Wednesday, November 27, 2024
Latest:
Educational PsychologyEXAMSModel Question PapersMultiple Choice Questions SeriesQUESTION BANKQuizSpardha Times

ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-3- LANGUAGE-1- KANNADA – Key Answers

Share With Friends

ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-3 Child Development And Pedagogy

61. ತರಗತಿ ಶಿಕ್ಷಕರಿಗೆ ಮಕ್ಕಳ ಬೆಳವಣಿಗೆ ಮತ್ತು ವಿಕಾಸದ ಜ್ಞಾನವು..
1.ಮನಃಶಾಸ್ತ್ರದ ಜ್ಞಾನವನ್ನು ಸಮೃದ್ಧಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ.
2. ಶಾಲಾ ಸನ್ನಿವೇಶವನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.
3.ಮಕ್ಕಳ ಬೆಳವಣಿಗೆ ಮತ್ತು ವಿಕಾಸದ ವಿವಿಧ ಅಂಶಗಳನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ.
4. ಮಕ್ಕಳ ಸಾಮಥ್ರ್ಯ ಮತ್ತು ನಿರೀಕ್ಷೆಗಳನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ. ✔

62. ಮಗುವಿನ ವಿಕಾಸವನ್ನು ಪ್ರಭಾವಿಸದ ಒಂದು ಅಂಶ..
1.ಅನುವಂಶೀಯತೆ
2. ಪರಿಸರ
3. ಬೆಳವಣಿಗೆ
4. ಸಾಧನೆ✔

63. ಸಾಮಾಜೀಕರಣದ ಒಂದು ಅಂಗವಾಗಿ ಶಾಲೆಯು..
1.ವಿದ್ಯಾರ್ಥಿಗಲಿಗೆ ಜೀವನ ಕೌಶಲಗಳನ್ನು ಬೋಧಿ ಸುತ್ತದೆ.
2.ವಿಷಯ ಜ್ಞಾನವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ.
3. ಅತಂರಕ್ರಿಯೆಗಳ ಮೂಲಕ ಸಾಮಾಜಿಕ ಕೌಶಲಗಳನ್ನು ಒದಗಿಸುತ್ತದೆ.✔
4. ವಿದ್ಯಾರ್ಥಿಗಳನ್ನು ಉತ್ತಮ ಕಲಿಕಾರ್ಥಿಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ.

64. ಮಗುವಿನ ಸಾಮಾಜಿಕ ಬೆಳವಣಿಗೆಯ ಒಂದು ಸೂಚಕ..
1. ಕುಟುಂಬದ ಗುಂಪಿನಿಂದ ಬೇರ್ಪಡೆಗೊಂಡು ಸಮವಯಸ್ಕರ ಗುಂಪಿನ ಕ್ರಿಯಾಶೀಲ ಸದಸ್ಯನಾಗುವುದು. ✔
2. ಎಲ್ಲಾ ಶಾಲಾ ವಿಷಯಗಳಲ್ಲಿ ಆಸಕ್ತಿ ಮತ್ತು ಕಾಳಜಿ ತೋರುವುದು.
3. ತಾರ್ಕಿಕವಾಗಿ ಮತ್ತು ಬೌದ್ಧಿಕವಾಗಿ ಆಲೋಚಿಸುವ ಸಾಮಥ್ರ್ಯ
4. ಆಸಕ್ತಿಯ ಒಂದು ವಿಷಯವನ್ನು ಕಲಿಯುವಲ್ಲಿ ವಿಸ್ತರಿಸಲ್ಪಟ್ಟ ಅವಧಾನದ ವ್ಯಾಪ್ತಿ

65. ಕಲಿಕೆಯ ಮೌಲ್ಯಮಾಪನದಲ್ಲಿ ಮುಖ್ಯ ಕೇಂದ್ರಿತ ಅಂಶ..
1.ಕಲಿಕೆಯ ಕೌಶಲಗಳನ್ನು ಬೆಳೆಸುವುದು
2.ಕಲಿವಿನ ಫಲಗಳಲ್ಲಿನ ಸಾಧನೆಯನ್ನು ಕಂಡುಕೊಳ್ಳುವುದು. ✔
3. ವಿದ್ಯಾರ್ಥಿಗಳನ್ನು ಆಗಾಗ್ಗೆ ಮೌಲ್ಯಾಂಕನ ಮಾಡುವುದು.
4. ಓದಿನ ಹವ್ಯಾಸಗಳನ್ನು ಬೆಳೆಸುವುದು.

66. ವೈಗೋಟ್ಸ್ಕಿ ಅವರ ಪ್ರಕಾರ ಕಲಿಕೆಯು ಒಳಗೊಳ್ಳುವ ಒಂದು ಅಂಶ..
1. ಸಂವಹನವನ್ನು ಒಳಗೊಳ್ಳುವ ಸಾಮಾಜಿಕ ಅಂತರಕ್ರಿಯೆಗಳು. ✔
2. ಮಕ್ಕಳ ವಿಕಾಸದೊಂದಿಗೆ ಮುಂದುವರಿಯುವ ಜ್ಞಾನಾತ್ಮಕ ವಿಕಾಸ
3. ಪ್ರಯೋಗದ ಮೂಲಕ ಸಂಶೋಧನೆ
4. ಬೌದ್ಧಿಕ ವಿಕಾಸದ ಪ್ರಕ್ರಿಯೆಗಳು

67. ಪ್ರಗತಿಶೀಲ ಶಿಕ್ಷಣದ ಒಂದು ಪ್ರಮುಖ ಪರಿಕಲ್ಪನೆ..
1. ಶಿಕ್ಷಣ ಮತ್ತು ಮೌಲ್ಯಮಾಪನದಲ್ಲಿ ಶಿಕ್ಷಕನೇ ಪ್ರಧಾನ
2. ಪ್ರತಿ ಮಗುವೂ ಕಲಿಕೆಯ ಸಾಮಥ್ರ್ಯವನ್ನು ಹೊಂದಿದೆ ಎಂಬ ಕಲ್ಪನೆ✔
3. ವಿಷಯ ಕೇಂದ್ರಿತ ಕಲಿಕೆಗೆ ಅವಕಾಶ
4. ಅಭಿಪ್ರೇರಣೆಯ ವಿಕಾಸ ಮತ್ತು ಪ್ರತಿ ಮಗುವಿನ ಮೌಲ್ಯಾಂಕನ.

68. ಶಿಕ್ಷಕರಿಗೆ ಬಹು ಆಯಾಮದ ಬುದ್ದಿಶಕ್ತಿ ಕಲ್ಪನೆಯ ಒಂದು ಮುಖ್ಯವಾದ ಉಪಯೋಗ..
1. ಮಕ್ಕಳು ಹೇಗೆ ಕಲಿಯ ಬಯಸುತ್ತಾರೆ ಹಾಗೂ ಮಾಹಿತಿಯನ್ನು ಸಂಸ್ಕರಿಸುತ್ತಾರೆ ಎಂಬುದನ್ನು ತಿಳಿಯುವುದು. ✔
2. ಪ್ರತಿ ಮಗುವಿನ ವ್ಯಕ್ತಿತ್ವ ವಿಕಸನವನ್ನು ಮೌಲ್ಯಾಂಕನ ಮಾಡುವುದು.
3. ಮಕ್ಕಳ ಶೈಕ್ಷಣಿಕ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡುವುದು.
4. ತಮ್ಮ ಸುಗಮಗಾರಿಕೆ ಪ್ರಕ್ರಿಯೆಗಳನ್ನು ಯೋಜಿಸುವುದು.

69. ಮಕ್ಕಳಲ್ಲಿನ ಜ್ಞಾನಾತ್ಮಕ ಕೌಶಲಗಳಲ್ಲಿನ ವ್ಯಕ್ತಿ ಭಿನ್ನತೆಗೆ ಒಂದು ಉದಾಹರಣೆ..
1. ಒಂದು ದೈಹಿಕ ಕಾರ್ಯವನ್ನು ಮಾಡುವುದು.
2. ಕೋಪವನ್ನು ವ್ಯಕ್ತಪಡಿಸುವುದು.
3. ಮೋಟರ್ ಸೈಕಲ್ ಚಲಾಯಿಸುವುದು.
4. ಕಲಿಕೆಯ ವೇಗ ✔

70. ತರಗತಿಗಳಲ್ಲಿ ಲಿಂಗತಾರತಮ್ಯದ ಒಂದು ಪರಿಣಾಮ..
1. ಅದು ವಿದ್ಯಾರ್ಥಿಗಳಲ್ಲಿ ಸ್ಫರ್ಧೆಯನ್ನು ಬೆಳೆಸುತ್ತದೆ.
2. ಹುಡುಗರು ಮತ್ತು ಹುಡುಗಿಯರಿಗೆ ವಿಭಿನ್ನ ಅವಕಾಶಗಳನ್ನು ಕಲ್ಪಿಸುತ್ತದೆ.
3. ಪರಿಪೂರ್ಣ ವಿಕಾಸ ಮತ್ತು ಕಲಿಕೆಯನ್ನು ಮಿತಿಗೊಳಿಸುತ್ತದೆ. ✔
4. ಕಲಿಕೆಯನ್ನು ಉತ್ತೇಜಿಸುತ್ತದೆ.

71. ಸಾಮಾಜಿಕ ರಚನೆಯಾಗಿ ಲಿಂಗಭೇದಕ್ಕೆ ಒಂದು ಉದಾಹರಣೆ..
1. ಹೆಣ್ಣುಮಕ್ಕಳು ಆರಂಭದಲ್ಲಿ ಭಾಗವಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಮತ್ತು ತರಗತಿ ಚಟುವಟಿಕೆಗಳಲ್ಲಿ ಭಾಗವಹಿಸುವುದು.
2. ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಪೋಷಕರ ಹಿಂಜರಿಕೆ✔
3. ಹೆಣ್ಣು ಮಕ್ಕಳ ಉತ್ತಮ ಕಾರ್ಯನಿರ್ವಹಣೆ
4. ಗಂಡು ಮಕ್ಕಳು ಹೆಚ್ಚಿನ ದೈಹಿಕ ಕಾರ್ಯಗಳನ್ನು ಮಾಡುವುದು.

72. ಒಬ್ಬ ಶಿಕ್ಷಕರು ಶಾಲಾ ಆಧಾರಿತ ಮೌಲ್ಯಾಂಕನವನ್ನು ಅನುಸರಿಸಲು ಅಪೇಕ್ಷಿಸುತ್ತಾನೆ, ಇದರಿಂದ ಅವನು/ ಅವಳು ..
1. ಮೌಲ್ಯಾಂಕನವನ್ನು ಸಮಗ್ರವಾಗಿ ಮಾಡಬಹುದು.
2. ವಿದ್ಯಾರ್ಥಿಗಳ ಮೌಲ್ಯಾಂಕನವನ್ನು ಸುಲಭವಾಗಿ ಮಾಡಬಹುದು.
3. ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದು.
4. ಅವನ/ ಅವಳ ತರಗತಿಯಲ್ಲಿನ ಭೋಧನೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬಹುದು. ✔

73. ಒಂದು ಸಮಸ್ಯೆಯನ್ನು ಪರಿಹರಿಸುವಾಗ ಮಗು ಆಲೋಚಿಸಲು ಆರಂಭಿಸುತ್ತದೆ. ಇದರ ಫಲಿತವಾಗಿ ಮಗು..
1. ಮಗು ಭ್ರಮೆಯನ್ನು ಮೂಡಿಸಿಕೊಳ್ಳುತ್ತದೆ.
2. ಮಗು ಮಾನಸಿಕವಾಗಿ ಪರಿಹಾರ ಪಡೆದುಕೊಳ್ಳುತ್ತದೆ.✔
3. ಮಗು ಅನುಬಂಧಿತವಾಗಿ ಕಲಿಯುತ್ತದೆ.
4. ಮಗು ಚುರುಕಾಗುತ್ತದೆ.

74. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಒತ್ತು ನೀಡುವ ಅಂಶ..
1. ವಿದ್ಯಾರ್ಥಿಗಳ ಆಲೋಚನಾ ಪ್ರಕ್ರಿಯೆಗಳು ಹಾಗೂ ಕಂಠಪಾಠಕ್ಕೆ ನಿರುತ್ತೇಜನ✔
2. ಆಗಾಗ್ಗೆ ಕಿರು ಪರೀಕ್ಷೆಗಳು ಮತ್ತು ಪರೀಕ್ಷೆಗಳನ್ನು ನಡೆಸುವುದು.
3. ಮೌಲ್ಯಮಾಪನ ಮಾಡುವುದಕ್ಕೆ ಮುಂಚಿತವಾಗಿ ಪಠ್ಯ ಪುಸ್ತಕವನ್ನು ಪೂರ್ಣಗೊಳಿಸುವುದು.
4. ಪ್ರತಿ ವಿಷಯಗಳನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳ ಸಾಧನೆ.

75. ವಿದ್ಯಾರ್ಥಿಗಳ ಮೌಲ್ಯಾಂಕನವನ್ನು ಮಾಡಲು ಪರಿಗಣಿಸುವ ಒಂದು ಪ್ರಮುಖ ಅಂಶ..
1. ನಿಗದಿತ ಪಠ್ಯ ವಿಷಯಗಳು
2. ಕಲಿವಿನ ಫಲಗಳು ✔
3. ತರಗತಿಗಳಲ್ಲಿ ಒದಗಿಸಿದ ಕಲಿವಿನ ಅನುಭವಗಳು
4. ಶಾಲಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಾರ್ಯನಿರ್ವಹಣೆ

76. ವೈವಿದ್ಯಮಿಯ ವಿದ್ಯಾರ್ಥಿಗಳಿಗಿರುವ ಒಳಗೊಳ್ಳುವ ತರಗತಿಯಲ್ಲಿ ಸಹಕಾರಿ ಕಲಿವು ಮತ್ತು ಸಮವರ್ತಿ   ಕಲಿಕೆಯು/ ನ್ನು
1.ಸಹಪಾಠಿಗಳೊಂದಿಗೆ ಹೋಲಿಸಿಕೊಳ್ಳುವುದನ್ನು ಕೆಲವೊಮ್ಮೆ ಉತ್ತೇಜಿಸುತ್ತದೆ.
2. ಮಕ್ಕಳಲ್ಲಿನ ಸ್ಫರ್ಧೆಯನ್ನು ಸಕ್ರಿಯವಾಗಿ ನಿರುತ್ತೇಜಿಸುತ್ತದೆ.
3. ಸಹಪಾಠಿಗಳ ಸ್ವೀಕಾರಾರ್ಹತೆಯ ಸುಲಭೀಕರಣವನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ.✔
4. ಅಭ್ಯಾಸ ಮಾಡಬಾರದು ಮತ್ತು ವಿದ್ಯಾರ್ಥಿಗಳನ್ನು ಅವರ ಸಾಮಥ್ರ್ಯ ಆಧರಿಸಿ ವಿಂಗಡಿಬೇಕು.

77. ಒಳಗೊಳ್ಳುವ ಶಿಕ್ಷಣದ ಕಲ್ಪನೆಯು..
1. ವಿಶೇಷ ಶಾಲೆಗಳು ಅಥವಾ ತರಗತಿಗಳ ಬಳಕೆಯನ್ನು ಒಪ್ಪಿಕೊಳ್ಳುತ್ತದೆ.
2. ಆಗಾಗ್ಗೆ ಕಿರು ಪರೀಕ್ಷೆಗಳು ಮತ್ತು ಪರೀಕ್ಷೆಗಳನ್ನು ನಡೆಸುತ್ತದೆ.
3. ವಿಶೇಷ ಅಗತ್ಯತೆಯ ಮಕ್ಕಳನ್ನು ಇತರೆ ಮಕ್ಕಳಿಂದ ತರಗತಿಯಲ್ಲಿ ಬೇರ್ಪಡಿಸುವುದನ್ನು ಅನುಮತಿಸುತ್ತದೆ.
4. ವಿಶೇಷ ಶಾಲೆಗಳು ಅಥವಾ ತರಗತಿಗಳ ಬಳಕೆಯನ್ನು ನಿರಾಕರಿಸುತ್ತದೆ. ✔

78. ತನ್ನ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸುವ ಕ್ರಿಯಾತ್ಮಕ ಪದ್ಧತಿಗಳನ್ನು ಸಂಶೋಧಿಸುವ ಮತ್ತು ಅನ್ವಯಿಸುವ ಸಾಮಥ್ರ್ಯ ಇಬ್ಬ ಶಿಕ್ಷಕರಿಗೆ ಇದೆ. ಇದು ಸೂಚಿಸುವುದು ಅವರ..
1. ಬುದ್ದಿಶಕ್ತಿ
2. ಕ್ರೀಯಾಶೀಲತೆ ✔
3. ಆಲೋಚನೆ
4. ಅಭಿಕ್ಷಮತೆ

79. ಇವುಗಳಲ್ಲಿ ಯಾವುದು ಡಿಸ್ಲೆಕ್ಸಿಯಾದ ಒಂದು ಲಕ್ಷಣವಲ್ಲ?
1. ಎಡಗೈ ಅಥವಾ ಬಲಗೈ ಬಳಕೆ✔
2. ನಿಖರವಾಗಿ ಓದುವುದು, ವೇಗ ಮತ್ತು ಗ್ರಹಿಕೆಯಲ್ಲಿ ಸಮಸ್ಯೆಗಳು
3. ನಿಧಾನವಾಗಿ ಬರೆಯುವುದು.
4. ಪದಗಳನ್ನು ಸ್ಮರಣೆಗೆ ತಂದುಕೊಳ್ಳುವಲ್ಲಿನ ಕಠಿಣತೆ

80. ಸ್ವತಂತ್ರವಾಗಿ ಆಲೋಚಿಸುವುದನ್ನು ಉತ್ತೇಜಿಸಲು ಮತ್ತು ಮಕ್ಕಳನ್ನು ಪರಿಣಾಮಕಾರಿ ಕಲಿಕಾರ್ಥಿಗಳನ್ನಾಗಿ ಮಾಡಲು ಶಿಕ್ಷಕರು..
1. ಪ್ರತಿ ಸಾಧನೆಗೆ ಮಕ್ಕಳಿಗೆ ಬಹುಮಾನವನ್ನು ನೀಡಬೇಕು.
2. ವಿವಿಧ ಕಲಿವಿನ ವಸ್ತುಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧಿಸಬೇಕು.
3. ಕಲಿಕೆಯ ಮಾಹಿತಿಯನ್ನು ಸಣ್ಣ ಘಟಕಗಳಾಗಿ ಅಥವಾ ತುಣುಕುಗಳಾಗಿ ಒದಗಿಸಬೇಕು. ✔
4. ಸ್ಮರಿಸಲು ಸುಲಭವಾಗುವಂತೆ ಮಾಹಿತಿಯನ್ನು ವ್ಯವಸ್ಥಿತವಾಗಿ ಒದಗಿಸಬೇಕು.

81. ವಿದ್ಯಾರ್ಥಿಗಳಲ್ಲಿ ಕಲಿಕೆಯ ವಿಫಲತೆಗೆ ಕಾರಣವಾಗುವ ಒಂದು ಅಂಶ..
1. ಶಾಲಾ ಸೌಲಭ್ಯಗಳ ಕೊರತೆ
2. ಅಭಿಪ್ರೇರಣೆಯ ಕೊರತೆ ✔
3. ಶಿಕ್ಷಕರ ಒತ್ತಡ
4. ಶಾಲಾ ಪಠ್ಯಕ್ರಮ

82. ಕಲಿಕೆಗೆ ಅಗತ್ಯವಾದ ಆಂತರಿಕ ಮೂಲಭೂತ ಅಂಶ..
1. ಸಿದ್ಧತೆ✔
2. ಪರಿಪಕ್ವತೆ
3. ದೈಹಿಕ ಬೆಳವಣಿಗೆ
4. ಮನೋಧೋರಣೆ

83. ಸಮಸ್ಯಾ ಪರಿಹಾರ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಲು ಶಿಕ್ಷಕರು ಒದಗಿಸುವ ಚಟುವಟಿಕೆಗಳು..
1. ನಿಖರತೆ ಮತ್ತು ಸ್ಪಷ್ಟತೆಯನ್ನು ಒಳಗೊಂಡಿರಬೇಕು.
2. ಕಂಠಪಾಠ ಮಾಡುವಂತೆ ಮತ್ತು ಗ್ರಹಿಸುವಂತೆ ಇರಬೇಕು.
3. ಅಭ್ಯಾಸ ಮತ್ತು ಆಗಾಗ್ಗೆ ರೂಢಿಸಿಕೊಳ್ಳುವಂತೆ ಇರಬೇಕು.
4. ವಿಚಾರಣೆ, ಕಾರಣೀಕರಿಸುವುದು ಮತ್ತು ನಿರ್ಧಾರಗಳನ್ನು ಕೈಗೊಳ್ಳುವಂತೆ ಇರಬೇಕು. ✔

84. ಓದಲು ಕಲಿಯಲು ಇದರಲ್ಲಿನ ಜ್ಞಾನಾತ್ಮಕ ಕೌಶಲ..
1. ಮಾನಸಿಕ ಪ್ರವೃತ್ತಿ
2. ಆಲೋಚಿಸುವ ಸಾಮಥ್ರ್ಯ
3. ಮಾತನಾಡುವ ಭಾಷೆ✔
4. ಭಾವನಾಶಕ್ತಿ

85. ಮಗುವಿನ ಸಮಸ್ಯಾ ಪರಿಹಾರ ವರ್ತನೆ ವ್ಯಕ್ತವಾಗುವುದು…
1. ಆಲೋಚನೆ ಮತ್ತು ಕಾರಣೀಕರಿಸುವ ಶಕ್ತಿಯಿಂದ✔
2. ಜ್ಞಾನದ ವಿವಿಧ ಮೂಲಗಳನ್ನು ಪರಾಮರ್ಶಿಸುವುದರಿಂದ
3. ಯತ್ನ ಮತ್ತು ದೋಷ ವಿಧಾನದ ಪ್ರಯೋಗಗಳ ಮೂಲಕ
4. ನಂಬಿಕಸ್ಥ ಶಿಕ್ಷಕರ ಸಹಾಯವನ್ನು ಪಡೆಯುವುದರಿಂದ

86. ತಾವೇ ಸ್ವತಃ ಕಲಿಯಲು ಮಕ್ಕ ಳು         ಬಳಸುವ ಒಂದು ಮಾರ್ಗೋಪಾಯ..
1. ಮೂರ್ತ ವಸ್ತುಗಳನ್ನು ಗ್ರಹಿಸುವುದು ಮತ್ತು ಸಂವೇದನಾ ಜ್ಞಾನವನ್ನು ಪಡೆದುಕೊಳ್ಳುವುದು. ✔
2. ಶಿಕ್ಷಕರು ಸೂಚಿಸಿದ ಪುಸ್ತಕಗಳನ್ನು ಓದುವುದು.
3. ತರಗತಿಗಳಲ್ಲಿ ಅವಧಾನದಿಂದ ಕಲಿಯುವುದು.
4. ಶಿಕ್ಷಕರು ಒದಗಿಸಿದ ಜ್ಞಾನವನ್ನು ಗ್ರಹಿಸುವುದು.

87. ಸಂವೇದನೆಯನ್ನು ವಿವರಿಸುವ ಒಂದು ಅಂಶ..
1. ಮಗುವಿನಲ್ಲಿನ ಒಂದು ಸಾಮಾನ್ಯ ಭಾವನೆಯನ್ನು ಮಾನಸಿಕವಾಗಿ ವ್ಯಕ್ರಪಡಿಸುವುದು.
2. ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಒಂದು ಬಾಹ್ಯ ಪ್ರಚೋದನೆಗೆ ಪ್ರತಿಕ್ರಿಯೆ✔
3. ತಾರ್ಕಿಕ ಆಲೋಚನೆ
4. ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಶಾಂತವಾಗಿರುವುದು.

88. ಮಗು ಒಂದು ವಿಷಯವನ್ನು ಕಲಿಯುವುದರಲ್ಲಿ ಸಂತೋಷವನ್ನು ಅನುಭವಿಸಿ, ಅದರಲ್ಲಿ ತೊಡಗಿಸಿಕೊಳ್ಳುತ್ತದೆ. ಇದು..
1. ಪ್ರೋತ್ಸಾಹವನ್ನು ಸೂಚಿಸುತ್ತದೆ.
2. ಬಲವನ್ನು ಸೂಚಿಸುತ್ತದೆ
3. ಆಂತರಿಕ ಅಭಿಪ್ರೇರಣೆಯನ್ನು ಸೂಚಿಸುತ್ತದೆ. ✔
4. ಬಾಹ್ಯ ಅಭಿಪ್ರೇರಣೆಯನ್ನು ಸೂಚಿಸುತ್ತದೆ.

89. ಕಲಿಕೆಯ ಮೇಲೆ ವರ್ತನೆಯ ಪ್ರಭಾವ..
1. ಅದು ಪ್ರಚೋದನೆ ಮತ್ತು ಪ್ರತಿಕ್ರಿಯೆಯನ್ನು ಬದಲಾಯಿಸುತ್ತದೆ.
2. ಅದು ಕಲಿಕಾರ್ಥಿಗಳನ್ನು ನಿರ್ದಿಷ್ಟ ಗುರಿಗಳೆಡೆಗೆ ನಿರ್ದೇಶಿಸುತ್ತದೆ✔
3. ಬಹು ಕಾರ್ಯಗಳನ್ನು ನೀಡುತ್ತದೆ.
4. ಓದುವ ಹವ್ಯಾಸಗಳನ್ನು ಬೆಳೆಸುತ್ತದೆ.

90. ಕಲಿಕೆಯನ್ನು ಪ್ರಭಾವಿಸುವ ಪ್ರಕ್ರಿಯಾ ಆಧಾರಿತ ಒಂದು ಅಂಶ..
1. ಕಲಿಕಾರ್ಥಿಯ ಮೂಲ ಸಾಮಥ್ರ್ಯ
2. ವಸ್ತು ವಿಷಯದ ಮೇಲಿನ ಪ್ರಭುತ್ವ
3. ವಿಷಯದ ಸ್ವಭಾವ ಮತ್ತು ಕಲಿವಿನ ಅನುಭವಗಳು
4. ಹೊಸ ಕಲಿಕೆಯನ್ನು ಹಿಂದಿನ ಕಲಿಕೆಯೊಂದಿಗೆ ಸಂಬಂಧಿಸುವುದು.✔

# ಇವುಗಳನ್ನೂ ಓದಿ : 

# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-II – LANGUAGE-2 : ENGLISH – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-III – CHILD DEVELOPMENT AND PEDAGOGY – Key Answers

# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-1- LANGUAGE-1- KANNADA – Key Answers

# ಎಫ್‌ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

 

error: Content Copyright protected !!