Current AffairsSpardha Times

ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ಅತ್ಯುತ್ತಮ ಪ್ರಧಾನಿ

Share With Friends

ನಿಮ್ಮ ಮೆಚ್ಚಿನ ಪ್ರಧಾನಿ ಯಾರು ಎಂಬ ಕೇಳದ ಪ್ರಶ್ನೆಗಳಲ್ಲಿ ಶೇಕಡಾ 51 ರಷ್ಟು ಜನರು ಪ್ರಧಾನಿ ಮೋದಿಯನ್ನು ಭಾರತದ ಇತಿಹಾಸದಲ್ಲಿ ಅತ್ಯುತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದಾರೆ.

ಫೆಬ್ರವರಿ 2024 ರಲ್ಲಿ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಶೇಕಡಾ 43.7ರಷ್ಟು ಏರಿಕೆಯಾಗಿದೆ. ಮೋದಿಯ ನಂತರ ಅಂದರೆ ಎರಡನೇ ಸ್ಥಾನದಲ್ಲಿ ನಿಲ್ಲುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅವರಿಗೆ ಶೇಕಡಾ 12.1 ರೇಟಿಂಗ್, ಮನಮೋಹನ್ ಸಿಂಗ್ ಶೇಕಡಾ 11.6 ರೇಟಿಂಗ್ ಮತ್ತು ಇಂದಿರಾ ಗಾಂಧಿ ಶೇಕಡಾ 10.4 ರೇಟಿಂಗ್ ನೀಡಲಾಗಿದೆ.

ಭಾರತದ ಪ್ರಧಾನಿಯಾಗಿ ಮೋದಿ ಅವರು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರು. ಎನ್​​ಡಿಎ ಮಿತ್ರಕೂಟದ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ಮೋದಿ ಅವರ ಜನಪ್ರಿಯತೆಗೆ ಯಾವುದು ಕೊರತೆ ಬಂದಿಲ್ಲ. ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ನಡೆಸಿದ ಸಮೀಕ್ಷೆ ಪ್ರಕಾರ, ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಪ್ರಧಾನಿ ಎಂದು ಹೇಳಲಾಗಿದೆ. ಆದರೆ ಪ್ರಧಾನಿ ಮೋದಿ ಅವರ ಕಾರ್ಯಕ್ಷಮತೆಯ ರೇಟಿಂಗ್ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ ಎಂದು ಸಮೀಕ್ಷೆ ಹೇಳುತ್ತದೆ.

ಈ ಸಮೀಕ್ಷೆಯಲ್ಲಿ ಮೊದಲ ಬಾರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿದ್ದಾರೆ. ಇನ್ನು ಮೋದಿ ಅವರ ಕಾರ್ಯವೈಖರಿಯನ್ನು ಗಮನಿಸುವುದಾದರೆ, ಫೆಬ್ರವರಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಗೆ ಹೋಲಿಸಿದರೆ ಸ್ವಲ್ಪಮಟ್ಟಿನ ಕುಸಿತ ಕಂಡುಬಂದಿದೆ. ಫೆಬ್ರವರಿ ಸಮೀಕ್ಷೆಯಲ್ಲಿ 60.5 ಪ್ರತಿಶತ ಜನರು ಅವರ ಕೆಲಸವನ್ನು ಅತ್ಯುತ್ತಮ ಮತ್ತು ಉತ್ತಮ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content Copyright protected !!