Educational PsychologyModel Question PapersQUESTION BANKQuizSpardha TimesTET - CET

ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-III – CHILD DEVELOPMENT AND PEDAGOGY – Key Answers

Share With Friends

PART -III : CHILD DEVELOPMENT AND PEDAGOGY
61. ಇವುಗಳಲ್ಲಿಮಗುವಿನ ವಿಕಾಸವನ್ನು ಸೂಚಿಸುವ ಒಂದು ಹೇಳಿಕೆ
(1) ಗಾತ್ರ, ಉದ್ದ, ಎತ್ತರ ಮತ್ತು ತೂಕದಲ್ಲಿನ ಹೆಚ್ಚಳ
(2) ದೇಹದ ನಿರ್ದಿಷ್ಟ ಭಾಗಗಳಲ್ಲಿ ಆಗುವ ಬದಲಾವಣೆಗಳು
(3) ಮಗುವಿನ ದೇಹದ ಭಾಗಗಳಲ್ಲಿನ ಬದಲಾವಣೆಗಳಲ್ಲದ ಒಟ್ಟಾರೆ ಬದಲಾವಣೆಗಳು✔
(4)ಅಳತೆ ಮಾಡಲು ಸಾಧ್ಯವಾಗುವ ದೇಹದ ಬದಲಾವಣೆಗಳು

62. “ವಿಕಾಸವು ಯಾವಾಗಲೂ ಕೊನೆಗೊಳ್ಳದ ಪ್ರಕ್ರಿಯೆ’ ಎಂಬುದನ್ನು ಸೂಚಿಸುವ ತತ್ವ,
(1) ನಿರಂತರತೆಯತ್ವ✔
(2) ಸಮಗ್ರತೆಯ ತತ್ವ
(3) ವಿಕಾಸದ ನಿರ್ದೆಶನಗಳ ತತ್ವ
(4) ಅಂತರ ಸಂಬಂಧದ ತತ್ವ

63, ತನ್ನೊಂದಿಗೆ ಮತ್ತು ಇತರರೊಂದಿಗೆ ಬೆರೆಯುವ ಒಂದು ಮಗುವಿನ ಸಾಮರ್ಥ್ಯ
(1) ಮಾನಸಿಕ ವಿಕಾಸ
(2) ಸಾಮಾಜೀಕರಣ✔
(3) ಪರಿಪಕ್ವತೆ
(4) ಬುದ್ದಿವಂತಿಕೆ

64, ಬೆಳವಣಿಗೆ ಮತ್ತು ವಿಕಾಸದ ಪ್ರಕ್ರಿಯೆಯಲ್ಲಿ ಸಾಮಾಜೀಕರಣದ ಅರ್ಥ
(1) ಸಮಾಜದ ನಿಯಮಗಳನ್ನು ಸೂಕ್ತವಾಗಿ ಅರ್ಥಮಾಡಿಕೊಳ್ಳುವುದು
(2) ಸ್ವಯಂಸ್ವ-ನಿಯಮಗಳನ್ನು ಸೃಜಿಸಿಕೊಳ್ಳುವುದು
(3) ನಮ್ಮ ಸುತ್ತಲಿನ ಜನರನ್ನು ಗೌರವಿಸುವುದು
(4)ಸಾಮಾಜಿಕ ವಾತಾವರಣಕ್ಕೆ ಹೊಂದಿಕೊಳ್ಳುವುದು ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದು✔

65, ವೈಗೊಟ್ಟಿ ಅವರ ಪ್ರಕಾರ, ಕಲಿವಿನ ಪ್ರಕ್ರಿಯೆಯಲ್ಲಿ
(1) ಭಾಷೆಯು ಆಲೋಚನಾ ಪ್ರಕ್ರಿಯೆಯನ್ನು ಗಾಢವಾಗಿ ಪ್ರಭಾವಿಸುತ್ತದೆ✔
(2) ಮೊದಲು ಆಲೋಚನೆ ಮತ್ತು ನಂತರ ಭಾಷೆಯು ಹೊರಹೊಮ್ಮುತ್ತದೆ
(3) ಆಲೋಚನೆ ಮತ್ತು ಮಕ್ಕಳ ಭಾಷೆಯು ಬೇರೆ ಬೇರೆ ಆಗಿರುತ್ತದೆಈ (4)ಭಾಷೆಯ ಯಾವುದೇ ಪ್ರಭಾವ ಇರುವುದಿಲ್ಲ

66, ಪ್ರಗತಿಶೀಲ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೇರಣೆಗೊಳಿಸುವುದು
(1) ಎಲ್ಲಾ ವಿಷಯಗಳಲ್ಲಿ ವಿಷಯ ಜ್ಞಾನವನ್ನು ಪಡೆದುಕೊಳ್ಳಲು
(2) ಕಲಿವಿನ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿ ಅಂತರ್‌ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು✔
(3) ಕಲಿವಿನ ವಿಷಯಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಲು
(4) ವಹಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು

67.ಪ್ರಗತಿಶೀಲ ಶಿಕ್ಷಣದ ಒಂಮ ಪ್ರಮುಖ ಲಕ್ಷಣ
(1) ಆಗಾಗ್ಗೆ ವಿದ್ಯಾರ್ಥಿಗಳ ಮಾಪನ
(2) ಕಲಿವಿನ ಎಲ್ಲಾ ವಿಷಯಗಳಿಗೆ ಒತ್ತು
(3) ಬದಲಿಸಬಹುದಾದ ವೇಳಾಪಟ್ಟಿಮತ್ತು ತರಗತಿ ಸಿದ್ಧತೆಗಳು✔
(4) ವಿಷಯಗಳನ್ನು ಕಲಿಯಲು ವಿವಿಧ ಶೈಕ್ಷಣಿಕ ಮಾರ್ಗೋಪಾಯಗಳು

68. ಇತರೆ ಜನರನ್ನು ಅರ್ಥಮಾಡಿಕೊಳ್ಳುವ, ಅವರ ಅಭಿಪ್ರೇರಣೆಗಳನ್ನು, ಉದ್ದೇಶಗಳನ್ನು ಗುರ್ತಿಸುವ ಮತ್ತುಅವರೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವೇ
(1) ಆಸರ್‌ವ್ಯಕ್ತಿಯ ಬುದ್ಧಿಶಕ್ತಿ
(2) ಪರಸ್ಪರ ವ್ಯಕ್ತಿಯ ಬುದ್ಧಿಶಕ್ತಿ✔
(3) ಸಾಮಾಜಿಕ ಬುದ್ಧಿಶಕ್ತಿ
(4) ತಾರ್ಕಿಕ ಬುದ್ಧಿಶಕ್ತಿ

69, ಕಲಿಕಾರ್ಥಿಗಳಲ್ಲಿನ ವ್ಯಕ್ತಿ ಭಿನ್ನತೆಗಳ ಸೂಕ್ತ ಜ್ಞಾನವು ಶಿಕ್ಷಕನಿಗೆ
(1) ತನ್ನ ಬೋಧನಾ ವಿಧಾನಗಳನ್ನು ಹೊಂದಿಸಿಕೊಳ್ಳಲು ಸಹಾಯ ಮಾಡುತ್ತದೆ✔
(2) ವಿದ್ಯಾರ್ಥಿಗಳನ್ನು ಉನ್ನತ ತರಗತಿಗಳಿಗೆ ತೇರ್ಗಡೆಗೊಳಿಸಲು ಸಹಾಯ ಮಾಡುತ್ತದೆ
(3) ಶಿಕ್ಷಣದ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ
4) ತನ್ನ ವಿಷಯ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತದೆ

70, ಸಾಮರ್ಥ್ಯಾಧಾರಿತ ಗುಂಪನ್ನು ಮಾಡುವುದು ಮತ್ತು ಪಠ್ಯಕ್ರಮವನ್ನು ತರಗತಿಯ ವಿದ್ಯಾರ್ಥಿಗಳಿಗೆಹೊಂದಿಸಿಕೊಳ್ಳುವುದರಿಂದ ಶಿಕ್ಷಕನಿಗೆ ಆಗುವ ಒಂದು ಉಪಯೋಗ
(1) ಪ್ರತಿಭಾವಂತ ಮಕ್ಕಳ ಅಗತ್ಯತೆಗಳಿಗೆ ಸ್ಪಂದಿಸಬಹುದು
(2) ವೈಯುಕ್ತಿಕ ಭಿನ್ನತೆಗಳನ್ನು ಕಡಿಮೆಗೊಳಿಸಬಹುದು✔
(3) ಮಾಪನಕ್ಕಾಗಿ ಪ್ರಮಾಣಬದ್ಧಸಾಧನವನ್ನು ಆಯ್ಕೆ ಮಾಡಿಕೊಳ್ಳಬಹುದು
(4) ತರಗತಿಯಲ್ಲಿ ಶಿಸ್ತನ್ನು ಮೂಡಿಸಬಹುದು

71. ಲಿಂಗಪಕ್ಷಪಾತವನ್ನು ತರಗತಿಗಳಲ್ಲಿ ಕಡಿಮೆಗೊಳಿಸುವ ಒಂದು ಕ್ರಮ
(1) ಹೆಣ್ಣು ಮತ್ತು ಗಂಡು ಮಕ್ಕಳಿಗೆ ವಿಭಿನ್ನ ಕಾರ್ಯಗಳನ್ನು ವಹಿಸುವುದು
(2) ಗಂಡಸರು ಮತ್ತು ಹೆಂಗಸರು ಇಬ್ಬರ ಉದಾಹರಣೆಗಳನ್ನು ನೀಡುವುದು
(3)ಹುಡುಗರು ಮತ್ತು ಹುಡುಗಿಯರಿಗೆ ಒಂದೇ ರೀತಿಯ ಶೈಕ್ಷಣಿಕ ಕಾರ್ಯಗಳನ್ನು ನೀಡುವುದು✔
(4) ತರಗತಿಯಲ್ಲಿ ಹುಡುಗರು ಮತ್ತು ಹುಡುಗಿಯರನ್ನು ಬೇರ್ಪಡಿಸುವುದು

72. ವಿದ್ಯಾರ್ಥಿಗಳ ಮೌಲ್ಯಾಂಕನದ ಒಂದು ಪ್ರಮುಖ ಅಂಶ
1) ಸಮಗ್ರ ಕಲಿಕೆಯನ್ನು ತಿಳಿಯುವುದು✔
(2) ಒಂದು ನಿರ್ದಿಷ್ಟ ಹಂತದಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ನಿರ್ಧರಿಸುವುದು
(3) ಉನ್ನತ ಕಲಿಕೆಯನ್ನು ಉತ್ತೇಜಿಸುವುದು
(4) ಅವರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ವರ್ಗಿಕರಣ (grade) ಮಾಡುವುದು

73 ಅಪೇಕ್ಷಿತ ಕಲಿಕೆಯ ಗುರಿಗಳಡೆಗಿನ ವಿದ್ಯಾರ್ಥಿಗಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ಶಿಕ್ಷಕರು ಮೌಲ್ಯಾಂಕನಮಾಡಬೇಕಾದ ಅಗ
(1) ಕಲಿಕಾ ವಿಷಯಗಳಲ್ಲಿ (scholastic subjects) ವಿದ್ಯಾರ್ಥಿಗಳ ಕಾರ್ಯಕ್ಷಮತೆ
(2) ಒದಗಿಸಿದ ಕಲಿವಿನ ಅನುಭವಗಳ ಪರಿಣಾಮಕಾರತೆ
(3) ಕಲಿವಿನ ಫಲಗಳು ಎಷ್ಟರ ಮಟ್ಟಿಗೆ ಸಾಧಿಸಲ್ಪಟ್ಟಿವೆ✔
(4) ಪಠ್ಯವಸ್ತು ಎಷ್ಟರ ಮಟ್ಟಿಗೆ ಪೂರ್ಣಗೊಳಿಸಲ್ಪಟ್ಟಿದೆ

74, ‘ಕಲಿಕೆಗಾಗಿ ಮೌಲ್ಯಾಂಕನ’ (Assessment for leaming) ದಲ್ಲಿನ ಮುಖ್ಯ ಕೇಂದ್ರಿತ ಅಂಶ
(1) ಎಲ್ಲಾ ವಿದ್ಯಾರ್ಥಿಗಳ ಪ್ರಸ್ತುತದ ಕಲಿಕೆಯನ್ನು ಉತ್ತಮ ಪಡಿಸುವುದು✔
(2) ವಿಭಿನ್ನಭಾಗೀದಾರರ ಮೇಲೆ ಕಲಿಕೆಯ ಜವಾಬ್ದಾರಿಯನ್ನು ವಹಿಸುವುದು
(3) ಸಾಕ್ಷಿ ಆಧಾರಿತ ಮೌಲ್ಯಾಂಕನವನ್ನು ಅಭಿವೃದ್ಧಿಪಡಿಸುವುದು
(4) ಕಲಿಕೆಯ ಕೌಶಲಗಳನ್ನು ಬೆಳೆಸುವುದು

75, ಶಾಲಾ ಆಧಾರಿತ ಮೌಲ್ಯಾಂಕನದ ಒಂದು ಪ್ರಮುಖ ಲಕ್ಷಣ
(1) ಅದು ಮೌಲ್ಯಾಂಕನವನ್ನು ನಿರಂತರವಾಗಿಸುತ್ತದೆ
(2) ಅಂಕಗಳನ್ನು ನೀಡುವುದನ್ನುಶಿಕ್ಷಕರಿಗೆ ಸುಲಭಗೊಳಿಸುತ್ತದೆ
(3) ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲು ಶಿಕ್ಷಕರಿಗೆ ಸುಲಭವಾಗುತ್ತದೆ
(4) ಸೂಕ್ಷಹಂತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಹಾಯಮಾಡುತ್ತದೆ✔

76, ಕಲ್ಪನೆಗಳು, ವಸ್ತುಗಳು ಅಥವಾ ಸಮಸ್ಯೆಗೆ ಪರಿಹಾರಗಳನ್ನು ನವೀನವಾಗಿ, ಸೂಕ್ತವಾಗಿ ಮತ್ತು ಉಪಯುಕ್ತವಾಗುವಂತೆ ಉತ್ಪನ್ನಗೊಳಿಸುವ ಒಂದು ಮಗುವಿನ ಸಾಮರ್ಥ್ಯವೇ
(1) ಪ್ರತಿಭಾನ್ವಿತ
(2) ಕ್ರಿಯಾಶೀಲತೆ✔
(3) ಅಭಿಕ್ಷಮತ
(4) ಮನೋಧೋರಣೆ

77.ಒಳಗೊಳ್ಳುವ ಶಿಕ್ಷಣದ ಹಿಂದಿರುವತಾರ್ಕಿಕತೆ
(1) ವೈವಿಧ್ಯಮಯ ಸಮಾಜದ ಅಗತ್ಯತೆಗಳಿಗೆ ಶಾಲೆಗಳು ಸ್ಪಂದಿಸುವುದು
(2) ವಿಶೇಷ ಮಕ್ಕಳಿಗೆ ಕನಿಕರವನ್ನುತೋರುವುದು ಮತ್ತು ಅವರಿಗೆ ಸೌಲಭ್ಯಗಳನ್ನು ಒದಗಿಸುವುದು
(3)ವಿಶೇಷ ಅಗತ್ಯತೆಯ ಮಕ್ಕಳನ್ನು ತರಗತಿಗಳಲ್ಲಿ ಇತರೆ ಮಕ್ಕಳಿಂದ ಬೇರ್ಪಡಿಸದಿರುವುದು✔
(4) ಪ್ರತಿ ಮಗುವಿನ ಶೈಕ್ಷಣಿಕ ನಿರ್ವಹಣೆಯ ಮಾನದಂಡ ಒಂದೇ ಆಗಿರುವುದು

78.ಡಿಪ್ಲೆಕ್ಸಿಯ ಪದವು ಸಂಬಂಧ ಹೊಂದಿರುವುದು
(1) ಸಾಮಾಜಿಕ ಅಸ್ವಸ್ಥತೆಯೊಂದಿಗೆ
(2) ಮಾನಸಿಕ ಅಸ್ವಸ್ಥತೆಯೊಂದಿಗೆ
(3) ಗಣಿತೀಯ ಅಸ್ವಸ್ಥತೆಯೊಂದಿಗೆ
(4) ಓದುವಿಕೆಯ ಅಸ್ವಸ್ಥತೆಯೊಂದಿಗೆ✔

79, ಪ್ರತಿಭಾನ್ವಿತ ಮಕ್ಕಳ ಒಂದು ಲಕ್ಷಣ
(1) ಅವರು ಶಿಕ್ಷಕರಿಂದ ಸ್ವತಂತ್ರರಾಗಿರುತ್ತಾರೆ
(2)ತರಗತಿಗಳಲ್ಲಿ ಅತೀ ಚಟುವಟಿಕೆಯಿಂದ ಇರುತ್ತಾರೆ
(3) ತೀರ್ಮಾನಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಾರೆ✔
(4) ಬಹಿರ್ಮುಖ ಸ್ವಭಾವ

80, ಜ್ಞಾನಾತ್ಮಕ ಚಟುವಟಿಕೆಯ ಪ್ರಕ್ರಿಯೆಯಾಗಿ ಆಲೋಚನೆಯು
(1) ಮಗುವನ್ನು ಹಗಲುಗನಸು ಕಾಣುವಂತೆ ಮಾಡುತ್ತದೆ
(2)ಮಾನಸಿಕವಾಗಿ ಸಮಸ್ಯೆಗಳನ್ನು ಬಿಡಿಸಲು ಮಗುವನ್ನು ಮುನ್ನಡೆಸುತ್ತದೆ✔
(3) ಯತ್ನ ಮತ್ತು ದೋಷದಿಂದ ಕಲಿಯಲು ಮಗುವನ್ನು ಮುನ್ನಡೆಸುತ್ತದ
(4) ಸನ್ನಿವೇಶಗಳನ್ನು ಕುಶಲತೆಯಿಂದ ಮುನ್ನಡೆಸುವತ ಮಾಡುತ್ತದೆ

81.ಒಂದು ಮಗು ನಿರ್ದಿಷ್ಟ ಹಂತದಲ್ಲಿ ಆಲೋಚಿಸುವ ಮತ್ತು ಕಲಿಯುವ ಕೌಶಲಗಳನ್ನು ಬೆಳೆಸಿಕೊಳ್ಳುತ್ತದೆ. ಇದರಸೂಚಕ
(1) ಚಿತ್ರಗಳನ್ನು ನೋಡಿ ಕಥೆಗಳನ್ನು ಹೇಳುವುದು✔
(2) ದೈಹಿಕವಾಗಿ ಬೆಳೆಯುವುದು
(3)ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು
(4) ವಯಸ್ಕರ ಪ್ರಶ್ನೆಗಳಿಗೆ ಉತ್ತರಿಸುವುದು

82: ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಪ್ರಭಾವಿಸುವ ಒಂದು ಅಂಶ
(1) ಶಾಲಾ ಪಠ್ಯಕ್ರಮ ಮತ್ತು ಪಠ್ಯವಸ್ತು
(2) ಶಿಕ್ಷಕರ ಮನೋಧೋರಣೆ ಮತ್ತು ವರ್ತನ
(3) ಶಾಲೆಯಲ್ಲಿನ ಶಿಸ್ತು
(4) ಆಕಾಂಕ್ಷೆ ಮತ್ತು ಅಭಿಪ್ರೇರಣೆಯ ಮಟ್ಟ✔

83. ಕಲಿಕೆಯಿಂದಾಗುವ ವರ್ತನೆಯಲ್ಲಿನ ಬದಲಾವಣೆಗಳು
(1)ತಾತ್ಕಾಲಿಕ
(2) ಸಾಪೇಕ್ಷವಾಗಿ ಶಾಶ್ವತ
(3) ಶಾಶ್ವತವೂ ಅಲ್ಲ ತಾತ್ಕಾಲಿಕವೂ ಅಲ್ಲ✔
(4) ಆಗಾಗ್ಗೆ ಬದಲಾವಣೆಗೆ ಒಳಗಾಗುತ್ತಿರುತ್ತದೆ

84, ಒಂದು ಮಗುಸಮಸ್ಯಾ ಪರಿಹಾರ ಕ್ರಮದಿಂದ ಪರಿಕಲ್ಪನೆ ಒಂದನ್ನು ಕಲಿಯಲು ಪ್ರೇರಣೆಗೊಂಡಿದೆ. ಇಲ್ಲಿ ಮಗುವಿನಕಲಿಕೆಯ ಮೊದಲ ಹಂತ
(1) ಮಾಹಿತಿಯ ವಿಶ್ಲೇಷಣೆ
(2) ಪ್ರಕಲ್ಪನೆಯ ಪರಿಶೀಲನೆ
(3) ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು✔
(4) ಪರಿಹಾರವನ್ನು ಪಡೆಯುವುದು

85. ಮಕ್ಕಳು ಒಂದು ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯುವುದು
(1) ತರಗತಿಯಲ್ಲಿ ಶಿಕ್ಷಕರು ತುಂಬಾ ಶಿಸ್ತಿನಿಂದ ಇದ್ದಾಗ
(2) ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹಾಜರಾದಾಗ
(3) ಮಕ್ಕಳಿಗೆ ಸೂಕ್ತವಾಗಿ ಬಹುಮಾನ ನೀಡಿದಾಗ
(4) ಕಲಿಕಾ ವಿಷಯವನ್ನು ಉತ್ತಮವಾಗಿ ಆಯೋಜಿಸಿದಾಗ✔

86, ಕಲಿವಿನ ಸಾಮಾಜಿಕ ಸಂದರ್ಭವು ಒಳಗೊಳ್ಳುವ ಅಂಶ
(1) ಜ್ಞಾನ ರಚನಾ ಪ್ರಕ್ರಿಯೆಯ ಸಾಂದರ್ಭಿಕರಣ✔
(2) ಸಾಂದರ್ಭಿಕ ಜ್ಞಾನವನ್ನು ಪಡೆದುಕೊಳ್ಳುವುದು
(3) ಪ್ರಯೋಗದ ಮೂಲಕ ಜ್ಞಾನವನ್ನು ಪಡೆದುಕೊಳ್ಳುವುದು*
(4) ಶಿಕ್ಷಕರಿಂದ ಜ್ಞಾನವನ್ನು ಸ್ವೀಕರಿಸುವುದು

87) ಅರ್ಥಪೂರ್ಣ ಕಲಿಕೆ ಉಂಟಾಗುವುದು
(1) ವೈಯುಕ್ತಿಕ ಅನುಭವಗಳಿಂದ ಜ್ಞಾನ ರಚನೆಗಳು ಕ್ರಿಯಾಶೀಲವಾಗಿ ಸೃಷ್ಟಿಯಾದಾಗ✔
(2) ವಯಸ್ಕರು ತಮಗೆ ತಿಳಿದಿರುವುದನ್ನು ಬೋಧಿಸಿದಾಗ
(3) ವಯಸ್ಕರನ್ನು ಅನುಕರಣೆ ಮಾಡಿದಾಗ
(4) ನೀಡಿದ ಮಾಹಿತಿಯನ್ನು ನಿಷ್ಕ್ರಿಯವಾಗಿ ಸ್ವೀಕರಿಸಿದಾಗ

88, ಬಾಹ್ಯ ಅಭಿಪ್ರೇರಣೆಗೆ ಒಂದು ಉದಾಹರಣೆ
(1) ಒಂದು ಮಗುಮನೆಗೆಲಸವನ್ನು ಮಾಡಿ ಸ್ವಯಂ ಕಲಿಯುವುದು
(2) ಒಂದು ಮಗು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮನೆಗೆಲಸ ಮಾಡುವುದು
(3)ಶಿಕ್ಷಕರು ಪ್ರತಿ ಮನೆಗೆಲಸಕ್ಕೆ ಅಂಶವನ್ನು ನೀಡುತ್ತಾರೆ ಎಂಬುದರಿಂದ ಒಂದು ಮಗು ಮನೆಗೆಲಸವನ್ನುಮಾಡುವುದು✔
(4) ಒಂದು ಮಗುಮನೆಗೆಲಸವನ್ನು ಮಾಡಲು ಸಂತೋಷ ಪಡುವುದು

89. ಕಲಿಕೆಯ ಜ್ಞಾನಾತ್ಮಕ ಮನೋವಿಜ್ಞಾನದ ಕೇಂದ್ರಿತ ಅಂಶ
(1) ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ಬಂಧನದ ರಚನ
(2) ಮಾನಸಿಕ ಪ್ರಕ್ರಿಯೆಗಳು ಮತ್ತು ಜ್ಞಾನದ ರಚನ✔
(3)ವೀಕ್ಷಣೆ ಮತ್ತು ಕಲಿಕೆ
(4) ಪ್ರಯೋಗಗಳು ಮತ್ತು ಕಲಿವಿನ ಪ್ರಕ್ರಿಯೆಗಳು

90. ಕಲಿಕೆಯನ್ನು ಪ್ರಭಾವಿಸುವ ಒಂದು ವೈಯುಕ್ತಿಕ ಅಂಶ
(1) ಶಾತ ಮತ್ತು ಸೌಹಾರ್ದ ವಾತಾವರಣ
(2) ಅಭ್ಯಾಸ ಕಾರ್ಯ, ಪುನರಾವರ್ತನ ಮತ್ತು ಅಭ್ಯಾಸ
(3) ವಿಷಯಗಳ ಸ್ವಭಾವ
(4)ಸಿದ್ಧತೆ ಮತ್ತು ಇಚ್ಛಾಶಕ್ತಿ✔

# ಇವುಗಳನ್ನೂ ಓದಿ : 

# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-II – LANGUAGE-2 : ENGLISH – Key Answers

# ಎಫ್‌ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

error: Content Copyright protected !!