Friday, December 27, 2024
Latest:
FDA ExamGK QuestionsMultiple Choice Questions SeriesQuizSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3

Share With Friends

1.  ಈ ಕೆಳಗಿನ ಖಂಡಗಳ ಗಾತ್ರದಲ್ಲಿ ಸರಿಯಾದ ಆರೋಹಣ ಕ್ರಮ ( ಚಿಕ್ಕದರಿಂದ ದೊಡ್ಡದು)
ಎ. ಏಷ್ಯಾ, ಆಫ್ರಿಕ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ
ಬಿ. ಏಷ್ಯಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ, ಆಫ್ರಿಕಾ
ಸಿ. ಆಸ್ಟ್ರೇಲಿಯಾ, ಉತ್ತರ ಅಮೇರಿಕಾ, ಆಫ್ರಿಕಾ, ಏಷ್ಯಾ
ಡಿ. ಆಸ್ಟ್ರೇಲಿಯಾ , ಏಷ್ಯಾ, ಆಫ್ರಿಕ, ಉತ್ತರ ಅಮೇರಿಕಾ

2. ಉತ್ತರಾರ್ಧಗೋಳವನ್ನು ಭೂಪ್ರಧಾನಗೋಳವೆಂದು ಕರೆಯಲಾಗಿದೆ ಕಾರಣ
ಎ. ಅಲ್ಲಿ ಶೇ. 60 ಭಾಗದಷ್ಟು ಜಲ ಮತ್ತು ಶೇ. 40 ಭಾಗದಷ್ಟು ಭೂಭಾಗವಿರುವುದು.
ಬಿ. ಸಮಭಾಜಕ ವೃತ್ತವು ಭೂಮಿಯನ್ನು ಎರಡು ಗೋಳಾರ್ಧಗಳಾಗಿ ವಿಭಾಗಿಸುತ್ತೆ.
ಸಿ. ಅಲ್ಲಿ ಶೇ. 40 ಭಾಗದಷ್ಟು ಜಲ ಮತ್ತು ಶೇಕಡ 60 ಭಾಗದಷ್ಟು ಭೂಭಾಗವಿರುವುದು
ಡಿ. ಕರ್ಕಾಟಕ ಸಂಕ್ರಾತಿ ವೃತ್ತವು ಉತ್ತರಾರ್ಧ ಗೋಳದ ಮೇಲೆ ಹಾದು ಹೋಗುತ್ತದೆ.

3. ಈ ಸಾಗರಗಳ ಸರಿಯಾದ ಅವರೋಹಣ ಕ್ರಮ ( ದೊಡ್ಡದರಿಂದ ಚಿಕ್ಕದು)
ಎ. ಫೆಸಿಪಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ, ಆರ್ಕ್‍ಟಿಕ್ ಸಾಗರ
ಬಿ. ಆರ್ಕ್‍ಟಿಕ್ ಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಸಾಗರ, . ಫೆಸಿಪಿಕ್ ಸಾಗರ
ಸಿ. ಫೆಸಿಪಿಕ್ ಸಾಗರ, ಆರ್ಕ್‍ಟಿಕ್ ಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಸಾಗರ
ಡಿ. ಆರ್ಕ್‍ಟಿಕ್ ಸಾಗರ, ಹಿಂದೂ ಮಹಾಸಾಗರ, ಫೆಸಿಪಿಕ್ ಸಾಗರ, ಅಟ್ಲಾಂಟಿಕ್ ಸಾಗರ

4. ಆಫ್ರಿಕಾ ಜಲಮೇರೆಗಳು
ಎ. ಅಟ್ಲಾಂಟಿಕ್ ಸಾಗರ ಮತ್ತು ಹಿಂದೂ ಮಹಾಸಾಗರ
ಬಿ. ಹಿಂದೂ ಮಹಾಸಾಗರ ಮತ್ತು ಫೆಸಿಫಿಕ್ ಸಾಗರ
ಸಿ. ಫೆಸಿಫಿಕ್ ಸಾಗರ ಮತ್ತು ಅಟ್ಲಾಂಟಿಕ್ ಸಾಗರ
ಡಿ. ಫೆಸಿಫಿಕ್ ಸಾಗರ ಮತ್ತು ಆರ್ಕಾಟಿಕ್ ಸಾಗರ

5. ಭೂಗೋಳವನ್ನು ಪೂರ್ವಾರ್ಧಗೋಳ ಮತ್ತು ಪಶ್ಚಿಮಾರ್ಧಗೋಳಗಳಾಗಿ ವಿಭಾಗಿಸುವುದು.
ಎ. ಸಮಭಾಜಕ ವೃತ್ತ ಮತ್ತು ಆರ್ಕ್‍ಟಿಕ್ ವೃತ್ತ
ಬಿ. ಕರ್ಕಾಟಕ ಸಂಕ್ರಾತಿ ವೃತ್ತ ಮತ್ತು ಮಕರ ಸಂಕ್ರಾತಿ ವೃತ್ತ
ಸಿ. ಅಂತರಾಷ್ಟ್ರೀಯ ದಿನರೇಖೆ ಮತ್ತು ಸಮಭಾಜಕ ವೃತ್ತ
ಡಿ. ಗ್ರೀನ್‍ವಿಚ್ ರೇಖೆ ಮತ್ತು ಅಂತರಾಷ್ಟ್ರೀಯ ದಿನರೇಖೆ

6. ಪ್ರತಿ ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಇರುವ ಸಮಯದ ಅಂತರ
ಎ. 6 ನಿಮಿಷ
ಬಿ. 1 ದಿನ
ಸಿ. 5 ಗಂಟೆ 30 ನಿಮಿಷ
ಡಿ. 4 ನಿಮಿಷ

7. ಅಂತರಾಷ್ಟ್ರೀಯ ದಿನರೇಖೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ನೀವು ದಾಟಿದರೆ
ಎ. ಒಂದು ದಿನ ಪಡೆದುಕೊಳ್ಳುವಿರಿ
ಬಿ. ಒಂದು ದಿನ ಕಳೆದುಕೊಳ್ಳುವಿರಿ
ಸಿ. ನೀವೂ ಗಳಿಸುವುದೂ ಇಲ್ಲ ಅಥವಾ ಕಳೆದುಕೊಳ್ಳುವುದೂ ಇಲ್ಲ
ಡಿ. ಭೂಮಿಯಿಂದಲೇ ಹೊರ ಹೋಗುವಿರಿ

8. ಭೂಮಿಯ ಅತ್ಯಂತ ಒಳಭಾಗ
ಎ. ಭೂಕವಚ
ಬಿ. ಮ್ಯಾಂಟಲ್
ಸಿ. ಸಿಯಾಲ್
ಡಿ. ಭೂ ತಿರುಳು

9. ಕಣಶಿಲೆಗಳನ್ನು ಜಲಶಿಲೆಗಳೆಂದು ಕರೆಯಲಾಗಿದೆ ಕಾರಣ
ಎ. ಜಲಶಿಲೆಗಳಲ್ಲಿ ಸಂಚಯಿತವಾಗಿ ನಿರ್ಮಿತವಾಗಿದೆ
ಬಿ. ಮಾರುತಗಳಿಂದ ಸಂಚಯಿತವಾಗಿ ನಿರ್ಮಿತವಾಗಿದೆ
ಸಿ. ಭೂ ಕುಸಿತದಿಂದ ಉಂಟಾಗಿದೆ
ಡಿ. ಭೂ ಕಂಪನದಿಂದ ರಚನೆಯಾಗಿದೆ.

10. ಒಂದು ಸಣ್ಣ ನದಿಯು ಮತ್ತೊಂದು ನದಿಯನ್ನು ಸೇರಿದಾಗ ಅದನ್ನು
ಎ. ಉಪಕಾಲುವೆ ಎನ್ನುವೆವು
ಬಿ. ಉಪನದಿಗಳು ಎನ್ನುವೆವು
ಸಿ. ಹಿನ್ನೀರಿನ ಕಾಲುವೆ ಎನ್ನುವೆವು
ಡಿ. ಲಗೂನ್‍ಗಳು ಎನ್ನುವೆವು

11. ಒಂದು ನದಿಯು ಮತ್ತೊಂದು ನದಿಯನ್ನು ಸೇರುವ ಸ್ಥಳವೇ
ಎ. ಖಾರಿ
ಬಿ. ಕೊಲ್ಲಿ
ಸಿ. ಮೂಲ
ಡಿ. ಸಂಗಮ

12. ನದಿಯು ಸಮುದ್ರವನ್ನು ಸೇರುವ ಭಾಗದಲ್ಲಿ ಅಗಲವಾಗಿ ಕಂಡು ಬರುವ ಉಬ್ಬರವಿಳಿತ ಮುಖಭಾಗವೆ
ಎ. ಮುಖಜಭೂಮಿ
ಬಿ. ಅಳಿವೆ
ಸಿ. ಲಗೂನ್
ಡಿ. ಸಂಗಮ

13. ವಾಯುಗುಣ ಬದಲಾವಣೆ, ಮರುಭೂಮಿಗಳ ನಿರ್ಮಾಣ, ನೌಕಾಯಾನದ ಮಾರ್ಗ ಮುಂತಾದವುಗಳ ಮೇಲೆ ಹೆಚ್ಚು ಪ್ರಭಾವ ಬೀರುವ ಮಾರುತಗಳು
ಎ. ನಿರಂತರ ಮಾರುತಗಳು
ಬಿ. ಋತುಮಾ ಮಾರುತಗಳು
ಸಿ. ಸ್ಥಳೀಯ ಮಾರುತಗಳು
ಡಿ. ಆವರ್ತ ಮತ್ತು ಪ್ರತ್ಯಾವರ್ತ ಮಾರುತಗಳು

14. ರಾಶಿ ಮೋಡಗಳನ್ನು ‘ ಉಣ್ಣೆಯ ಗುಡ್ಡೆ’ ಎಂದರೆ, ಹಿಮಕಣಗಳ ಮೋಡಗಳನ್ನು
ಎ. ರಾಶಿ ವೃಷ್ಟಿ ಎನ್ನುತ್ತಾರೆ
ಬಿ. ಪದರು ಎನ್ನುತ್ತಾರೆ
ಸಿ. ಹೂ ಕೋಸು ಎನ್ನುತ್ತಾರೆ
ಡಿ. ಕುದುರೆ ಭಾಲ ಎನ್ನುತ್ತಾರೆ

15. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರವನ್ನು ಜೋಡಿಸುವ ಕಾಲುವೆ
ಎ. ಸೂಯಜ್ ಕಾಲುವೆ
ಬಿ. ಪನಾಮ ಕಾಲುವೆ
ಸಿ. ಬಕಿಂಗ್ ಹ್ಯಾಮ್ ಕಾಲುವೆ
ಡಿ. ಇಂಗ್ಲಿಷ್ ಕಾಲುವೆ

16. ಈಗಾಗಲೇ ಅತ್ಯಂತ ಸಣ್ಣ ರಂಧ್ರಗಳು ಓಜೋನ್ ಪದರದಲ್ಲಿ ಕಂಡು ಬಂದಿರುವುದು ಇಲ್ಲಿ
ಎ. ಉತ್ತರ ಅಮೇರಿಕ
ಬಿ. ಏಷ್ಯಾ
ಸಿ. ಯೂರೋಪ್
ಡಿ. ಅಂಟಾರ್ಟಿಕ

17.ವಾಯುಗುಣದ ವೈಜ್ಞಾನಿಕ ಅಧ್ಯಯನವನ್ನು ‘ ವಾಯುಗುಣಶಾಸ್ತ್ರ” ಎಂದರೆ ಹೌಆಮಾನದ ವೈಜ್ಞಾನಿಕ ಅಧ್ಯಯನಕ್ಕೆ
ಎ. ಪ್ರಾಕೃತಿಕ ಭೂಗೋಳ ಶಾಸ್ತ್ರ
ಬಿ. ಚರ್ಮಶಾಸ್ತ್ರ
ಸಿ. ವಾತಾವರಣ ಶಾಸ್ತ್ರ
ಡಿ. ಭೂಗೋಳಶಾಸ್ತ್ರ

18. ಭೂಭಾಗದೊಳಗೆ ಕಿರಿದಾಗಿ ಚಾಚಿರುವ ಸಾಗರ ಅಥವಾ ಸಮುದ್ರದ ನೀಳ ಭಾಗವೇ
ಎ. ಖಾರಿ
ಬಿ. ಭೂಷಿರ
ಸಿ. ಜಲಸಂಧಿ
ಡಿ. ಕೊಲ್ಲಿ

19. ಒಂದು ಜಲಭಾಗವು ಮೂರು ಕಡೆಗಳಲ್ಲಿ ಭೂಭಾಗದಿಂದ ಸುತ್ತುವರಿಯಲ್ಪಟ್ಟಿದ್ದರೆ ಅದು ಕೊಲ್ಲಿ ಹಾಗೆಯೇ ಒಂದು ಭೂಭಾಗವು ಮೂರು ಕಡೆಗಳಲ್ಲಿ ಜಲದಿಂದ ಆವರಿಸಿದ್ದರೆ ಅದು
ಎ. ಖಾರಿ
ಬಿ. ದ್ವೀಪ
ಸಿ. ಪರ್ಯಾಯ ದ್ವೀಪ
ಡಿ. ಭೂಷಿರ

20. ಕೂಲಿಗಾಗಿ ದುಡಿಯುವವರನ್ನು ಹೀಗೆ ಕರೆಯುವೆವು
ಎ. ಅನುಬೋಗಿಗಳೂ
ಬಿ. ಮಾರಾಟಗಾರರು
ಸಿ. ಉತ್ಪಾದಕರು
ಡಿ. ಶ್ರಮಿಕರು

21. ಕಬ್ಬಿನಿಂದ ಸಕ್ಕರೆ ತಯಾರಿಸುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ
ಎ. ಪ್ರಾಥಮಿಕ ಉತ್ಪನ್ನ
ಬಿ. ತಯಾರಿಕಾ ಉತ್ಪನ್ನ
ಸಿ. ಸೇವಾ ಪೂರೈಕೆ
ಡಿ. ಅನುಭೋಗ

22. ಹತ್ತಿಯಿಂದ ದಾರ ಹೊಸೆಯುವುದು ಇದಕ್ಕೆ ಉತ್ತಮ ಉದಾಹರಣೆ
ಎ. ಪ್ರಾಥಮಿಕ ಉತ್ಪನ್ನ
ಬಿ. ತಯಾರಿಕಾ ಉತ್ಪನ್ನ
ಸಿ. ಸೇವಾ ಪೂರೈಕೆ
ಡಿ. ಅನುಭೋಗ

23. ವಿದ್ಯಾವಂತ ಹಾಗೂ ಆರೋಗ್ಯವಂತ, ದುಡಿಯುವ ಜನರೇ ಒಂದು ದೇಶದ
ಎ. ಮಾನವ ಸಂಪತ್ತು
ಬಿ. ನಾಗರೀಕರು
ಸಿ. ಸಾಲಗಾರರು
ಡಿ. ಮನುಕುಲ

24. ಪಳೆಯುಳಿಕೆ ಇಂಧನಗಳು
ಎ. ಮುಗಿಯದೇ ಇರುವ ಸಂಪನ್ಮೂಲಗಳು
ಬಿ. ಮುಗಿದು ಹೋಗುವ ಸಂಪನ್ಮೂಲಗಳು
ಸಿ. ಅತಿ ಹೆಚ್ಚಾಗಿ ಲಭ್ಯವಿರುವ ಸಂಪನ್ಮೂಲಗಳು
ಡಿ. ನವೀಕರಿಸಬಲ್ಲ ಸಂಪನ್ಮೂಲಗಳು

25. ಉತ್ಪಾದನೆಯ ಮೂಲ ಗುರಿ
ಎ. ಹೆಚ್ಚು ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವುದು
ಬಿ. ಮಾನವನ ಬಯಕೆಗಳನ್ನು ತೃಪ್ತಿ ಪಡಿಸುವುದು
ಸಿ. ಹೆಚ್ಚು ವಸ್ತುಗಳನ್ನು ಉತ್ಪಾದಿಸುವುದು
ಡಿ. ಅತಿ ಹೆಚ್ಚು ಬೆಲೆಗೆ ಮಾರುವುದು

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2 ]

# ಉತ್ತರಗಳು :
1. ಸಿ. ಆಸ್ಟ್ರೇಲಿಯಾ, ಉತ್ತರ ಅಮೇರಿಕಾ, ಆಫ್ರಿಕಾ, ಏಷ್ಯಾ
2. ಸಿ. ಅಲ್ಲಿ ಶೇ. 40 ಭಾಗದಷ್ಟು ಜಲ ಮತ್ತು ಶೇಕಡ 60 ಭಾಗದಷ್ಟು ಭೂಭಾಗವಿರುವುದು
3. ಬಿ. ಆರ್ಕ್‍ಟಿಕ್ ಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಸಾಗರ, . ಫೆಸಿಪಿಕ್ ಸಾಗರ
4. ಎ. ಅಟ್ಲಾಂಟಿಕ್ ಸಾಗರ ಮತ್ತು ಹಿಂದೂ ಮಹಾಸಾಗರ
5. ಡಿ. ಗ್ರೀನ್‍ವಿಚ್ ರೇಖೆ ಮತ್ತು ಅಂತರಾಷ್ಟ್ರೀಯ ದಿನರೇಖೆ
6. ಡಿ. 4 ನಿಮಿಷ
7. ಬಿ. ಒಂದು ದಿನ ಕಳೆದುಕೊಳ್ಳುವಿರಿ
8. ಡಿ. ಭೂ ತಿರುಳು
9. ಎ. ಜಲಶಿಲೆಗಳಲ್ಲಿ ಸಂಚಯಿತವಾಗಿ ನಿರ್ಮಿತವಾಗಿದೆ
10. ಬಿ. ಉಪನದಿಗಳು ಎನ್ನುವೆವು

11. ಡಿ. ಸಂಗಮ
12. ಬಿ. ಅಳಿವೆ
13. ಎ. ನಿರಂತರ ಮಾರುತಗಳು
14. ಡಿ. ಕುದುರೆ ಭಾಲ ಎನ್ನುತ್ತಾರೆ
15. ಎ. ಸೂಯಜ್ ಕಾಲುವೆ
16. ಡಿ. ಅಂಟಾರ್ಟಿಕ
17. ಸಿ. ವಾತಾವರಣ ಶಾಸ್ತ್ರ
18. ಎ. ಖಾರಿ
19. ಸಿ. ಪರ್ಯಾಯ ದ್ವೀಪ
20. ಡಿ. ಶ್ರಮಿಕರು

21. ಬಿ. ತಯಾರಿಕಾ ಉತ್ಪನ್ನ
22. ಎ. ಪ್ರಾಥಮಿಕ ಉತ್ಪನ್ನ
23. ಎ. ಮಾನವ ಸಂಪತ್ತು
24. ಬಿ. ಮುಗಿದು ಹೋಗುವ ಸಂಪನ್ಮೂಲಗಳು
25. ಬಿ. ಮಾನವನ ಬಯಕೆಗಳನ್ನು ತೃಪ್ತಿ ಪಡಿಸುವುದು

Leave a Reply

Your email address will not be published. Required fields are marked *

error: Content Copyright protected !!