ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
1. ಪಿಯಾಜೆಯವರ ಪ್ರಕಾರ ವಿಕಸನವು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಈ ಅಂಶಗಳನ್ನು ಒಳಗೊಂಡಿರುತ್ತದೆ.
ಎ. ಪ್ರಬುದ್ಧತೆ
ಬಿ. ಅನುಭವ
ಸಿ. ಸಮತೋಲನ ಸ್ಥಿತಿ
ಡಿ. ಸಾಮಾಜಿಕ ಪರಿವರ್ತನೆ
1. ಎ ,ಬಿ
2. ಬಿ, ಸಿ, ಡಿ,
3. ಎ, ಬಿ, ಡಿ,
4. ಎ, ಬಿ, ಸಿ, ಡಿ
2. ಕೋಹ್ಲಬರ್ಗ್ನ ಪ್ರಕಾರ ಒಬ್ಬ ನೈತಿಕ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುವ ಸಂಜ್ಞಾನಾತ್ಮಕ ಪ್ರಕ್ರಿಯೆಗಳು
1. ಕಲ್ಪನಾ ಶಕ್ತಿ ಮತ್ತು ಆಲೋಚಿಸುವುದು
2. ಆಲೋಚಿಸುವುದು ಮತ್ತು ಕಾರಣೀಕರಿಸುವುದು
3. ಕಾರಣೀಕರಿಸುವುದು ಮತ್ತು ನಿರ್ಧಾರ ಕೈಗೊಳ್ಳುವುದು
4. ಆಲೋಚಿಸುವುದು ಮತ್ತು ತಿರ್ಮಾನ ಕೈಗೊಳ್ಳುವುದು
3. ಭಾರತೀಯ ಸಂವಿಧಾನವು ಸೃಷ್ಟಿಕರಿಸಿರುವ ‘ ಲಿಂಗಾಧಾರಿತ ನಿಷ್ಟಕ್ಷಪಾತ ಸಿದ್ದಾಂತವು : ಈ ಹಕ್ಕನ್ನು ಖಾತ್ರಿಗೊಳಿಸುತ್ತದೆ.
1. ಜೀವನ ಮತ್ತು ಜೀವನ ಭದ್ರತೆಯ ಹಕ್ಕು
2. ಸ್ವಾತಂತ್ರ್ಯದ ಹಕ್ಕು
3, ಸಮಾನತೆಯ ಹಕ್ಕು
4. ಶೋಷಣೆಯ ವಿರುದ್ಧದ ಹಕ್ಕು
4. ಮಕ್ಕಳಲ್ಲಿ ಕಂಡುಬರುವ ಓದುವಿಕೆಯ ನ್ಯೂನತೆಯನ್ನು ಹೀಗೆಂದು ಕರೆಯುತ್ತಾರೆ.
1. ಡಿಸ್ಫೇಸಿಯಾ
2. ಡಿಸ್ಗ್ರಾಫಿಯಾ
3. ಡಿಸ್ಕಾಲ್ಸಿಯಾ
4. ಡಿಸ್ಲೆಕ್ಸಿಯಾ
5. ಒಂದು ಪರಿಕಲ್ಪನೆಯನ್ನು ಬೋಧಿಸುವಾಗ ತರಗತಿಯಲ್ಲಿ ಶಿಕ್ಷಕರು ಮೊದಲು ವ್ಯಾಖ್ಯೆಯನ್ನು ನಿರೂಪಿಸಿ, ನಂತರ ಪರಿಶೀಲನೆಗಾಗಿ ಉದಾಹರಣೆಗಳನ್ನು ನೀಡುವರು. ಈ ಶಿಕ್ಷಕರು ಅನುಸರಿಸಿದ ವಿಧಾನ..
1. ವಿಶ್ಲೇಷಣಾ ವಿಧಾನ
2. ಸಂಶ್ಲೇಷಣಾ ವಿಧಾನ
3. ಅನುಗಮನ ವಿಧಾನ
4. ನಿಗಮನ ವಿಧಾನ
6. ಪರಿಕಲ್ಪನೆಯ ಗಳಿಕೆಯ ಮಾದರಿಯ ಉದ್ದೇಶವು ಈ ಅಂಶವನ್ನು ಬೆಳೆಸುವುದಾಗಿದೆ.
1. ಪರಿಕಲ್ಪನೆ ಮೂಡಿಸುವಿಕೆ
2. ಆಲೋಚನಾ ತಂತ್ರಗಳು
3. ಪರಿಕಲ್ಪನೆಯ ಸಂವರ್ಧನೆ
4. ಪರಿಕಲ್ಪನೆಯ ಗ್ರಹಿಕೆ
7. ” ಶಾಲೆ ಮತ್ತು ಸಮಾಜ” ಹಾಗೂ” ಪ್ರಜಾಪ್ರಭುತ್ವ ಮತ್ತು ಶಿಕ್ಷಣ” ಎಂಬ ತಮ್ಮ ಪುಸ್ತಕಗಳಲ್ಲಿ ಜಾನ್ ಡ್ಯುಯಿರವರು ಈ ಅಂಶದ ಪ್ರಾಮುಖ್ಯತೆಯ ಬಗ್ಗೆ ಒತ್ತು ನೀಡಿದ್ದಾರೆ.
1. ವ್ಯಕ್ತಿಗಳಲ್ಲಿ ಕಲಿಕೆ
2. ವ್ಯಕ್ತಿಗಳ ನಡವಳಿಕೆ
3. ವ್ಯಕ್ತಿಗಳ ಸಾಮಾಜಿಕರಣ
4. ವ್ಯಕ್ತಿಗಳ ಸ್ವಾತಂತ್ರ್ಯ
8. ‘ ಆಲೋಚನಾ ವಿಚಾರಗಳ’ ಮೂಲ ಅಂಶಗಳು
ಎ. ಪರಿಕಲ್ಪನೆಗಳು
ಬಿ. ಸಾಮಾನ್ಯೀಕರಣಗಳು
ಸಿ. ಪ್ರತಿಬಿಂಬಗಳು
ಡಿ. ಮಾಹಿತಿ
1. ಎ, ಡಿ
2, ಸಿ, ಡಿ
3. ಬಿ, ಸಿ, ಡಿ,
4. ಎ, ಬಿ, ಸಿ
9. ಮಕ್ಕಳಲ್ಲಿ ಕಾಲ್ಪನಿಕ – ನಿಗಮನ ಆಲೋಚನೆ ವಿಕಸನಗೊಳ್ಳೊವ ಅವಧಿ
1. ಔಪಚಾರಿಕಾ ಕ್ರಿಯಾ ಅವಧಿ
2. ಪೂರ್ವ ಕ್ರಿಯಾ ಅವಧಿ
3. ಮೂರ್ತ ಕ್ರಿಯಾ ಅವಧಿ
4. ಗತಿ ಸಂವೇದನಾ ಅವಧಿ
10. ವಿವಿಧ ಸಾಧನಗಳನ್ನು ಬಳಸಿ, ಮಾಹಿತಿಯನ್ನು ಸಂಗ್ರಹಿಸಿ, ಫಲಿತಾಂಸವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮತ್ತುವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೀಗೆಂದು ಕರೆಯುತ್ತಾರೆ.
1. ಪರೀಕ್ಷೆ
2. ಮೌಲ್ಯಾಂಕನ
3. ಮಾಪನ
4. ಮೌಲ್ಯಮಾಪನ
11. ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳು ಭಾಷೆಗೆ ಸಂಬಂಧಿಸಿದಂತೆ ಈ ಅಂಶದ ಬಗ್ಗೆ ಹೆಚ್ಚೇನೂ ಸಮಸ್ಯೆ ಹೊಂದಿರುವುದಿಲ್ಲ.
1. ವಾಕ್ಯದ ರಚನೆ
2. ಪದಗಳ ಅರ್ಥದ ಗ್ರಹಿಕೆ
3. ವ್ಯಾಕರಣದ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು.
4. ಧ್ವನಿಶಾಸ್ತ್ರಕ್ಕೆ ಸಂಬಂಧಿಸಿದ ಅಥವಾ ಉಚ್ಛಾರಣೆಗೆ ಸಂಬಂಧಿಸಿದ ವಿಷಯಗಳು
12.ರಚನಾತ್ಮಕ ತರಗತಿ ಕೋಣೆಗಳಲ್ಲಿ, ನೂತನ ಸಂಜ್ಞಾನಾತ್ಮಕ ಸಂರಚನೆಗಳು ಅವೀರ್ಭವಿಸುವುದರ ಮೂಲಕ ಆಗುವ ಪರಿವರ್ತನೆಯ ಪರಿಣಾಮ
1. ನೂತನ ಅರ್ಥಗ್ರಹಿಕೆಯ ಸೃಷ್ಟಿ
2. ನೂತನ ಮಾಹಿತಿಯ ಸಂಗ್ರಹಣೆ
3. ಜ್ಞಾನಾರ್ಜನೆ
4. ಜ್ಞಾನದ ಪುನರುತ್ಪಾದನೆ
13. ವೈಗೋಸ್ಕಿಯ ಸಂಜ್ಞಾನಾತ್ಮಕ ತತ್ವದ ಪ್ರಕಾರ ವಿಕಸನವು ಈ ಅಂಶದ ಪರಿವರ್ತನೆಯ ಮೂಲಕ ಉಂಟಾಗುತ್ತದೆ.
1. ಅಂತರ ಅನುಕ್ರಿಯಾ ಪ್ರಕ್ರಿಯೆಯಿಂದ ಅಂತ: ಅನುಕ್ರಿಯಾ ಪ್ರಕ್ರಿಯೆ
2. ಅಂತರ ಅನುಕ್ರಿಯಾ ಪ್ರಕ್ರಿಯೆಯಿಂದ ಅಂತರ ಅನುಕ್ರಿಯಾ ಪ್ರಕ್ರಿಯೆ
3. ಅಂತ: ಅನುಕ್ರಿಯಾ ಪ್ರಕ್ರಿಯೆಯಿಂದ ಅಂತರ ಅನುಕ್ರಿಯಯಾ ಪ್ರಕ್ರಿಯೆ
4. ಅಂತ: ಅನಿಕ್ರಿಯಾ ಪ್ರಕ್ರಿಯೆಯಿಂದ ಅಂತ: ಅನುಕ್ರಿಯಾ ಪ್ರಕ್ರಿಯೆ
14. ” ಕಲಿಕೆ ಎಂದರೆ ಸ್ವಾಧೀನ ಪಡೆದುಕೊಂಡು ಆತಂಕ – ಇಳಿಕೆ ಪ್ರಕ್ರಿಯೆ” – ಕಲಿಕೆಯ ಈ ವ್ಯಾಖ್ಯೆಯನ್ನು ನೀಡಿದವರು.
1. ವುಡ್ವರ್ತ್
2. ಥಾರ್ನ್ಡೈಕ್
3. ಕ್ರೋ ಮತ್ತು ಕ್ರೋ
4. ಗಾರ್ಡನರ್ ಮರ್ಫಿ
15. ಮಕ್ಕಳ ವಿಕಸನದಲ್ಲಿ ಅತ್ಯಂತ ಪ್ರಮುಖವಾದ ಚಿಹ್ನಾಧಾರಿತ ನಡವಳಿಕೆ
1. ಆಂಗಿಕ ಸಂಜ್ಞೆಗಳು
2. ಮಾತನಾಡುವಿಕೆ
3. ಅಶಾಂಬ್ದಿಕ ಚಿಹ್ನೆಗಳು
3. ಮಾತನಾಡುವಿಕೆ
4. ಸಾಂಕೇತಿಕ ಪ್ರತಿನಿಧಿಸುವಿಕೆ
16. ಬಹು ಆಯ್ಕೆಯ ಪ್ರಶ್ನೆಗಳನ್ನು ರಚಿಸುವಾಗ ಕೆಳಕಂಡ ಯಾವ ಅಂಶಗಳನ್ನು ಗಮನದಲ್ಲಿ ಇಡಬೇಕು.
1. ಪ್ರಶ್ನೆ ಸಮಂಜಸವಾಗಿರಬೇಕು
2. ಪ್ರಶ್ನೆಯು ಹೆಚ್ಚು ಭೇದ ಗ್ರಹಣ ಶಕ್ತಿಯನ್ನು ಹೊಂದಿರಬೇಕು
ಸಿ. ಪರ್ಯಾಯಗಳು ಏಕರೂಪವಾಗಿರಬೇಕು
ಡಿ. ಪರ್ಯಾಯಗಳು ವಿವಿಧ ಸ್ವರೂಪ ಹೊಂದಿರಬೇಕು.
1. ಎ, ಬಿ, ಸಿ, ಡಿ
2. ಎ, ಬಿ, ಡಿ,
3. ಎ, ಸಿ , ಡಿ
4. ಎ, ಬಿ, ಸಿ
17. ಒಬ್ಬ ವ್ಯಕ್ತಿಯು ಏನೆಲ್ಲಾ ಆಗಬಹುದಾದ ಸಾಮಥ್ರ್ಯ ಹೊಂದಿದ್ದಾರೋ ಅದೆಲ್ಲಾ ಆಗುವಂತಹ ಅಪೇಕ್ಷೇ ಮತ್ತು ತನ್ನ ಅಂತಸ್ಸತ್ವವನ್ನು ಮನಗಾಣುವ ಅವಶ್ಯಕತೆ
1. ಮನೋವೈಜ್ಞಾನಿಕ ಅವಶ್ಯಕತೆ
2. ಗೌರವ ಅವಶ್ಯಕತೆ
3. ಸಮಜ್ಞಾನಾತ್ಮಕ ಅವಶ್ಯಕತೆ
4. ಸ್ವ ಯಥಾರ್ಥೀಕರಣದ ಅವಶ್ಯಕತೆ
18. ಈ ನೈತಿಕ ಹಂತದಲ್ಲಿ, ಮಗುವಿನ ನೈತಿಕ ತೀರ್ಪು ಇತರರ ಹಾಗೂ ಇಚ್ಛೇಗಳಿಂದ ನಿಯಂತ್ರಿಸಲ್ಪಡುತ್ತದೆ.
1. ಪೂರ್ವ ಸಾಂಪ್ರದಾಯಬದ್ಧ ನೈತಿಕತೆ ಹಂತ
2. ಸಾಂಪ್ರದಾಯಬದ್ಧ ನೈತಿಕತೆ ಹಂತ
3. ಪೂರ್ವೋತ್ತರ ಸಾಂಪ್ರದಾಯಬದ್ದ ನೈತಿಕತೆ ಹಂತ
4. ಮೇಲಿನ ಎಲ್ಲಾ ಮೂರು ಹಂತಗಳು
19. ವಿದ್ಯಾರ್ಥಿಗಳ ಕಲಿಕೆಯ ಬಲಗಳು ಮತ್ತು ದೌರ್ಬಲ್ಯಗಳನ್ನು ಈ ಪರೀಕ್ಷೆಯ ಮೂಲಕ ಉತ್ತಮವಾಗಿ ಪತ್ತೆ ಹಚ್ಚಬಹುದು.
1. ಸಾಧನೆ ಪರೀಕ್ಷೆಗಳು
2. ನೈದಾನಿಕ ಪರೀಕ್ಷೇಗಳು
3. ಮುನ್ನರಿವು ಪರೀಕ್ಷೇಗಳು
4. ಮೌಲ್ಯಾಂಕನ ಸೂಚಿ
20. ಕೆಳಗಿನ ಯಾವ ಗುಂಪು, ಬಹುವಿಧ ಬುದ್ಧಿಶಕ್ತಿಯ ವಿಧಗಳಾಗಿವೆ?
1. ಭಾಷಾಶಾಸ್ತ್ರ, ಸಮಗೀತ, ವಿಶ್ಲೇಷಣಾತ್ಮಕ
2. ಸಂಗೀತ, ಸ್ನಾಯು ಸಂವೇದಿ, ಸೌಂದರ್ಯ ಪ್ರಜ್ಞೆ
3. ಅವಕಾಶ, ಸಂಗೀತ, ಸ್ನಾಯು ಸಂವೇದಿ
4. ತಾರ್ಕಿಕ, ಗಣಿತೀಯ, ಭಾಷಾಶಾಸ್ತ್ರ
21. ಆಟಗಳು ನಿಯಮಗಳು ಹಾಗೂ ನಡವಳಿಕೆಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಇವರಿಂದ ಕಲಿಯುತ್ತಾರೆ.
1. ಪೋಷಕರು
2. ಒಡಹುಟ್ಟಿದರು
3. ಸಮವಯಸ್ಕರು
4. ಶಿಕ್ಷಕರು
22. ಮಗುವಿನ ವಿಕಸನದ ಮೇಲೆ ಪರಿಣಾಮ ಬೀರುವ ನಿರ್ದಷ್ಟ ” ವಿಕಸನಾತ್ಮಕ ಅಸ್ವಸ್ಥತೆ”
1. ಬೌಧ್ಧಿಕ ಅಸ್ವಸ್ಥತೆ
2. ಸೆರೆಬ್ರಲ್ ಪಾಲ್ಸಿ
3. ಅವಧಾನ ಕೊರತೆ ಅತಿಶಯ ಕ್ರಿಯಾಶೀಲತೆ ಅಸ್ವಸ್ಥತೆ
4. ಶ್ರವಣ ಸಂಸ್ಕರಣಾ ಅಸ್ವಸ್ಥತೆ
23. ಕಾಲಾವಧಿ ಅಥವಾ ಸ್ಥಳಲ್ಲೆ ಸಂಬಂಧಿಸಿದಂತೆ ಎರಡು ಅದಕ್ಕಿಂತ ಹೆಚ್ಚು ಅಂಶಗಳು ಒಂದಕ್ಕೊಂದು ಸಂಯೋಜನೆಗೊಂಡಿದ್ದರೆ ಒಂದು ಅಂಶದ ಸ್ಮರಿಸಿಕೊಳ್ಳುವಿಕೆ ಇನ್ನೊಂದು ಅಂಶವನ್ನು ಸ್ಮರಿಸಿಕೊಳ್ಳಲು ಅನುಕೂಲಿಸುತ್ತದೆ ಇದು.
1. ಸಮರೂಪಕ್ಕೆ ನಿಯಮ
2. ಸಮೀಪಸ್ಥತೆಯ ನಿಯಮ
3. ವ್ಯತಿರಿಕ್ತತೆ ನಿಯಮ
4. ವಿಶದೀಕರಿಸುವ ನಿಯಮ
24. ಈ ಕೆಳಗಿನ ಕಾರ್ಯವನ್ನು ನಿರ್ವಹಿಸಲು ಒಬ್ಬ ವ್ಯಕ್ತಿಯು ಹೊಂದಿರುವ ಸಾಮಥ್ರ್ಯಕ್ಕೆ ಅನುಪಾತಕ್ಕನುಗುಣವಾಗಿ ಅವನ ಬುದ್ಧಿಶಕ್ತಿಯಿರುತ್ತದೆ.
1. ಪಾಶ್ರ್ವ ಆಲೋಚನೆ
2. ಮೂರ್ತ ಕಾರಣೀಕರಿಸುವಿಕೆ
3. ಮೂರ್ತ ಆಲೋಚನೆ
4. ಅಮೂರ್ತ ಆಲೋಚನೆ
25. ಇತರರೊಂದಿಗೆ ಸಂಪರ್ಕಕ್ಕೆ ಬರುವ ಒಬ್ಬ ನಿರ್ದಿಷ್ಟ ವ್ಯಕ್ತಿಯ ವರ್ತನೆಯಲ್ಲಿ ಆಗುವ ಮಾರ್ಪಾಟಿನ ಪ್ರಕ್ರಿಯೆಯನ್ನು ಹೀಗೆನ್ನುತ್ತಾರೆ.
1. ಸಾಮಾಜೀಕರಣ
2. ಕಲಿಕೆ
3. ಪರಸ್ಪರ ಅನುಕ್ರಿಯೆ
4. ಪರಿವರ್ತನೆ
26. ಐಒಡಬ್ಯೂಎ ಸ್ಕೂಲ್ ಆಫ್ ಅಮೇರಿಕನ್ ಎಜುಕೇಶನಲ್ ಸೈಕಾಲಜಿಸ್ಟ್ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ ಒಬ್ಬರ ಜೀವನದ ವಿನ್ಯಾಸಗಳನ್ನು ರೂಪಿಸುವಲ್ಲಿ ನಿರ್ಧಾರಿತ ಪಾತ್ರವನ್ನು ವಹಿಸುವ ಅಂಶಗಳೆಂದರೆ…
1. ಅನುವಂಶೀಯತೆ
2. ಪರಿಸರ
3. ಅನುವಂಶೀಯತೆ ಹಾಗೂ ಪರಿಸರ
4. ಅನುವಂಶೀಯತೆಯೂ ಅಲ್ಲ, ಪರಿಸರವೂ ಅಲ್ಲ.
27.ಅದುಮಿಟ್ಟ ಭಾವನೆಗಳನ್ನು ಹೊರಹಾಕುವುದು ಅವಶ್ಯಕವಾಗಿರುವುದು.
1. ಆಸಕ್ತಿಯನ್ನು ಕೆರಳಿಸಲು
2. ಅವಧಾನವನ್ನು ಸೆಳೆಯಲು
3. ಜೀವಿಯ ಸ್ವಾಸ್ಥಕ್ಕಾಗಿ
4. ಸಂಜ್ಞಾನಾತ್ಮಕ ಬೆಳವಣಿಗೆಗೆ
28. ಮಾದರಿಯನ್ನು ಪ್ರಸ್ತುತ ಪಡಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಕ್ರಿಯೆಗಳಲ್ಲಿ ಹೆಚ್ಚು ಸವತಂತ್ರರಾಗುತ್ತಾ ಹೋದಂತೆ ಕ್ರಮೇಣವಾಗಿ ಹಿಂಪಡೆದುಕೊಳ್ಳುವ ತತ್ಕಾಲಿಕ ಮಾರ್ಗದರ್ಶನದ ರೂಪವನ್ನು ಹೀಗೆಂದು ಕರೆಯುತ್ತಾರೆ.
1. ಒತ್ತಾಸೆ
2. ಚೌಕಟ್ಟು
3. ಜೋಡಣೆ
4. ನಮೂನೆ
29. ಟೊರೆನ್ಸ್ರವರ ಪ್ರಕಾರ ಸೃಜನಶೀಲ ಆಲೋಚನೆಯನ್ನು ಉದ್ದೀಪನಗೊಳಿಸುವ ತತ್ವಗಳಲ್ಲಿ ಒಂದು
1. ಊಹಾತ್ಮಕ ಅಸಾಧಾರಣ ಆಲೋಚನೆಗಳನ್ನು ಗೌರವಿಸುವುದು.
2. ಒಮ್ಮುಖ ಆಲೋಚನೆಗಳಿಗೆ ಅವಕಾಶ ಕಲ್ಪಿಸುವುದು
3. ಸಾಕಷ್ಟು ಅಭ್ಯಾಸಗಳನ್ನು ನೀಡುವುದು.
4. ವಿಚಾರಗಳ ಪುನರ್ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳನ್ನು ತೋಡಗಿಸಿಕೊಳ್ಳುವುದು.
30. ಜೆರೋಮ್ ಬ್ರೂನರವರ ಪ್ರಕಾರ ಮಕ್ಕಳಲ್ಲಿನ ಕಲಿಕಾ ಪ್ರಕ್ರಿಯೆಯು ಕ್ರಮಾನುಗತವಾಗಿ ಈ ಮೂರು ಹಂತಗಳನ್ನು ಅನುಸರಿಸುತ್ತದೆ.
1. ಸಾಂಕೇತಿಕ, ಬಿಂಬ, ಚಟುವಟಿಕೆ ಆಧಾರಿತ
2. ಚಟುವಟಿಕೆ ಆಧಾರಿತ, ಬಿಂಬ , ಸಾಂಕೇತಿಕ
3. ಚಟುವಟಿಕೆ ಆಧಾರಿತ, ಸಾಂಕೇತಿಕ, ಬಿಂಬ
4. ಬಿಂಬ, ಚಟುವಟಿಕೆ ಆಧಾರಿತ, ಸಾಂಕೇತಿಕ