ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಗುಣಗಳು ಮತ್ತು ಉಪಯೋಗಗಳು
✦ಆಕ್ಸೈಡ್‍ಗಳು – ಬೇರೆ ಬೇರೆ ಮೂಲವಸ್ತುಗಳು ಆಮ್ಲಜನಕದೊಂದಿಗೆ ಸಂಯೋಗ ಹೊಂದಿ ಉತ್ಪತ್ತಿಯಾಗುವ ಸಂಯುಕ್ತಗಳಿಗೆ “ ಆಕ್ಸೈಡ್”ಗಳು ಎನ್ನುವರು.
✦ಆಮ್ಲಜನಕವು ಅಲೋಹಗಳೊಂದಿಗೆ ವರ್ತಿಸಿ ಉತ್ಪತ್ತಿ ಮಾಡುವ ಆಕ್ಸೈಡ್‍ಗಳನ್ನು “ಆಮ್ಲೀಯ ಆಕ್ಸೈಡ್” ಗಳು ಎನ್ನುವರು
ಉದಾ- ಗಂಧಕದ ಡೈ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ ಇತ್ಯಾದಿ.
✦ ಆಮ್ಲೀಯ ಆಕ್ಸೈಡ್‍ಗಳ ಗುಣಗಳು
ಆಮ್ಲೀಯ ಆಕ್ಸೈಡ್‍ಗಳು ನೀರಿನಲ್ಲಿ ಕರಗಿದಾಗ ಆಮ್ಲಗಳು ಉಂಟಾಗುತ್ತವೆ.
ಆಮ್ಲೀಯ ಆಕ್ಸೈಡ್‍ಗಳು ಒದ್ದೆಯಾದ ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ನಕ್ಕೆ ಪರಿವರ್ತಿಸುತ್ತದೆ.
✦ಆಮ್ಲಜನಕವು ಲೋಹಗಳೊಂದಿಗೆ ವರ್ತಿಸಿ ಉತ್ಪತ್ತಿ ಮಾಡುವ ಆಕ್ಸೈಡ್‍ಗಳನ್ನು “ ಪ್ರತ್ಯಾಮ್ಲೀಯ ಆಕ್ಸೈಡ್” ಎನ್ನುವರು.
ಉದಾ- ಮೆಗ್ನೀಷಿಯಂ ಆಕ್ಸೈಡ್, ಕ್ಯಾಲ್ಸಿಯಂ ಆಕ್ಸೈಡ್ ಇತ್ಯಾದಿ.
✦ಪ್ರತ್ಯಾಮ್ಲೀಯ ಆಕ್ಸೈಡ್‍ನ ಗುಣಗಳು
•ಪ್ರತ್ಯಾಮ್ಲೀಯ ಆಕ್ಸೈಡ್‍ಗಳು ನೀರಿನಲ್ಲಿ ಕರಗಿದಾಗ ಪ್ರತ್ಯಾಮ್ಲೀಯ ಆಕ್ಸೈಡ್‍ಗಳು ಉಂಟಾಗುತ್ತವೆ.
•ಪ್ರತ್ಯಾಮ್ಲೀಯ ಆಕ್ಸೈಡ್‍ಗಳು ಒದ್ದೆಯಾದ ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ನಕ್ಕೆ ತಿರುಗಿಸುತ್ತದೆ.
✦ಆಮ್ಲಗಳು
ಆಮ್ಲೀಯ ಆಕ್ಸೈಡ್‍ಗಳು ನೀರಿನಲ್ಲಿ ಕರಗಿದಾಗ ಆಮ್ಲಗಳು ಉಂಟಾಗುತ್ತವೆ. ಆಮ್ಲೀಯ ಆಕ್ಸೈಡ್‍ಗಳಲ್ಲದೇ ಕೆಲವು ಸಂಯುಕ್ತ ವಸ್ತುಗಳು ನೀರಿನಲ್ಲಿ ಕರಗಿದಾಗಲೂ ಆಮ್ಲಗಳು ಉಂಟಾಗುತ್ತವೆ.
ಉದಾ- * ನಿಂಬೆಹಣ್ಣು, ಕಿತ್ತಳೆ ಹಣ್ನಿನಲ್ಲಿರುವ ಸಿಟ್ರಿಕ್ ಆಮ್ಲ,
*ಹುಣಸೆ ಹಣ್ಣು ಮತ್ತು ನೆಲ್ಲಿಕಾಯಿಯಲ್ಲಿರುವ ಟಾರ್ಟಾರಿಕ್ ಆಮ್ಲ,
*ಟೋಮೆಟೋನಲ್ಲಿರುವ ಆಕ್ಸಾಲಿಕ್ ಆಮ್ಲ,
*ವಿನೆಗಾರ್‍ನಲ್ಲಿ ಅಸಿಟಿಕ್ ಆಮ್ಲ.
✦ ಆಮ್ಲಗಳ ಗುಣಗಳು
1.ಆಮ್ಲಗಳು ಹುಳಿ ರುಚಿಯನ್ನು ಹೊಂದಿರುತ್ತವೆ.
2.ಆಮ್ಲಗಳು ಲೋಹಗಳೊಂದಿಗೆ ಜಲಜನಕವನ್ನು ಬಿಡುಗಡೆ ಮಾಡುತ್ತದೆ.
3.ಇವು ಪ್ರತ್ಯಾಮ್ಲದೊಂದಿಗೆ ವತುರ್ಇಸಿ ನೀರು ಮತ್ತು ಲವಣ ಉಂಟುಮಾಡುತ್ತದೆ.
4.ಇವು ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ.
✦ಆಮ್ಲಗಳ ಉಪಯೋಗಗಳು
1.ಗಂಧಕಾಮ್ಲವನ್ನು ವಿದ್ಯುತ್ ಕೋಶಗಳಲ್ಲಿ ಬಳಸುತ್ತಾರೆ.
2.ಕಾರ್ಬನಿಕ್ ಆಮ್ಲವನ್ನು ಮೃದು ಪಾನೀಯಗಳ ತಯಾರಿಕೆಯಲ್ಲಿ ಬಳಸುತ್ತಾರೆ.
3.ಹೈಡ್ರೋಕ್ಲೋರಿಕ್ ಆಮ್ಲವನ್ನು ಲೋಹಗಳ ಕುಲಾಯಿ ಮಾಡುವ ಮುನ್ನ ಲೋಹಗಳಲ್ಲಿರುವ ತುಕ್ಕನ್ನು ನಿವಾರಿಸಲು ಉಪಯೋಗಿಸುತ್ತಾರೆ.
4.ನೈಟ್ರಿಕ್ ಆಮ್ಲವನ್ನು ಸಿಡಿಮದ್ದುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
5.ಸಿಟ್ರಿಕ್ ಆಮ್ಲ ಹಾಗೂ ಆಕ್ಸಾಲಿಕ್ ಆಮ್ಲವನ್ನು ತಂಪು ಪಾನೀಯಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
6.ಅಸಿಟಿಕ್ ಆಮ್ಲವಿರುವ ವಿನೆಗಾರ್‍ನ್ನು ಆಹಾರ ಪದಾರ್ಥಗಳನ್ನು ಸಂರಕ್ಷಣೆ ಮಾಡಲು ಉಪಯೋಗಿಸುತ್ತಾರೆ.
7.ದ್ರವರಾಜದ ತಯಾರಿಕೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳನ್ನು ಉಪಯೋಗಿಸುತ್ತಾರೆ.
✦ಪ್ರತ್ಯಾಮ್ಲಗಳು
ಆಮ್ಲಗಳೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಕೊಡುವ ಸಂಯುಕ್ತ ವಸ್ತುಗಳಿಗೆ “ಪ್ರತ್ಯಾಮ್ಲಗಳು “ಎಂದು ಹೆಸರು.
ಉದಾ – ಸೋಡಿಯಂ ಹೈಡ್ರಾಕ್ಸೈಡ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್, ಪೊಟ್ಯಾಷಿಯಂ ಹೈಡ್ರಾಕ್ಸೈಡ್ ಇತ್ಯಾದಿ.
✦ಪ್ರತ್ಯಾಮ್ಲಗಳ ಗುಣಗಳು
1.ಪ್ರತ್ಯಾಮ್ಲಗಳು ಕಹಿ ರುಚಿಯನ್ನು ಹೊಂದಿರುತ್ತವೆ.
2.ಇವು ಮುಟ್ಟಲು ಸಾಬೂನಿನ ದ್ರಾವಣದಂತೆ ನುಣುಪಾಗಿರುತ್ತವೆ.
3.ಇವು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.
✦ ಪ್ರತ್ಯಾಮ್ಲಗಳ ಉಪಯೋಗಗಳು
•ಸಾಬೂನ್, ಕಾಗದ, ಕೃತಕ ದಾರಗಳು, ಗ್ಲಿಸರಿನ್ ತಯಾರಿಕೆಯಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ಬಳಸುತ್ತಾರೆ.
•ನೀರನ್ನು ಮೆದುಗೊಳಿಸಲು, ಮಣ್ಣಿನ ಆಮ್ಲೀಯ ಗುಣವನ್ನು ನಿವಾರಿಸಲು ಕ್ಯಾಲ್ಸಿಯಂ ಹೈಡ್ರಾಕ್ಸೈಡ್‍ನ್ನು ಬಳಸುತ್ತಾರೆ.
•ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನೀಷಿಯಂ ಹೈಡ್ರಾಕ್ಸೈಡ್‍ನ್ನು ಆಮ್ಲ ನಿರೋಧಕವಾಗಿ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
✦ ತಟಸ್ಥೀಕರಣ
ನಿರ್ದಿಷ್ಟ ಪ್ರಮಾಣದ ಆಮ್ಲವನ್ನು ಪ್ರತ್ಯಾಮ್ಲಕ್ಕೆ ಸೇರಿಸಿದಾಗ ಅಥವಾ ಪ್ರತ್ಯಾಮ್ಲವನ್ನು ಆಮ್ಲಕ್ಕೆ ಸೇರಿಸಿದಾಗ ತಟಸ್ಥ ದ್ರಾವಣ ಉಂಟಾಗುವ ಕ್ರಿಯೆಗೆ “ ತಟಸ್ಥೀಕರಣ” ಎಂದು ಕರೆಯುತ್ತಾರೆ. ಈ ಕ್ರಿಯೆಯಲ್ಲಿ ಲವಣಗಳು ಉಂಟಾಗುತ್ತವೆ.
✦ ಪ್ರಮುಖ ಲವಣಗಳು
ವ್ಯವಹಾರಿಕ ಹೆಸರು – ವೈಜ್ಞಾನಿಕ ಹೆಸರು
1.ಅಡುಗೆ ಸೋಡಾ – ಸೋಡಿಯಂ ಬೈ ಕಾರ್ಬೋನೇಟ್
2.ಅಡುಗೆ ಸೋಡಾ – ಸೋಡಿಯಂ ಕ್ಲೋರೈಡ್
3.ಸುಣ್ಣದ ಕಲ್ಲು – ಕ್ಯಾಲ್ಸಿಯಂ ಕಾರ್ಬೋನೇಟ್
4.ಮೈಲುತುತ್ತ – ತಾಮ್ರದ ಸಲ್ಫೇಟ್
5.ವಾಷಿಂಗ್ ಸೋಡಾ – ಸೋಡಿಯಂ ಕಾರ್ಬೋನೇಟ್