10th, ITI ಪಾಸಾದವರಿಗೆ ವಾಯುವ್ಯ ರೈಲ್ವೆಯಲ್ಲಿ ಉದ್ಯೋಗಾವಕಾಶ
ವಾಯುವ್ಯ ರೈಲ್ವೆಯ ನೇಮಕಾತಿ ಮಂಡಳಿಯಲ್ಲಿ ವಾಯುವ್ಯ ರೈಲ್ವೆಯ ಶಿಶಿಕ್ಷು ತರಬೇತುದಾರರನ್ನು ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಫಿಟ್ಟರ್, ವೆಲ್ಡರ್, ಪೇಂಟರ್, ಕಾರ್ಪೆಂಟರ್, ಟರ್ನರ್, ಮೆಕ್ಯಾನಿಕ್ ಮಷಿನ್ ಟೂಲ್, ವೈಯರ್‌ಮನ್ ಸೇರಿದಂತೆ 1646 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಪಾಸಾದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಅಪ್ರೆಂಟಿಸ್ ಕಾಯ್ದೆ 1961 ರ ಪ್ರಕಾರ ಒಂದು ವರ್ಷದ ಅವಧಿಗೆ 2024ರ ಸಾಲಿಗೆ ನಿಯೋಜಿಸಿಕೊಳ್ಳಲಾಗುತ್ತದೆ. ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಈ ಕೆಳಕಂಡಂತಿದೆ.
✦ ಹುದ್ದೆ ಹೆಸರು : ಶಿಶಿಕ್ಷು ತರಬೇತುದಾರ ಹುದ್ದೆಗಳು.(ಅಪ್ರೆಂಟಿಸ್ )
✦ ಒಟ್ಟು ಹುದ್ದೆಗಳ ಸಂಖ್ಯೆ : 1646
✦ ಶೈಕ್ಷಣಿಕ ಅರ್ಹತೆಗಳು: ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಉತ್ತೀರ್ಣರಾಗಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರಬೇಕು.
✦ ಅರ್ಜಿ ಶುಲ್ಕ : ರೂ.100.(ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.)
✦ ವಯೋಮಿತಿ : ಕನಿಷ್ಠ 15 ವರ್ಷ. ಗರಿಷ್ಠ 24 ವರ್ಷ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
✦ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-02-2024
ಹೆಚ್ಚಿನ ಮಾಹಿತಿಗಾಗಿ ವಾಯುವ್ಯ ರೈಲ್ವೆ ವೆಬ್‌ಸೈಟ್ ವಿಳಾಸ https://rrcjaipur.in/ ಗೆ ಭೇಟಿನೀಡಿ
ಭಾರತೀಯ ಸೇನೆಗೆ ‘ಉಗ್ರಂ’ ಅಸಾಲ್ಟ್ ರೈಫಲ್ ಎಂಟ್ರಿ, ಇದರ ವಿಶೇಷತೆಗಳೇನು..?