ಒಲಿಂಪಿಕ್ ಗೇಮ್ಸ್ ವಿಶೇಷತೆಗಳು : Olympic Games
‘ಒಲಂಪಿಕ್ಸ್’ ಎಂಬುದು ಖ್ಯಾತನಾಮ ಕ್ರೀಡಾಪಟುಗಳು ಒಂದೆಡೆ ಕಲೆತು ನಡೆಸುವ ಜಾಗತಿಕ ಕ್ರೀಡಾಮೇಳವಾಗಿದೆ. ಕೊರೊನಾ ಸೊಂಕಿನ ಭೀತಿಯ ನಡುವೆಯೂ 32 ನೇ ಒಲಂಪಿಕ್ಸ್ಗೆ ಜಪಾನ್ನ ಟೋಕಿಯೋ ನಗರ ಪೂರ್ಣ ಸಜ್ಜಾಗಿದೆ. ಟೋಕಿಯೋದಲ್ಲಿ ಜುಲೈ 23 2021 ಕ್ಕೆ ಭಾರತೀಯ ಕಾಲಮಾನ 4.30 ಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಟೋಕಿಯೋದಲ್ಲಿ 17 ದಿನ 32 ನೇ ಒಲಂಪಿಕ್ಸ್ ನಡೆಯಲಿದೆ. ಭಾರತ ಇದುವರೆಗೂ ಪಾಲ್ಗೊಂಡ 24 ಕೂಟಗಳಲ್ಲಿ 28 ಪದಕಗಳನ್ನು ಪಡೆದುಕೊಂಡಿದೆ. ಆದರೆ 2016 ರ ರಿಯೊ ಆವೃತ್ತಿಯಲ್ಲಿ ಕೇವಲ 2 ಪದಕ ದೊರಕಿತ್ತು. ಈ ಭಾರಿ 120 ಸದಸ್ಯರ ಭಾರತೀಯ ನಿಯೋಗ ಹಿಂದೆಂದಿಗಿಂತ ಹೆಚ್ಚು ಪದಕ ಜಯಿಸುವ ನೀರಿಕ್ಷೇ ಇದೆ.
• ಒಲಂಪಿಕ್ಸ್ ಇತಿಹಾಸ
ಕ್ರಿಸ್ತ ಪೂರ್ವ 776 ರಿಂದ ಕ್ರಿಸ್ತ ಶಕ 393 ರವರೆಗೆ ಧಾರ್ಮಿಕ ಕೂಟವಾಗಿ ಒಲಂಪಿಕ್ಸ್ ನಡೆಯುತ್ತಿತ್ತು. ಆಧುನಿಕ ಒಲಂಪಿಕ್ಸ್ ಆರಂಭಗೊಂಡಿದ್ದು 1896 ರಲ್ಲಿ ಗ್ರೀಸ್ನ ಅಥೆನ್ಸ್ನಲ್ಲಿ . ಆ ವರ್ಷ 36 ದೇಶಗಳು ಪಾಲ್ಗೋಂಡಿದ್ದವು. ಅಂತೆಯೇ 1920 ರಲ್ಲಿ ಒಲಂಪಿಕ್ಸ್ ಜ್ಯೋತಿಯ ರ್ಯಾಲಿ ಚಾಲನೆಗೆ ಬಂತು. ಆದರೆ 1970 ಹಾಗೂ 80 ರ ದಶಕದಲ್ಲಿ ಒಲಂಪಿಕ್ಸ್ಗೆ ವೃತ್ತಿಪರ ಕ್ರೀಡಾಪಟುಗಳ ಪ್ರವೇಶವಾಯಿತು. ಅಲ್ಲಿಂದ ಸ್ಫರ್ಧಾತ್ಮಕತ ಹೆಚ್ಚಾಗಿ, ಈಗ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಜಾತ್ರೆಯಾಗಿದೆ.
[ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಕುರಿತ ಮಹತ್ವದ ಪ್ರಶ್ನೆಗಳು ]
• ಒಲಂಪಿಕ್ಸ್ ಜ್ಯೋತಿ
ಒಲಂಪಿಕ್ ಜ್ವಾಲೆಯು ಒಲಂಪಿಕ್ ಚಳವಳಿಯಲ್ಲಿ ಬಳಸಲಾಗುವ ಸಂಕೇತ. ಇದು ಆಧುನಿಕ ಮತ್ತು ಪ್ರಾಚೀನ ಆಟಗಳ ನಡುವಿನ ನಿರಂತರತೆಯ ಸಂಕೇತ ಸಹ ಆಗಿದೆ. ಒಲಂಪಿಕ್ ಕ್ರೀಡಾಕೂಟಕ್ಕೆ ಹಲವು ತಿಂಗಳ ಮುಂಚೆ ಗ್ರೀಕ್ನ ಒಲಂಪಿಯಾದಲ್ಲಿ ಒಲಂಪಿಕ್ ಜ್ವಾಲೆಯನ್ನು ಬೆಳಗಿಸಲಾಗುತ್ತದೆ. ನಂತರ ಆತಿಥ್ಯ ರಾಷ್ಟ್ರದಾದ್ಯಂತ ಒಲಂಪಿಕ್ ಟಾರ್ಚ್ ರೀಲೆ ನಡೆದು ಉದ್ಘಾಟನಾ ಸಮಾರಂಭದಲ್ಲಿ ಕೊನೆಗೊಳ್ಳುತ್ತದೆ. ಈ ಭಾರಿ ‘ ಭರವಸೆ ನಮ್ಮ ದಾರಿಯನ್ನು ಬೆಳಗಿಸುತ್ತದೆ’ ಎಂಬುದು ಒಲಂಪಿಕ್ ಟಾರ್ಚ್ ರಿಲೇ ಘೋಷ ವಾಕ್ಯವಾಗಿದೆ.
• ಒಲಂಪಿಕ್ ರಿಂಗ್ಗಳ ವೈಶಿಷ್ಟ್ಯತೆ
ಸುರುಳಿಯಾಕಾರದಲ್ಲಿರುವ ಐದು ರಿಂಗ್ಗಳಲ್ಲೂ ವೈಶಿಷ್ಟ್ಯತೆ ಅಡಗಿದೆ. ಇವು 5 ಖಂಡಗಳನ್ನು ಪ್ರತಿನಿದಿಸುತ್ತವೆ. ಆಧುನಿಕ ಒಲಂಪಿಕ್ಸ್ ಪಿತಾಮಹಾ ಫ್ರಾನ್ಸ್ನ ಪಿ.ಡಿ. ಕೌಬರ್ಟಿಯನ್, 1913 ರಲ್ಲಿ ಈ ಐದು ರಿಂಗುಗಳುಳ್ಳ ಒಲಂಪಿಕ್ಸ್ ಧ್ವಜವನ್ನು ವಿನ್ಯಾಸಗೊಳಿಸಿದರು. ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರ ಧ್ವಜವೂ ಈ ರಿಂಗ್ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ.
• ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪಿಚರ್ಡ್ ಅಥ್ಲೆಟಿಕ್ಸ್ನಲ್ಲಿ ಪುರುಷರ 200 ಮೀಟರ್ ಓಟ ಹಾಗೂ ಪುರುಷರ 200 ಮೀಟರ್ ಹರ್ಡಲ್ಸ್ ಸ್ಪರ್ಧೆಗಳಲ್ಲಿ 2 ಬೆಳ್ಳಿ ಪದಕಗಳನ್ನು ಜಯಿಸುವುದರೊಂದಿಗೆ ಭಾರತದ ಒಲಂಪಿಕ್ ಇತಿಹಾಸ ಆರಂಭವಾಗುತ್ತದೆ.ಆಗ ಭಾರತ ಬ್ರಿಟಿಷರ ವಸಾಹತಾಗಿತ್ತು. ಆ ಆವೃತ್ತಿಯಲ್ಲಿ ಭಾರತದಿಂದ ಸ್ಫರ್ಧಿಸಿದ್ದು ಪಿಚರ್ಡ್ ಮಾತ್ರ.
ಭಾರತ ಮೊದಲ ಬಾರಿಗೆ ತಂಡವನ್ನು ಕಳುಹಿಸಿದ್ದು 1920 ರಲ್ಲಿ.. ಇದುವರೆಗೆ ಭಾರತ 24 ಒಲಂಪಿಕ್ಸ್ಗಳಲ್ಲಿ 9 ಚಿನ್ನ, 7 ಬೆಳ್ಳಿ, 12 ಕಂಚು ಸೇರಿದಂತೆ 28 ಪದಕಗಳನ್ನು ಗೆದ್ದಿದೆ. ಭಾರತದ ಹಾಕಿ ತಂಡ ಇದರಲ್ಲಿ ಸಿಂಹ ಪಾಲು ಪಡೆದುಕೊಂಡಿದೆ.
# ಟೋಕಿಯೋ ಒಲಂಪಿಕ್ಸ್ನ ಪ್ರಮುಖ ಅಂಶಗಳು
• ಲಾಂಛನ :
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಕೂಟಕ್ಕೆ ಚಿಹ್ನೆಯೊಂದನ್ನು ರಚಿಸಲಾಗುತ್ತದೆ. ಅಂತೆಯೇ ಟೋಕಿಯೋ ಒಲಂಪಿಕ್ಸ್ಗೆ ರಚಿಸಲಾಗಿರುವ ಮ್ಯಾಸ್ಕಾಟ್ಗೆ ‘ ಮಿರಾಟೋಯಿವ್ರಾ’ ಎಂದು ಹೆಸರಿಸಲಾಗಿದೆ. ಆತಿಥ್ಯ ರಾಷ್ಟ್ರ ಮತ್ತು ಕೂಟವನ್ನು ಬಿಂಬಿಸುವ ಈ ಚಿಹ್ನೆ ಸಂಘಟಕರಿಗೆ ಆದಾಯದ ಮೂಲವು ಆಗಿದೆ.
• ನಾಲ್ಕು ಹೊಸ ಸ್ಫರ್ಧೆಗಳು :
ಟೋಕಿಯೋ ಒಲಂಪಿಕ್ಸ್ನಲ್ಲಿ ನಾಲ್ಕು ಕ್ರೀಡೆಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಕರಾಟೆ, ಸರ್ಫಿಂಗ್, ಸ್ಕೇಟ್ ಬೋರ್ಡಿಂಗ್ ಮತ್ತು ಸ್ಪೋಟ್ರ್ಸ್ ಕ್ಲೈಬಿಂಗ್ ಸ್ಫರ್ಧೆಗಳು ಪದಾರ್ಪಣೆ ಮಾಡುತ್ತಿವೆ. ಜಪಾನಿನಲ್ಲಿ ಹೆಚ್ಚು ಪ್ರಸಿದ್ದೀಯಾಗಿರುವ ಕರಾಟೆ ಈ ಬಾರಿಯ ಒಲಂಪಿಕ್ಸ್ಗೆ ಸೇರ್ಪಡೆಯಾಗಿದೆ. ನಾಲ್ಕು ಹೊಸ ಕ್ರೀಡೆಗಳ ಜೊತೆಗೆ ಹಿಂದಿನ ಆವೃತ್ತಿಗಳಲ್ಲಿ ಕೈಬಿಡಲಾಗಿದ್ದ ಬೇಸ್ಭಾಲ್ ಈ ಬಾರಿ ಕಾಣಿಸಿಕೊಳ್ಳಲಿದೆ. ಜೊತೆಗೆ 3*3 ಬಾಸ್ಕೆಟ್ಬಾಲ್, ಫ್ರೀಸ್ಟೈಲ್ ಬಿಎಮ್ಎಕ್ಸ್ ಮತ್ತು ಮ್ಯಾಡಿಸನ್ ಸೈಕ್ಲಿಂಗ್ ಸ್ಫರ್ದೆಗಳನ್ನು ಸೇರ್ಪಡೆಗೊಳಿಸಲಾಗಿದೆ
• ಬೃಹತ್ ಸ್ಟೇಡಿಯಮ್ :
ಒಲಂಪಿಕ್ಸ್ಗಾಗಿ ಸಂಘಟನಾ ಸಮಿತಿ 52 ಎಕರೆ ಪ್ರದೇಶದಲ್ಲಿ 80 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಸಕಲ ಸೌಕರ್ಯಗಳನ್ನು ಹೊಂದಿರುವ ಜಪಾನ್ ನ್ಯಾಷನಲ್ ಸ್ಟೇಡಿಯಮ್ ನಿರ್ಮಿಸಿದೆ. ಈ ಕ್ರೀಡಾಂಗಣ ಒಲಂಪಿಕ್ಸ್ಗಾಗಿ ತಯಾರುಗೊಂಡ ಅತ್ಯಾಧುನಿಕ ಹಾಗೂ ದುಬಾರಿ ವೆಚ್ಚದ ಸ್ಟೇಡಿಯಂ ಎಂಬ ಖ್ಯಾತಿ ಪಡೆದುಕೊಂಡಿದೆ. ಆದರೆ ಈ ಕ್ರೀಡಾಂಗಣದಲ್ಲಿ ಕುಳಿತು ಸ್ಫರ್ಧಿಗಳಿಗೆ ಸಾಕ್ಷಿಯಾಗುವ ಭಾಗ್ಯ ಕ್ರೀಡಾ ಪ್ರೇಮಿಗಳಿಗೆ ಸಿಗುತಿಲ್ಲ.
• ಸ್ವಯಂ ಪದಕ ಪ್ರಧಾನ :
ಒಲಂಪಿಕ್ಸ್ ಇತಿಹಾಸದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಒಲಂಪಿಕ್ ನಡೆಯುತ್ತಿರುವುದು ಇದೇ ಮೊದಲು. ಕೊರೊನಾ ಹಿನ್ನಲೆಯಲ್ಲಿ ಸ್ಯಾನಿಟೈಜ್ ಮಾಡಿದ ಟ್ರೇಗಳಿಂದ ನೀಡಲಾಗುವ ಪದಕಗಳನ್ನು ಪೋಡಿಯಂ ಸ್ಥಾನ ಪಡೆಯುವ ಕ್ರೀಡಾಪಟುಗಳೇ ಧರಿಸಬೇಕಿದೆ. ಕೋವಿಡ್ ಕಾರಣದಿಂದ ಗಣ್ಯ ವ್ಯಕ್ತಿಗಳಿಂದ ಪದಕ ಪ್ರದಾನ ಮಾಡುವ ಸಂಪ್ರದಾಯವನ್ನು ಈ ಬಾಋಇ ಕೈಬಿಡಲಾಗಿದೆ.
• ತ್ಯಾಜ್ಯದಿಂದ ಪದಕಗಳ ತಯಾರಿ :
ಟೋಕಿಯೋ ಒಲಂಪಿಕ್ ಕ್ರೀಡಾಕೂಟದಲ್ಲಿ ಗೆದ್ದವರಿಗೆ ನೀಡುವ ಪದಕಗಳನ್ನು ನಿರುಪಯೋಗಿ ಎಲೆಕ್ಟ್ರಾನಿಕ್ ತ್ಯಾಜ್ಯಗಳಿಂದ ತಯಾರಿಸಲಾಗಿದೆ. ಈ ಬಾರಿ ಪದಕಗಳು ಶಕ್ತಿ ಮತ್ತು ಕ್ರೀಡಾಪಟುಗಳ ವೈವಿಧ್ಯತೆ’ ಯನ್ನು ಪ್ರತಿನಿಧಿಸುತ್ತದೆ. ಅಂತೆಯೇ ಜಪಾನ್ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ. ಪದಕವನ್ನೊಳಗೊಂಡ ರಿಬ್ಬನ್ನಲ್ಲಿ ‘‘ಇಚಿಮಟ್ಸು ಮೊಯೊ’ ಹಾಗೂ ‘ಕಸಾನೆ ನೊ ಇರೊಮೆ’ ಎಂಬ ಜಪಾನಿನ ಸಾಂಪ್ರದಾಯಿಕ ವಸ್ತ್ರಕಲೆ ಹಾಗೂ ವರ್ಣ ಬಳಸಲಾಗಿದೆ. ಪದಕ ತಯಾರಿಕೆಗೆ ಬಳಸಿರುವ ಬಣ್ಣಗಳು ಪರಿಸರಸ್ನೇಹಿಯಾಗಿವೆ. ಪದಕದ ಮುಂಭಾಗದಲ್ಲಿ ಟೋಕಿಯೋ ಒಲಂಪಿಕ್ಸ್ ಲೋಗೋ ಚಿತ್ರಿಸಿದ್ದರೆ, ಹಿಂಬಾಗದಲ್ಲಿ ವಿಜಯ ದೇವತೆಯ ಚಿತ್ರವನ್ನು ಟಂಕಿಸಲಾಗಿದೆ.
• ಲಿಂಗ ಸಮಾನತೆ :
ಈ ಬಾರಿ ಒಲಂಪಿಕ್ಸ್ ಮಹಿಳಾ ಪ್ರಧಾನ ಕ್ರೀಡಾಕೂಟ ಎಂಬುದಾಗಿ ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ (ಐಒಸಿ) ಘೋಷಿಸಿದೆ.ಅಲ್ಲಿದೆ, 206 ಸದಸ್ಯರ ಸಮಿತಿಗಳ ಲಿಂಗ ಸಮಾನತೆ ಕಾಯ್ದುಕೊಳ್ಳುವಂತೆ ಹೇಳಿದೆ.ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಕ್ರೀಡಾಗ್ರಾಮ ಪ್ರವೇಶ ಪಡೆಯುವ ಒಟ್ಟು ಸ್ಪರ್ಧಿಗಳಲ್ಲಿ ಶೇ 51 ರಷ್ಟು ಪುರುಷರು ಹಾಗೂ ಶೆ. 49 ರಷ್ಟು ಮಹಿಳೆಯರು.
• ಜ್ಯೋತಿ ಬೆಳಗಿದ ಒಸಾಕಾ :
ವಿಶ್ವದ ಎರಡನೆ ಶ್ರೇಯಾಂಕದ ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ ಟೋಕಿಯೋ ಒಲಂಪಿಕ್ಸ್ ಜ್ಯೋತಿ ಬೆಳಗಿದರು. ಜಪಾನ್ ಬೇಸ್ಬಾಲ್ ದಿಗ್ಗಜ ‘ಹಿಡೇಕಿ ಮಟ್ಸುಯಿ’ ಅವರು ಕ್ರೀಡಾಂಗಣದೊಳಗೆ ಜ್ಯೋತಿಯನ್ನು ತಂದರು. ಒಲಂಪಿಕ್ಸ್ ಜ್ಯೋತಿಯು ಸಾಂಪ್ರದಾಯಿಕ ಪ್ರೋಪೇನ್ ಅನಿಲದ ಬದಲು ‘ ಹೈಡ್ರೋಜನ್ ಇಂಧನದ ಮೂಲಕ ಉರಿಸಲಾಗುತ್ತಿದೆ. ಇದು ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲ ಆವಿಷ್ಕಾರವಾಗಿದೆ. ಒಲಂಪಿಕ್ಸ್ ಜ್ಯೋತಿಯು ಒಲಂಪಿಕ್ಸ್ ಸಮಾರೋಪಗೊಳ್ಳುವ ತನಕ ನಿರಂತರ ಉರಿಯಲಿದೆ.
• ಒಲಂಪಿಕ್ಸ್ ಲಾರೆಲ್ ಪ್ರಶಸ್ತಿ :
ಒಲಂಪಿಕ್ಸ್ ಉದ್ಘಾಟನೆ ವೇಳೆ ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯಿಂದ ನೀಡಲಾಗುವ ‘ ಒಲಂಪಿಕ್ಸ್ ಲಾರೆಲ್ ಪ್ರಶಸ್ತಿ’ಯನ್ನು ಬಾಂಗ್ಲಾದೇಶದ ‘ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್’ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು 2016 ರ ರಿಯೊ ಒಲಂಪಿಕ್ಸ್ ವೇಳೆ ಜಾರಿಗೆ ತರಲಾಗಿತ್ತು.
• ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರ0ಭದ ವೇಳೆ ಸ್ವಲ್ಪ ಹೊತ್ತು ಮೌನ ಆಚರಿಸುವ ಮೂಲಕ 1972 ರ ಮ್ಯೂನಿಚ್ ಒಲಂಪಿಕ್ಸ್ ವೇಳೆ ಪ್ಯಾಲೇಸ್ತೀನಿಯನ್ ಬಂದುಕುಧಾರಿಯೊಬ್ಬನಿಂದ ಹತರಾದ 11 ಇಸ್ರೇಲ್ ಅಥ್ಲೀಟ್ಗಳನ್ನು ಸ್ಮರಿಸಲಾಯಿತು. ಜಾಗತಿಕ ಕ್ರೀಡಾಕುಟದ ಉದ್ಘಾಟನಾ ಸಮಾರಂಭದ ನಡುವೆ ಮೌನ ಆಚರಿಸಿದ್ದು 49 ವರ್ಷಗಳಲ್ಲಿ ಇದೇ ಮೊದಲಾಗಿದೆ.
• ಟೋಕಿಯೋ ಒಲಂಪಿಕ್ಸ್ ಉದ್ಘಾಟನೆಯಲ್ಲಿ ಜಪಾನ್ ದೊರೆ ನುರುಹಿಟೊ, ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ , ಟೋಕಿಯೋ ಒಲಂಪಿಕ್ಸ್ ಸಮಿತಿ ಮುಖ್ಯಸ್ಥ ಸೀಕೊ ಹಾಶಿಮೊಟೊ, ಅಮೆರಿಕ ಅಧ್ಯಕ್ಷರ ಪತ್ನಿ ಜಿಲ್ ಬೈಡೆನ್ ಹಾಘೂ ಫ್ರಾನ್ಸ್ ಇಮಾನ್ಯುಯಲ್ ಮ್ಯಾಕ್ರಾನ್ ಮುಂತಾದ ಪ್ರಮುಖ ಗಣ್ಯರಿದ್ದರು.
• ಭಾರತದ ಧ್ವಜಧಾರಿಕೆ :
ಆರು ಬಾರಿಯ ವಿಶ್ವಚಾಂಪಿಯನ್ ಬಾಕ್ಸರ್ ಮೇರಿಕೋಮ್ ಮತ್ತು ಭಾರತ ಪುರುಷರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಅವರು ಟೋಕಿಯೋ ಒಲಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿದ್ದರು. ಪುರುಷ ಮತ್ತು ಮಹಿಳಾ ಅಥ್ಲೀಟ್ಗಳು ಭಾರತದ ಧ್ವಜ ಗೌರವ ಪಡೆಯುವುದು ಇದೇ ಮೊದಲು. ಲಿಂಗ ಸಮಾನತೆ ಸಾರುವ ಒಲಂಪಿಕ್ಸ್ ಹಿನ್ನಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಸಮಾರೋಪ ಸಮಾರಂಭದಲ್ಲಿ ‘ ಬಜರಂಗ ಪೂನಿಯಾ’ ತ್ರಿವರ್ಣ ಧ್ವಜ ಹಿಡಿದು ಸಾಗಲಿದ್ದಾರೆ.
• ಪ್ರೇರಣಾ ಗೀತೆ :
ಭಾರತದ ಅಥ್ಲೀಟ್ಗಳನ್ನು ಹುರಿದುಂಬಿಸುವುದಕ್ಕಾಗಿ ಪ್ರೇರಣಾ ಗೀತೆ ಸಿದ್ದವಿದ್ದು, ‘ ಚಿಯರ್ ಪಾರ್ ಇಂಡಿಯಾ ‘ ಹಿಂದೂಸ್ಥಾನಿ ವೇ ಶೀರ್ಷಿಕೆಯ ಈ ಗೀತೆಗೆ ಗ್ಯ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಹಾಗೂ ಯುವ ಗಾಯಕ ಅನನ್ಯಾ ಬಿರ್ಲಾ ಧ್ವನಿಯಾಗಿದ್ದಾರೆ.
• ಕರ್ನಾಟಕದ ಕ್ರೀಡಾಪಟುಗಳು :
ಈ ಬಾರಿ ಒಲಂಪಿಕ್ಸ್ಗೆ ತೆರಳಿರುವ ಭಾರತದ ನಿಯೋಗದಲ್ಲಿ ಕರ್ನಾಟಕದ ಶ್ರೀಹರಿ ನಟರಾಜ, ಫವಾದ್ ಮಿರ್ಜಾ ಮತ್ತು ಆದಿತಿ ಅಶೋಕ್ ಇದ್ದಾರೆ. ಇವರೊಂದಿಗೆ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕರ್ನಾಟಕದ ಅಂಕಿತಾ ಸುರೇಶ್ ಕೂಡ ಇದ್ದಾರೆ.
1. ಶ್ರೀ ಹರಿ ನಟರಾಜ್–
ಬೆಂಗಳೂರಿನ ಶ್ರೀಹರಿ ನಟರಾಜ್ ಇದೇ ಮೊದಲ ಬಾರಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿರುವ ಈಜು ಪಟುವಾಗಿದ್ದು, ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಇತ್ತೀಚೆಗೆ ಇಟಲಿಯ ಸೆಟ್ಟೆಕೊಲ್ಲಿಯಲ್ಲಿ ನಡೆದ ಅರ್ಹತಾ ಟ್ರಯಲ್ಸ್ನಲ್ಲಿ 100 ಮೀ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಫಿನಾದ ‘ಎ’ ಕಟ್ ಅರ್ಹತೆ ಪಡೆದಿದ್ದಾರೆ. ಇವರು 2018 ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ ಹಾಗೂ 2018 ರ ಯೂತ್ ಸಮ್ಮರ್ ಒಲಂಪಿಕ್ಸ್ನಲ್ಲಿ ಸ್ಫರ್ಧಿಸಿ ಅನುಭವ ಪಡೆದಿದ್ದಾರೆ.
2. ಅದಿತಿ ಅಶೋಕ್
ಭಾರತ ಕಂಡ ಪ್ರತಿಭಾನ್ವಿತ ಗಾಲ್ಫರ್ ಅದಿತಿ ಅಶೋಕ್ ಒಲಂಪಿಕ್ಸ್ಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಇದು ಅವರಿಗೆ ಎರಡನೇ ಒಲಂಪಿಕ್ಸ್. 2016 ರ ರಿಯೊ ಒಲಂಪಿಕ್ಸ್ನಲ್ಲಿ ಸ್ಫರ್ದಿಸಿದ್ದರೂ 60 ಸ್ಫರ್ಧಿಗಳಲ್ಲಿ 41 ನೇ ಸ್ಥಾನ ಪಡೆದಿದ್ದರು.
3. ಫವಾದ್ ಮಿರ್ಜಾ
ಫವಾದ್ ಮಿರ್ಜಾ ಅವರು ಇಕ್ವೆಸ್ಟ್ರಿಯನ್( ಕುದುರೆ ಸವಾರಿ) ಪಟುವಾಗಿದ್ದು, ಕಳೆದ 20 ವರ್ಷಗಳ ಬಳಿಕ ಒಲಂಪಿಕ್ಸ್ಗೆ ಅವಕಾಶ ಪಡೆದ ಭಾರತೀಯ ಇಕ್ವೆಸ್ಟ್ರಿಯನ್ ಪಟು.