GKScienceSpardha Times

ಪ್ರೋಟಿನ್‍ಗಳು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಮಾಹಿತಿ

Share With Friends

* ಪ್ರೋಟಿನ್‍ಗಳು ಅಮೈನೋ ಆಮ್ಲಗಳು ಎಂಬ ನೈಟ್ರೋಜನ್‍ಗಳಿಂದ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ.
* “ಪ್ರೋಟಿನ್” ಎಂಬ ಪದವನ್ನು ಮೊದಲು ಪರಿಚಯಿಸಿದವರು – ಜೆರಾರ್ಡ್ ಜೋಹಾನಿಸ್ ಮಲ್ಡರ್
* ಪ್ರೋಟಿನ್‍ಗಳು ಸಾವಯವ ಸಂಯುಕ್ತಗಳಾಗಿದ್ದು , ಕಾರ್ಬನ್, ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್‍ಗಳಿಂದ ಮಾಡಲ್ಪಟ್ಟಿದೆ.
* ಪ್ರೋಟೀನಗಳನ್ನು ದೇಹದ “ ನಿರ್ಮಾಣಕಾರಕಗಳು” ಎಂದು ಕರೆಯುತ್ತಾರೆ.
* ನಮ್ಮ ದೇಹದಲ್ಲಿರುವ ಜೀರ್ಣರಸದಲ್ಲಿರುವ ಕಿಣ್ವಗಳು ಪ್ರೋಟೀನ್‍ಗಳಿಂದ” ಮಾಡಲ್ಪಟ್ಟಿದೆ.

ಪ್ರೋಟಿನ್‍ಗಳ ಮೂಲ
ಸಸ್ಯಮೂಲ- ಗೋಧಿ, ಜೋಳ, ಕಾಳುಗಳು ಹುರುಳಿ, ಕಡ್ಲೆಕಾಯಿ ಬೀಜ ಇತ್ಯಾದಿ.
ಪ್ರಾಣಿಮೂಲ – ಮೀನು, ಮೊಟ್ಟೆ, ಕೊಬ್ಬಿಲ್ಲದ ಮಾಂಸ, ಹಾಲು, ಗಿಣ್ಣು ಇತ್ಯಾದಿ.

ಪ್ರೋಟಿನುಗಳ ವರ್ಗೀಕರಣ
ಸರಳ ಪ್ರೋಟಿನ್‍ಗಳು
: ಸರಳ ಪ್ರೋಟಿನ್‍ಗಳು ಅಮೈನೋಆಮ್ಲಗಳ ಅಣುಗಳಿಂದ ಮಾತ್ರ ಮಾಡಲ್ಪಟ್ಟಿದೆ.
ಉದಾಹರಣೆ : ಮೊಟ್ಟೆಯ ಆಲ್ಬುಮಿನ್, ಬೀಜಗಳಲ್ಲಿನ ಗ್ಲಾಬ್ಯುಲಿನ್
ಎ. ಆಲ್ಬುಮಿನ್
ಬಿ. ಗ್ಲಾಬುಲಿನ್
ಸಿ. ಹಿಸ್ಟೋನ್ಸ್
ಡಿ. ಸ್ಕ್ಲೀರೋ ಪ್ರೋಟೀನಗಳು
ಇ. ಸ್ನಾಯ ಪ್ರೋಟಿನ್‍ಗಳು


ಯುಗ್ಮ ಪ್ರೋಟಿನ್‍ಗಳು( ಸಂಕೀರ್ಣ) : ಅಮೈನೋ ಆಮ್ಲ ಮತ್ತು ಅಮೈನೋ ಆಮ್ಲಗಳಲ್ಲದ ಅಣುಗಳಿಂದಲೂ ಮಾಡಲ್ಪಟ್ಟಿದೆ.
ಉದಾಹರಣೆ :
ಎ. ಲಿಪೋ ಪ್ರೋಟಿನುಗಳು
ಬಿ. ಫಸ್ಪೋ ಪ್ರೋಟಿನುಗಳು
ಸಿ. ಕ್ರೋಮೋ ಪ್ರೋಟೀನುಗಳು
ಡಿ. ಗ್ಲೈಕೋ ಪ್ರೋಟೀನ್‍ಗಳು
ಇ. ನ್ಯೂಕ್ಲಿಯೋ ಪ್ರೋಟೀನ್‍ಗಳು
ಈ. ಮೆಟಲೋ ಪ್ರೋಟೀನ್‍ಗಳು ಅಮೈನೋ ಆಮ್ಲಗಳು

ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು

ಪ್ರೋಟಿನ್‍ಗಳ ಘಟಕವನ್ನು ಅಮೈನೋ ಆಮ್ಲಗಳೆನ್ನುವರು. ಅವುಗಳಲ್ಲಿ ಎರಡು ವಿಧ.
1.ಅತ್ಯವಶ್ಯಕವಾದ ಅಮೈನೋ ಆಮ್ಲ
ಇವು ನಮ್ಮ ಆಹಾರದ ಪ್ರಮುಖ ಘಟಕವಾಗಿದ್ದು ನಮ್ಮ ಶರೀರದಲ್ಲಿ ಉತ್ಪಾದಿಸುವುದಿಲ್ಲ. ಉದಾ: ಲೈಸೀನ್, ವ್ಯಾಲೀನ್, ಐಸೋಲೂಸಿನ್ , ಲುಸಿನ್, ಮೆಥಿಯೋನೈನ್, ಟ್ರಿಪ್ಟೋಪ್ಯಾನ್
2.ಅವಶ್ಯಕವಲ್ಲದ ಅಮೈನೋ ಆಮ್ಲ
ಇವು ನಮ್ಮ ಶರೀರದಲ್ಲಿ ಉತ್ಪತ್ತಿಯಾಗುತ್ತಿದ್ದು ನಮ್ಮ ಆಹಾರದಲ್ಲಿ ಇರಬೇಕಾಗಿಲ್ಲ. ಉದಾ : ಗ್ಲೈಸೀನ್, ಸಿಸ್ಟೈನ್, ಅಲನೈನ್, ಥೈರೋಸಿನ್, ಸಿರೀನ್, ಗ್ಲುಟಾಮಿಕ್ ಆಮ್ಲ , ಆಸ್ಪರ್ಟಿಕ್ ಆಮ್ಲ, ಅರ್ಜಿನೈನ್ ಅಮೈನೋ ಆಮ್ಲಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ – ಎಮಿಲ್ ಪಿಷರ್
ಸ್ವಾಭಾವಿಕವಾಗಿ ದೊರೆಯುವ ಅಮೈನೋ ಆಮ್ಲಗಳು ಎಷ್ಟು – 26
ನಮ್ಮ ದೇಹವು ಸ್ವತ: ತಯಾರಿಸಿಕೊಳ್ಳುವ ಅಮೈನೋ ಆಮ್ಲಗಳ ಸಂಖ್ಯೆ – 12
ಪ್ರತಿ ಅಮೈನೋ ಆಮ್ಲದಲ್ಲಿ ಇರಬಹುದಾದ ಎರಡು ಗುಂಪುಗಳು – ಕಾರ್ಬಾಕ್ಸಿಲ್ ಗುಂಪು ಮತ್ತು ಅಮೈನೋ ಗುಂಪು

ವಿವಿಧ ಪ್ರೋಟೀನ್‍ಗಳಲ್ಲಿ ಇರಬಹುದಾದ ಅಮೈನೋ ಆಮ್ಲಗಳ ಸಂಖ್ಯೆ
1.ಇನ್ಸುಲಿನ್ – 51
2.ರೈಬೋನ್ಯೂಕ್ಲಿಯೇಸ್ -124
3.ಅಡ್ರೆನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನ್ – 39
4.ಸೈಟೋಕ್ರೋಮ್-ಸಿ – 140
5.ಟ್ರಿಪ್ಸಿನ್ – 180
6.ಕುದುರೆಯ ಮಯೋಗ್ಲೋಬಿನ್ – 150
7.ಹಿಮೋಗ್ಲೋಬಿನ್ – 574
8.ಯೂರಿಯೇಸ್ – 4500
9.ಯೂರಿಯೇಸ್ – 4500

* ಉಗುರು ಮತ್ತು ಕೂದಲಿನಲ್ಲಿರುವ ಸರಳ ಪ್ರೋಟೀನ್‍ಗಳು – ಕೆರಾಟಿನ್
* ಕೂದಲು, ಉಗುರುಗಳನ್ನು ಸುಟ್ಟಾಗ ಘಾಟುವಾಸನೆ ಬರಲು ಕಾರಣ –  ಗಂಧಕದ ಅಂಶ ಇರುತ್ತದೆ.
* ಮಾಂಸ ಖಂಡಗಳಲ್ಲಿ ಕಂಡುಬರುವ ಪ್ರೋಟೀನ್ –  ಮಯೋಸಿನ್( ಗ್ಲೈಕೋ ಪ್ರೋಟೀನ್‍ಗಳು)
* ಸ್ನಾಯುಗಳ ಸಂಕುಚನೆ , ಚಲನೆಯನ್ನು ನಿಯಂತ್ರಿಸುವ ಪ್ರೋಟೀನ್‍ಗಳು –  ಆಕ್ವೀನ್ ಮತ್ತು ಮಯೋಸಿನ್
* ಪ್ರೋಟೀನ್‍ಗಳಿಂದ ಮಾತ್ರ ಮಾಡಲ್ಪಟ್ಟ ಕಿಣ್ವಗಳು –  ಪೆಪ್ಸಿನ್ ಮತ್ತು ಟ್ರಿಪ್ಸಿನ್ ಕ್ವಾಷಿಯೋರಕರ್
* ಇದು ಆಹಾರದಲ್ಲಿ ಪ್ರೋಟೀನ್‍ಗಳ ಕೊರತೆಯಿಂದ ಬರುವ ರೋಗವಾಗಿದೆ. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಮೊಟ್ಟಮೊದಲು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬಂದ ಖಾಯಿಲೆ.
*ಇದರ ಲಕ್ಷಣ – ಕುಂಠಿತ ಬೆಳವಣಿಗೆ, ಹೊಟ್ಟೆ ,ಪಾದಮತ್ತು ಕಾಲುಗಳ ಊದುವಿಕೆ, ಚರ್ಮ ಮತ್ತು ರೋಮಗಳ ಬಣ್ಣ ಬದಲಾಗುವಿಕೆ, ಮಾಂಸ ಖಂಡಗಳ ಜೋಲು ಬೀಳುವಿಕೆ ಮತ್ತು ಬುದ್ಧಿಮಾಂದ್ಯ. ಪೋಷಾಣಾ ಮರಾಸ್ಮಸ್
* ಶಿಶುಗಳ ಆಹಾರದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‍ಗಳಡೆರಡೂ ಕಡಿಮೆ ಇದ್ದಲ್ಲಿ ಈ ಖಾಯಿಲೆ ಉಂಟಾಗುತ್ತದೆ. ತಾಯಿಯ ಎದೆಹಾಲಿನ ಪೋಷಣೆ ಇಲ್ಲದ ಶಿಶುಗಳಲ್ಲಿ ಇದು ಸಾಮಾನ್ಯ.
ಇದರ ಲಕ್ಷಣ – ಕುಂಠತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈ ಕಾಲುಗಳು ಮತ್ತು ಒಣಕಲಾದ ಚರ್ಮ.

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

Leave a Reply

Your email address will not be published. Required fields are marked *

error: Content Copyright protected !!