ವಿಜ್ಞಾನಿ ಪರಿಚಯ : ಸರ್ ಐಸಾಕ್ ನ್ಯೂಟನ್ ಎಂಬ ಆಲ್ರೌಂಡರ್ ವಿಜ್ಞಾನಿ
ಸರ್ ಐಸಾಕ್ ನ್ಯೂಟನ್ ಒಬ್ಬ ಇಂಗ್ಲಿಷ್ ಗಣಿತಜ್ಞ, ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ದೇವತಾಶಾಸ್ತ್ರಜ್ಞ ಮತ್ತು ಲೇಖಕ ಮತ್ತು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಕ್ರಾಂತಿಯ ಪ್ರಮುಖ ವ್ಯಕ್ತಿಯಾಗಿದ್ದಾರೆ .
ಲಿಂಕನ್ಷೈರ್ ಕೌಂಟಿಯ ಒಂದು ಸಣ್ಣ ಹಳ್ಳಿ ವೂಲ್ಸ್ಥೋರ್ಪ್-ಬೈ-ಕೋಲ್ಸ್ಟರ್ವರ್ತ್ಲ್ಲಿನ ವೂಲ್ಸ್ಥೋರ್ಪ್ ಮೇನರ್/ಮ್ಯಾನರ್ ಎಂಬಲ್ಲಿ, ಐಸಾಕ್ ನ್ಯೂಟನ್ರು 4 ಜನವರಿ 1643 [OS: 25 ಡಿಸೆಂಬರ್ 1642 ರಂದು ಜನಿಸಿದರು. ನ್ಯೂಟನ್ರು ಹುಟ್ಟಿದ ಆ ಸಮಯದಲ್ಲಿ, ಇಂಗ್ಲೆಂಡ್ ಗ್ರೆಗೋರಿಯನ್ ಪಂಚಾಂಗವನ್ನು ಅಳವಡಿಸಿಕೊಂಡಿರಲಿಲ್ಲ, ಆದ್ದರಿಂದ ಅವರ ಹುಟ್ಟಿದ ದಿನಾಂಕವನ್ನು ಕ್ರಿಸ್ಮಸ್ ದಿನ, 25 ಡಿಸೆಂಬರ್ 1642 ಎಂದು ದಾಖಲಿಸಲಾಗಿತ್ತು.
ಅಲ್ಲಿನ ಶ್ರೀಮಂತ ರೈತ ಐಸಾಕ್ ನ್ಯೂಟನ್ ಎಂಬುದೇ ಹೆಸರಿನ ತನ್ನ ತಂದೆಯ ಮರಣದ ಮೂರು ತಿಂಗಳ ನಂತರ ನ್ಯೂಟನ್ ಹುಟ್ಟಿದರು. ಅಕಾಲಿಕ ಜನನದ ಕಾರಣ, ಆತ ತೀರಾ ಪುಟ್ಟ ಗಾತ್ರದ ಮಗುವಾಗಿದ್ದ, ಆತನ ತಾಯಿ ಹನ್ನಾ ಐಸ್ಕಫ್ ಹೇಳಿದರೆನ್ನಲಾಗುವ ಹಾಗೆ ಆತ ಕ್ವಾರ್ಟ್(ಗ್ಯಾಲನ್ನಿನ ನಾಲ್ಕನೇ ಒಂದು ಭಾಗ ಹಿಡಿಸುವ) ಲೋಟದೊಳಗೆ ಹಿಡಿಸುತ್ತಿದ್ದ. ಈ ಮಾಹಿತಿಯಿಂದ, ಸುಮಾರು 11ರಿಂದ 15 ವಾರಗಳ ಮುಂಚೆ ಜನಿಸಿದ್ದಿರಬಹುದು ಎಂದು ಅಂದಾಜಿಸಬಹುದಾಗಿದೆ.
1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ. ಈ ಕೃತಿಯಲ್ಲಿ, ನ್ಯೂಟನ್ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ಹಾಗೂ ಮೂರು ಗತಿಸೂತ್ರಗಳು ಮುಂದಿನ ಮೂರು ಶತಮಾನಗಳ ಕಾಲ ಭೌತಿಕ ಬ್ರಹ್ಮಾಂಡದ ವೈಜ್ಞಾನಿಕ ನೋಟವನ್ನೇ ಆಳಿದವು.
ನ್ಯೂಟನ್ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು.
ಯಂತ್ರಶಾಸ್ತ್ರದಲ್ಲಿ, ನ್ಯೂಟನ್ರು ಅವಿಚ್ಛಿನ್ನತೆ/ಆವೇಗ ಮತ್ತು ಕೋನೀಯ ಅವಿಚ್ಛಿನ್ನತೆ/ಆವೇಗಗಳ ಸಂರಕ್ಷಣಾ ನಿಯಮಗಳನ್ನು ಪ್ರತಿಪಾದಿಸಿದರು. ದೃಗ್ವಿಜ್ಞಾನದಲ್ಲಿ, ಅವರು ಪ್ರಪ್ರಥಮವಾಗಿ ಕಾರ್ಯರೂಪದಲ್ಲಿ ಪ್ರತಿಫಲನ ದೂರದರ್ಶ ವನ್ನು ನಿರ್ಮಿಸಿದರಲ್ಲದೆ ಪ್ರಿಸಮ್/ಅಶ್ರಗವು ಬಿಳಿ ಬೆಳಕನ್ನು ಚದುರಿಸಿ ಅನೇಕ ವರ್ಣಗಳನ್ನಾಗಿ ವಿಭಜಿಸಿ ದೃಶ್ಯಸಾಧ್ಯ ರೋಹಿತವನ್ನಾಗಿಸಬಲ್ಲದು ಎಂಬ ಅವಲೋಕನದ ಮೇಲೆ ಆಧಾರಿತವಾಗಿ ವರ್ಣ ಸಿದ್ಧಾಂತವನ್ನು ವಿಷದಪಡಿಸಿದರು. ಅವರು ಪ್ರಯೋಗಾತ್ಮಕ ತಂಪಾಗಿಸುವಿಕೆಯ ಸೂತ್ರವನ್ನು ರಚಿಸಿದರಲ್ಲದೇ ಶಬ್ದದ ವೇಗವನ್ನು ಅಭ್ಯಸಿಸಿದರು.
ಗಣಿತಶಾಸ್ತ್ರದಲ್ಲಿ, ನ್ಯೂಟನ್ರು ಚಲನ ಮತ್ತು ಅಖಂಡ ಕಲನಗಳ ಅಭಿವೃದ್ಧಿಯ ಗೌರವವನ್ನು ಗಾಟ್ಫ್ರೀಡ್ ಲೇಬಿನಿಜ್/ಲೈಬ್ನಿಟ್ಸ್ರೊಂದಿಗೆ ಹಂಚಿಕೊಂಡಿದ್ದಾರೆ. ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ನಿರೂಪಿಸಿದ ಅವರು “ನ್ಯೂಟನ್ರ ವಿಧಾನ” ಎಂದು ಕರೆಯಲ್ಪಡುವ ಫಂಕ್ಷನ್ನಿನ/ಕ್ರಿಯೆಯಲ್ಲಿರುವ ಸೊನ್ನೆಗಳನ್ನು ಅಂದಾಜಿಸುವ ವಿಧಾನವನ್ನು ಕಂಡುಹಿಡಿದು ಘಾತಸರಣಿಗಳ ಅಧ್ಯಯನಕ್ಕೆ ಕಾಣಿಕೆ ನೀಡಿದರು.
ವಿಜ್ಞಾನದ ಇತಿಹಾಸದಲ್ಲಿ ನ್ಯೂಟನ್ ಅಥವಾ ಆಲ್ಬರ್ಟ್ ಐನ್ಸ್ಟೀನ್ರಲ್ಲಿ ಯಾರು ಹೆಚ್ಚಿನ ಪ್ರಭಾವ ಬೀರಿದ್ದರು ಎಂಬ ಬಗ್ಗೆ ಬ್ರಿಟನ್ನ ರಾಯಲ್ ಸೊಸೈಟಿಯು 2005ರಲ್ಲಿ ನಡೆಸಿದ ವಿಜ್ಞಾನಿಗಳ ಮತ್ತು ಸಾರ್ವಜನಿಕರ ಸಮೀಕ್ಷೆಯಲ್ಲಿ ಸ್ಟಷ್ಟವಾದ ಪ್ರಕಾರ ನ್ಯೂಟನ್ರು ವಿಜ್ಞಾನಿಗಳಿಗೆ ಈಗಲೂ ಪ್ರಭಾವಶಾಲಿಯಾಗಿಯೇ ಮುಂದುವರೆದಿದ್ದಾರೆ. ಒಟ್ಟಾರೆಯಾಗಿ ವಿಜ್ಞಾನಕ್ಕೆ ನೀಡಿದ ಕೊಡುಗೆಯಲ್ಲಿ ಹೆಚ್ಚಿನ ಪಾಲನ್ನು, ನ್ಯೂಟನ್ ನೀಡಿದ್ದಾರೆ ಎಂದು ಪರಿಗಣಿತವಾಗಿದ್ದರೂ, ಮನುಕುಲಕ್ಕೆ ನೀಡಿದ ಕೊಡುಗೆಯಲ್ಲಿ ಇಬ್ಬರೂ ಸಹಾ ಸಮೀಪವರ್ತಿಗಳು.
ನ್ಯೂಟನ್ರು ಸಂಪ್ರದಾಯಬದ್ಧ ಕ್ರೈಸ್ತರಲ್ಲದೇ ಇದ್ದರೂ ಬಹಳಷ್ಟು ಧರ್ಮನಿಷ್ಟರಾಗಿದ್ದು, ಇಂದು ಅವರನ್ನು ನೆನೆಸಿಕೊಳ್ಳುವ ಪ್ರಕೃತಿ/ನೈಸರ್ಗಿಕ ವಿಜ್ಞಾನಕ್ಕಿಂತಲೂ ಹೆಚ್ಚು ಬೈಬಲ್ನ ವ್ಯಾಖ್ಯಾನಗಳನ್ನು ಬರೆದಿದ್ದರು.
# ಮರಣ :
ತನ್ನ ಜೀವನದ ಕೊನೆಯ ದಿನಗಳಲ್ಲಿ, ನ್ಯೂಟನ್ರು ವಿಂಚೆಸ್ಟರ್ ಹತ್ತಿರದ ಕ್ರಾನ್ಬರಿ ಉದ್ಯಾನದ ಬಳಿ ಮನೆ ಕೊಂಡುಕೊಂಡು ಅದರಲ್ಲಿ ತಮ್ಮ ಸೋದರ ಸೊಸೆ ಹಾಗೂ ಆಕೆಯ ಪತಿಯೊಂದಿಗೆ 1727ರಲ್ಲಿ ತಾವು ಮರಣಿಸುವವರೆಗೆ ಇದ್ದರು. ನ್ಯೂಟನ್ರು 31 ಮಾರ್ಚ್ 1727ರಂದು ಲಂಡನ್ನಲ್ಲಿ ನಿದ್ದೆಯಲ್ಲೇ ಕೊನೆಯುಸಿರೆಳೆದರು, ನಂತರ ಅವರ ವೆಸ್ಟ್ಮಿನ್ಸ್ಟರ್ ಆಬ್ಬೆಯಲ್ಲಿ ಅವರ ಶವಸಂಸ್ಕಾರ ನಡೆಸಲಾಯಿತು. ಅವರ ಅರೆ-ಸೋದರಸೊಸೆ, ಕ್ಯಾಥರೀನ್ ಬಾರ್ಟನ್ ಕಾಂಡ್ಯೂಟ್, ಲಂಡನ್ನ ಜರ್ಮಿನ್ ಸ್ಟ್ರೀಟ್ನಲ್ಲಿನ ಮನೆಯಲ್ಲಿ ಸಾಮಾಜಿಕ ವ್ಯವಹಾರ ಸಹಾಯಕಿಯಾಗಿದ್ದರು; ಆಕೆಯು ಸಿಡುಬಿನಿಂದ ಚೇತರಿಸಿಕೊಳ್ಳುತ್ತಿದ್ದಾಗ ಆಕೆಗೆ ಬರೆದ ಪತ್ರದ ಪ್ರಕಾರ ನ್ಯಾಟನ್ರು ಆಕೆಯ “ಪ್ರೀತಿಯ ಮಾವ”ನಾಗಿದ್ದರು. ಮಕ್ಕಳಿರದಿದ್ದ ನ್ಯೂಟನ್ರು, ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಸಂಬಂಧಿಕರಿಗೆ ತಮ್ಮ ಆಸ್ತಿಗಳನ್ನು ಹಂಚಿ, ಮೃತ್ಯುಪತ್ರ ಬರೆಯದೇ ಮರಣಿಸಿದರು.
# ನ್ಯೂಟನ್ನ ಚಲನೆಯ ನಿಯಮಗಳು :
ನ್ಯೂಟನ್ನನ ಚಲನೆಯ ನಿಯಮಗಳು ಮೂರು ಭೌತಿಕ ನಿಯಮಗಳಾಗಿದ್ದು ಇವು ಒಟ್ಟಿಗೆ ಶಾಸ್ತ್ರೀಯ ಯಂತ್ರಶಾಸ್ತ್ರಕ್ಕೆ ಅಡಿಪಾಯ ಹಾಕಿವೆ. ಅವು ಕಾಯ ಮತ್ತು ಅದರ ಮೇಲೆ ವರ್ತಿಸುತ್ತಿರುವ ಶಕ್ತಿ ಮತ್ತು ಶಕ್ತಿಗನುಗುಣವಾಗಿ ಅದರ ಚಲನೆ ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ. ಸುಮಾರು ಮೂರು ಶತಮಾನಗಳ, ಹಿಂದೆ ಅವರು ಇದನ್ನು ಅನೇಕ ವಿಧಗಳಲ್ಲಿ ವಿವರಿಸಿದರು. ಈ ಕೆಳಗಿನಂತೆ ಅರ್ಥಗರ್ಭಿತವಾಗಿ ಸಾರಂಶಿಕರಿಸಲಾಗಿದೆ.
➤ ಮೊದಲನೇ ನಿಯಮ : ಒಂದು ಜಡತ್ವದ ಚೌಕಟ್ಟಿನಲ್ಲಿ, ವಸ್ತುವನ್ನು ವೀಕ್ಷಿಸಿದಾಗ ಬಾಹ್ಯ ಶಕ್ತಿಯಿಂದ ಪರಿಣಾಮಕ್ಕೊಳಗಾಗದ ಹೊರತು, ಅದು ಸ್ಥಿರ ಅಥವಾ ಸ್ಥಿರ ವೇಗದಲ್ಲಿ ಚಲಿಸುತ್ತಿರುತ್ತದೆ.
➤ ಎರಡನೆ ನಿಯಮ: F = ma: ವಸ್ತುವಿನ ಮೇಲೆ ಬಾಹ್ಯ ಶಕ್ತಿಗಳಿಂದಾದ ವೆಕ್ಟರ್ ಮೊತ್ತವು ವಸ್ತುವಿನ ದ್ರವ್ಯರಾಶಿಯನ್ನು ಅದರ ಒತ್ತಡದೇರಿಕೆಯೊಂದಿಗೆ ಗುಣಿಸಿದಾಗ ಬರುವ ಫಲಿತಾಂಶಕ್ಕೆ ಸಮಾನವಾಗಿರುತ್ತದೆ.
➤ ಮೂರನೇ ನಿಯಮ: ಒಂದು ದೇಹ ಎರಡನೇ ದೇಹದ ಮೇಲೆ ಒತ್ತಡ ಹೇರಿದರೆ, ಎರಡನೇ ದೇಹ ಏಕಕಾಲದಲ್ಲಿ ಮೊದಲ ದೇಹದ ಮೇಲೆ ವಿರುದ್ಧ ದಿಕ್ಕಿನಲ್ಲಿ ಮತ್ತು ಪರಿಮಾಣದಲ್ಲಿ ಸಮನಾಗಿರುವ ಒಂದು ಶಕ್ತಿಯನ್ನು ಬೀರುತ್ತದೆ.
ಚಲನೆಯ ಮೂರು ನಿಯಮಗಳನ್ನು ಮೊದಲು ನ್ಯೂಟನ್ ವಿವರಿಸಿದರು. ನಂತರ ಅನೇಕ ಭೌತಿಕ ವಸ್ತು ಮತ್ತು ವ್ಯವಸ್ಥೆಗಳ ಚಲನೆಯ ತನಿಖೆಯಲ್ಲಿ ಬಳಕೆಯಾಯಿತು. 1687 ರಲ್ಲಿ ಪ್ರಕಟವಾದ ಅವರ ಫಿಲಾಸೊಫೇ ನ್ಯಾಚುರಲೀಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾದಲ್ಲಿ (ನ್ಯಾಚುರಲ್ ಫಿಲಾಸಫಿ ಮ್ಯಾಥೆಮೆಟಿಕಲ್ ಪ್ರಿನ್ಸಿಪಲ್ಸ್), ಮೊದಲು ಸಂಕಲಿಸಲಾಗಿದೆ. ಉದಾಹರಣೆಗೆ, ಪಠ್ಯದ ಮೂರನೆಯ ಸಂಪುಟದಲ್ಲಿ, ನ್ಯೂಟನ್ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ನಿಯಮ ಸೇರಿ ಚಲನೆಯ ಈ ನಿಯಮಗಳು, ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳನ್ನು ವಿವರಿಸುತ್ತವೆಂದು ತೋರಿಸಿಕೊಟ್ಟರು.
➤ ಹೆಚ್ಚಿನ ಅಧ್ಯಯನಕ್ಕಾಗಿ :
# ಬಾಲ್ಯ ಮತ್ತು ಜೀವನ :
ನ್ಯೂಟನ್ಗೆ ಮೂರು ವರ್ಷವಾಗಿದ್ದಾಗ, ಆತನ ತಾಯಿ ಮರುಮದುವೆಯಾಗಿ, ತನ್ನ ಮಗನನ್ನು ಆತನ ತಾಯಿಯ ಕಡೆಯ ಅಜ್ಜಿ ಮಾರ್ಗೆರಿ ಐಸ್ಕಫ್ಳ ಆರೈಕೆಯಲ್ಲಿ ಬಿಟ್ಟು ತನ್ನ ನವಪತಿ ರೆವರೆಂಡ್ ಬರ್ನಾಬಸ್ ಸ್ಮಿತ್ರೊಡನೆ ಇರಲು ತೆರಳಿದರು. ಬಾಲಕ ಐಸಾಕ್ ತನ್ನ ಮಲತಂದೆಯನ್ನು ಇಷ್ಟಪಡದೇ, ಆತನನ್ನು ಮದುವೆಯಾದ ಕಾರಣ ತನ್ನ ತಾಯಿಯ ಮೇಲೆ ಶತೃತ್ವ ಬೆಳೆಸಿಕೊಂಡಿದ್ದುದಾಗಿ 19ನೇ ವಯಸ್ಸಿನ ತನಕ ಬರೆದಿಡಲಾದ ಪಾಪಗಳ ಪಟ್ಟಿಯಲ್ಲಿನ ಸಾಲಿನ ಮೂಲಕ ಶ್ರುತವಾಗುತ್ತದೆ: “ನನ್ನ ತಂದೆ ಹಾಗೂ ತಾಯಿ ಸ್ಮಿತ್ರನ್ನು ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಸಿದ್ದು.”
ಸುಮಾರು ಹನ್ನೆರಡನೇ ವರ್ಷದಿಂದ ಹದಿನೇಳನೆ ವರ್ಷದವರೆಗೆ, ನ್ಯೂಟನ್ರು ದ ಕಿಂಗ್ಸ್ ಸ್ಕೂಲ್, ಗ್ರಂಥಮ್ (ಅಲ್ಲಿನ ಗ್ರಂಥಾಲಯದ ಕಿಟಕಿಯ ಹೊಸ್ತಿಲಲ್ಲಿ ಇನ್ನೂ ಆತನ ಸಹಿಯನ್ನು ನೋಡಬಹುದು) ಎಂಬಲ್ಲಿ ಶಿಕ್ಷಣ ಪಡೆದನು. ಆತನನ್ನು ಶಾಲೆಯಿಂದ ಬಿಡಿಸಿದ ನಂತರ, ಅಕ್ಟೋಬರ್ 1659ರ ವೇಳೆಗೆ, ಆತನನ್ನು ವೂಲ್ಸ್ಥೋರ್ಪ್-ಬೈ-ಕೋಲ್ಸ್ಟರ್ವರ್ತ್ನಲ್ಲಿ ನೋಡಬಹುದಿತ್ತು. ಆತನ ಎರಡನೇ ಬಾರಿಗೆ ವಿಧವೆಯಾದ ತಾಯಿ, ಆತನನ್ನು ರೈತನನ್ನಾಗಿಸಲು ಪ್ರಯತ್ನಿಸುತ್ತಿದ್ದಳು. ಆತನು ಕೃಷಿಯನ್ನು ದ್ವೇಷಿಸುತ್ತಿದ್ದನು. ಕಿಂಗ್ಸ್ ಸ್ಕೂಲ್ನ ಬೋಧಕ ಹೆನ್ರಿ ಸ್ಟೋಕ್ಸ್, ಆತನ ವಿದ್ಯೆಯನ್ನು ಪೂರೈಸಲು ಅನುವಾಗುವಂತೆ, ಮತ್ತೆ ಶಾಲೆಗೆ ಕಳುಹಿಸಲು ಅವನ ತಾಯಿಯನ್ನು ಒಪ್ಪಿಸಿದನು. ಶಾಲೆ ಬಳಿಯ ಪುಂಡರ ಮೇಲಿನ ಸೇಡು ತೀರಿಸುವ ಉದ್ದೇಶದಿಂದ ಭಾಗಶಃ ಪ್ರೇರಿತನಾಗಿ, ಆತನು ಉನ್ನತ-ಶ್ರೇಯಾಂಕಿತ ವಿದ್ಯಾರ್ಥಿಯಾದನು.
ಜೂನ್ 1661ರಲ್ಲಿ, ಆತನನ್ನು ಕೇಂಬ್ರಿಡ್ಜ್ನ ಟ್ರಿನಿಟಿ ಮಹಾವಿದ್ಯಾಲಯ(ಕಾಲೇಜ್ಗೆ)ಕ್ಕೆ ಸೈಜರ್ ಆಗಿ – ಒಂದು ತರಹದ ಕೆಲಸ-ಶಿಕ್ಷಣದ ವ್ಯವಸ್ಥೆಯಡಿ ಸೇರಿಸಲಾಯಿತು. ಆ ಸಮಯದಲ್ಲಿ, ವಿದ್ಯಾಲಯದ ಪಾಠಗಳು, ಅರಿಸ್ಟಾಟಲ್ರ ಮೇಲೆ ಆಧಾರಿತವಾಗಿದ್ದವು, ಆದರೆ ನ್ಯೂಟನ್ ಆಧುನಿಕ ತತ್ವಜ್ಞಾನಿಗಳಾದ ಡೆಸ್ಕರ್ಟೆಸ್ ಮತ್ತು ಖಗೋಳಶಾಸ್ತ್ರಜ್ಞರಾದ ಕೊಪರ್ನಿಕಸ್, ಗೆಲಿಲಿಯೊ ಮತ್ತು ಕೆಪ್ಲರ್ರಂತಹಾ ವ್ಯಕ್ತಿಗಳ ಮುಂದುವರಿದ ವಿಚಾರಗಳ ಬಗ್ಗೆ ಓದಲು ಆರಿಸಿಕೊಂಡರು.
1665ರಲ್ಲಿ, ಆತನು ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ರಚಿಸಿ ಮುಂದೆ ಅನಂತಸೂಕ್ಷ್ಮ ಕಲನವಾದ ಗಣಿತ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ನ್ಯೂಟನ್ರು 1665ರ ಆಗಸ್ಟ್ನಲ್ಲಿ ಪದವಿ ಪಡೆದ ತಕ್ಷಣ ಮಹಾಮಾರಿ ಪ್ಲೇಗ್ನ ಮುಂಜಾಗ್ರತೆಗಾಗಿ, ವಿಶ್ವವಿದ್ಯಾಲಯವು ಮುಚ್ಚಿತು.
ಸಾಧಾರಣ ಕೇಂಬ್ರಿಡ್ಜ್ ವಿದ್ಯಾರ್ಥಿಯಾಗಿಯೇ, ನ್ಯೂಟನ್ರ ವೂಲ್ಸ್ಥೋರ್ಪ್ನ ಮನೆಯಲ್ಲಿನ ಮುಂದಿನ ಎರಡು ವರ್ಷಗಳ ಕಾಲ ನಡೆದ ಖಾಸಗಿ ಅಧ್ಯಯನಗಳು ಕಲನ, ದೃಗ್ವಿಜ್ಞಾನ ಮತ್ತು ಗುರುತ್ವಾಕರ್ಷಣೆಯ ನಿಯಮಗಳ ಅಭಿವೃದ್ಧಿಗೆ ಕಾರಣವಾದವು. 1667ರಲ್ಲಿ ಟ್ರಿನಿಟಿಯ ಫೆಲೋ ಆಗಿ ಕೇಂಬ್ರಿಡ್ಜ್ಗೆ ಮರಳಿದರು.
ನ್ಯೂಟನ್ರ ಗಣಿತಶಾಸ್ತ್ರದ ಮೇಲಿನ ಅಧ್ಯಯನಗಳು “ಆ ಕಾಲದಲ್ಲಿ ಅಭ್ಯಸಿಸುತ್ತಿದ್ದ ಗಣಿತಶಾಸ್ತ್ರದ ಪ್ರತಿಯೊಂದು ವಿಭಾಗವನ್ನು ಪ್ರತ್ಯೇಕವಾಗಿ ಮುನ್ನಡೆಸಿತು” ಎಂಬ ಅಭಿಪ್ರಾಯವಿದೆ. ವ್ಯತ್ಯಾಸದ ದರ ಅಥವಾ ಕಲನ ಎಂದು ಕರೆಯಲಾಗುವ ನ್ಯೂಟನ್ರ ಈ ವಿಷಯದ ಮೇಲಿನ ಮುಂಚಿನ ಅಧ್ಯಯನವನ್ನು ಈಗಲೂ ನೋಡಬಹುದು, ಉದಾಹರಣೆಗೆ, ಇತ್ತೀಚೆಗೆ ಪ್ರಕಟಿಸಿದ ನ್ಯೂಟನ್ರ ಗಣಿತಶಾಸ್ತ್ರದ ಪ್ರಬಂಧಗಳ ಭಾಗವಾದ ಅಕ್ಟೋಬರ್ 1666ರ ಹಸ್ತಪ್ರತಿಯಲ್ಲಿದೆ. ಅವರ ಗಣಿತಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಮತ್ತೊಂದು ವಿಷಯವೆಂದರೆ ಅಪರಿಮಿತ ಸರಣಿ. “ಡೆ ಅನಾಲಿಸಿ ಪೆರ್ ಎಕ್ವೇಷನ್ಸ್ ನ್ಯೂಮರೋ ಟರ್ಮಿನೊರಮ್ ಇನ್ಫಿನಿಟಾಸ್” (“ಸಮೀಕರಣಗಳ ಮೂಲಕ ವಿಶ್ಲೇಷಣೆಯಲ್ಲಿ ಪರಿಮಾಣಗಳ ಸಂಖ್ಯೆ ಅಪರಿಮಿತ”) ಎಂದು ಬರೆದಿದ್ದ ನ್ಯೂಟನ್ರ ಹಸ್ತಪ್ರತಿಯನ್ನು ಐಸಾಕ್ ಬಾರ್ರೋರವರು ಜಾನ್ ಕಾಲಿನ್ಸ್ರಿಗೆ ಜೂನ್ 1669ರಲ್ಲಿ ಕಳಿಸಿದ್ದರು: ಆಗಸ್ಟ್ 1669ರಲ್ಲಿ ಬಾರ್ರೋರವರು ಕಾಲಿನ್ಸ್ರವರಿಗೆ ಅದರ ಲೇಖಕರ ಬಗ್ಗೆ “ಆತ ಶ್ರೀ ನ್ಯೂಟನ್, ನಮ್ಮ ವಿದ್ಯಾಲಯದ ಓರ್ವ ಫೆಲೊ, ಚಿಕ್ಕವಯಸ್ಸಿನವರಾಗಿದ್ದರೂ ಅದ್ಭುತ ಮೇಧಾವಿ ಹಾಗೂ ಈ ವಿಷಯಗಳಲ್ಲಿ ತಜ್ಞತೆ ಹೊಂದಿದ್ದಾರೆ” ಎಂದು ಪರಿಚಯಿಸಿದರು.
ನ್ಯೂಟನ್ರು ನಂತರ ಲೇಬಿನಿಜ್ರೊಂದಿಗೆ ಅನಂತಸೂಕ್ಷ್ಮ ಕಲನದ ಬೆಳವಣಿಗೆಯಲ್ಲಿನ ಆದ್ಯತೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಬಹಳಷ್ಟು ಆಧುನಿಕ ಇತಿಹಾಸಕಾರರ ಪ್ರಕಾರ ನ್ಯೂಟನ್ ಮತ್ತು ಲೇಬಿನಿಜ್ ಇಬ್ಬರೂ ಅನಂತಸೂಕ್ಷ್ಮ ಕಲನವನ್ನು ಸ್ವತಂತ್ರವಾಗಿ, ಆದರೆ ವಿಭಿನ್ನ ಅಂಕನ ಪದ್ಧತಿಗಳೊಂದಿಗೆ ಅಭಿವೃದ್ಧಿಪಡಿಸಿದರು. ಪ್ರಾಸಂಗಿಕವಾಗಿ ನ್ಯೂಟನ್ರು ಇದರ ಬಗ್ಗೆ 1693ರವರೆಗೆ ಏನನ್ನೂ ಪ್ರಕಟಿಸಿರಲಿಲ್ಲ, ಹಾಗೂ 1704ರವರೆಗೆ ಪೂರ್ಣ ಹೇಳಿಕೆ ನೀಡಿರಲಿಲ್ಲ, ಆದರೆ ಲೇಬಿನಿಜ್ರು 1684ರಲ್ಲಿ ತಮ್ಮ ವಿಧಾನಗಳ ಪೂರ್ಣ ವಿವರಣೆಯನ್ನು ಪ್ರಕಟಿಸಲು ಆರಂಭಿಸಿದ್ದರು. (ಲೇಬಿನಿಜ್ರ ಅಂಕನ ಪದ್ಧತಿ ಮತ್ತು “ವಿಕಲನ ವಿಧಾನ”ಗಳು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಅನುಕೂಲಕರ ಅಂಕನಪದ್ಧತಿಗಳು ಎಂಬ ಅಭಿಪ್ರಾಯವಿದ್ದು ಐರೋಪ್ಯ ಗಣಿತಜ್ಞರು, ಹಾಗೂ 1820ರ ನಂತರ ಅಥವಾ ಆಸುಪಾಸಿನಲ್ಲಿ ಬ್ರಿಟಿಷ್ ಗಣಿತಜ್ಞರುಗಳಿಂದ ಅನುಸರಿಸಲ್ಪಟ್ಟಿದೆ.) ಆದಾಗ್ಯೂ ಆ ತರಹದ ಅಭಿಪ್ರಾಯದಲ್ಲಿ, ನ್ಯೂಟನ್ರ ಕಾಲದ ಮತ್ತು ಆಧುನಿಕ ಕಾಲದ ವಿಮರ್ಶಕರು ನ್ಯೂಟನ್ರ ಪ್ರಿನ್ಸಿಪಿಯಾ ದ ಪ್ರಥಮ ಪುಸ್ತಕ/Book 1ದಲ್ಲಿ (1687ರಲ್ಲಿ ಪ್ರಕಟವಾಗಿತ್ತು) ಮತ್ತು ಅದರ ಪೂರ್ವಭಾವಿ ಹಸ್ತಪ್ರತಿಗಳಾದ 1684ರ ಡೆ ಮೊಟು ಕಾರ್ಪೋರಂ ಇನ್ ಜೀರಂ (“ಕಕ್ಷೆಯಲ್ಲಿನ ವಸ್ತುಗಳ ಚಲನೆಯ ಬಗ್ಗೆ”)ಗಳ ವಿಚಾರದಲ್ಲಿ ಗಮನ ಸೆಳೆದ ಹಾಗೆ ಕಲನದ ವಿಷಯವನ್ನು ಗಮನಿಸುವುದನ್ನು ಬಿಡಲಾಗಿತ್ತು.
ನಾವು ತಿಳಿದ ಹಾಗೆ ಪ್ರಿನ್ಸಿಪಿಯಾ ವನ್ನು ಕಲನದ ಭಾಷೆಯಲ್ಲಿ ಬರೆದಿರಲಿಲ್ಲ ಅಥವಾ ನ್ಯೂಟನ್ರ (ನಂತರದ) ‘ಬಿಂದು/ಡಾಟ್’ ಅಂಕನಪದ್ಧತಿಯಲ್ಲಿ ಬರೆದಂತೆ ಇರಲಿಲ್ಲ. ಆದರೆ ನ್ಯೂಟನ್ರ ಅಧ್ಯಯನವು ನಶಿಸುವ ಅಲ್ಪ ಪ್ರಮಾಣದ ಅನುಪಾತಗಳ ಮಿತಿಯ ಮೇಲೆ ಆಧಾರಿತವಾದ ಜ್ಯಾಮಿತಿಯ ರೂಪದಲ್ಲಿ ಅನಂತಸೂಕ್ಷ್ಮ ಕಲನವನ್ನು ವ್ಯಾಪಕವಾಗಿ ಬಳಸುತ್ತದೆ : ನ್ಯೂಟನ್ರು ಪ್ರಿನ್ಸಿಪಿಯಾ ದಲ್ಲೇ ‘ಮೊದಲ ಹಾಗೂ ಕೊನೆಯ ಅನುಪಾತದ ವಿಧಾನ’ ಎಂಬ ಹೆಸರಿನಲ್ಲಿ ಇದನ್ನು ನಿದರ್ಶಿಸಿ, ತನ್ನ ಪ್ರತಿಪಾದನೆಯನ್ನು ಇದೇ ರೀತಿಯಲ್ಲಿ ಏಕೆ ಹಾಕಿದ್ದೆಂದು ‘ಈ ಮೂಲಕ ಅವಿಭಾಜ್ಯ ಸಂಖ್ಯೆಗಳ ವಿಧಾನದ ಮೂಲಕ ಅದನ್ನೇ ಮಾಡಲಾಗುತ್ತದೆ’ ಎಂಬ ಷರಾದೊಂದಿಗೆ ವಿವರಿಸಿದ್ದಾರೆ. ಈ ವಿವರಣೆಗಳಿಂದಾಗಿಯೇ ಪ್ರಿನ್ಸಿಪಿಯಾ ವನ್ನು ಆಧುನಿಕ ಕಾಲದಲ್ಲಿ “ಅನಂತಸೂಕ್ಷ್ಮ ಕಲನದ ಸಿದ್ಧಾಂತ ಹಾಗೂ ಅನ್ವಯಗಳೊಂದಿಗೆ ಸಮೃದ್ಧವಾದ ಪುಸ್ತಕ” ಎಂದು ಹಾಗೂ “ಲೆಕ್ವೆಲ್ ಎಸ್ಟ್ ಪ್ರೆಸ್ಕ್ಯು ಟೂಟ್ ಡೆ ಸೆ ಕ್ಯಾಲ್ಕಲ್” (‘ಇದರಲ್ಲಿರುವುದೆಲ್ಲಾ ಹೆಚ್ಚುಕಡಿಮೆ ಕಲನವೇ’) ಎಂದು ನ್ಯೂಟನ್ರ ಕಾಲ[೨೨]ದಲ್ಲಿ ಅಭಿಪ್ರಾಯಪಡಲಾಗಿತ್ತು. “ಅನಂತಸೂಕ್ಷ್ಮ ಸಣ್ಣ ವಸ್ತುಗಳ ಒಂದು ಅಥವಾ ಹೆಚ್ಚಿನ” ಎಂಬ ವಿಷಯವನ್ನೊಳಗೊಂಡ ವಿಧಾನಗಳನ್ನು ನ್ಯೂಟನ್/ಅವರ 1684ರಲ್ಲಿನ[೨೩] ಡೆ ಮೊಟು ಕಾರ್ಪೊರಂ ಇನ್ ಜೀರಂ ಮತ್ತು “1684ಕ್ಕೆ ಮುಂಚಿನ ಎರಡು ದಶಕಗಳಲ್ಲಿ”[೨೪] ಚಲನೆಯ ಬಗೆಗಿನ ಪ್ರಬಂಧಗಳಲ್ಲಿ ನ್ಯೂಟನ್ರು ಬಳಸಿದ್ದರು.
ನ್ಯೂಟನ್ರು ತಮ್ಮ ಕಲನವನ್ನು ಪ್ರಕಟಿಸಲು ಇಚ್ಛೆಪಡದ ಮೂಲ ಕಾರಣ ತಮ್ಮನ್ನು ಆ ಬಗ್ಗೆ ಅಪಹಾಸ್ಯ ಮಾಡುತ್ತಾರೆಂಬ ಭಯ ಎನ್ನಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ನ್ಯೂಟನ್ರು ಮೊದಲಿಂದಲೂ ನ್ಯೂಟನ್ರ ಗುರುತ್ವಾಕರ್ಷಣ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಸ್ವಿಸ್ ಗಣಿತಜ್ಞ ನಿಕೊಲಸ್ ಫಾಟಿಯೊ ಡೆ ಡುಯಿಲಿಯರ್ರೊಂದಿಗೆ ಸಮೀಪದ ಬಾಂಧವ್ಯ ಹೊಂದಿದ್ದರು. 1691ರಲ್ಲಿ ಡುಯಿಲಿಯರ್ ನ್ಯೂಟನ್ರ ಪ್ರಿನ್ಸಿಪಿಯಾ ದ ನವೀನ ಆವೃತ್ತಿ ಸಿದ್ಧ ಮಾಡಲು ಯೋಜಿಸಿದ್ದರು, ಆದರೆ ಅದನ್ನು ಪೂರೈಸಲಿಲ್ಲ. ಆದರೆ, 1693ರಲ್ಲಿ ಇವರಿಬ್ಬರ ನಡುವಿನ ಬಾಂಧವ್ಯವು ಬದಲಾಯಿತು. ಆ ಸಮಯದಲ್ಲಿ, ಡುಯಿಲಿಯರ್ ಲೇಬಿನಿಜ್ ರೊಂದಿಗೆ ಅನೇಕ ಪತ್ರವ್ಯವಹಾರಗಳನ್ನು ಸಹಾ ನಡೆಸಿದ್ದರು.
1699ರಿಂದ ರಾಯಲ್ ಸೊಸೈಟಿಯ ಇತರ ಸದಸ್ಯರು (ನ್ಯೂಟನ್ರು ಅದರ ಸದಸ್ಯರಾಗಿದ್ದರು) ಲೇಬಿನಿಜ್ರ ಮೇಲೆ ಕೃತಿಚೌರ್ಯದ ಆಪಾದನೆ ಹೊರಿಸಲಾರಂಭಿಸಿದರು, 1711ರಲ್ಲಿ ಈ ವಿವಾದವು ಪೂರ್ಣ ಪ್ರಮಾಣದಲ್ಲಿ ಭುಗಿಲೆದ್ದಿತು. ನ್ಯೂಟನ್ರ ರಾಯಲ್ ಸೊಸೈಟಿ ನಡೆಸಿದ ಅಧ್ಯಯನದಲ್ಲಿ ನ್ಯೂಟನ್ರು ನಿಜವಾದ ಶೋಧಕರೆಂದು ಲೇಬಿನಿಜ್ರನ್ನು ಓರ್ವ ಮೋಸಗಾರರೆಂದು ಘೋಷಿಸಿತು. ನ್ಯೂಟನ್ರು ಸ್ವತಃ ಅಧ್ಯಯನದ ಮುಕ್ತಾಯದಲ್ಲಿ ಲೇಬಿನಿಜ್ರನ್ನು ಟೀಕಿಸಿದ್ದರೆಂದು ತಿಳಿದ ಮೇಲೆ ಈ ಅಧ್ಯಯನವನ್ನೇ ಅನುಮಾನಿಸಲಾಯಿತು. ಆಗ ಆರಂಭಗೊಂಡ ಕಟುವಾದ ನ್ಯೂಟನ್ v. ಲೇಬಿನಿಜ್ ಕಲನ ವಿವಾದವು, 1716ರಲ್ಲಿ ಲೇಬಿನಿಜ್ರ ಮರಣದವರೆಗೂ ನಡೆದು ನ್ಯೂಟನ್ ಮತ್ತು ಲೇಬಿನಿಜ್ರ ಮನಶ್ಶಾಂತಿಯನ್ನು ಕಿತ್ತುಕೊಂಡಿತ್ತು.
ಸಾಮಾನ್ಯವಾಗಿ ನ್ಯೂಟನ್ರನ್ನು ಯಾವುದೇ ಘಾತಕ್ಕೆ ಅನ್ವಯವಾಗುವ ಸಾಮಾನ್ಯೀಕರಿಸಿದ ದ್ವಿಪದ ಪ್ರಮೇಯದ ಶೋಧಕರೆಂದು ಗೌರವಿಸಲಾಗುತ್ತದೆ. ನ್ಯೂಟನ್ರ ಅನನ್ಯತೆ, ನ್ಯೂಟನ್ರ ವಿಧಾನ, ಘನ ಸಮತಲ ವಕ್ರಗಳ ವರ್ಗೀಕರಣ (ಎರಡು ಚರಾಕ್ಷರಗಳಲ್ಲಿನ ಮೂರನೇ ದರ್ಜೆಯ ಬಹುಪದೀಯ ಪರಿಮಾಣಗಳು), ಪರಿಮಿತ ವ್ಯತ್ಯಾಸಗಳ ಸಿದ್ಧಾಂತಕ್ಕೆ ಗಮನಾರ್ಹ ಕೊಡುಗೆ ನೀಡಿದರಲ್ಲದೇ, ಘಾತಸೂಚಿಗಳನ್ನು ಬಳಸಿದ ಹಾಗೂ ಡಿಯೊಫಾಂಟೈನ್ ಸಮೀಕರಣಕ್ಕೆ ಪರಿಹಾರಗಳನ್ನು ನೀಡಲು ಭುಜಯುಗ್ಮ ರೇಖಾಗಣಿತವನ್ನು ಬಳಸಿದ ಪ್ರಥಮರಾಗಿದ್ದಾರೆ. ಹರಾತ್ಮಕ ಸರಣಿಗಳ ಭಾಗಶಃ ಸಂಕಲನವನ್ನು ಪ್ರತಿಘಾತಗಳನ್ನು ಬಳಸಿ ಅಂದಾಜಿಸಿದ್ದರು (ಯೂಲರ್’ರ ಸಂಕಲನ ಸೂತ್ರದ ಪೂರ್ವಗಾಮಿ), ಮತ್ತು ಘಾತ ಸರಣಿಗಳನ್ನು ಆತ್ಮವಿಶ್ವಾಸದಿಂದ ಬಳಸಿದ ಹಾಗೂ ಪ್ರತ್ಯಾವರ್ತಿಸಿದ ಪ್ರಥಮ ವ್ಯಕ್ತಿಯೂ ಹೌದು.
ಲುಕಾಸಿಯಾದ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ 1669ರಲ್ಲಿ ಆಯ್ಕೆಯಾದರು. ಆ ದಿನಗಳಲ್ಲಿ, ಕೇಂಬ್ರಿಡ್ಜ್ನ ಅಥವಾ ಆಕ್ಸ್ಫರ್ಡ್ನ ಯಾವುದೇ ಫೆಲೊ ದೀಕ್ಷೆ ಪಡೆದ ಆಂಗ್ಲಿಕನ್ ಪಾದ್ರಿಯಾಗಿರಬೇಕಿತ್ತು. ಆದಾಗ್ಯೂ ಲುಕಾಸಿಯಾದ ಪ್ರಾಧ್ಯಾಪಕ ಹುದ್ದೆಯ ನಿಯಮಗಳ ಪ್ರಕಾರ ಚರ್ಚ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬಾರದು ಎಂದಿತ್ತು (ವಿಜ್ಞಾನಕ್ಕೆಂದು ಹೆಚ್ಚಿನ ಸಮಯ ಮೀಸಲಿಡಲೆಂದಿರಬಹುದು). ನ್ಯೂಟನ್ರು ದೀಕ್ಷೆ ಪಡೆಯಬೇಕೆಂಬ ಅಗತ್ಯದಿಂದ ವಿನಾಯಿತಿ ನೀಡಬೇಕೆಂದು ವಾದ ಮಾಡಿದರು, ಅನುಮತಿ ನೀಡಬೇಕಿದ್ದ ಚಾರ್ಲ್ಸ್ II ಈ ವಾದವನ್ನು ಒಪ್ಪಿದರು. ಹಾಗಾಗಿ ನ್ಯೂಟನ್ರ ಧಾರ್ಮಿಕ ನಿಲುವುಗಳು ಹಾಗೂ ಆಂಗ್ಲಿಕನ್ ಸಂಪ್ರದಾಯಶರಣತೆಗಳ ನಡುವಿನ ಸಂಘರ್ಷವು ನಿವಾರಣೆಯಾಯಿತು.
1670ರಿಂದ 1672ರವರೆಗೆ, ನ್ಯೂಟನ್ರು ದೃಗ್ವಿಜ್ಞಾನದ ಮೇಲೆ ಉಪನ್ಯಾಸ ನೀಡಿದರು/ಉಪನ್ಯಾಸಕರಾಗಿದ್ದರು. ಈ ಅವಧಿಯಲ್ಲಿ ಅವರು ಬೆಳಕಿನ ವಕ್ರೀಭವನವನ್ನು ಪರಿಶೋಧಿಸಿದರು, ಪ್ರಿಸಮ್/ಅಶ್ರಗ ಶ್ವೇತ ಬೆಳಕನ್ನು ವರ್ಣಗಳ ರೋಹಿತವನ್ನಾಗಿ ವಿಂಗಡಿಸುತ್ತದೆ ಹಾಗೂ ಮಧ್ಯದಲ್ಲಿ ಮಸೂರವನ್ನಿಟ್ಟು ಎರಡನೇ ಪ್ರಿಸಮ್/ಅಶ್ರಗವನ್ನಿಟ್ಟರೆ, ಅದು ಬಹುವರ್ಣದ ರೋಹಿತವನ್ನು ಮತ್ತೆ ಶ್ವೇತ ಬೆಳಕಾಗಿ ಒಂದುಗೂಡಿಸುತ್ತದೆ ಎಂದು ಪ್ರಮಾಣೀಕರಿಸಿದರು.
ಅವರು ಬಣ್ಣದ ಬೆಳಕು ತನ್ನ ಲಕ್ಷಣಗಳನ್ನು ಬದಲಾಯಿಸುವುದಿಲ್ಲವೆಂದು, ಬಣ್ಣದ ಪ್ರಭೆಯೊಂದನ್ನು ಪ್ರತ್ಯೇಕಿಸಿ ವಿವಿಧ ವಸ್ತುಗಳ ಮೇಲೆ ಹಾಯಿಸಿ ತೋರಿಸಿದರು. ನ್ಯೂಟನ್ರು ಪ್ರತಿಫಲಿಸಿದಾಗಲಿ ಅಥವಾ ಚದುರಿದಾಗಲಿ ಅಥವಾ ಪಸರಿಸಿದಾಗಾಗಲಿ ಅದರ ವರ್ಣವು ಬದಲಾಗದೇ ಇರುವುದನ್ನು ತೋರಿಸಿದರು. ಇದರಿಂದಾಗಿ ಅವರು ಬಣ್ಣದ ರಚನೆಯು ಮುಂಚೆಯೇ ವರ್ಣಮಯವಾಗಿರುವ ಬೆಳಕಿನೊಡನೆ ವರ್ತಿಸುವುದರಿಂದಾಗಿ ಆಗುವುದೇ ಹೊರತು ವಸ್ತುಗಳು ತಮಗೆ ತಾವೇ ವರ್ಣವನ್ನು ಹೊಂದಿರುವುದಿಲ್ಲ ಎಂಬ ನಿರ್ಣಯಕ್ಕೆ ಬಂದರು. ಇದನ್ನು ನ್ಯೂಟನ್ರ ವರ್ಣ ಸಿದ್ಧಾಂತ ಎನ್ನಲಾಗುತ್ತದೆ.
ಈ ಅಧ್ಯಯನದಿಂದ ಯಾವುದೇ ಪ್ರತಿಫಲಿತ ದೂರದರ್ಶಕದ ಮಸೂರವು ಬೆಳಕಿನ ಚದುರುವಿಕೆಯಿಂದಾಗುವ ವರ್ಣಗಳ ಪ್ರಭೆಯ ಸಮಸ್ಯೆ ಎದುರಿಸುತ್ತದೆ ಎಂಬ ನಿರ್ಣಯಕ್ಕೆ ಬಂದರು(ವರ್ಣೋನ್ಮಾದ), ಹಾಗೂ ಇದಕ್ಕೆ ಮಾದರಿಯಾಗಿ ಅವರು ಈ ಸಮಸ್ಯೆಯ ನಿವಾರಕವಾಗಿ ಕನ್ನಡಿಯೊಂದನ್ನು ಬಳಸಿದ ದೂರದರ್ಶಕವನ್ನು ತಯಾರಿಸಿದರು. ವಾಸ್ತವವಾಗಿ ಕಾರ್ಯತಃ ಇಂದಿಗೆ ನ್ಯೂಟೊನಿಯನ್ ದೂರದರ್ಶಕ, ಎಂದು ಖ್ಯಾತವಾಗಿರುವ ಪ್ರತಿಫಲಿತ ದೂರದರ್ಶಕದ ನಿರ್ಮಾಣವು, ಸಮರ್ಪಕ ಕನ್ನಡಿ ವಸ್ತುವಿನ ಗುರುತಿಸುವಿಕೆ ಹಾಗೂ ಆಕಾರ ನೀಡುವ ತಂತ್ರದ ಸಮಸ್ಯೆಯ ಪರಿಹಾರದ ಹುಡುಕಾಟದಲ್ಲಿರುವಾಗ ಆಯಿತು. ನ್ಯೂಟನ್ರು ತಮ್ಮ ದೂರದರ್ಶಕಗಳ ದೃಗ್ವಿಜ್ಞಾನ ಗುಣಮಟ್ಟವನ್ನು ನಿರ್ಧರಿಸಲು ನ್ಯೂಟನ್ರ ರಿಂಗ್ಗಳನ್ನು ಬಳಸಿ ಐಚ್ಛಿಕ ಸಂಯೋಜನೆಯ ಹೆಚ್ಚು ಪ್ರತಿಫಲಿಸುವ ಪ್ರತಿಫಲನ ಲೋಹದಿಂದ ಉಜ್ಜಿ ತನ್ನದೇ ರೀತಿಯ ಕನ್ನಡಿಗಳನ್ನು ತಯಾರಿಸಿದರು.
1668ರ ] ಕೊನೆಯಲ್ಲಿ ಪ್ರಥಮ ಪ್ರತಿಫಲಿತ ದೂರದರ್ಶಕ ವನ್ನು ನಿರ್ಮಿಸಲು ಸಾಧ್ಯವಾಯಿತು. 1671ರಲ್ಲಿ ರಾಯಲ್ ಸೊಸೈಟಿಯು ಅವರ ಪ್ರತಿಫಲಿತ ದೂರದರ್ಶಕದ ಪ್ರದರ್ಶನವನ್ನು ಕೋರಿತು. ಅವರ ಆಸಕ್ತಿಯು ಅವರನ್ನು ಹುರಿದುಂಬಿಸಿ ಆನ್ ಕಲರ್ ಎಂಬ ನಿಬಂಧವನ್ನು ಪ್ರಕಟಿಸುವಂತೆ ಮಾಡಿತು, ಅದನ್ನು ನಂತರ ಅವರು ಆಪ್ಟಿಕ್ಸ್ ಪುಸ್ತಕ ವಾಗಿ ವಿಸ್ತರಿಸಿದರು. ರಾಬರ್ಟ್ ಹುಕ್ರು ನ್ಯೂಟನ್ರ ಕೆಲ ಆಲೋಚನೆಗಳನ್ನು ಟೀಕಿಸಿದ್ದರಿಂದ, ನ್ಯೂಟನ್ರು ಎಷ್ಟು ನೊಂದುಕೊಂಡರೆಂದರೆ ಸಾರ್ವಜನಿಕ ಚರ್ಚೆಯಿಂದಲೇ ಹೊರಗುಳಿದರು.
1679-80ರಲ್ಲಿ, ಹುಕ್ರು ರಾಯಲ್ ಸೊಸೈಟಿಯ ಪತ್ರವ್ಯವಹಾರದ ನಿರ್ವಾಹಕರೆಂದು ನೇಮಕಗೊಂಡಾಗ ರಾಯಲ್ ಸೊಸೈಟಿಯ ವ್ಯವಹಾರಗಳಲ್ಲಿನ ನ್ಯೂಟನ್ರ ಪಾತ್ರದ ಬಗ್ಗೆ ಪತ್ರವ್ಯವಹಾರವನ್ನು ಆರಂಭಿಸಿದಾಗ ನ್ಯೂಟನ್ ಮತ್ತು ಹುಕ್ ಸಣ್ಣ ವಾಗ್ವಾದ ರೂಪದ ವಿಚಾರ ವಿನಿಮಯ ನಡೆಸಿದರು, ಇದರಿಂದಾಗಿ ನ್ಯೂಟನ್ರು ಗ್ರಹಗಳ ಕಕ್ಷೆಗಳ ಅಂಡಾಕೃತಿಯು ತ್ರಿಜ್ಯ ಸದಿಶದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುವ ಕೇಂದ್ರಗಾಮಿ ಬಲದಿಂದಾಗಿರುತ್ತದೆ ಎಂಬುದನ್ನು ಸಾಕ್ಷ್ಯಾಧಾರಿತವಾಗಿ ನಿರೂಪಿಸುವ (ನ್ಯೂಟನ್ರ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ – ಇತಿಹಾಸ ಮತ್ತು ಡೆ ಮೊಟು ಕಾರ್ಪೊರಂ ಇನ್ ಜೀರಂ ಅನ್ನು ನೋಡಿರಿ) ಪ್ರಚೋದನೆಗೆ ಒಳಗಾದರು. ಆದರೆ ಹುಕ್ ರ ಮರಣದವರೆಗೂ ಇಬ್ಬರ ನಡುವಿನ ಬಾಂಧವ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ.
ನ್ಯೂಟನ್ರು ಬೆಳಕು, ಅಂಶಗಳು ಅಥವಾ ಕಣಗಳಿಂದಾಗಿದ್ದು ಸಾಂದ್ರ ಮಾಧ್ಯಮದ ಮೂಲಕ ರಭಸದಿಂದ ಹಾಯಿಸಿದರೆ ವಕ್ರೀಭವಗೊಳ್ಳುತ್ತವೆ ಎಂಬ ವಾದ ಮಂಡಿಸಿದ್ದರು. ಅವರು ಪ್ರತಿಫಲನದ ಪುನರಾವರ್ತಿತ ನಮೂನೆ/ಮಾದರಿಯನ್ನು ಮತ್ತು ತೆಳು ಪದರ/ಫಿಲ್ಮ್ (ಆಪ್ಟಿಕ್ಸ್ Bk.II, Props. 12),ಗಳ ಮೂಲಕ ಪ್ರಸರಿತಗೊಳ್ಳುವುದನ್ನು ವಿವರಿಸಲು ಶಬ್ದ ಮಾದರಿಯ ತರಂಗಗಳನ್ನು ಬಳಸುವ ಯೋಚನೆಯ ಅಂಚಿನಲ್ಲಿದ್ದರು, ಆದರೂ ಪ್ರೇರಿತ ಕಣಗಳನ್ನು ಪ್ರತಿಫಲಿಸುವಂತೆ ಅಥವಾ ಪಸರಿಸುವಂತೆ(Props.13) ಮಾಡುವ ತಮ್ಮ ‘ಫಿಟ್ಸ್’ ಸಿದ್ಧಾಂತವನ್ನು ಉಳಿಸಿಕೊಂಡರು. ನಂತರ ಭೌತವಿಜ್ಞಾನಿಗಳು ಬೆಳಕಿನ ಸಂಪೂರ್ಣವಾಗಿ ತರಂಗಮಾದರಿಯ ವಿವರಣೆಯ ವ್ಯತಿಕರಣ ನಮೂನೆಗಳನ್ನು ಹಾಗೂ ಸಾಮಾನ್ಯ ವಿವರ್ತನೆಯ ಸಂಗತಿಯನ್ನು ವಿವರಿಸಲು ಆದ್ಯತೆ ನೀಡಿದರು. ಇಂದಿನ ಕ್ವಾಂಟಂ ಯಂತ್ರಶಾಸ್ತ್ರದಲ್ಲಿ, ಫೋಟಾನ್ಗಳು ಮತ್ತು ತರಂಗ ಕಣದ ಉಭಯತ್ವಗಳು ನ್ಯೂಟನ್ರ ಬೆಳಕಿನ ಅರ್ಥೈಸುವಿಕೆಗೆ ಕೇವಲ ಅಲ್ಪ ಪ್ರಮಾಣದ ಹೋಲಿಕೆ ಹೊಂದಿವೆ.
1675ರ ತಮ್ಮ ಬೆಳಕಿನ ಬಗೆಗಿನ ಕಲ್ಪನೆ ಯಲ್ಲಿ, ನ್ಯೂಟನ್ರು ಕಣಗಳ ನಡುವೆ ಶಕ್ತಿಯ ರವಾನೆಯಲ್ಲಿ ಈಥರ್ನ ಪಾತ್ರವಿದೆ ಎಂಬ ಆಧಾರವನ್ನಿಟ್ಟುಕೊಂಡಿದ್ದರು. ಬ್ರಹ್ಮವಿದ್ಯಾವಾದಿ ಹೆನ್ರಿ ಮೋರ್/ಮೂರ್ರ ಸಂಪರ್ಕವು ರಸಸಿದ್ಧಾಂತದ ಅವರ ಆಸಕ್ತಿಯನ್ನು ಮರಳಿಸಿತು. ಈಥರ್ನ ಬದಲಾಗಿ ಕಣಗಳ ನಡುವಿನ ಆಕರ್ಷಣೆ ಹಾಗೂ ವಿಕರ್ಷಣೆಯ ವಿಚಾರದಲ್ಲಿ ರಸತಂತ್ರದ ಆಲೋಚನಾ ಶೈಲಿಯ ನಿಗೂಢ ಶಕ್ತಿಗಳ ಪ್ರಭಾವವನ್ನು ಕಲ್ಪಿಸಿದರು. ನ್ಯೂಟನ್ರ ರಸಸಿದ್ಧಾಂತದ ಬಗೆಗಿನ ಅನೇಕ ಲೇಖನಗಳನ್ನು ಸಂಪಾದಿಸಿದ್ದ ಜಾನ್ ಮೇನರ್ಡ್ ಕೀನೆಸ್ರು ನೀಡಿದ ಹೇಳಿಕೆ ಹೀಗಿತ್ತು “ನ್ಯೂಟನ್ರು ಕಾರಣ ಯುಗದ ಮೊದಲಿಗರಲ್ಲ; ಅವರು ಮಾಂತ್ರಿಕ ಯುಗದ ಕೊನೆಯವರು.ನ್ಯೂಟನ್ರ ರಸಸಿದ್ಧಾಂತದ ಬಗೆಗಿನ ಆಸಕ್ತಿಯನ್ನು ವಿಜ್ಞಾನಕ್ಕೆ ಅವರ ಕೊಡುಗೆಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ; ಆದಾಗ್ಯೂ, ಅವರು ಸ್ಪಷ್ಟವಾಗಿಯೇ ರಸತಂತ್ರದ ಪ್ರಯೋಗಗಳನ್ನು ತ್ಯಜಿಸಿದ್ದರು.[೫] (ಅದು ರಸಸಿದ್ಧಾಂತ ಮತ್ತು ವಿಜ್ಞಾನದ ನಡುವೆ ಸ್ಪಷ್ಟ ಪ್ರತ್ಯೇಕತೆ ಕಂಡುಕೊಂಡಿಲ್ಲದ ಸಮಯವಾಗಿತ್ತು.) ಅವರು ದೂರ ನಿರ್ವಾತದಲ್ಲಿ ಶಕ್ತಿಯ ಪ್ರಭಾವದ ನಿಗೂಢತ್ವವನ್ನು ಅಲಕ್ಷಿಸಿದ್ದಲ್ಲಿ, ಅವರು ತಮ್ಮ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ರಚಿಸಲಾಗುತ್ತಿರಲಿಲ್ಲ. (ಇದನ್ನೂ ನೋಡಿ ಐಸಾಕ್ ನ್ಯೂಟನ್ರ ನಿಗೂಢ ಅಧ್ಯಯನಗಳು.)
1704ರಲ್ಲಿ ನ್ಯೂಟನ್ರು ತಮ್ಮ ಬೆಳಕಿನ ಕಣವಾದವನ್ನು ಮಂಡಿಸಿದ್ದ ಆಪ್ಟಿಕ್ಸ್ ಪುಸ್ತಕ ವನ್ನು ಪ್ರಕಟಿಸಿದರು. ಅವರು ಬೆಳಕನ್ನು ವಿಪರೀತ ಸೂಕ್ಷ್ಮ ಕಣಗಳಿಂದಾಗಿದೆ, ಹಾಗೂ ಸಾಮಾನ್ಯ ವಸ್ತುವು ಸಾಂದ್ರವಾದ ಕಣಗಳಿಂದಾಗಿದೆ ಎಂಬುದನ್ನು ರಸತಂತ್ರದ ಒಂದು ವಿಧದ ಪರಿವರ್ತನೆಯ ಮೂಲಕ ಊಹಿಸಿದರು “ಸಾಂದ್ರ ಕಾಯಗಳು ಮತ್ತು ಬೆಳಕು ಪರಸ್ಪರ ಪರಿವರ್ತಿತವಾಗಬಲ್ಲವೇ, ಹಾಗೂ ಕಾಯಗಳು ತಮ್ಮ ಸಂಯೋಜನೆಯೊಳಗೆ ಪ್ರವೇಶಿಸಿದ ಬೆಳಕಿನ ಕಣಗಳಿಂದ ಹೆಚ್ಚಿನ ಚಟುವಟಿಕೆಯನ್ನು ಹೊಂದಲಾರವೇ?” ನ್ಯೂಟನ್ರು ಘರ್ಷಣಾತ್ಮಕ ಸ್ಥಾಯಿವಿದ್ಯುಜ್ಜನಕದ ಮೂಲ ಮಾದರಿಯನ್ನು ಗಾಜಿನ ಗೋಲವೊಂದನ್ನು ಬಳಸಿ ನಿರ್ಮಿಸಿದರು.