GKHistorySpardha Times

ಮೈಸೂರು ರಾಜ್ಯಕ್ಕೆ ಸಂಬಂಧಿಸಿದ 20 ಪ್ರಮುಖ ಪ್ರಶ್ನೆಗಳು

Share With Friends

1.ಮೈಸೂರಿನ ಒಡೆಯರ ಮನೆತನದ ಯಾವ ರಾಜ್ಯದ ಮಾಂಡಲೀಕರಾಗಿದ್ದರು?
ಎ. ಮರಾಠ ಸಾಮ್ರಾಜ್ಯ           ಬಿ. ಹೈದರಾಬಾದಿನ ನಿಜಾಮ
ಸಿ. ವಿಜಯನಗರ ಸಾಮ್ರಾಜ್ಯ     ಡಿ. ಮೊಘಲ್ ಸಾಮ್ರಾಜ್ಯ

2.ಒಡೆಯರ ಆಳ್ವಿಕೆ ಆರಂಭವಾದ ವರ್ಷ ಯಾವಾಗ?
ಎ. 1399                       ಬಿ. 1610
ಸಿ. 1638                       ಡಿ.1656

3.ಶ್ರೀರಂಗ ಪಟ್ಟಣವನ್ನು ಒಡೆಯರ ರಾಜಧಾನಿಯನ್ನಾಗಿ ಮಾಡಿದವರು ಯಾರು?
ಎ. ಟಿಪ್ಪು ಸುಲ್ತಾನ            ಬಿ. ಹೈದರ ಅಲಿ
ಸಿ. ರಾಜ ಒಡೆಯರ್         ಡಿ. ಚಿಕ್ಕದೇವರಾಜ ಒಡೆಯರ

4.ಮೈಸೂರಿನಲ್ಲಿ ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ್ದು ಯಾರು?
ಎ. ಚಿಕ್ಕದೇವರಾಜ ಒಡೆಯರ್     ಬಿ. ರಾಜ ಒಡೆಯರ್
ಸಿ. ಟಿಪ್ಪು ಸುಲ್ತಾನ                  ಡಿ. ನರಸರಾಜ ಒಡೆಯರ

5.‘ಆಧುನಿಕ ಮೈಸೂರು ನಿರ್ಮಾಪಕ’ ಎಂದು ಕರೆಯಲ್ಪಡುವ ಮೈಸೂರಿನ ರಾಜ ಯಾರು?
ಎ. ಮಿರ್ಜಾ ಇಸ್ಮಾಯಿಲ್                 ಬಿ. ನಾಲ್ವಡಿ ಕೃಷ್ಣರಾಜ ಒಡೆಯರ್
ಸಿ. ಮುಮ್ಮಡಿ ಕೃಷ್ಣರಾಜ ಒಡೆಯರ್     ಡಿ. ಸರ್. ಎಮ್. ವಿಶ್ವೇಶ್ವರಯ್ಯ

6.ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದವರು ಯಾರು?
ಎ. ಶೇಷಾದ್ರಿ ಅಯ್ಯರ್               ಬಿ. ರಂಗಾಚಾರ್ಲು
ಸಿ. ಸರ್. ಎಮ್. ವಿಶ್ವೇಶ್ವರಯ್ಯ     ಡಿ. ಪೂರ್ಣಯ್ಯ

7.ಮೈಸೂರು ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆರಂಭಿಸಿದ ದಿವಾನರು ಯಾರು?
ಎ. ರಂಗಾಚಾರ್ಲು              ಬಿ. ಸರ್. ಎಮ್. ವಿಶ್ವೇಶ್ವರಯ್ಯ
ಸಿ. ಶೇಷಾದ್ರಿ ಅಯ್ಯರ್         ಡಿ. ಮಿರ್ಜಾ ಇಸ್ಮಾಯಿಲ್

8.ಮೈಸೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದವರು ಯಾರು?
ಎ. ಸರ್. ಎಮ್. ವಿಶ್ವೇಶ್ವರಯ್ಯ     ಬಿ. ಶೇಷಾದ್ರಿ ಅಯ್ಯರ್
ಸಿ. ಮಿರ್ಜಾ ಇಸ್ಮಾಯಿಲ್            ಡಿ. ರಂಗಾಚಾರ್ಲು

9.ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿದ್ದ ಮತ್ತು ನಂದಿ ವಿಗ್ರಹದ ಸ್ಥಾಪನೆ ಮಾಡಿದ ಮೈಸೂರಿನ ದೊರೆ ಯಾರು?
ಎ. ರಾಜ ಒಡೆಯರ್           ಬಿ. ದೊಡ್ಡ ದೇವರಾಯ
ಸಿ. ಕಂಠೀರವ ನರಸರಾಜ    ಡಿ. ಚಿಕ್ಕದೇವರಾಜ

10.ಶ್ರೀರಂಗಪಟ್ಟಣದ ‘ನರಸಿಂಹ ದೇವಸ್ಥಾನ’ ಮತ್ತು ‘ಬಂಗಾರದೊಡ್ಡಿ ಕಾಲುವೆ’ಗಳನ್ನು ನಿರ್ಮಿಸಿದ ಒಡೆಯರು ಯಾರು?
ಎ. ಚಿಕ್ಕದೇವರಾಜ ಒಡೆಯರ್              ಬಿ. ರಾಜ ಒಡೆಯರ್
ಸಿ. ಕಂಠೀರವ ನರಸರಾಜ ಒಡೆಯರ್    ಡಿ. ದೊಡ್ಡ ದೇವರಾಯ

11.ಮೈಸೂರು ಮತ್ತು ಬೆಂಗಳೂರು ರೈಲು ಮಾರ್ಗವನ್ನು ಆರಂಭಿಸಿದ ಮೈಸೂರಿನ ದಿವಾನರು ಯಾರು?
ಎ. ಶೇಷಾದ್ರಿ ಅಯ್ಯರ್              ಬಿ. ಪೂರ್ಣಯ್ಯ
ಸಿ. ರಂಗಚಾರ್ಲು                    ಡಿ. ಮಿರ್ಜಾ ಇಸ್ಮಾಯಿಲ್

12.ಕನ್ನಂಬಾಡಿ ಅಣೆಕಟ್ಟನ್ನು ಪೂರ್ಣ ಮಾಡಿದ ಮೈಸೂರಿನ ದಿವಾನರು ಯಾರು?
ಎ. ಮಿರ್ಜಾ ಇಸ್ಮಾಯಿಲ್            ಬಿ. ಪೂರ್ಣಯ್ಯ
ಸಿ. ಸರ್. ಎಮ್. ವಿಶ್ವೇಶ್ವರಯ್ಯ     ಡಿ. ರಂಗಚಾರ್ಲು

13.ಕಂಠೀರವ ನರಸರಾಜ ಒಡೆಯರ್ ಅವರ ಸಾಹಸಪೂರ್ಣ ಸಾಧನೆ ಯಾವುದು?
ಎ. ರಾಜ್ಯದ ಸುತ್ತ ಬೇಲಿ ಹಾಕಿಸಿದ್ದು                            ಬಿ. ಹಲವು ಕಾಲುವೆಗಳನ್ನು ನಿರ್ಮಿಸಿದ್ದು
ಸಿ. ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇವಸ್ಥಾನದ ರಚನೆ    ಡಿ. ಬಿಜಾಪುರದ ರಣದುಲ್ಲಾ ಖಾನ್‍ನನ್ನು ಹಿಮ್ಮೆಟ್ಟಿಸಿದ್ದು.

14.ಇಮ್ಮಡಿ ಕಂಠೀರವ ನರಸರಾಜನ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಶಕ್ತಿಶಾಲಿ ಅಧಿಕಾರಿ ಹುದ್ದೆ ಯಾವುದು?
ಎ. ದಿವಾನ            ಬಿ. ದಳವಾಯಿ
ಸಿ. ಕಮೀಷನರ್       ಡಿ. ಗವರ್ನರ್

15.ಮೈಸೂರು ರಾಜ್ಯದಲ್ಲಿ “ ದಳವಾಯಿ”ಗಳು ಶಕ್ತಿಶಾಲಿಯಾಗಲು ಕಾರಣ ಏನು?
ಎ. ರಾಜ್ಯಕ್ಕೆ ಉತ್ತರಾಧಿಕಾರಿಗಳು ಇಲ್ಲದಿರುವುದು         ಬಿ. ಬ್ರಿಟಿಷರ ಪ್ರಾಬಲ್ಯ
ಸಿ. ಚಿಕ್ಕದೇವರಾಯನ ಸಾವು                                ಡಿ. ರಾಜನು ಕುರುಡ ಮತ್ತು ಕಿವುಡನಾಗಿದ್ದುದು.

ಅದಿರುಗಳ ಕುರಿತ 25 ಬಹುಮುಖ್ಯ ಪ್ರಶ್ನೆಗಳು

16.ನರಸರಾಜ ಒಡೆಯರು ಚಲಾವಣೆಗೆ ತಂದ ಬಂಗಾರದ ನಾಣ್ಯದ ಹೆಸರೇನು?
ಎ. ಇಜಾರಾ             ಬಿ. ಕಂಠೀರಾಯ ಪಣ
ಸಿ. ಪಣ                   ಡಿ. ನರಸರಾಜ

17.ಮೈಸೂರಿನ ಒಡೆಯರು ಯಾವ ವಂಶಕ್ಕೆ ಸೇರಿದವರು?
ಎ. ಯದು ವಂಶ             ಬಿ. ಗುಲಾಮಿ ವಂಶ
ಸಿ. ರಾಜ ವಂಶ              ಡಿ. ಸಂಗಮ ವಂಶ

18.ಯಾವ ಒಡೆಯರ ಕಾಲದಲ್ಲಿ ಏಷ್ಯಾದಲ್ಲಿ ಮೊದಲ ಜಲ ವಿದ್ಯುತ್ ಯೋಜನೆಯಾದ ಶಿವನಸಮುದ್ರ ಯೋಜನೆಯು
ಪ್ರಾರಂಭವಾಯಿತು.?
ಎ. ರಾಜ ಒಡೆಯರ್                   ಬಿ. ನಾಲ್ವಡಿ ಕೃಷ್ಣರಾಜ ಒಡೆಯರ್
ಸಿ. ಚಿಕ್ಕದೇವರಾಯ ಒಡೆಯರ್    ಡಿ. ನರಸರಾಜ ಒಡೆಯರ್

19.ಮೈಸೂರಿನ ಇಬ್ಬರು ದಳವಾಯಿಗಳು ಯಾರು?
ಎ. ಕೃಷ್ಣ ಮತ್ತು ವಿಜಯ                        ಬಿ. ನರಸರಾಜ ಮತ್ತು ಲಿಂಗರಾಜ
ಸಿ. ನಂಜರಾಜಯ್ಯ ಮತ್ತಿ ದೇವರಾಜಯ್ಯ    ಡಿ. ಪೂರ್ಣಯ್ಯ ಮತ್ತು ರಂಗಚಾರ್ಲು

20.ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಆಗಿದ್ದವರು ಯಾರು?
ಎ. ನಾಲ್ವಡಿ ಕೃಷ್ಣರಾಜ ಒಡೆಯರ್         ಬಿ. ನರಸರಾಜ ಒಡೆಯರ್
ಸಿ. ಜಯಚಾಮರಾಜ ಒಡೆಯರ್          ಡಿ. ಚಿಕ್ಕದೇವರಾಜ ಒಡೆಯರ್

ಉತ್ತರಗಳು :
1.ಸಿ. ವಿಜಯನಗರ ಸಾಮ್ರಾಜ್ಯ
2.ಎ. 1399
3.ಸಿ. ರಾಜ ಒಡೆಯರ್
4.ಬಿ. ರಾಜ ಒಡೆಯರ್
5.ಬಿ. ನಾಲ್ವಡಿ ಕೃಷ್ಣರಾಜ ಒಡೆಯರ್
6.ಬಿ. ರಂಗಾಚಾರ್ಲು
7.ಸಿ. ಶೇಷಾದ್ರಿ ಅಯ್ಯರ್
8.ಎ. ಸರ್. ಎಮ್. ವಿಶ್ವೇಶ್ವರಯ್ಯ
9.ಬಿ. ದೊಡ್ಡ ದೇವರಾಯ
10.ಸಿ. ಕಂಠೀರವ ನರಸರಾಜ ಒಡೆಯರ್
11.ಸಿ. ರಂಗಚಾರ್ಲು
12.ಎ. ಮಿರ್ಜಾ ಇಸ್ಮಾಯಿಲ್
13.ಡಿ. ಬಿಜಾಪುರದ ರಣದುಲ್ಲಾ ಖಾನ್‍ನನ್ನು ಹಿಮ್ಮೆಟ್ಟಿಸಿದ್ದು.
14.ಬಿ. ದಳವಾಯಿ
15.ಡಿ. ರಾಜನು ಕುರುಡ ಮತ್ತು ಕಿವುಡನಾಗಿದ್ದುದು.
16.ಬಿ. ಕಂಠೀರಾಯ ಪಣ
17.ಎ. ಯದು ವಂಶ
18.ಬಿ. ನಾಲ್ವಡಿ ಕೃಷ್ಣರಾಜ ಒಡೆಯರ್
19.ಸಿ. ನಂಜರಾಜಯ್ಯ ಮತ್ತಿ ದೇವರಾಜಯ್
20.ಸಿ. ಜಯಚಾಮರಾಜ ಒಡೆಯರ್

ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

Leave a Reply

Your email address will not be published. Required fields are marked *

error: Content Copyright protected !!