SBI Recruitment : 2964 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
SBI Recruitment : Circle Based Officers Recruitment all over india for 2964 post
ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆ(ವೃತ್ತ ಆಧಾರಿತ ಅಧಿಕಾರಿ ಹುದ್ದೆಗ)ಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತರು, ಅದರಲ್ಲೂ ಖಾಯಂ ಹುದ್ದೆಗಳನ್ನು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿಗೆ ಮೇ 29 ರವರೆಗೆ ಅವಕಾಶ ನೀಡಲಾಗಿದೆ.
ಹುದ್ದೆ ವಿವರ: ಬ್ಯಾಕ್ಲಾಗ್ ಸೇರಿದಂತೆ ಒಟ್ಟು ಹುದ್ದೆ 2964 ಆಗಿದೆ. ಕರ್ನಾಟಕಕ್ಕೆ ಒಟ್ಟು 250 ಹುದ್ದೆಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ತೇರ್ಗಡೆ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.
ವೇತನ: 48,480 -85,920ರೂ. ಮಾಸಿಕ
ಈ ಹುದ್ದೆಗೆ ಆಯ್ಕೆಯಾಗಿ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ಬೇಸಿಕ್ ಪೇ ರೂ.48480 . ಇತರೆ ಭತ್ಯೆಗಳು ಸೇರಿ ಮಾಸಿಕ ರೂ.50,000 ಕ್ಕೂ ಹೆಚ್ಚು ಆರಂಭದಲ್ಲೇ ಸಂಬಳ ಸಿಗಲಿದೆ. ಒಟ್ಟಾರೆ ವೇತನ ಶ್ರೇಣಿ ರೂ.48480 ರಿಂದ 85920 ವರೆಗೆ ಇರಲಿದೆ. ಈ ಹುದ್ದೆಗೆ ಸೇರುವವರು ಕಾರ್ಯಾನುಭವ ಹೊಂದಿದಂತೆ ಮೇಲ್ದರ್ಜೆಗೆ ಏರಬಹುದು. ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ 1 ಜತೆಗೆ, ಎರಡು ಮುಂಗಡ ವೇತನ ಹೆಚ್ಚಳ ಸಿಗಲಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಸಲಾಗಿದ್ದು, ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್, ಸಂದರ್ಶನ ಮತ್ತು ಸ್ಥಳೀಯ ಭಾಷೆ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುವುದು.
ಮುಖ ದಿನಾಂಕಗಳು :
*ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 09-05-2025
*ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 29-05-2025
*ಅಪ್ಲಿಕೇಶನ್ ತಿದ್ದುಪಡಿಗೆ, ಶುಲ್ಕ ಪಾವತಿಗೆ ಕೊನೆ ದಿನಾಂಕ : 29-05-2025
*ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 13-06-2025
*ಆನ್‌ಲೈನ್ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭಿಕ ದಿನಾಂಕ – ಸಂಭಾವ್ಯ ಜುಲೈ 2025
ಆನ್‌ಲೈನ್ ಪರೀಕ್ಷೆ ದಿನಾಂಕ (ಸಂಭಾವ್ಯ) ಜುಲೈ 2025
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ bank.sbi/web/careers/current-openings ಗೆ ಭೇಟಿ ನೀಡಿ.
ಅಧಿಸೂಚನೆಗಾಗಿ ಇಲ್ಲಿ click ಮಾಡಿ
Current Recruitments : ಪ್ರಸ್ತುತ ನೇಮಕಾತಿಗಳು
