ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
1. ಸ್ವಾತಂತ್ರ್ಯಾನಂತರ ಭಾರತದಲ್ಲಿ ಮೊತ್ತಮೊದಲು ಕಟ್ಟಿದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯು ಯಾವ ನದಿಗೆ ಅಡ್ಡಲಾಗಿದೆ?
ಎ. ನರ್ಮದಾ
ಬಿ. ದಾಮೋದರ್
ಸಿ. ಮಹಾನದಿ
ಡಿ. ಚಂಬಲ್
2. ಭಾರತದ ಅತಿ ಎತ್ತರದ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ಎ. ದಾಮೋದರ್ ಯೋಜನೆ
ಬಿ. ಹಿರಾಕುಡ್ ಯೋಜನೆ
ಸಿ. ನಾಗಾಜುನಸಾಗರ ಯೋಜನೆ
ಡಿ. ಭಾಕ್ರಾನಂಗಲ್ ಯೋಜನೆ
3. ಭಾಕ್ರಾನಂಗಲ್ ಯೋಜನೆಯಲ್ಲಿ ನಿರ್ಮಿಸಲಾದ ಜಲಾಶಯ ಯಾವುದು?
ಎ. ಗೋವಿಂದ ಸಾಗರ
ಬಿ. ಆನಂದ ಸಾಗರ
ಸಿ. ಕೃಷ್ಣ ಸಾಗರ
ಡಿ. ಅಮೃತ ಸಾಗರ
4. ಒರಿಸ್ಸಾದ ದು:ಖದ ನದಿ ಎಂದು ಕರೆಸಿಕೊಳ್ಳುವ ನದಿ ಯಾವುದು?
ಎ. ಕೋಸಿ
ಬಿ. ದಾಮೋದರ್
ಸಿ. ಮಹಾನದಿ
ಡಿ. ಗೋದಾವರಿ
5. ಬಿಹಾರದ ದು:ಖದ ನದಿ ಎಂದು ಕರೆಸಿಕೊಳ್ಳುವ ನದಿ ಯಾವುದು?
ಎ. ದಾಮೋದರ್
ಬಿ. ಮಹಾನದಿ
ಸಿ. ಕೋಸಿ
ಡಿ. ನರ್ಮದಾ
6. ಕರ್ನಾಟಕದ ತುಂಗಭದ್ರಾ ಅಣೆಕಟ್ಟು ಒಂದು—-
ಎ. ನೀರಾವರಿ ಯೋಜನೆ
ಬಿ. ವಿದ್ಯುತ್ ಉತ್ಪಾದನಾ ಯೋಜನೆ
ಸಿ. ಮನರಂಜನೆ ಮತ್ತು ಮೀನುಗಾರಿಕಾ ಯೋಜನೆ
ಡಿ. ವಿವಿಧೋದ್ದೇಶ ಯೋಜನೆ
7. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು?
ಎ. ಕುವೆಂಪು ಸಾಗರ
ಬಿ. ಪಂಪಸಾಗರ
ಸಿ. ಗೋವಿಂದ ಸಾಗರ
ಡಿ. ಕೃಷ್ನ ಸಾಗರ
8. ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ ಭಾರತದ ಹಿಮಾಲಯದ ಪ್ರದೇಶದಲ್ಲಿ ಜಲವಿದ್ಯುತ್ ಉತ್ಪಾದನೆಯ ವಿಫುಲ ಅವಕಾಶಗಳಿವೆ . ಏಕೆಂದರೆ..
ಎ. ಅಲ್ಲಿ ಹಲವು ಜಲಪಾತಗಳಿವೆ
ಬಿ. ಅಲ್ಲಿ ಎತ್ತರ ತಗ್ಗುಗಳಿಂದ ಕೂಡಿದ ಮೇಲ್ಮ್ಯ ಲಕ್ಷಣಗಳಿವೆ
ಸಿ. ಅಲ್ಲಿ ಮಳೆ ಮತ್ತು ಹಿಮದ ಕರಗುವಿಕೆಯಿಂದ ನದಿಗಳಲ್ಲಿ ಸಾಕಷ್ಟು ನೀರು ಇದೆ.
ಡಿ. ಕಾರ್ಮಿಕರು ಸುಲಭ ಸಂಬಳಕ್ಕೆ ಸಿಗುವುದರಿಂದ
9. ಆಂಧ್ರಪ್ರದೇಶದಲ್ಲಿ ಜಲವಿದ್ಯುತ್ ಉತ್ಪಾದನೆಯ ಪ್ರಮುಖ ಕೇಂದ್ರ ಯಾವುದು?
ಎ. ಶಬರಿಗಿರಿ
ಬಿ. ಸಿಲೇರು
ಸಿ. ಇಡುಕ್ಕಿ
ಡಿ. ಕೋಯ್ನಾ
10. ಕೋಯ್ನಾ ಯೋಜನೆ: ಮಹಾರಾಷ್ಟ್ರ:: ಚಕ್ರಾ ಯೋಜನೆ: —
ಎ. ತಮಿಳುನಾಡು
ಬಿ. ಕರ್ನಾಟಕ
ಸಿ. ಕೇರಳ
ಡಿ. ಆಂಧ್ರಪ್ರದೇಶ
11. ಕೇಂದ್ರ ಗಂಗಾ ಪ್ರಾಧಿಕಾರವನ್ನು ಸ್ಥಾಪಿಸಲು ಕಾರಣವೇನು?
ಎ. ಗಂಗಾನದಿಗೆ ಅಡ್ಡವಾಗಿ ಅಣೆಕಟ್ಟೆಗಳನ್ನು ನಿರ್ಮಿಸಲು
ಬಿ. ಗಂಗಾನದಿ ಮತ್ತು ಕಾವೇರಿ ನದಿಗಳನ್ನು ಜೋಡಿಸಲು
ಸಿ. ಗಂಗಾನದಿ ಕಣಿವೆಗಳನ್ನು ಅಭಿವೃದ್ಧಿಗೋಳಿಸಲು
ಡಿ. ಗಂಗಾನದಿಗೆ ಸೇರುವ ಕಲುಷಿತ ವಸ್ತುಗಳು ಮತ್ತು ಒಳಚರಂಡಿಯ ಕೋಳಚೆ ನೀರನ್ನು ತಡೆಯಲು
12. ಬಂಜರುಭೂಮಿ ಈ ವರ್ಗಕ್ಕೆ ಸೇರಿದೆ………………..
ಎ. ವ್ಯವಸಾಯಕ್ಕೆ ಒಳಪಟ್ಟ ಭೂಮಿ
ಬಿ. ಪಾಳುಬಿದ್ದ ಬೂಮಿ
ಸಿ. ಇತರ ವ್ಯವಸಾಯಕ್ಕೆ ಒಳಪಡದ ಭೂಮಿ
ಡಿ. ವ್ಯವಸಾಯಕ್ಕೆ ದೊರಕದಿರುವ ಭೂಮಿ
13. ಕಾಫಿ , ಚಹ ಮುಂತಾದ ತೋಟದ ಬೆಲೆಗಳಿಗೆ ಹೆಚ್ಚು ಸೂಕ್ತವಾದ ಮಣ್ಣು ಯಾವುದು?
ಎ. ಮೆಕ್ಕಲು
ಬಿ. ತೆರಾಯಿ
ಸಿ. ಜಂಬಿಟ್ಟಿಗೆ
ಡಿ. ಕೆಂಪು ಮಣ್ಣು
14. ಕಪ್ಪು ಮಣ್ಣು ಅಗ್ನಿಶಿಲೆಗಳು:: ಕೆಂಪು ಮಣ್ಣು:……….
ಎ. ಸ್ಪಟಿಕ ಶಿಲೆ
ಬಿ. ಮೆಕ್ಕಲು
ಸಿ. ಹವಳ
ಡಿ. ಮೆದುಶಿಲೆಗಳು
15. ಜಂಬಿಟ್ಟಿಗೆ ಮಣ್ಣು ಹೆಚ್ಚಾಗಿ ಕಂಡುಬರುವ ಪ್ರದೇಶಗಳು.
ಎ. ಹೆಚ್ಚು ಮಳೆ ಬೀಳುವ ಪ್ರದೇಶ
ಬಿ. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶ
ಸಿ. ಉಷ್ಣಾಂಶ ಹೆಚ್ಚಾಗಿರುವದರ ಜೊತೆಗೆ ಹೆಚ್ಚಿನ ಮಳೆ ಬೀಳುವ ಪ್ರದೇಶ
ಡಿ. ಹೆಚ್ಚಿನ ಪ್ರಮಾಣದ ಲವಣಗಳು ಇರುವಲ್ಲಿ
16. ಮಣ್ಣಿನ ಸವಕಳಿಯನ್ನು ತಡೆದು ಅದರ ಫಲವತ್ತತೆಯನ್ನು ಕಾಪಾಡುವುದೇ
ಎ. ಮಣ್ಣಿನ ನಷ್ಟ
ಬಿ. ಮಣ್ಣಿನ ನಿರ್ವಹಣೆ
ಸಿ. ಭೂಮಿಯ ನಿರ್ವಹಣೆ
ಡಿ. ಮಣ್ಣಿನ ಸಂರಕ್ಷಣೆ
17. ಈ ಕೆಳಗಿನವುಗಳಲ್ಲಿ ಯಾವುದು ‘ದ್ರಾವಿಡ’ ಭಾಷೆ ಅಲ್ಲ?
ಎ. ಕನ್ನಡ
ಬಿ. ಹಿಂದಿ
ಸಿ. ಮಲಯಾಳ
ಡಿ. ತಮಿಳು
18. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎಮದು ಜನಪ್ರಿಯವಾಗಿದೆ. ಇದಕ್ಕಾಗಿ ಜವಹರಲಾಲ್ ನೆಹರೂ ಅವರು ಭಾರತವನ್ನು ಒಂದು—- ಎಂದು ಹೇಳಿದರು?
ಎ. ಬೆರೆಸುವ ಪಾತ್ರೆ
ಬಿ. ಕರಗಿಸುವ ಮೂಸೆ( ಮೆಲ್ಟಿಂಗ್ ಪಾಟ್)
ಸಿ. ಸಾರ್ವಜನಿಕ ಪಾತ್ರೆ
ಡಿ. ಜಾದೂ ಪಾತ್ರೆ.
19. ಕರ್ನಾಟಕದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುವುದಕ್ಕಾಗಿ ಪ್ರಾರಂಭಿಸಲಾದ ಯೋಜನೆ ಯಾವುದು?
ಎ. ತೇಜಸ್ವಿನಿ ಯೋಜನೆ
ಬಿ. ವಿದ್ಯಾ ಯೊಜನೆ
ಸಿ. ಯಶಸ್ವಿನಿ ಯೋಜನೆ
ಖ ವಾಹಿನಿ ಯೋಜನೆ
20. ಕಪ್ಪು ಮಣ್ಣಿನ ಇನ್ನೋಂದು ಹೆಸರೇನು?
ಎ. ಜೇಡಿ ಮಣ್ಣು
ಬಿ. ಮೆಕ್ಕಲು ಮಣ್ಣು
ಸಿ. ರೆಗೂರ್ ಮಣ್ಣು
ಡಿ. ಮೆದು ಮಣ್ಣು
21. ಮಾನವ ಸಂಪನ್ಮೂಲ ಇಲಾಖೆಯನ್ನು ಪ್ರಾರಂಭಿಸಿದ ವರ್ಷ ಯಾವುದು?
ಎ. 1984
ಬಿ. 1985
ಸಿ. 1986
ಡಿ. 1987
22. ಪೋರ್ಚುಗೀಸರು ಭಾರತೀಯರಿಗೆ ಪರಿಚಯಿಸಿದ ಬೆಳೆ ಯಾವುದು?
ಎ. ಸೆಣಬು
ಬಿ. ಹೊಗೆಸೊಪ್ಪು
ಸಿ. ಎಣ್ಣೆಕಾಳುಗಳು
ಡಿ. ರೇಷ್ಮೇ
23. ಬೆಲ್ಲ, ಮದ್ಯ ಮತ್ತು ಕಾಗದ ತಯಾರಿಕೆಯಲ್ಲಿ ಕಚ್ಚಾವಸ್ತುಗಳನ್ನು ಒದಗಿಸುವ ಬೆಳೆ ಯಾವುದು?
ಎ. ಬಿದಿರು
ಬಿ. ಗಸಗಸೆ
ಸಿ. ಕಬ್ಬು
ಡಿ. ಗೋಧಿ
24. ಜಗತ್ತಿನಲ್ಲಿ ಅತಿ ಹೆಚ್ಚು ಚಹ ಬೆಳೆಯುವ ದೇಶ ಯಾವುದು?
ಎ. ಬ್ರೇಜಿಲ್
ಬಿ. ಭಾರತ
ಸಿ. ಇಂಗ್ಲೆಂಡ್
ಡಿ. ಯು. ಎಸ್. ಎ
25. ನಿಕೋಟಿನ್ ಗುಂಪಿಗೆ ಸೇರಿದ ಬೆಳೆ ಯಾವುದು?
ಎ. ಕಾಫಿ
ಬಿ ಚಹ
ಸಿ. ಹೊಗೆಸೊಪ್ಪು
ಡಿ. ಕೊಕ್ಕೊ
# ಉತ್ತರಗಳು :
1. ಬಿ. ದಾಮೋದರ್
2. ಡಿ. ಭಾಕ್ರಾನಂಗಲ್ ಯೋಜನೆ
3. ಎ. ಗೋವಿಂದ ಸಾಗರ
4. ಸಿ. ಮಹಾನದಿ
5. ಸಿ. ಕೋಸಿ
6. ಡಿ. ವಿವಿಧೋದ್ದೇಶ ಯೋಜನೆ
7. ಬಿ. ಪಂಪಸಾಗರ
8. ಸಿ. ಅಲ್ಲಿ ಮಳೆ ಮತ್ತು ಹಿಮದ ಕರಗುವಿಕೆಯಿಂದ ನದಿಗಳಲ್ಲಿ ಸಾಕಷ್ಟು ನೀರು ಇದೆ.
9. ಬಿ. ಸಿಲೇರು
10. ಬಿ. ಕರ್ನಾಟಕ
11. ಡಿ. ಗಂಗಾನದಿಗೆ ಸೇರುವ ಕಲುಷಿತ ವಸ್ತುಗಳು ಮತ್ತು ಒಳಚರಂಡಿಯ ಕೋಳಚೆ ನೀರನ್ನು ತಡೆಯಲು
12. ಡಿ. ವ್ಯವಸಾಯಕ್ಕೆ ದೊರಕದಿರುವ ಭೂಮಿ
13. ಸಿ. ಜಂಬಿಟ್ಟಿಗೆ
14. ಎ. ಸ್ಪಟಿಕ ಶಿಲೆ
15. ಸಿ. ಉಷ್ಣಾಂಶ ಹೆಚ್ಚಾಗಿರುವದರ ಜೊತೆಗೆ ಹೆಚ್ಚಿನ ಮಳೆ ಬೀಳುವ ಪ್ರದೇಶ
16. ಡಿ. ಮಣ್ಣಿನ ಸಂರಕ್ಷಣೆ
17. ಬಿ. ಹಿಂದಿ
18. ಬಿ. ಕರಗಿಸುವ ಮೂಸೆ( ಮೆಲ್ಟಿಂಗ್ ಪಾಟ್)
19. ಸಿ. ಯಶಸ್ವಿನಿ ಯೋಜನೆ
20. ಸಿ. ರೆಗೂರ್ ಮಣ್ಣು
21. ಬಿ. 1985
22. ಬಿ. ಹೊಗೆಸೊಪ್ಪು
23. ಸಿ. ಕಬ್ಬು
24. ಬಿ. ಭಾರತ
25. ಸಿ. ಹೊಗೆಸೊಪ್ಪು