ಮಲೇರಿಯಾ ಸೊಳ್ಳೆಗಳಿಂದ ಹರಡುತ್ತೆ ಎಂದು ತೋರಿಸಿಕೊಟ್ಟ ರೊನಾಲ್ಡ್ ರೋಸ್
ಮಲೇರಿಯಾ ರೋಗವನ್ನು ಹರಡಲು ಸೊಳ್ಳೆಗಳು ವಾಹಕಗಳಾಗಿವೆ. ಸೊಳ್ಳೆಗಳ ಜೀರ್ಣನಾಳದಲ್ಲಿ ಮಲೇರಿಯಾ ರೋಗಾಣುವಾದ “ಪ್ಲಾಸ್ಮೊಡಿಯಂ”ನ್ನು ಪತ್ತೆ ಹಚ್ಚುವ ಮೂಲಕ ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತವೆ ಎಂದು ರೊನಾಲ್ಡ್ ರೋಸ್ರವರು ಜಗತ್ತಿಗೆ ತೋರಿಸಿದರು.
ಇವರ ಈ ಕೊಡುಗೆಗಾಗಿ 1902 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಮೂಲಕ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ. ( 1901 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದವರೆಂಬ ಕೀರ್ತಿಗೆ, ಜರ್ಮನಿ ವೈದ್ಯರಾದ ಎಮಿಲ್ ಅಡಾಲ್ಫ್ ವಾನ್ ಬೆಹರಿಂಗ್ರವರಿಗೆ ಸಿರಮ್ ಥೆರಪಿ ಸಂಶೋಧನೆಗಾಗಿ ನೀಡಲಾಯಿತು.).
ಸರ್ ರೊನಾಲ್ಡ್ ರೋಸ್ರವರು ಸೊಳ್ಳೆಗಳಿಂದ ಮಲೇರಿಯಾ ರೋಗಾಣು ಹರಡುತ್ತದೆ ಎಂದು ಪತ್ತೆ ಹಚ್ಚಿದರಿಂದ ಮಲೇರಿಯಾ ರೋಗವನ್ನು ನಿಯಂತ್ರಸಲು ಸಾಧ್ಯವಾಯಿತು. ಸರ್, ರೊನಾಲ್ಡ್ ರೋಸ್ರವರ ಸಂಶೋಧನೆ ಆಧರಿಸಿ ಇಟಲಿಯನ್ ವೈದ್ಯ ಮತ್ತು ಪ್ರಾಣಿಶಾಸ್ತ್ರಜ್ಞರಾದ ಗಿಯೋವಾನ್ನಿ ಬಾಟಿಸ್ಟಗ್ರಾಸ್ಸಿರವರು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮಾತ್ರ ಮಲೇರಿಯಾ ರೋಗ ಹರಡುತ್ತದೆ. ಎಂದು ಸಂಶೋಧಿಸಿದರು.
ಸರ್.ರೊನಾಲ್ಡ್ ರೋಸ್ರವರು ಮೇ 13, 1857 ರಂದು ಪ್ರಸ್ತುತ ಉತ್ತಖಂಡ ರಾಜ್ಯದಲ್ಲಿ ಜನಿಸಿದರು. ಈ ಮೂಲಕ ಅವರು ಭಾರತದ ಮೂಲದವರಾಗಿದ್ದಾರೆ. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ಇಂಗ್ಲೆಂಡ್ಗೆ ತೆರಳಿ ಅಲ್ಲೇ ನೆಲೆಸಿದರು. ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೆಂಡಿನಲ್ಲಿ ಪೂರೈಸಿದರು.
ರೊನಾಲ್ಡ್ ರೋಸ್ರವರು 1881 ರಿ0ದ 1894 ರವರೆಗೆ ಭಾರತದಲ್ಲೂ ವೈದ್ಯರಾಗಿ ಸೇವೆ ಸಲ್ಲಿಸಿದರು. ಇವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರ ಆತ್ಮಚರಿತ್ರೆ “ ಮೆಮೋರಿಸ್”ನ್ನು 1923 ರಲ್ಲಿ ಬರೆದಿದ್ದಾರೆ. ಸರ್. ರೊನಾಲ್ಡ್ ರೋಸ್ರವರು ಆಗಸ್ಟ್ 20, 1897 ರಲ್ಲಿ ಮೊದಲ ಬಾರಿಗೆ ಮಲೇರಿಯಾ ರೋಗವು ಹೆಣ್ನುಸೊಳ್ಳೆಯಿಂದ ಹೆಡುತ್ತದೆ ಎಂದು ಪ್ರಚುರಪಡಿಸಿದರು. ಇದರ ಜ್ಞಾಪಕಾರ್ಥವಾಗಿ ಪ್ರತಿ ಅಗಸ್ಟ್ 20 ರಂದು “ವಿಶ್ವಸೊಳ್ಳೆ ದಿನ ಆಚರಿಸಲಾಗುತ್ತದೆ.
ರೋನಾಲ್ಡ್ ರೋಸ್ರವರು 1932 ರಂದು ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾದರು.ಆದರೆ ಇವರು ವೈದ್ಯಕೀಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ.