬರುವ “ ಹನುಮಾನ್ ನಗರ” ಎಂಬಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
4.ಹಿರಾಕುಡ್ ಯೋಜನೆ
✦ಪ್ರವಾಹ ನಿಯಂತ್ರಣ, ನೀರಾವರಿ ಸೌಲಭ್ಯ ಮತ್ತು ಜಲ ವಿದ್ಯುತ್ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
✦ಒರಿಸ್ಸಾದ ಸಾಂಬಲ್ಪುರ ಜಿಲ್ಲೆಯಿಂದ 10 ಕಿ.ಮೀ ದೂರದಲ್ಲಿ “ ಮಹಾನದಿ”ಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ.
✦ಈ ನದಿಯು “ ಒರಿಸ್ಸಾದ ಕಣ್ಣೀರಿನ ನದಿ” ಎನಿಸಿದೆ.
✦ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟೆಯಾಗಿದೆ.
✦ಈ ಯೋಜನೆಯಿಂದ ಒರಿಸ್ಸಾ, ಬಿಹಾಋ, ಮತ್ತು ಛತ್ತಿಸ್ಘರ್ ಪ್ರಾಂತಗಳು ಸೌಲಭ್ಯವನ್ನು ಪಡೆದಿದೆ.
5.ತುಂಗಭದ್ರಾ ಯೋಜನೆ
✦ಈ ಯೋಜನೆಯ ಮುಖ್ಯ ಉದ್ದೇಶವೆಂದರೆ- ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ಉತ್ಪಾದನೆ.
✦ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
✦ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಮಲ್ಲಾಪುರದಲ್ಲಿ ತುಂಗಭಧ್ರಾ ನದಿಗೆ ನಿರ್ಮಿಸಲಾಗಿದೆ.
✦ಈ ಸಾಗರವನ್ನು “ಪಂಪಸಾಗರ” ಎನ್ನುತ್ತಾರೆ.
6.ನಾಗಾರ್ಜುನ ಸಾಗರ ಯೋಜನೆ
✦ಆಂಧ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ.
✦ಇದು ಭಾರತದ ವಿವಿಧೋದ್ದೇಶ ಯೋಜನೆಯಲ್ಲಿಯೇ ಅತ್ಯಂತ ದೊಡ್ಡ ಯೋಜನೆಯಾಗಿದೆ.
✦ನೀರಾವರಿ ಮತ್ತು ಜಲವಿದ್ಯುತಚ್ಛಕ್ತಿಯ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
7.ಕೃಷ್ಣಾ ಮೇಲ್ದಂಡೆ ಯೋಜನೆ
✦ಈ ಯೋಜನೆಯು ಕರ್ನಾಟಕದ ಬಾಗಲಕೋಟೆ ಮತ್ತು ಕಲಬುರ್ಗಿ ಜಿಲ್ಲೆಗಳ ನೀರಾವರಿ ಯೋಜನೆಯಾಗಿದೆ.
✦ಈ ಅಣೆಕಟ್ಟನ್ನು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾನದಿಗೆ ನಿರ್ಮಿಸಲಾಗಿದೆ.
✦ಈ ಯೋಜನೆಯು ವಿಜಾಪುರ, ರಾಯಚೂರು, ಬಾಗಲಕೋಟೆ ಮತ್ತು ಕಲಬುರ್ಗಿ ಜಿಲ್ಲೆಗಳ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತವೆ.
ಇದೇ ನದಿಗೆ ಕಲಬುರ್ಗಿ ಜಿಲ್ಲೆಯ ನಾರಾಯಣಪುರದಲ್ಲಿ ಮತ್ತೊಂದು ಅಣೆಕಟ್ಟನ್ನು ನಿರ್ಮಿಸಲಾಗಿದೆ.
8.ಚಂಬಲ್ ಯೋಜನೆ
✦ಇದು ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
✦ಜಲವಿದ್ಯುತ್ಚ್ಛಕ್ತಿ ಉತ್ಪಾದನೆ, ಮಣ್ಣಿನ ಸವಕಳಿ ತಡೆ, ಹಾಗೂ ನೀರಾವರಿ ಸೌಲಭ್ಯ ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ.
✦ಚಂಬಲ್ ಯೋಜನೆಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೂರು ಅಣೆಕಟ್ಟುಗಳನ್ನು ರಾಜಸ್ಥಾನದಲ್ಲಿ ನಿರ್ಮಿಸಲಾಗಿದೆ.
1.ಗಾಂಧಿ ಸಾರ ಯೋಜನೆ
2.ರಾಣಾ ಪ್ರತಾಪ ಅಣೆಕಟ್ಟು
3.ಜವಾಹರ್ ಸಾಗರ್ ಅಣೆಕಟ್ಟು
9.ನರ್ಮದಾ ಕಣಿವೆ ಯೋಜನೆ
ನರ್ಮದಾ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ಬ್ರಿಟಿಷರ ಕಾಲದಲ್ಲಿಯೇ ಬಂದಿತ್ತು, ಆದರೆ ಅದು ಕೈಗೊಳ್ಳಲಿಲ್ಲ.
✦ಈ ಯೋಜನೆಗೆ ಮೊದಲಿನಿಂದಲೂ ವಿವಾದಗಳು ಏರ್ಪಟ್ಟು 1969ರಲ್ಲಿ ನರ್ಮದಾ ನದಿ ನೀರಿನ ವಿವಾದದ ಪ್ರಾಧಿಕಾರ ನೇಮಿಸಿ ಮಧ್ಯಪ್ರದೇಶ ಮತ್ತು ಗುಜರಾತ್ಗಳ ನಡುವೆ ಈ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟುಗಳ ನೀರಿನ ಹಂಚಿಕೆಯ ವಿವಾದವನ್ನು ತಿರ್ಮಾನಿಸಿತು.
10.ತೇಹರಿ ಅಣೆಕಟ್ಟುಯೋಜನೆ
✦ಉತ್ತರಖಂಡ ರಾಜ್ಯದ ತೇಹರಿಯಲ್ಲಿ ಈ ಅಣೆಕಟ್ಟನ್ನು ಭಾಗೀರಥಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
11.ಮುಲ್ಲಪೇರಿಯಾರ ಅಣೆಕಟ್ಟು
✦ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿ “ ಪೇರಿಯಾರ್ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.