ಏಷ್ಯಾ ಖಂಡದ ಸಂಕ್ಷಿಪ್ತ ಪರಿಚಯ
ಏಷ್ಯಾ ಖಂಡ
ಏಷ್ಯಾ ಖಂಡವು ಪ್ರಪಂಚದ ಅತ್ಯಂತ ದೊಡ್ಡ ಖಂಡವಾಗಿದೆ.
ಏಷ್ಯಾ ಖಂಡದ ವಿಸ್ತೀರ್ಣ 43,60,800 ಚ.ಕಿ.ಮಿ. ಆಗಿದೆ. ಏಷ್ಯಾ ಖಂಡವು ಪ್ರಪಂಚದ ಒಟ್ಟು ವಿಸ್ತೀರ್ಣದ ಸುಮಾರು 33% ಪ್ರದೇಶವನ್ನು ಆವರಿಸಿಕೊಂಡಿದೆ.
ಏಷ್ಯಾ ಖಂಡದಲ್ಲಿ ಹಾಯ್ದು ಹೋಗುವ ಅಕ್ಷಾಂಶಗಳು ಎಂದರೆ 0° ಸಮಭಾಜಕ ವೃತ್ತ, 23° ಉತ್ತರ ಅಕ್ಷಾಂಶ (ಕರ್ಕಾಟಕ ವೃತ್ತ) ಮತ್ತು 66° ಉತ್ತರ ಅಕ್ಷಾಂಶ (ಆರ್ಕ್ಟಿಕ್ ವಲಯ) ಹಾಯ್ದು ಹೋಗುತ್ತವೆ.
ಏಷ್ಯಾ ಮತ್ತು ಯುರೋಪ್ ಖಂಡಗಳನ್ನು ಕ್ಯಾಸ್ಪಿಯನ್ ಸಮುದ್ರ, ಉರಲ್ ಪರ್ವತಗಳು ಮತ್ತು ಕಾಕಸಸ್ ಪರ್ವತಗಳು ಬೇರ್ಪಡಿಸುತ್ತವೆ.
ಟಿಬೆಟ್ ಪ್ರಸ್ಥಭೂಮಿ (ಪಾಮೀರ್ ಗ್ರಂಥಿ) ಏಷ್ಯಾ ಖಂಡದ ಅತ್ಯುನ್ನತ ಪ್ರಸ್ಥಭೂಮಿಯಾಗಿದೆ.
ಸೈಬೀರಿಯಾ ಮಹಾ ಬಯಲು ಏಷ್ಯಾ ಖಂಡದ ಹಾಗೂ ಪ್ರಪಂಚದ ಅತ್ಯಂತ ದೊಡ್ಡ ಬಯಲಾಗಿದೆ.
ಏಷ್ಯಾ ಖಂಡದ ಪ್ರಮುಖ ಪರ್ವತ ಶ್ರೇಣಿಗಳು: ಕಾರಾಕೊರಂ, ಕುನ್ಲೂನ್, ಹಿಂದುಕುಶ್, ಸುಲೆಮಾನ್ ಶ್ರೇಣಿಗಳು.
ದಕ್ಷಿಣ ಏಷ್ಯಾ ಮಾನ್ಸೂನ್ ವಾಯುಗುಣ ಹೊಂದಿದೆ. ಮಧ್ಯ ಏಷ್ಯಾ ಒಣ ವಾಯುಗುಣ ಹೊಂದಿದೆ. ಉತ್ತರ ಏಷ್ಯಾ ಶೀತ ವಾಯುಗುಣ ಹೊಂದಿದೆ.
ರಷ್ಯಾ ಏಷ್ಯಾದ ಅತಿ ದೊಡ್ಡ ದೇಶವಾಗಿದೆ.
ಏಷ್ಯಾ ಖಂಡದ ಪರ್ವತಗಳು :
ಹಿಂದುಕುಶ್ ಪರ್ವತ ಶ್ರೇಣಿ, ಎಲ್ಬ್ರೂಸ್ ಪರ್ವತ (ಇರಾನ್), ಸುಲೆಮಾನ್ ಪರ್ವತ ಶ್ರೇಣಿ (ಪಾಕಿಸ್ತಾನ ಮತ್ತು ಅಫಗಾನಿಸ್ತಾನ), ಮಕ್ರಾನ್ ಪರ್ವತ ಶ್ರೇಣಿ, ಪೊಂಟಿಕ್ ಪರ್ವತ ಶ್ರೇಣಿ (ಟರ್ಕಿ), ಟೌರಸ್ ಪರ್ವತ ಶ್ರೇಣಿ (ಟರ್ಕಿ).
ಪ್ರಸ್ಥಭೂಮಿಗಳು :
ಕುನ್ಲುನ್, ಅಲ್ತಾಯಿ, ತಿಯನ್ ಶಾನ್ ಪರ್ವತಗಳು ಚೀನಾದಲ್ಲಿವೆ. ಯೂನಾನ್ ಪ್ರಸ್ಥಭೂಮಿ ಚೀನಾದಲ್ಲಿದೆ. ಪಾಮೀರ್ ಪ್ರಸ್ಥಭೂಮಿ ವಾಯುವ್ಯ ಏಷ್ಯಾದಲ್ಲಿದೆ. ಆರ್ಮೇನಿಯನ್ ಪ್ರಸ್ಥಭೂಮಿ ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರಗಳ ಮಧ್ಯದಲ್ಲಿದೆ. ಇರಾನಿಯನ್ ಪ್ರಸ್ಥಭೂಮಿ ಝಾಗ್ರೋಸ್ ಮತ್ತು ಎಲ್ಬ್ರೂಸ್ ಪರ್ವತಗಳ ಮಧ್ಯದಲ್ಲಿದೆ.
ಮಂಗೋಲಿಯಾ ಪ್ರಸ್ಥಭೂಮಿ ಉತ್ತರ ಚೀನಾದಲ್ಲಿದೆ. ಇಂಡೋಚೀನಾ ಪ್ರಸ್ಥಭೂಮಿ ಆಗ್ನೇಯ ಏಷ್ಯಾದಲ್ಲಿದೆ. ಬಲೂಚಿಸ್ತಾನ್ ಪ್ರಸ್ಥಭೂಮಿ ಪಶ್ಚಿಮ ಏಷ್ಯಾದಲ್ಲಿದೆ. ಅನಟೋಲಿಯಾ ಪ್ರಸ್ಥಭೂಮಿ ಟರ್ಕಿಯಲ್ಲಿ ಇದೆ. ಲೋಯಸ್ ಪ್ರಸ್ಥಭೂಮಿ ಪೂರ್ವ ಏಷ್ಯಾದಲ್ಲಿದೆ. ಖೈಬರ್ ಮತ್ತು ಬೋಲಾನ್ ಕಣಿವೆಗಳು ಪಾಕಿಸ್ತಾನದಲ್ಲಿವೆ.
ಏಷ್ಯಾ ಖಂಡದ ಹುಲ್ಲುಗಾವಲುಗಳು :
ಉಷ್ಣವಲಯದ ಹುಲ್ಲುಗಾವಲುಗಳನ್ನು “ಸವನ್ನಾ” ಎಂದು ಕರೆಯುತ್ತಾರೆ.
ಸಮಶೀತೋಷ್ಣ ವಲಯದ ಹುಲ್ಲುಗಾವಲುಗಳನ್ನು “ಸ್ಟೆಪ್ಪೀಸ್” ಎಂದು ಕರೆಯುತ್ತಾರೆ.
ಏಷ್ಯಾ ಖಂಡದ ಮರುಭೂಮಿಗಳು :
ಗೋಬಿ – ಮಂಗೋಲಿಯಾ (ಉತ್ತರ ಚೀನಾ)
ರುಬ್ ಅಲ್ ಖಲಿ – ಸೌದಿ ಅರೇಬಿಯಾ
ಅಲ್ ನುಫುಡ್ – ಸೌದಿ ಅರೇಬಿಯಾ
ದಸ್ತ್-ಎ-ಕವಿರ್ – ಇರಾನ್
ದಸ್ತ್-ಎ-ಲುಟ್ – ಇರಾನ್
ಥಾರ್ – ಭಾರತ ಮತ್ತು ಪಾಕಿಸ್ತಾನ
ಏಷ್ಯಾ ಖಂಡದ ಸರೋವರಗಳು :
ಬೈಕಲ್ – ಸೈಬೀರಿಯಾ (ರಷ್ಯಾ)
ಅರಲ್ – ಕಜಾಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್
ವಾನ್ ಸರೋವರ – ಟರ್ಕಿ
ಅಸದ್ – ಸಿರಿಯಾ
ಮೃತ ಸಮುದ್ರ – ಜೋರ್ಡಾನ್
ಗ್ಯಾಲಿಲೀ – ಇಸ್ರೇಲ್
ಟೋನ್ಲೆ ಸಾಪ್ – ಕಾಂಬೋಡಿಯಾ
ಟೋಬಾ – ಸುಮಾತ್ರಾ
ಮಾನಸ ಸರೋವರ – ಟಿಬೆಟ್
ಏಷ್ಯಾ ಖಂಡದ ಪ್ರಮುಖ ನದಿಗಳು :
ನದಿ – ಉಗಮ – ಸೇರುವುದು
ಒಬ್ – ಅಲ್ತಾಯಿ ಪರ್ವತಗಳು – ಒಬ್ ಖಾರಿ
ಯೆನಿಸೆ – ಟನ್ನುವಾ ಪರ್ವತಗಳು – ಆರ್ಕ್ಟಿಕ್ ಸಾಗರ
ಲೀನಾ – ಬೈಕಲ್ ಪ್ರದೇಶ – ಆರ್ಕ್ಟಿಕ್ ಸಾಗರ
ಹ್ವಾಂಗ್ ಹೋ – ಟಿಬೆಟ್ ಪ್ರಸ್ಥಭೂಮಿ – ಪೋಹಾಯ್ ಖಾರಿ
ಯಾಂಗ್ಸಿ ಕಿಯಾಂಗ್ – ಟಿಬೆಟ್ ಪ್ರಸ್ಥಭೂಮಿ – ಪೂರ್ವ ಚೀನಾ ಸಮುದ್ರ
ಮೇಕಾಂಗ್ – ಟಿಬೆಟ್ ಪ್ರಸ್ಥಭೂಮಿ – ದಕ್ಷಿಣ ಚೀನಾ ಸಮುದ್ರ
ಇರಾವಡಿ – ಟಿಬೆಟ್ ಪ್ರದೇಶ – ಮಾರ್ಟಬಾನ್ ಖಾರಿ
ಗಂಗಾ – ಹಿಮಾಲಯ – ಬಂಗಾಳ ಕೊಲ್ಲಿ
ಬ್ರಹ್ಮಪುತ್ರ – ಟಿಬೆಟ್ – ಬಂಗಾಳ ಕೊಲ್ಲಿ
ಸಿಂಧು – ಕೈಲಾಸ ಪರ್ವತ – ಅರಬ್ಬೀ ಸಮುದ್ರ


