GKScienceSpardha Times

ಸಾಬೂನುಗಳು, ಮಾರ್ಜಕಗಳು ಮತ್ತು ಬಣ್ಣಗಳು

Share With Friends

➤   ಸಾಬೂನುಗಳು    
ನೈಸರ್ಗಿಕ ಕೊಬ್ಬಿನಿಂದ ಸಂಶ್ಲೇಷಿಸಿದ ಲೋಹಿಯ ಲವಣಗಳಿಗೆ ‘ ಸಾಬೂನು’ ಎನ್ನುತ್ತಾರೆ. ಸಾಬೂನು ಎಂಬುದು ಉದ್ದ ಸರಪಣಿ ಕೊಬ್ಬಿನಾಮ್ಲಗಳ ಸೋಡಿಯಂ ಲವಣಗಳು ಇಲ್ಲವೇ ಪೊಟ್ಯಾಸಿಯಮ್ ಲವಣಗಳು.

•  ಸಾಬೂನುಗಳ ವಿಧಗಳು
1. ಸ್ನಾನದ ಸಾಬೂನುಗಳು: ಇವುಗಳನ್ನು ತಯಾರಿಸುವಾಗ ಕೊಬ್ಬು ಅಥವಾ ಎಣ್ಣೆಯ ಜೊತೆಗೆ ‘ಪೊಟಾಷಿಯಂ ಹೈಡ್ರಾಕ್ಸೈಡ್’ ಸೇರಿಸುತ್ತಾರೆ. ಹೀಗೆ ತಯಾರಾದ ಸಾಬೂನಿಗೆ ಬೇಕಾದ ಬಣ್ಣ ಮತ್ತು ವಾಸನೆಯನ್ನು ಕೊಡಲು ರಾಸಾಯನಿಕಗಳನ್ನು ಸೇರಿಸಲಾಗುತ್ತದೆ.
ಉದಾ: ಮೈಸೂರರ್ ಸ್ಯಾಂಡಲ್ ಸೋಪಿಗೆ ವಾಸನೆಗಾಗಿ ಶ್ರೀಗಂಧ ಎಣ್ಣೆಯನ್ನು ಸೇರಿಸುತ್ತಾರೆ.

2. ಬಟ್ಟೆ ತೊಳೆಯುವ ಸಾಬೂನು: ಇವುಗಳನ್ನು ತಯಾರಿಸುವಾಗ ‘ ಪೊಟಾಷಿಯಂ ಹೈಡ್ರಾಕ್ಸೈಡ್ ಬದಲು “ಸೋಡಿಯಂ ಹೈಡ್ರಾಕ್ಸೈಡ್’ ನ್ನು ಬಳಸುತ್ತಾರೆ.

• ಸಾಬೂನೀಕರಣ: ಸಾಬೂನು ತಯಾರಿಸುವ ವಿಧಾನವನ್ನು ‘ ಸಾಬೂನೀಕರಣ’ ಎನ್ನುವರು.

• ಸಾಬೂನೀಕರಣ ಕ್ರಿಯೆಯಲ್ಲಿ ‘ ಸೋಡಿಯಂ ಕ್ಲೋರೈಡ್’ ನ್ನು ಬಳಸಲಾಗುತ್ತದೆ. ಕಾರಣವೆನೆಂದರೆ, ಸಾಬೂನೀಕರಣ ಕ್ರಿಯೆಯಲ್ಲಿ ಸಾಬೂನು ಕೆನೆಯ ರೂಪದಲ್ಲಿ ತೇಲುತ್ತಿರುತ್ತವೆ. ಇದನ್ನು ಬೇರ್ಪಡಿಸಲು ದ್ರಾವಣಕ್ಕೆ ‘ಅಡುಗೆ ಉಪ್ಪು’(ಸೋಡಿಯಂ ಕ್ಲೋರೈಡ್) ಸೇರಿಸಿದಾಗ. ಅದು ಸಾಬೂನು ಗ್ಲಿಸರಾಲ್‍ನಲ್ಲಿ ವಿಲೀನವಾಗುವುದನ್ನು ತಡೆಯುತ್ತದೆ.

• ಕಾರ್ಲ್ ವಿಲ್‍ಹೆಲ್ಮ್ ಷೀಲೆ : ಇವನು ಸ್ವೀಡನ್ ದೇಶದ ವಿಜ್ಞಾನಿ. ಇವನು 1783ರಲ್ಲಿ ಆಕಸ್ಮಿಕವಾಗಿ ಸಾಬೂನು ತಯಾರಿಸುವ ಪ್ರಕ್ರಿಯೆಯನ್ನು ಪತ್ತೆ ಮಾಡಿದನು. ಅವನು ಆಲಿವ್ ಎಣ್ಣೆಯನ್ನು ಸೀಸದ ಆಕ್ಸೈಡ್‍ನೊಂದಿಗೆ ಕುದಿಸಿದ. ಹೀಗೆ ಮಾಡಿದಾಗ ಸಿಹಿ ರುಚಿಯುಳ್ಳ ಪದಾರ್ಥವೊಂದು ಉತ್ಪತ್ತಿಯಾಯಿತು. ಇದೇ ಗ್ಲಿಸರಾಲ್ ( ಗ್ಲಿಸರಿನ್).

• ಸಾಬೂನು ಹೇಗೆ ಸ್ವಚ್ಛಗೊಳಿಸುತ್ತದೆ?
ಸಾಬೂನಿನ ಅಣುಗಳ ತುದಿಗಳಿಗೆ ವಿಭಿನ್ನ ಗುಣಗಳಿರುವುದರಿಂದ, ಇದು ನೀರಿನಲ್ಲಿ ವಿಲೀನವಾಗುತ್ತದೆ. ಸಾಬೂನಿನ ಅಣುವಿನಲ್ಲಿ ಉದ್ದನೆಯ ಹೈಡ್ರೋಕಾರ್ಬನ್ ಭಾಗ ಒಂದು ಚಿಕ್ಕ ಆಯಾನಿಕ ಭಾಗ ಇರುತ್ತದೆ. ಆಯಾನಿಕವಲ್ಲದ ಹೈಡ್ರೋಕಾರ್ಬನ್ ತುದಿಗೆ ನೀರನ್ನು ವಿಕರ್ಷಿಸುವ ಗುಣವಿದೆ. ಆಯಾನಿಕವಾಗಿರುವ ಇನ್ನೊಂದು ತುದಿಗೆ ನೀರನ್ನು ಆಕರ್ಷಿಸುವ ಗುಣವಿದೆ. ಈ ತುದಿ ನೀರಿಗೆ ಅಂಟಿಕೊಳ್ಳುತ್ತದೆ. ಹೈಡ್ರೋಕಾರ್ಬನ್ ತುದಿ ಕೊಳೆ ಅಥವಾ ಜಿಡ್ಡಿಗೆ ಅಂಟಿಕೊಂಡು ‘ ಮಿಸೆಲ್‍ಗಳು’ ಎಂಬ ರಚನೆಯನ್ನುಂಟು ಮಾಡುತ್ತದೆ.

ಮಿಸೆಲ್‍ಗಳಲ್ಲಿ ಸಾಬೂನಿನ ಅಣುಗಳು ಕೇಂದ್ರಾಭಿಮುಖಿವಾಗಿ ಏರ್ಪಡಿಸಿಕೊಳ್ಳುತ್ತವೆ. ನೀರಿಗೆ ಅಂಟಿಕೊಂಡಿರುವ ತುದಿ ಕೊಳೆಯನ್ನು ಬಟ್ಟೆಯಿಂದ ಕಿತ್ತು ತೆಗೆಯುತ್ತದೆ. ಇದನ್ನು ನೀರಿನಿಂದ ತೊಳೆದು ಬಿಡಬಹುದು.

• ಗ್ಲಿಸರಾಲ್( ಗ್ಲಿಸರೀನ್)
ಗ್ಲಿಸರಾಲ್ ಎಂಬುದು ಒಂದು ಹೈಡ್ರೋಕಾರ್ಬನ್ ದ್ರವ . ಇದು ಸಾಬೂನೀಕರಣ ಪ್ರಕ್ರಿಯೆಯಲ್ಲಿ ಸಾಬೂನಿನ ಜೊತೆಗೆ ಉಪ ಉತ್ಪನ್ನವಾಗಿ ದೊರೆಯುತ್ತದೆ. ಇದನ್ನು ಸಾಮಾನ್ಯವಾಗಿ ‘ ಗ್ಲೀಸರಿನ್’ ಎನ್ನುತ್ತಾರೆ.
ಗುಣಗಳು : ನೀರಿನಲ್ಲಿ ವಿಲೀನವಾಗುತ್ತದೆ. ಸಿಹಿ ರುಚಿಯನ್ನು ಹೊಂದಿವೆ.
ಉಪಯೋಗಗಳು: ಸ್ಪೋಟಕಗಳ ತಯಾರಿಕೆ, ಪ್ಲಾಸ್ಟಿಕ್‍ಗಳ ತಯಾರಿಕೆ, ಔಷಧ ಉದ್ಯಮಗಳಲ್ಲಿ, ಶೀತಲೀಕರಣ ತಡೆಯಲು ಬಳಸುತ್ತಾರೆ.

➤ ಮಾರ್ಜಕಗಳು
• ಮಾರ್ಜಕ ಎಂಬುದು ಲ್ಯಾಟಿನ್ ಪದದಿಂದ ನಿಷ್ಪತ್ತಿಯಾಗಿದೆ. ಇದರ ಅರ್ಥ ‘ಮೇಲ್ಮೈ ಪಟುತ್ವ’ ಉಳ್ಳದ್ದು, ಸ್ವಚ್ಚ ಮಾಡಬಲ್ಲ ಪದಾರ್ಥ. ಮಾರ್ಜಕಗಳನ್ನು ಸಾಬೂನಲ್ಲದ ಸಾಬೂನುಗಳು ಎನ್ನುವರು.

• ಮಾರ್ಜಕದ ಅಣುವಿನಲ್ಲಿ ಆಯಾನೀಕರಣವಲ್ಲದ ಒಂದು ದೊಡ್ಡ ಹೈಡ್ರೋಕಾರ್ಬನ್ ಗುಂಪು ಮತ್ತು ಆಯಾನೀಕರಣದ ‘ಸಲ್ಫೋನೇಟ್ ಗುಂಪು’ ಅಥವಾ ‘’ಸಲ್ಫೇಟ್ ಗುಂಪು’ ಇರುತ್ತದೆ.

• ತಯಾರಿಸುವ ವಿಧಾನ : ಪೆಟ್ರೋಲಿಯಂನಿಂದ ಪಡೆದ ಉದ್ದ ಸರಪಣಿ ಹೈಡ್ರೋಕಾರ್ಬನ್‍ಗಳನ್ನು ಸಾರೀಕೃತ ಗಂಧಕಾಮ್ಲದೊಂದಿಗೆ ಸಂಸ್ಕರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಕಾರ್ಬಾನಿಕ್ ಆಮ್ಲಗಳನ್ನು ಸೋಡಿಯಮ್ ಹೈಡ್ರಾಕ್ಸೈಡ್‍ನಿಂದ ತಟಸ್ಥಗೊಳಿಸುತ್ಥಾರೆ. ಈಗ ಬರುವ ಸೋಡಿಯಂ ಲವಣವೇ ಮಾರ್ಜಕ.

• ಮಾರ್ಜಕಗಳ ಅನುಕೂಲಗಳು :
1. ಗಡಸು ನೀರಿನಲ್ಲಿಯೂ ಚೆನ್ನಾಗಿ ತೊಳೆಯುತ್ತದೆ.
2. ಆಮ್ಲೀಯ ಮಾಧ್ಯಮದಲ್ಲಿಯೂ ಸ್ವಚ್ಛಗೊಳಿಸುತ್ತದೆ.

• ಮಾರ್ಜಕಗಳ ಅನಾನೂಕೂಲಗಳು
1. ಇವು ಜೀವ ಶಿಥಿಲೀಯವಲ್ಲ.
2. ಇವು ನೆಲ ಮತ್ತು ಜಲ ಮಾಲಿನ್ಯವನ್ನು ಉಂಟುಮಾಡುತ್ತದೆ.

➤ ಬಣ್ಣಗಳು
• ದ್ರವ ಮಾಧ್ಯಮದಲ್ಲಿ ವಿವಿಧ ವರ್ಣಕಗಳನ್ನು ಒಳಗೊಂಡಿರುವ ಮಿಶ್ರಣವೇ ಬಣ್ಣ.
• ವರ್ಣಕಗಳು : ಬಣ್ಣ ಕೊಡುವ ವಸ್ತುಗಳನ್ನು ‘ವರ್ಣಕ’ಗಳೆನ್ನುವರು.

• ಉತ್ತಮ ಬಣ್ಣದ ಲಕ್ಷಣಗಳು
1. ಇದು ತೆಳುವಾದ ಅಪಾರದರ್ಶಕ ರೂಪದಲ್ಲಿ ಇರುತ್ತವೆ.
2. ಶಾಖ, ಬೆಳಕು, ತೇವಾಂಶ ಮತ್ತು ವಾತಾವರಣದ ಅನಿಲಗಳು ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
3. ಇದು ಉತ್ತಮವಾಗಿ ಹರಡುವ ಶಕ್ತಿ ಹೊಂದಿದೆ.
4. ಇದು ಪೊರೆಗಳ ರೂಪದಲ್ಲಿ ಎದ್ದು ಬರುವುದಿಲ್ಲ.

 

error: Content Copyright protected !!