ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ಬಳಸುವ ಮೊಬೈಲ್ ಮನಿ ಐಡೆಂಟಿಫೈಯರ್ (Mobile Money Identifier-MMID) ನಲ್ಲಿ ಎಷ್ಟು ಅಂಕಿಗಳಿರುತ್ತವೆ..?
1) 12-ಅಂಕೆಗಳು
2) 7-ಅಂಕೆಗಳು
3) 16-ಅಂಕೆಗಳು
4) 9-ಅಂಕೆಗಳು
2. ಶರೀರದಲ್ಲಾದ ಗಾಯದ ರಕ್ತಸ್ರಾವವನ್ನು ನಿಲ್ಲಿಸಲು ಉಪಯೋಗಿಸುವ ಪದಾರ್ಥ..?
1) ಗ್ರಾಫೈಟ್
2) ಪೊಟ್ಯಾಷ್ ಆಲಂ
3) ತೇವದ ಸುಣ್ಣ
4) ಸೋಡಿಯಂ ಕ್ಲೋರೈಡ್
3. ಭಾರತ ಸರ್ಕಾರದ ಉಪಕ್ರಮವಾದ “NISHTHA”ದಲ್ಲಿ ‘T’ ಏನನ್ನು ಸೂಚಿಸುತ್ತದೆ..?
1) ತಾಂತ್ರಿಕ-Technical
2) ತರಬೇತಿ-Training
3) ಪಾರದರ್ಶಕತೆ -Transparency
4) ಶಿಕ್ಷಕರು-Teachers
4. ಸಹಕಾರಿ ಸಂಘಗಳ ರಚನೆಯು ಭಾರತದಲ್ಲಿ ಸಾಂವಿಧಾನಿಕವಾಗಿ ಅಂಗೀಕರಿಸಲ್ಪಟ್ಟಿದೆಯೇ..?
1) ಹೌದು, ಡಿಪಿಎಸ್ಪಿಯ ಆರ್ಟಿಕಲ್ 36 ರ ಅಡಿಯಲ್ಲಿ
2) ಯಾವುದೇ ಸಾಂವಿಧಾನಿಕ ನಿಬಂಧನೆಗಳಿಲ್ಲ – ಕೈಗಾರಿಕಾ ಕಾನೂನಿನ ಮೂಲಕ ಮಾತ್ರ ಸ್ವೀಕರಿಸಲಾಗಿದೆ
3) ಹೌದು, ಇದು ಆರ್ಟಿಕಲ್ 19 ರ ಅಡಿಯಲ್ಲಿ ಮೂಲಭೂತ ಹಕ್ಕು
4) ಯಾವುದೇ ಸಾಂವಿಧಾನಿಕ ನಿಬಂಧನೆಗಳಿಲ್ಲ ಮತ್ತು ಕಾನೂನುಬದ್ಧವಾಗಿ ಅಮಾನ್ಯವಾಗಿದೆ
5. ಬ್ಯೂಫೋರ್ಟ್ (Beaufort) ಮಾನವನ್ನು ಯಾವುದನ್ನು ಅಳೆಯಲು ಉಪಯೋಗಿಸುತ್ತಾರೆ..?
1) ಆದ್ರ್ರತೆ
2) ಗಾಳಿಯ ವೇಗ
3) ಉಷ್ಣತೆ
4) ಮಳೆಯ ಪ್ರಮಾಣ
6. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು..?
1)ವೆಂಕಟಕೃಷ್ಣಯ್ಯ
2) ವಿನಾಯಕ. ಕೃ ಗೋಕಾಕ್
3) ಶ್ರೀಕಂಠಯ್ಯ
4)ಆರ್ ನರಸಿಂಹಾಚಾರ್ಯ
7. ‘ಕ್ಯಾಸನಿ ಡಿವಿಜನ್’ ಯಾವ ಗ್ರಹದಲ್ಲಿ ಕಂಡುಬರುತ್ತದೆ..?
1) ಶುಕ್ರ
2) ಗುರು
3)ಬುಧ
4) ಶನಿ
8. ಜಗತ್ತಿನ ಒಳನಾಡು ಜಲಮಾರ್ಗಗಳಲ್ಲಿ ಅತಿ ಹೆಚ್ಚು ಬಳಕೆಯಾಗುವುದು ಯಾವುದು..?
1) ಡ್ಯಾನ್ಯೂಬ್ ಜಲಮಾರ್ಗ
2) ರೈನ್ ಜಲಮಾರ್ಗ
3) ವೋಲ್ಗಾ ಜಲಮಾರ್ಗ
4) ಮಿಸಿಸಿಪ್ಪಿ ಜಲಮಾರ್ಗ
9. ಒಬ್ಬ ವ್ಯಕ್ತಿಯು ಉತ್ತರ ದಿಕ್ಕಿನೆಡೆ 3 ಕಿಮೀ ನಡೆಯುತ್ತಾನೆ. 90 ಡಿಗ್ರಿಯಷ್ಟು ಎಡಕ್ಕೆ ತಿರುಗಿ ಪುನಃ 4 ಕಿಮೀ ನಡೆಯಯುತ್ತಾನೆ. ಆರಂಭದ ಬಿಂದುವಿನಿಂದ ಅವನು ಎಷ್ಟು ದೂರ ಮತ್ತು ಯಾವ ದಿಕ್ಕಿನಲ್ಲಿದ್ದಾನೆ..?
1) 5 ಕಿಮೀ ಈಶಾನ್ಯ
2) 7 ಕಿಮೀ ಈಶಾನ್ಯ
3) 5 ಕಿಮೀ ವಾಯುವ್ಯ
4) 7 ಕಿಮೀ ವಾಯುವ್ಯ
10. ಕುಫ್ರಿ ಎಂಬ ಗಿರಿಧಾಮವು ಯಾವ ರಾಜ್ಯದಲ್ಲಿದೆ..?
1) ಅಸ್ಸಾಂ
2)ಬಿಹಾರ
3) ಮೇಘಾಲಯ
4) ಹಿಮಾಚಲ ಪ್ರದೇಶ
11. ಕೂಕಿ ಬುಡಕಟ್ಟು ಜನಾಂಗದವರು ಯಾವ ರಾಜ್ಯಕ್ಕೆ ಸೇರಿದ್ದಾರೆ..?
1) ತ್ರಿಪುರ
2) ಮಣಿಪುರ
3) ನಾಗಾಲ್ಯಾಂಡ್
4) ಅರುಣಾಚಲ ಪ್ರದೇಶ
12. ಕರ್ಣಾಟಕದ ಬಗ್ಗೆ ‘ಕರುನಾಡಗನ್’ ಎಂಬ ಉಲ್ಲೇಖ ಇರುವುದು..?
1) ಶಿಲಪ್ಪದಿಗಾರಂ
2) ಮಹಾಭಾರತ
3) ಮಣಿಮೇಖಲೈ
4) ವೆಲ್ವಿಕುಡಿ ಶಾಸನ
13. ಈ ಕೆಳಗಿನವುಗಳಲ್ಲಿ ಸಸ್ಯ ಜೀವಕೋಶದಲ್ಲಿ ಮಾತ್ರ ಕಂಡುಬರುವ ಕಾಣದಂಗ ಯಾವುದು..?
1) ಸೈಟೋಪ್ಲಾಸಂ
2) ಕೋಶಪೊರೆ
3) ನ್ಯೂಕ್ಲಿಯಸ್
4) ಕ್ಲೋರೋಪ್ಲಾಸ್ಟ್
14. ಕೆಳಗಿನವರಲ್ಲಿ ಯಾರು ಮೊದಲ ಬಾರಿಗೆ ‘ಸ್ವರಾಜ್ಯ’ ಎಂಬ ಪದವನ್ನು ಮತ್ತು ಹಿಂದಿಯನ್ನು ‘ರಾಷ್ಟ್ರಭಾಷೆ’ ಎಂದು ಪರಿಗಣಿಸಿದರು..?
1) ಎಂ.ಜಿ.ರಾನಡ
2) ಬಾಲಗಂಗಾಧರ ತಿಲಕ್
3) ರಮಾನಂದ
4) ದಯಾನಂದ ಸರಸ್ವತಿ
15. ಸಂವಿಧಾನದ 74ನೇ ತಿದ್ದುಪಡಿ ಕಾಯಿದೆ ಜಾರಿಗೆ ಬಂದಿದ್ದು..?
1) ಜೂನ್ 1 1993
2) ಜುಲೈ 1 1993
3) ಏಪ್ರಿಲ್ 30 1993
4) ಜುಲೈ 3 1992
16. ಸೂರ್ಯನಲ್ಲಿ ಶಕ್ತಿ ಉತ್ಪಾದನೆಯಾಗುವ ಪ್ರಕ್ರಿಯೆ ಯಾವುದು..?
1) ಜಲಜನಕದ ಪರಮಾಣುಗಳ ಸಂಯೋಜನೆ
2) ಆಮ್ಲಜನಕದ ಪರಮಾಣುಗಳ ಸಂಯೋಜನೆ
3) ಇಂಗಾಲದ ಪರಮಾಣುಗಳ ಸಂಯೋಜನೆ
4) ಹೀಲಿಯಂ ಪರಮಾಣುಗಳ ಸಂಯೋಜನೆ
17. ಮೆರಿನೋ (Merino) ಎಂಬುದು ಜನಪ್ರಿಯ ______ ತಳಿಯಾಗಿದೆ
1) ಕುರಿ
2) ಹಸು
3) ಕುದುರೆ
4) ನಾಯಿ
18. ರಕ್ತ ಹೆಪ್ಪುಗಟ್ಟುವಿಕೆಯನ್ನು ಏನೆಂದು ಕರೆಯುತ್ತಾರೆ..?
1) ಪೈಟ್ರೋಸಿಸ್
2) ಥ್ರೊಂಬೋಸಿಸ್
3) ಆಗ್ಲುಟಿನೈಸೆಷನ್
4) ನ್ಯೂಮ್ಯಾಜಿಟಂ
19. ‘ದೇವಗಿರಿಗೆ ರಾಜಧಾನಿ ವರ್ಗಾವಣೆಯು ಒಂದು ಶಕ್ತಿಯ ಅಪವ್ಯಯ’ ಎಂದು ಹೇಳಿದ್ದ ವಿದ್ವಾಂಸ ಯಾರು..?
1)ಲೇನ್ ಪೋಲ್
2)ಇ.ಥಾಮ್ಸನ್
3)ಈಶ್ವರಿ ಪ್ರಸಾದ್
4)ಜಿಯಾವುದ್ದಿನ್ ಬರೊನಿ
20. ಕಾಲಾನುಕ್ರಮದಲ್ಲಿ ಕೆಳಗಿನವುಗಳನ್ನು ಜೋಡಿಸಿ:
1) ಮೂರನೇ ಕರ್ನಾಟಕ ಯುದ್ಧ
2) ಮೊದಲ ಬರ್ಮಾ ಯುದ್ಧ
3) ಮೊದಲ ಮೈಸೂರು ಯುದ್ಧ
4) ಎರಡನೇ ಅಫಘಾನ್ ಯುದ್ಧ
(A) 1- 4 – 3 – 2
(B) 1- 3 – 2 – 4
(C) 2 – 4 – 1 – 3
(D) 3 – 1 – 2 – 4
# ಉತ್ತರಗಳು :
1. 2) 7-ಅಂಕೆಗಳು
2. 2) ಪೊಟ್ಯಾಷ್ ಆಲಂ
3. ಶಿಕ್ಷಕರು-Teachers
ಏನಿದು ನಿಶ್ತಾ (NISHTHA)..?
“ಸಮಗ್ರ ಶಿಕ್ಷಕರ ತರಬೇತಿಯ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ” ಸಾಮರ್ಥ್ಯವನ್ನು ಹೆಚ್ಚಿಸಲು ಶಾಲಾ ಮುಖ್ಯಸ್ಥರಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮವಾಗಿದೆ. ಪ್ರಾಥಮಿಕ ಹಂತದಲ್ಲಿ ಎಲ್ಲಾ ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರಲ್ಲಿ ಸಾಮರ್ಥ್ಯವನ್ನು ಬೆಳೆಸುವ ಗುರಿ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಶಿಕ್ಷಕರ ತರಬೇತಿ ಕಾರ್ಯಕ್ರಮವಾಗಿದೆ.
4. 3) ಹೌದು, ಇದು ಆರ್ಟಿಕಲ್ 19 ರ ಅಡಿಯಲ್ಲಿ ಮೂಲಭೂತ ಹಕ್ಕು
5. 2) ಗಾಳಿಯ ವೇಗ
6. 2) ವಿನಾಯಕ. ಕೃ ಗೋಕಾಕ್
7. 4) ಶನಿ
8. 2) ರೈನ್ ಜಲಮಾರ್ಗ
9. 3) 5 ಕಿಮೀ, ವಾಯುವ್ಯ
10. 4) ಹಿಮಾಚಲ ಪ್ರದೇಶ
11. 2) ಮಣಿಪುರ
12. 4) ವೆಲ್ವಿಕುಡಿ ಶಾಸನ
13. 4) ಕ್ಲೋರೋಪ್ಲಾಸ್ಟ್
14. 4) ದಯಾನಂದ ಸರಸ್ವತಿ
15. 1 ) ಜೂನ್ 1 1993
16. 1) ಜಲಜನಕದ ಪರಮಾಣುಗಳ ಸಂಯೋಜನೆಯಿಂದ
17. 1) ಕುರಿ
18. 2) ಥ್ರೊಂಬೋಸಿಸ್ (Thrombosis)
19. 1)ಲೇನ್ ಪೋಲ್
20. (D) 3 – 1 – 2 – 4
# ಇದನ್ನೂ ಓದಿ :
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8