GKHistorySpardha Times

ಎರಡನೆಯ ಮಹಾಯುದ್ಧ (World War II) : ನೆನಪಿನಲ್ಲಿಡಬೇಕಾದ ಅಂಶಗಳು

Share With Friends

👉 ಎರಡನೆಯ ಮಹಾಯುದ್ಧ 1939ರಿಂದ 1945ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ 70 ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮನುಷ್ಯನ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು.

👉 ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು. ಎಲ್ಲ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನೂ ಶಾಂತಿಯುತ ಮಾರ್ಗದಿಂದಲೇ ಪರಿಹರಿಸಿಕೊಳ್ಳಬೇಕೆಂದು ಒಂದನೆಯ ಮಹಾಯುದ್ಧಾನಂತರದಲ್ಲಿ ಆಗಿದ್ದ ವರ್ಸೇಲ್ಸ್‌ ಒಪ್ಪಂದದ ಆಶಯವನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ತೊಡಗಿದ್ದ ಜರ್ಮನಿ, ಇಟಲಿ, ಜಪಾನುಗಳನ್ನೆದುರಿಸಿ ಬ್ರಿಟನ್, ಫ್ರಾನ್ಸ್‌, ಸೋವಿಯತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಮೊದಲಾದ ರಾಷ್ಟ್ರಗಳು ನಡೆಸಿದ ಯುದ್ಧ.

👉 ಸುಮಾರು 6 ವರ್ಷ ಕಾಲ ನಡೆದ ಈ ಯುದ್ಧ ವಿಶ್ವವ್ಯಾಪಿಯಾಗಿ ಪರಿಣಮಿಸಿ ಅಗಾಧ ಸಾವು ನೋವು ಕಷ್ಟ ನಷ್ಟಗಳಲ್ಲಿ ಪರ್ಯಾವಸಾನವಾಯಿತಲ್ಲದೆ ವಿಶ್ವದ ಆರ್ಥಿಕ ರಾಜಕೀಯ ಸಾಮಾಜಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗಳಿಗೂ ಕಾರಣವಾಯಿತು .

2ನೇ ಮಹಾಯುದ್ಧ ಪ್ರಾರಂಭಕ್ಕೆ ಕಾರಣಗಳೇನು..?
1. ಈ ಒಪ್ಪಂದ ಜರ್ಮನಿ ಮೊದಲನೇ ಮಹಾಯುದ್ಧ ಸೋತ ಕಾರಣಕ್ಕಾಗಿ ಒಪ್ಪಬೇಕಾಯಿತು. ಈ ಒಪ್ಪಂದದಲ್ಲಿ ಜರ್ಮನಿ ಮೊದಲನೇ ಮಹಾಯುದ್ಧದಲ್ಲಿ ಆದ ನಷ್ಟಗಳಿಗಾಗಿ 33 ಬಿಲಿಯನ್ ಡಾಲರ್ 42 ಕಂತುಗಳಲ್ಲಿ ಗೆದ್ದ ರಾಷ್ಟ್ರಗಳಿಗೆ ನೀಡಬೇಕಿತ್ತು. ಇಷ್ಟೊಂದು ಹಣ ಕೊಡುವ ಮಾರ್ಗಮಧ್ಯೆಯಲ್ಲಿ ಜರ್ಮನಿಯ‌ ಆರ್ಥಿಕ ಸ್ಥಿತಿ ಹದಗೆಟ್ಟಿತು. ಹೆಚ್ಚಿನ ಜನರು‌ ನಿರುದ್ಯೋಗದ ರೋಗಕ್ಕೆ ತುತ್ತಾಗಿದರು. ಅದಕ್ಕಾಗಿ ಜನರಿಗೆ ಈ ಪರಿಸ್ಥಿತಿಯಿಂದ ಹೊರಬರಬೇಕೆಂದರೆ ಒಬ್ಬ ಸರ್ವಾಧಿಕಾರಿ ಬೇಕಿತ್ತು. ಹಿಟ್ಲರ್ ತನ್ನ ಭಾಷಣಗಳಿಂದ ಜನರ ಮನ ಗೆದ್ದು, ವರ್ಸೈಲ್ಸ್ ಒಪ್ಪಂದ “ಸಾಮಾನ್ಯ ಕಾಗದ” ಎಂದು ಪರಿಗಣಿಸಿ ಎರಡನೇ ಮಹಾಯುದ್ಧಕ್ಕೆ ಕಾರಣವಾದರು.

2. ಜಪಾನ್ ಮೊದಲನೇ ಮಹಾಯುದ್ಧದ ಕೊನೆಯ ದಿನಗಳಲ್ಲಿ ಭಾಗವಹಿಸಿದಕ್ಕೆ ತಾನು ನಂತರ ಇನ್ನಷ್ಟು ರಾಜ್ಯಗಳನ್ನು ಆಳಬೇಕೆಂಬ ಆಸೆ ಇತ್ತು. ಅದಕ್ಕಾಗಿ ಜಪಾನ್ ಮೊದಲು ಚೀನಾದ ಮಂಚೂರಿಯಾದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡರು. ನಂತರ ಜಪಾನ್, ಜರ್ಮನಿ, ಇಟಲಿ ಒಟ್ಟು ಸೇರಿ ಬರ್ಲಿನ್ – ರೋಮ್ – ಟೋಕಿಯೋ ಆಕ್ಸಿಸ್ ಆಗಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದರು.

3. ಲೀಗ್ ಆಫ್ ನೇಶನ್ಸ್ ಮೊದಲನೇ ಮಹಾಯುದ್ಧದ ನಂತರ ಸ್ಥಾಪನೆ ಆಯಿತು. ಇದರ ಸ್ಥಾಪನೆಯ ಮೂಲ ಉದ್ದೇಶ ಮುಂದೆ ಬರುವ ಯುದ್ಧಗಳನ್ನು ತಡೆಯುವುದು. ಆದರೆ ಲೀಗ್ ಆಫ್ ನೇಶನ್ಸ್ ದೊಡ್ಡ ಮನಸ್ತಾಪಗಳನ್ನು /ಯುದ್ಧಗಳನ್ನು ಸರಿಪಡಿಸುವುದರಲ್ಲಿ ವಿಫಲರಾದರು. ಉದಾಹರಣೆಗೆ ಜಪಾನ್ ಮಂಚುರಿಯಾದಲ್ಲಿ ದಾಳಿ ನಡೆಸಿದಾಗ, ಚೀನಾ ಇದರ ಬಗ್ಗೆ ಲೀಗ್ ಆಫ್ ನೇಶನ್ಸ್ ಗೆ ದೂರು ನೀಡಿತ್ತು. ಆದರೆ ಲೀಗ್ ಆಫ್ ನೇಶನ್ಸ್ ಇದರ ಬಗ್ಗೆ ಚಿಂತೆ ಮಾಡಲಿಲ್ಲ. ಹಾಗಾಗಿ ಈ ನಿರ್ಧಾರ ಜಪಾನ್ ಗೆ ಮರುಜೀವ ನೀಡಿದಂತಾಯಿತು.

4. ಇದು ಅತ್ಯಂತ ಮುಖ್ಯವಾದ ಕಾರಣ. ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿ ಪೋಲೆಂಡ್ ಗೆ ನೀಡಿದ ಭೂಮಿ ಹಿಟ್ಲರ್ ವಾಪಸ್ ಪಡೆಯುವ ಮಹಾದಾಸೆಯಿದ್ದಿತು. ಬ್ರಿಟನ್, ಫ್ರಾನ್ಸ್ ಎಚ್ಚರಿಕೆ ನೀಡಿದರೂ ಅವರು 1 ಸೆಪ್ಟೆಂಬರ್ 1939ರಲ್ಲಿ ಪೋಲೆಂಡ್ ಮೇಲೆ ಆಕ್ರಮಣ ಮಾಡಿದನು. ಅದಕ್ಕಾಗಿ ಜರ್ಮನಿ ವಿರುದ್ಧ ಬ್ರಿಟನ್, ಫ್ರಾನ್ಸ್ ಯುದ್ಧಕ್ಕೆ ಇಳಿದ ಕಾರಣಕ್ಕಾಗಿ ಎರಡನೇ ಮಹಾಯುದ್ಧ ಆರಂಭ ಆಯಿತು.

# ಬಾಂಬ್ ಭೀಕರತೆ :
👉 1945 ಜುಲೈ 26ರಂದು ಪಾಟ್ಸ್‌ಡ್ಯಾಮ್‌ ಘೋಷಣೆ ಮಾಡಲಾಯಿತು. ಇದರನ್ವಯ ಜಪಾನ್‌ಗೆ ಶರಣಾಗಲು ಸೂಚಿಸಲಾಯಿತು. ಆದರೆ, ಜಪಾನ್‌ ಶರಣಾಗತಿಗೆ ನಿರಾಕರಿಸಿತು. ಪರ್ಲ್‌ ಹಾರ್ಬರ್‌ ಮೇಲೆ ದಾಳಿ ನಡೆಸಿ ಅಟ್ಟಹಾಸ ನಗೆ ಬೀರಿದ್ದ ಜಪಾನ್‌ಗೆ ಸರಿಯಾದ ತಿರುಗೇಟು ನೀಡಲು ಅಮೆರಿಕಕ್ಕೆ ಕಾಯುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ಅದು ಜಪಾನ್‌ ಪ್ರಮುಖ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಕ್ರಮವಾಗಿ ಆಗಸ್ಟ್‌ 6 ಮತ್ತು 9ರಂದು ಅಣು ಬಾಂಬ್‌ ದಾಳಿ ನಡೆಸಿತು. ಅಲ್ಲಿಗೆ ಇಡೀ ಜಗತ್ತೇ ತತ್ತರಿಸಿ ಹೋಯಿತು. ಹಿಂದೆಂದೂ ಕಂಡರಿಯದಂಥ ಹಾನಿ ಸಂಭವಿಸಿತ್ತು. ಎರಡನೆಯ ಮಹಾಯುದ್ಧದಲ್ಲಿ ಇಡೀ ಪ್ರಪಂಚವೇ ಇದರಲ್ಲಿ ಭಾಗವಹಿಸಿತ್ತು. 1939ರಲ್ಲಿ ಹಿಟ್ಲರನ ಸೈನ್ಯ ಪೋಲೆಂಡಿಗೆ ನುಗ್ಗಿದಂದು ಆರಂಭವಾದ ಈ ಯುದ್ಧ 1945ರಲ್ಲಿ ಅಮೆರಿಕ ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ದಾಳಿ ಮಾಡಿದಂದು ಮುಕ್ತಾಯಗೊಂಡಿತು.

👉 ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಕಾಲ 1945 ಆಗಸ್ಟ್ 6ರ ಬೆಳಗ್ಗೆ 8:15 ಗಂಟೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಥಮ ಪರಮಾಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಹಾಕಿತು. ನಗರದ ಬಹುಭಾಗ ನಾಶವಾಯಿತು. ಸುಮಾರು 60,000 ಜನ ಮಡಿದರು. ಒಂದು ಲಕ್ಷ ಜನ ಗಾಯಗೊಂಡರು. ಎರಡು ಲಕ್ಷ ಜನ ಮನೆಯಿಲ್ಲದೆ ನಿರ್ಗತಿಕರಾದರು. ಬದುಕಿ ಉಳಿದವರಲ್ಲೂ ಅನೇಕರು ವಿಕಿರಣ ಕಾಯಿಲೆಗೆ ಗುರಿಯಾದರು. ಆಮೇಲೆ ಮರಣ ಹೊಂದಿದರು. ಎಷ್ಟೋ ವರ್ಷಗಳ ಕಾಲ ಅಲ್ಲಿ ಹುಟ್ಟಿದ ಮಕ್ಕಳಲ್ಲಿ ಅನೇಕರು ಅಂಗವಿಕಲರಾಗಿ ಹುಟ್ಟಿದರು.

👉 1945 ಆಗಸ್ಟ್ 9 ಬೆಳಗ್ಗೆ 11 ಗಂಟೆ. ಅಮೆರಿಕ ವಿಮಾನಗಳ ಬಾಂಬ್ ದಾಳಿ ಜಪಾನಿನ ನಗರವಾಸಿಗಳಿಗೆ ಅನುಭವವಾಗಿ ಹೋಗಿತ್ತು. ಆದರೆ ಅಂದು ನಾಗಾಸಾಕಿಯ ಮೇಲೆ ವಿಮಾನ ದಾಳಿಯಾದಾಗ ಬಿದ್ದ ಒಂದೇ ಒಂದು ಬಾಂಬು ಕಣ್ಣು ಮುಚ್ಚಿ ತೆರೆಯುವುದರಲ್ಲಿಯೇ 37,501 ಜನರನ್ನು ಬಲಿ ತೆಗೆದುಕೊಂಡಿತ್ತು. 51,580 ಜನ ಗಾಯಗೊಂಡಿದ್ದರು. ನಾಗಾಸಾಕಿಯ ಮೇಲೆ ಬಿದ್ದದ್ದು ಜಗತ್ತಿನ ಎರಡನೆಯ ಪರಮಾಣು ಬಾಂಬ್.

👉 ಅಮೆರಿಕನ್ನರು ನಾಗಾಸಾಕಿ ಮೇಲೆ 9, ಆಗಸ್ಟ್ 1945 ರಂದು ಪರಮಾಣು ಬಾಂಬ್ ಹಾಕಿದ ದಿನ. ಅದರ ನೆನಪಿಗಾಗಿ ಪ್ರತೀ ವರ್ಷ ಆಗಸ್ಟ್ 9ರಂದು ನಾಗಾಸಾಕಿ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಎರಡನೆಯ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರು ಹಾಗೂ ನಾಗರಿಕರ ಆತ್ಮಕ್ಕೆ ಶಾಂತಿ ಕೋರುವುದಾಗಿದೆ.

👉 ಜಪಾನಿಗೆರಗಿದ ಎರಡು ಪರಮಾಣು ಬಾಂಬ್ಗಳು ಅಪಾರ ಸಾವು, ನೋವುಗಳಿಗೆ ಕಾರಣವಾಗಿ ಜಗತ್ತಿಗೇ ಪಾಠ ಕಲಿಸಿದ್ದರೂ, ಸದಾ ಯುದ್ಧದ ಉನ್ಮಾದದಲ್ಲಿರುವ ಕೆಲವು ರಾಷ್ಟ್ರಗಳು ಈಗಲೂ ಪರಮಾಣು ಬಾಂಬ್ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಲೇ ಇವೆ. ಒಂದೊಮ್ಮೆ ಇಂತಹ ದುಸ್ಸಾಹಸಗಳು ನಡೆದರೆ ಜಗತ್ತು ಸರ್ವನಾಶವಾಗುವುದು ಖಂಡಿತ.

# ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ : 
ಎರಡನೇ ಮಹಾಯುದ್ಧ ಮುಕ್ತಾಯದೊಂದಿಗೆ ಇಡೀ ಜಗತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂರಚನೆಯ ಬದಲಾಯಿತು. ಭವಿಷ್ಯದ ಯುದ್ಧಗಳು ತಡೆಯಲು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧನೆಗಾಗಿ ವಿಶ್ವಸಂಸ್ಥೆ(ಯುಎನ್‌) ಸ್ಥಾಪನೆಯಾಯಿತು. ಅಮೆರಿಕ, ಸೋವಿಯತ್‌ ಯುನಿಯನ್‌(ರಷ್ಯಾ), ಚೀನಾ, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ಗಳು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದವು. ರಷ್ಯಾ ಮತ್ತು ಅಮೆರಿಕಗಳೆರಡೂ ಜಾಗತಿಕ ದೈತ್ಯ ಶಕ್ತಿಗಳಾಗಿ, ಶೀತಲ ಸಮರಕ್ಕೂ ಕಾರಣವಾದವು. ಏತನ್ಮಧ್ಯೆ, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಬಹುತೇಕ ರಾಷ್ಟ್ರಗಳು ವಷಾಹತುಶಾಯಿತ್ವದಿಂದ ಹೊರಬಂದವು. ರಾಜಕೀಯ ಐಕ್ಯತೆಗಾಗಿ ಮತ್ತು ಭವಿಷ್ಯದ ಯುದ್ಧ ತಪ್ಪಿಸುವುದಕ್ಕಾಗಿ ಯುರೋಪಿಯನ್‌ ರಾಷ್ಟ್ರಗಳು ಒಕ್ಕೂಟವನ್ನು ರಚಿಸಿಕೊಂಡವು.

# ಶತ್ರು ಪಡೆ :
ಜರ್ಮನಿ, ಇಟಲಿ, ಜಪಾನ್‌, ಸ್ಲೋವಾಕಿಯಾ, ಹಂಗೇರಿ, ರೊಮಾನಿಯಾ(ನವೆಂಬರ್‌, 1940ವರೆಗೆ) ಮತ್ತು ಬಲ್ಗೇರಿಯಾ(ಮಾರ್ಚ್‌, 1941ವರೆಗೆ)

# ಮಿತ್ರಪಡೆ :
ಬ್ರಿಟನ್‌, ಅಮೆರಿಕ, ರಷ್ಯಾ(ಯುಎಸ್‌ಎಸ್‌ಆರ್‌), ಫ್ರಾನ್ಸ್‌, ಆಸ್ಪ್ರೇಲಿಯಾ(ಕಾಮನ್ವೆಲ್ತ್‌ ರಾಷ್ಟ್ರ), ಬೆಲ್ಜಿಯಂ, ಬ್ರೆಜಿಲ್‌, ಕೆನಡಾ(ಕಾಮನ್ವೆಲ್ತ್‌ ರಾಷ್ಟ್ರ), ಚೀನಾ, ಜೆಕೊಸ್ಲೋವೇಕಿಯಾ, ಡೆನ್ಮಾರ್ಕ್‌, ಎಸ್ಟೋನಿಯಾ, ಗ್ರೀಸ್‌, ಇಂಡಿಯಾ(ಬ್ರಿಟನ್‌ ಸಾಮ್ರಾಜ್ಯದ ಅಧೀನ ರಾಷ್ಟ್ರ), ಲ್ಯಾವಿಯಾ, ಲಿಥುವೇನಿಯಾ, ಮಾಲ್ಟಾ, ನೆದರ್ಲೆಂಡ್‌, ನಾರ್ವೆ, ಪೊಲೆಂಡ್‌, ದಕ್ಷಿಣ ಆಫ್ರಿಕಾ, ಯುಗೋಸ್ಲೋವೇಯಾ ಹಾಗೂ ಇತರೆ ರಾಷ್ಟ್ರಗಳು.ಧಿಧಿಧಿ

# ಪ್ರಮುಖ ವ್ಯಕ್ತಿಗಳು :
ಅಡಾಲ್ಫ್‌ ಹಿಟ್ಲರ್‌(ಜರ್ಮನಿ), ಬೆನಿಟೊ ಮುಸ್ಸೋಲಿನಿ(ಇಟಲಿ), ಫ್ರಾಂಕ್ಲಿನ್‌ ಡಿ ರೂಸ್‌ವೇಲ್ಟ್‌(ಅಮೆರಿಕ), ಹರ್ಮನ್‌ ಜಿಯೊರಿಂಗ್‌(ಜರ್ಮನಿಯ ಪ್ರಮುಖ ಸೇನಾ ನಾಯಕ), ವಿನಸ್ಟನ್‌ ಚರ್ಚಿಲ್‌(ಬ್ರಿಟನ್‌ ಪ್ರಧಾನಿ), ಜೊಸೆಫ್‌ ಸ್ಟಾಲಿನ್‌(ಯುಎಸ್‌ಎಸ್‌ಆರ್‌), ಹ್ಯಾರಿ ಟ್ರುಮನ್‌(ಅಮೆರಿಕ).

#  2ನೇ ಮಹಾಯುದ್ಧದ ಮೇಲೆ ನೆನಪೋನಲ್ಲಿಡಬೇಕಾದ ಕೆಲವು ಪ್ರಶ್ನೆಗಳು :
1. ಮೊದಲನೆ ವಿಶ್ವಯುದ್ಧದ ನಂತರ ಯೂರೋಪಿನ ಸ್ಥಿತಿಗತಿ ಹೇಗಿತ್ತು?
ಮೊದಲನೆ ವಿಶ್ವಯುದ್ಧದ ನಂತರ ಯೂರೋಪ್‍ನ ದೇಶಗಳು ವಿಪರೀತ ಆರ್ಥಿಕ ಸಸ್ಯೆಗಳನ್ನು ಎದುರಿಸಬೇಕಾಯಿತು. ಹೊಸದಾಗಿ ಸ್ಥಾಪಿತವಾಗಿದ್ದ ಪ್ರಜಾಪ್ರಭುತ್ವಗಳಾದ ಜರ್ಮನಿ, ಇಟಲಿ, ಮತ್ತು ಸ್ಪೇನ್ ಈ ಆರ್ಥಿಕ ಸಮಸ್ಯೆಗಳನ್ನು ಪ್ರಭಾವಶಾಲಿಯಾಗಿ ಎದುರಿಸಲಾಗಲಿಲ್ಲ. ಆದುದರಿಂದ ಸರ್ವಾಧಿಕಾರತ್ವ ಈ ಮೂರು ದೇಶಗಳಲ್ಲೂ ಬೆಳೆಯಿತು. ಸರ್ವಾಧಿಕಾರಿಗಳು ರಾಷ್ಟ್ರೀಯ ಪುನರ್ ನಿರ್ಮಾಣದ ಭರವಸೆ ನೀಡಿದರು. ಸಂಕುಚಿತ ರಾಷ್ಟ್ರೀಯವಾದ ಮತ್ತೊಮ್ಮೆ ಯೂರೋಪ್‍ನಲ್ಲಿ ತಲೆ ಎತ್ತಿತ್ತು.

2. ಯೂರೋಪ್‍ನಲ್ಲಿ ಸರ್ವಾಧಿಕಾರ ಯಾಕೆ ಬೆಳೆಯಿತು.?
ಹೊಸದಾಗಿ ಸ್ಥಾಪಿತವಾಗಿದ್ದ ಪ್ರಜಾಪ್ರಭುತ್ವಗಳಾದ ಜರ್ಮನಿ, ಇಟಲಿ ಮತ್ತು ಸ್ಪೇನ್ ದೇಶಗಳು ಯುದ್ಧಾನಂತರದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದ್ದವು. ಇದರಿಂದಾಗಿ ಈ ದೇಶಗಳಲ್ಲಿ ಸರ್ವಾಧಿಕಾರ ಬೆಳೆಯಲು ಕಾರಣವಾಯಿತು. ಸರ್ವಾಧಿಕಾರಿಗಳು ರಾಷ್ಟ್ರೀಯ ಪುನರ್‍ನಿರ್ಮಾಣದ ಭರವಸೆಯನ್ನು ಜನತೆಗೆ ಇತ್ತರು.

3. ಜರ್ಮನಿಯಲ್ಲಿ ನಾಝಿವಾದವು ಬೆಳೆಯಲು ಕಾರಣಗಳೇನು?
ಮೊದಲನೇ ವಿಶ್ವಯುದ್ಧದ ನಂತರ ಜರ್ಮನಿಯು ಭಾರೀ ಮೊತ್ತದ ಯುದ್ಧ ಪರಿಹಾರ ನೀಡಬೇಕಾಗಿ ಬಂತು. ಈ ಸಂಧರ್ಭದಲ್ಲಿ ನಾಝಿ ಪಕ್ಷದ ಅಡಾಲ್ಫಾ ಹಿಟ್ಲರ್ ದೇಶಕ್ಕೆ ಆದ ಅವಮಾನವನ್ನು ಕೊನೆಗೊಳಿಸುವ ಭರವಸೆಯನ್ನಿತ್ತು ಅಧಿಕಾರಕ್ಕೆ ಬಂದನು. ಅವನು ಸೇನಾಶಕ್ತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿದನು. ‘ ಕಂದು ಅಂಗಿ’ ಗಳೆಂಬ ಖಾಸಗೀ ಸೇನೆ ಕಟ್ಟಿ ತನ್ನ ವಿರೋಧಿಗಳಾದ ಇತರ ಪಕ್ಷದವರನ್ನು ಹಿಟ್ಲರ್ ಬಗ್ಗುಬಡಿದ. ನ್ಯಾಷನಲ್ ಸೋಶಲಿಸ್ಟ್ ಪಕ್ಷ ಕಟ್ಟಿದ. ಈ ಪಕ್ಷವೇ ‘ ನಾಝಿ ಪಕ್ಷ’.

4. ಹಿಟ್ಲರ್ ರಚಿಸಿದ ಕೃತಿ ಯಾವುದು?
ಹಿಟ್ಲರ್ ರಚಿಸಿದ ಕೃತಿ “ ಮೇನ್ ಕೆಂಫೆ” .

5. ಎರಡನೆಯ ಮಹಾಯುದ್ಧದ ಕಾರಣಗಳೇನು?
ಆರ್ಮನಿ ಮತ್ತು ಇಟಲಿ ದೇಶಗಳ ವಿಸ್ತರಣಾವಾದ ಮತ್ತು ಸಾಮ್ರಾಜ್ಯವಾದಗಳು ಯುದ್ಧದ ಪ್ರಬಲ ಕಾರಣಗಳು.
ಶಾಂತಿಯನ್ನು ಕಾಪಾಡುವುದಕ್ಕಾಗಿ ಪ್ರಾರಂಭಿಸಿದ ರಾಷ್ಟ್ರಗಳ ಸಂಘ, ವಿಸ್ತರಣಾವಾದಿಗಳ ಆಕ್ರಮಣಶೀಲತೆಯನ್ನು ತಡೆಯಲು ಅಸಮರ್ಥವಾಯಿತು.
ಹಿಟ್ಲರ್ ಮತ್ತು ಮುಸ್ಸೊಲಿನಿಯರ ಆಕ್ರಮಣಗಳ ವಿರುದ್ಧ ಯಾರೂ ಸಶಸ್ತ್ರ ಕ್ರಮಗೊಳ್ಳಲು ಮುಂದಾಗಲಿಲ್ಲ.

6. ಅಮೇರಿಕಾ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಳ್ಳಲು ಕಾರಣವೇನು?
1941 ರ ಡಿಸೆಂಬರ್‍ನಲ್ಲಿ ಜಪಾನ್ ಅಮೆರಿಕ ದೇಶದ ನೌಕಾನೆಲೆ ಪರ್ಲ್ ಹಾರ್ಬರ್ ಮೇಲೆ ವಿಮಾನಗಳ ಮೂಲಕ ಬಾಂಬ್ ದಾಳಿ ಮಾಡಿ ಅಲ್ಲಿದ್ದ ನೌಕಾಸೇನೆಗೆ ಭಾರೀ ಹಾನಿ ಮಾಡಿತು. ಇದರಿಂದ ಕೆರಳಿದ ಅಮೇರಿಕ ಇಂಗ್ಲೆಂಡ್‍ನ ಮಿತ್ರ ಪಕ್ಷಗಳ ಪರ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿತು.

7. ಎರಡನೇ ಮಹಾಯುದ್ಧದಲ್ಲಿ ಅಮೇರಿಕದ ಪಾತ್ರವನ್ನು ವಿವರಿಸಿರಿ.
ಅಮೇರಿಕಾದ ಪರ್ಲ್ ಹಾರ್ಬರ್ ನೆಲೆಯ ಮೇಲೆ ಜಪಾನ್ ದಾಳಿ ನಡೆಸಿ ನೌಕಾಸೇನೆಗೆ ಬಾರೀ ಹಾನಿಯುಂಟು ಮಾಡಿತು. ಇದರಿಂದ ಕೆರಳಿದ ಅಮೆರಿಕ ಮಿತ್ರಪಕ್ಷಗಳ ಪರವಾಗಿ ಯುದ್ಧ ಮಾಡತೊಡಗಿತು. 1944 ರ ಜೂನ್‍ನಲ್ಲಿ ಅಮೇರಿಕದ ಸೇನಾನಿ ಐಸೆನ್‍ಹೋವರ್ ಫ್ರಾನ್ಸ್‍ಗೆ ಬಂದು ಇಂಗ್ಲೆಂಡ್‍ಗೆ ನೆರವಾದ. ಅಮೆರಿಕವು ಉತ್ತರ ಆಫ್ರಿಕಾದ ಅಲ್ಜೀರಿಯಾದಲ್ಲೂ ತನ್ನ ಸೈನ್ಯ ಇಳಿಸಿತು. ಇದರಿಂದ ಇಟಲಿಗೆ ಸೋಲಾಗಿ ಅದು ಶರಣಾಗತವಾಯಿತು. ಜಪಾನಿನ ಮೇಲೆ 1945 ರ ಆಗಸ್ಟ್ ತಿಂಗಳಲ್ಲಿ ಅಮೇರಿಕ ಅಣುಬಾಂಬ್ ದಾಳಿ ಮಾಡಿತು. ಹಿರೋಶಿಮಾ ಮತ್ತು ನಾಗಸಾಕಿ ನಗರಗಳು ಇದರಿಂದಾಗಿ ನಾಶವಾದವು. ಆಗ ಜಪಾನ್ ಶರಣಾಯಿತು. ಇದರೊಂದಿಗೆ ಯುದ್ಧ ಕೊನೆಗೊಂಡಿತು. ಹೀಗೆ ಮಿತ್ರಪಕ್ಷಗಳ ವಿಜಯದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿತು.

8. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಯಾಕೆ ಶರಣಾಗತವಾಯಿತು?
ಜೂನ್ 1944 ರಲ್ಲಿ ಬೆಲ್ಜಿಯಂ ಮತ್ತು ಫ್ರಾನ್ಸ್‍ನಿಂದ ಜರ್ಮನಿಯ ಸೈನ್ಯವನ್ನು ಹೊರದೂಡಲಾಯಿತು. ಪೂರ್ವದಲ್ಲಿ ರಷ್ಯದ ಸೇನೆ ಜರ್ಮನರನ್ನು ಸೋಲಿಸಿ ಬರ್ಲಿನ್ ನಗರವನ್ನು ಪ್ರವೇಶಿಸಿತು. ಮುಂದೆ ದಾರಿಕಾಣದೆ ಹಿಟ್ರ್ ಆತ್ಮಹತ್ಯೆ ಮಾಡಿಕೊಂಡ. ಆ ಕೂಡಲೇ 1945 ರಲ್ಲಿ ಜರ್ಮನಿ ಶರಣಾಯಿತು.

9. ಎರಡನೇ ಮಹಾಯುದ್ಧ ಹೇಗೆ ಕೊನೆಗೊಂಡಿತು?
ಜಪಾನಿನ ಮೇಲೆ 1945 ರ ಆಗಸ್ಟ್ ತಿಂಗಳಲ್ಲಿ ಅಮೇರಿಕ ಅಣುಬಾಂಬ್ ದಾಳಿ ಮಾಡಿತು. ಹಿರೋಶಿಮಾ ಮತ್ತು ನಾಗಸಾಕಿ ನಗರಗಳು ಇದರಿಂದಾಗಿ ನಾಶವಾದವು. ಆಗ ಜಪಾನ್ ಶರಣಾಯಿತು. ಇದರೊಂದಿಗೆ ಮಹಾಯುದ್ಧ ಕೊನೆಗೊಂಡಿತು.

10. ಎರಡನೇ ಮಹಾಯುದ್ಧದಲ್ಲಿ ಮಿತ್ರಪಕ್ಷಗಳ ವಿಜಯದ ರೂವಾರಿಗಳು ಯಾರು?
ಇಂಗ್ಲೆಂಡ್‍ನ ಪ್ರಧಾನಿ ಚರ್ಚಿಲ್, ರಷ್ಯದ ಸ್ಟಾಲಿನ್, ಫ್ರಾನ್ಸ್‍ನ ಡಿಗಾಲೆ, ಹಾಗೂ ಅಮೆರಿಕದ ಅಧ್ಯಕ್ಷ ಟ್ರೂಮನ್ ಮಿತ್ರಪಕ್ಷಗಳ ವಿಜಯದ ರೂವಾರಿಗಳಾಗಿದ್ದರು.

11. ಎರಡನೇ ವಿಶ್ವಯುದ್ಧದ ಪರಿಣಾಮಗಳೇನು?
ಎರಡನೆ ಮಹಾಯುದ್ಧದ ಪರಿಣಾಮಗಳು ಬಹಳ ಆಘಾತಕಾರಿಯಾಗಿದ್ದವು. ಸುಮಾರು 5 ಕೋಟಿ ಜನರು ಸತ್ತರು.
ಇಡೀ ಯೂರೋಪ್ ಧ್ವಂಸವಾಗಿ ನಗರಗಳು, ಪಟ್ಟಣಗಳು, ಕೈಗಾರಿಕೆಗಳು ರಸ್ತೆ- ರೈಲು ಮಾರ್ಗಗಳು ನಾಶವಾದವು.
ಜರ್ಮನಿಯನ್ನು ಪೂರ್ಣವಾಗಿ ನಿಶ್ಯಸ್ತ್ರಿಕರಣಗೊಳಿಸಲಾಯಿತು.
ಜಪಾನನ್ನು ನಿಶ್ಯಸ್ತ್ರಗೊಳಿಸಿ ಅಲ್ಲಿ ಅಮೆರಿಕದ ಸೇನೆ ಇಡಲಾಯಿತು.
ಇಂಗ್ಲೆಂಡ್ , ಫ್ರಾನ್ಸ್‍ನಂತಹ ಸಾಮ್ರಾಜ್ಯಶಾಹಿ ದೇಶಗಳು ಮಹಾಯುದ್ಧದ ನಂತರ ಶಕ್ತಿಗುಂದಿದವು. ಇದರಿಂದಾಗಿ ಏಷ್ಯಾ ಮತ್ತು ಆಫ್ರಿಕಾದ ಹಲವಾರು ದೇಶಗಳು ಸ್ವತಂತ್ರವಾಗಲು ಸಾಧ್ಯವಾಯಿತು.
ಶಾಂತಿ ಸ್ಥಾಪಿಸಲೆಂದು “ ವಿಶ್ವಸಂಸ್ಥೆ” ಎಂಬ ಸಂಘಟನೆಯನ್ನು ರಾಷ್ಟ್ರಗಳ ಸಂಘ ‘ ದ (ಲೀಗ್ ಆಫ್ ನೇಶನ್ಸ್) ಸ್ಥಾನದಲ್ಲಿ ಸ್ಥಾಪಿಸಲಾಯಿತು.

12. ಮಾರ್ಷಲ್ ಯೋಜನೆ ಎಂದರೇನು? ಅದರ ಉದ್ದೇಶವೇನು?
• ಎರಡನೇ ಮಹಾಯುದ್ಧದ ತೊಂದರೆಗೊಳಗಾಗಿ ನಾಶನಷ್ಟಗಳನ್ನು ಅನುಭವಿಸಿದ ದೇಶಗಳ ಪುನರುತ್ಥಾನಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲು ಅಮೇರಿಕ ರೂಪಿಸಿದ ಕಾರ್ಯಕ್ರಮವೇ “ ಮಾರ್ಷಲ್ ಯೋಜನೆ”.

13. ಎರಡನೇ ವಿಶ್ವಯುದ್ಧದ ಕೊನೆಯಲ್ಲಿ ಜರ್ಮನಿ ಎಷ್ಟು ಭಾಗಗಳಾಗಿ ವಿಭಜಿಸಲ್ಪಟ್ಟಿತು? ಅವುಗಳ ಉಸ್ತುವಾರಿ ಯಾರ ಕೈಯಲ್ಲಿತ್ತು.?
• ಜರ್ಮನಿಯನ್ನು ನಾಲ್ಕು ಭಾಗಗಳಾಗಿ ವಿಭಜಿಸಲಾಯಿತು. ಈ ನಾಲ್ಕು ಭಾಗಗಲು ಕ್ರಮವಾಗಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾಗಳ ಮೇಲ್ವೀಚಾರಣೆಗೆ ಒಳಪಟ್ಟವು.

ಮೊದಲ ಮಹಾಯುದ್ಧ (World War I) : ನೆನಪಿನಲ್ಲಿಡಬೇಕಾದ ಅಂಶಗಳು

 

 

error: Content Copyright protected !!