Wednesday, November 27, 2024
Latest:
GKKannadaSpardha TimesUncategorized

ಶಬ್ದಮಣಿದರ್ಪಣ ಮತ್ತು ಕೇಶಿರಾಜ

Share With Friends

# ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು.

# ಕೇಶಿರಾಜನ ಕಾಲ ಸುಮಾರು ಕ್ರಿ.ಶ.1260. ಈತನು ಜನ್ನನ ಸೋದರಳಿಯ. ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ “ಸೂಕ್ತಿಸುಧಾರ್ಣವ”ದ ಕರ್ತೃ ಯೋಗಿಪ್ರವರ ಚಿದಾನಂದ ಮಲ್ಲಿ ಕಾರ್ಜುನ; ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ “ಸುಮನೋಬಾಣ” ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ. ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(1230) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ. ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ 1220-38. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ 1233-67. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.

# ಕೇಶಿರಾಜನು ರಚಿಸಿದ ಶಬ್ದಮಣಿದರ್ಪಣವು ಸಮಗ್ರವೂ ಸ್ವಾರಸ್ಯಕರವೂ ಆದ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲ್ಪಟ್ಟಿದೆ. ಆದರೂ ಇದರಲ್ಲಿ ಕನ್ನಡಕ್ಕೆ ಮಾತ್ರವಿರುವ ವಿಶೇಷ ಸಂಗತಿಗಳ ಕುರಿತೂ ಹೇಳಲಾಗಿದೆ.
“ಶಬ್ದಮಣಿದರ್ಪಣ”ವು 13ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ.

# ಕೇಶಿರಾಜನು ಬರೆದ ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. 1868ರಲ್ಲಿ ಪ್ರಕಟಿಸಿದರು. ಕ್ರಿ.ಶ.1872ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. 1951ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು 1958ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.

# ಶಬ್ದಮಣಿದರ್ಪಣದಲ್ಲಿ ‘ಸಂಧಿ ಪ್ರಕರಣ’ ‘ನಾಮಪ್ರಕರಣ’, ‘ಸಮಾಸ ಪ್ರಕರಣ’ ‘ತದ್ಧಿತಪ್ರಕರಣ’ ‘ಆಖ್ಯಾತಪ್ರಕರಣ’ ‘ಧಾತುಪ್ರಕರಣ’ ‘ಅಪಭ್ರಂಶ ಪ್ರಕರಣ’ ‘ಅವ್ಯಯಪ್ರಕರಣ’ ಎಂಬ ಹೆಸರಿನ ಅಷ್ಟ(ಎಂಟು) ಅಧ್ಯಾಯಗಳಿವೆ. ಈ ಕೃತಿಯಲ್ಲಿ ಅಧ್ಯಾಯಗಳಿಗೆ “ಪ್ರಕರಣ” ಎನ್ನಲಾಗುತ್ತದೆ. ಕಂದಪದ್ಯಗಳಿಗೆ ‘ಸೂತ್ರ’ವೆಂದೂ, ಗದ್ಯರೂಪದ ವಿವರಣೆಗೆ ‘ವೃತ್ತಿ’ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ ‘ಪ್ರಯೋಗ’ವೆಂದು ಕರೆದು, ತನ್ನ ಗ್ರಂಥಕ್ಕೆ 2ನೇ ನಾಗವರ್ಮನ “ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ” ಗ್ರಂಥಗಳ ‘ಸೂತ್ರ’, ‘ವೃತ್ತಿ’ ಮತ್ತು ‘ಪ್ರಯೋಗ’ಗಳನ್ನು ಆಧರಿಸಿದ್ದಾನೆ. ಆದರೆ ಎಲ್ಲಿಯೂ ಅಪ್ಪಿ ತಪ್ಪಿಯೂ 2ನೇ ನಾಗವರ್ಮನನ್ನಾಗಲಿ, ಅವನ ಕೃತಿಗಳನ್ನಾಗಲಿ ಉಲ್ಲೇಖಿಸದಿರುವುದು ಅಚ್ಚರಿಯನ್ನು ಉಂಟುಮಾಡುತ್ತದೆ

# ಕೇಶಿರಾಜನ ಕೃತಿಗಳು :
ಪ್ರಬೋಧಚಂದ್ರ, ಚೋಳಪಾಲಕ ಚರಿತ, ಕಿರಾತ, ಸುಭದ್ರಾ ಹರಣ, ಶ್ರೀ ಚಿತ್ರಮಾಲೆ. ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.  ರಸಿಕಪ್ರಿಯ (1591); ಕವಿಪ್ರಿಯ(1601); ರಾಮಚಂದ್ರಿಕ (1601); ರತನಭಾವನಿ(1601); ವೀರಸಿಂಹ ದೇವಚರಿತ(1607); ಜಹಾಂಗೀರ ಜಸಚಂದ್ರಿಕ (1612); ಮತ್ತು ವಿಜ್ಞಾನ ಗೀತ (1601)- ಈ 7ಕೃತಿಗಳು ಕೇಶವದಾಸನ ರಚನೆಗಳೆಂದು ಪಂಡಿತರು ತೀರ್ಮಾನಿಸಿದ್ದಾರೆ. ನಕಸಿಕವನ್ನು ಈತನ ಹೆಸರಿಗೇ ಆರೋಪಿಸಿದ್ದರೂ ಅದು ಈತನ ಅಣ್ಣ ಬಲಭದ್ರನ ರಚನೆಯೆಂದು ಬಹುಮಂದಿ ವಿದ್ವಾಂಸರ ಅಭಿಪ್ರಾಯ. ಛಂದಮಾಲಾ ಎಂಬ ಕೃತಿಯೂ ಈತನ ಹೆಸರಿನಲ್ಲಿದೆ. ರಸಿಕಪ್ರಿಯಾ ಕಾವ್ಯಮೀಮಾಂಸೆಗೆ ಸಂಬಂಧಿಸಿದ ಒಂದು ಪ್ರೌಢ ಗ್ರಂಥ. ಇದರಲ್ಲಿ ಕಾವ್ಯಪರಂಪರೆಗೆ ಅನುಸಾರವಾಗಿ ರಸ, ವೃತ್ತಿ, ಕಾವ್ಯದೋಷ ಮುಂತಾದುವುಗಳ ವರ್ಣನೆ ಮತ್ತು ಉದಾಹರಣೆಗಳು ಕಾಣದೊರೆಯುತ್ತವೆ.

ಭರತನ ನಾಟ್ಯಶಾಸ್ತ್ರ, ವಾತ್ಸ್ಯಾಯನನ ಕಾಮಸೂತ್ರ ಮತ್ತು ರುದ್ರಭಟ್ಟನ ಶೃಂಗಾರತಿಲಕ ಕೃತಿಗಳ ಆಧಾರದ ಮೇಲೆ ಈ ಕೃತಿ ರಚಿತವಾಗಿದೆ. ಶೃಂಗಾರರಸವನ್ನು ಕುರಿತ ವಿವೇಚನೆ ಇಲ್ಲಿ ಗಮನಾರ್ಹವಾಗಿದೆ. ಈ ಬಗೆಗಿನ ಲಕ್ಷ್ಯಪದ್ಯಗಳಲ್ಲಿ ಕಾಣುವ ಕೃಷ್ಣನ ಚಿತ್ರವೂ ಬೇರೆಯ ಬಗೆಯದು. ಇಲ್ಲಿಯ ಕೃಷ್ಣ ಒಬ್ಬ ರಸಿಕ. ಹೀಗಾಗಿ ಈ ಕೃಷ್ಣ ಭಕ್ತಕವಿಗಳ ಕೃಷ್ಣನಿಗಿಂತ ಭಿನ್ನನಾಗಿದ್ದಾನೆ. ಇತರ ರಸಗಳ ಸಾಮಾನ್ಯ ನಿರೂಪಣೆಯೂ ಇದರಲ್ಲಿದೆ. ರಸದ ಅಂಗವಾಗಿಯೇ ನಾಯಿಕಾಭೇದಗಳನ್ನು ಕುರಿತು ಚರ್ಚಿಸಲಾಗಿದೆ.

ಒಟ್ಟಿನಲ್ಲಿ ವಿಷಯಗಳ ಸಾಂಗೋಪಾಂಗ ವಿವೇಚನೆ ಇಲ್ಲಿ ಕಾಣುವುದಿಲ್ಲ. ಭಾಮಹ, ಉದ್ಭಟ ಮೊದಲಾದ ಕಾವ್ಯಮೀಮಾಂಸಕರನ್ನು ಅನುಸರಿಸಿ ಅಲಂಕಾರ ಶಬ್ದವನ್ನು ತುಂಬ ವ್ಯಾಪಕವಾದ ಅರ್ಥದಲ್ಲಿ-ಅಂದರೆ, ರಸ ರೀತಿಗಳನ್ನು ಒಳಗೊಳ್ಳುವಂತೆ ಬಳಸಲಾಗಿದೆ. ಇಲ್ಲಿಯ ಭಾಷೆ ಸರಳವಾಗಿದೆ. ಅಲಂಕಾರಗ್ರಂಥಗಳ ಇತಿಹಾಸದಲ್ಲಿ ಈ ಗ್ರಂಥಕ್ಕೆ ಐತಿಹಾಸಿಕ ಮಹತ್ವ ಮಾತ್ರ ದೊರೆಯಬಹುದಾದರೂ ಕೇಶವದಾಸನ ಕೃತಿಗಳಲ್ಲಿ ಇದಕ್ಕೊಂದು ಸ್ಥಾನವಿದೆ. ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. 1868ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದರು. ಕ್ರಿ.ಶ.1872ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. 1951ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು 1958ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.

# ಪ್ರಕಟಣೆಯ ಇತಿಹಾಸ :
1. ಶಬ್ದಮಣಿದರ್ಪಣಂ, 1868, ಸಂ. ಜೆ. ಗ್ಯಾರೆಟ್, ಮೈಸೂರು ಗೌರ್ನಮೆಂಟ್ ಪ್ರೆಸ್, ಬೆಂಗಳೂರು
2. ಮಡಿವಾಳೇಶ್ವರ ಗಂಗಾಧರ ತೂರಮುರಿಯವರು, ಧಾರವಾಡದಿಂದ ಪ್ರಕಟವಾಗುತ್ತಿದ್ದ ‘ಮಠಪತ್ರಿಕೆ ‘ ಎಂಬ ನಿಯತಕಾಲಿಕದಲ್ಲಿ 1866 ರ ಜೂನ್ ತಿಂಗಳಿನಿಂದ ತಾವು ಬದುಕಿರುವವರೆಗೆ ಕಂತುಗಳಲ್ಲಿ ‘ಶಬ್ದಮಣಿದರ್ಪಣ’ದ ಸೂತ್ರ-ವಿವರಣೆಗಳನ್ನು ಪ್ರಕಟಿಸಿದರು.
3. ‘ಶಬ್ದಮಣಿದರ್ಪಣಂ‘, ಸಂ. ಫರ್ಡಿನಂಡ್ ಕಿಟ್ಟಲ್, 1872, 1899, 1920, (ಪಂಜೆ ಮಂಗೇಶರಾಯರಿಂದ ಪರಿಷ್ಕೃತವಾದ ಆವೃತ್ತಿ.)
4. ‘ಶಬ್ದಮಣಿದರ್ಪಣಂ’, ಸಂ. ???, 1920, ಕರ್ನಾಟಕ ಸಾಹಿತ್ಯ ಪರಿಷತ್ತು, ಬೆಂಗಳೂರು.
5. ‘ಶಬ್ದಮಣಿದರ್ಪಣಂ’, (ಲಿಂಗಣಾರಾಧ್ಯನ ವೃತ್ತಿಯೊಂದಿಗೆ), ಸಂ. ಎ. ವೆಂಕಟರಾವ್ ಮತ್ತು ಎಚ್. ಶೇಷಯ್ಯಂಗಾರ್, 1930, ಕನ್ನಡ ಗ್ರಂಥಮಾಲೆ, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸು.
6. ‘ಶಬ್ದಮಣಿದರ್ಪಣಂ’, ಸಂ. ಡಿ.ಎಲ್. ನರಸಿಂಹಾಚಾರ್, 1958, ಶಾರದಾಮಂದಿರ, ಮೈಸೂರು.
7. ‘ಶಬ್ದಮಣಿದರ್ಪಣಂ’, ಸಂ. ಡಿ.ಕೆ. ಭೀಮಸೇನರಾವ್, 1977, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
8. ‘ಶಬ್ದಮಣಿದರ್ಪಣಂ’, ಸಂ. ಎಲ್. ಬಸವರಾಜು, 1986, ಚಿನ್ಮೂಲಾದ್ರಿ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ,
9. ‘ಶಬ್ದಮಣಿದರ್ಪಣ’, ಸಂ. ಟಿ.ವಿ. ವೆಂಕಟಾಚಲ ಶಾಸ್ತ್ರೀ, 1994, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

error: Content Copyright protected !!