ಕರ್ನಾಟಿಕ್ ಯುದ್ಧಗಳು
1.ಮೊದಲನೆಯ ಕರ್ನಾಟಿಕ್ ಯುದ್ಧ(1746-48)
ಯುರೋಪಿನಲ್ಲಿ ಆಸ್ಟ್ರಿಯಾ ಉತ್ತರಾಧಿಕಾರದ ಯುದ್ದವು 1740ರಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡೆಯಿತು. ಯುರೋಪಿನಲ್ಲಿ ಆದ ಈ ಯುದ್ಧಗಳು ಭಾರತದಲ್ಲೂ ಪ್ರಭಾವ ಬೀರಿದವು. ನೌಕಾಬಲದಲ್ಲಿ ಪ್ರಬಲರಾದ ಇಂಗ್ಲಿಷರು ಹಿಂದೂ ಮಹಾಸಾಗರದಲ್ಲಿ ಫ್ರೆಂಚರ ಹಡಗುಗಳನ್ನು ನಾಶಪಡಿಸಿದರು. ಆಗ ಫ್ರೆಂಚ್ ಗವರ್ನರ್ ಆಗಿದ್ದ “ಡೂಪ್ಲೆ”ಯು ಇಂಗ್ಲೀಷರಿಂದ ಮದ್ರಾಸನ್ನು ವಶÀಪಡಿಸಿಕೊಂಡನು. ಇಂಗ್ಲೀಷರು ತಮ್ಮ ವ್ಯಾಪಾರ ಕೇಂದ್ರವಾದ ಮದ್ರಾಸನ್ನು ಬಿಡಿಸಿಕೊಡುವಂತೆ ನವಾಬನ ನೆರವು ಕೋರಿದರು. ನವಾಬನು ಫ್ರೆಂಚರಿಗೆ ಮದ್ರಾಸ್ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿದನು. ಆದರೆ ಆತನ ಸೂಚನೆಯನ್ನು ಡೂಪ್ಲೆಯು ತಿರಸ್ಕರಿಸಿದನು. ನವಾಬನು ತನ್ನ ಸೈನ್ಯದೊಡನೆ ಮದ್ರಾಸ್ಗೆ ಮುತ್ತಿಗೆ ಹಾಕಿದನು. ಆದರೆ ಫ್ರೆಂಚರಿಂದ ಸೋಲಿಸಲ್ಪಟ್ಟನು. ಇದೇ ವೇಳೆಗೆ ಇಂಗ್ಲಿಷರು ‘ಪಾಂಡಿಚೇರಿಯನ್ನು’ವಶಪಡಿಸಿಕೊಳಲ್ಲು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನ ಫಲಕಾರಿಯಾಗುವ ಮೊದಲೇ ಯುರೋಪಿನಲ್ಲಿ ಯುದ್ಧಕೊನೆಗೊಂಡು ಅವರೊಳಗೆ ರಾಜಿಯಾಯಿತು. ಇದರಿಂದಾಗಿ ‘ಮದ್ರಾಸ್’ನ್ನು ಇಂಗ್ಲಿಷರಿಗೆ ಹಿಂದಿರುಗಿಸಲಾಯಿತು.
2.ಎರಡನೇ ಕರ್ನಾಟಿಕ್ ಯುದ್ಧ(1749-1754)
ಎರಡನೇ ಕರ್ನಾಟಿಕ್ ಯುದ್ಧಕ್ಕೆ ಕಾರಣ ಇಂಗ್ಲೀಷರು ಮತ್ತು ಫ್ರೆಂಚರು ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಮತ್ತು ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಸ್ಥಳೀಯ ರಾಜರುಗಳ ಆಂತರಿಕ ವ್ಯವಹಾರದಲ್ಲಿ ಕೈ ಹಾಕಲು ತೊಡಗಿದುದು. 1748ರಲ್ಲಿ ಹೈದರಾಬಾದ್ನಲ್ಲಿ ನಿಜಾಮನ ಮರಣಾನಂತರ ನಿಜಾಮನ ಮಗ “ನಾಸಿರ್ಜಂಗ್” ಮತ್ತು ಮೊಮ್ಮಗ “ಮುಜಾಫರ್ ಜಂಗ್’ ನಡುವೆ ಸಿಂಹಾಸನಕ್ಕಾಗಿ ಕಲಹ ಆರಂಭವಾಯಿತು.
ಇದೇ ಸಂದರ್ಭದಲ್ಲಿ “ಮುಜಾಫರ್ ಜಂಗ್” ಮತ್ತು ಕರ್ನಾಟಕದ “ ಚಂದಾಸಾಹೇಬ” ಒಂದಾಗಿ ಫ್ರೆಂಚ್ ಗವರ್ನರ್ ಡೂಪ್ಲೆಯ ಸಹಾಯ ಕೋರಿದರು. ಚಂದಾಸಾಹೇಬನು ಡೂಪ್ಲೆ ಮತ್ತು ಮುಜಾಫರ್ ಜಂಗ್ರೊಡನೆ ಕನಾಟಕದ ಮೆಲೆ ದಾಳಿ ಮಾಡಿ ನವಾಬ “ಅನ್ವರುದ್ದೀನ “ನ್ನು ಕೊಂದನು. ಅನ್ವರುದ್ದೀನನ ಮಗನಾದ “ಮಹಮ್ಮದ್ ಅಲಿ” ತಿರುಚಿನಾಪಲ್ಲಿ ಕೋಟೆಯಲ್ಲಿ ಆಶ್ರಯ ಪಡೆದನು. ಇಂಗ್ಲೀಷರು ‘ನಾಸಿರ್ಜಂಗ್’ ಮತ್ತು ‘ಮಹಮ್ಮದ್ ಅಲಿ’ಗೆ ಬೆಂಬಲ ನೀಡಿದರು. ಮತ್ತು ಅವರು ಮುಜಾಫರ್ ಜಂಗ್ ಚಂದಾಸಾಹೇಬ ಮತ್ತು ಫ್ರೆಂಚರ ಸೈನ್ಯವನ್ನು ಸೋಲಿಸಿದರು. ಮುಜಾಫರ್ ಜಂಗ್ ಹೈದರಾಬಾದ್ನ ನಿಜಾಮನಾಗಿ ಚಂದಾಸಾಹೇಬನು ತಿರುಚಿನಾಪಲ್ಲಿಗೆ ಹಾಕಿದ ಮುತ್ತಿಗೆಗೆ ಬೆಂಬಲ ನೀಡಿದನು.
ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿದ್ದ ರಾಬರ್ಟ್ ಕ್ಲೈವ್” ಚಂದಾ ಸಾಹೇಬನ ರಾಧಾನಿ ಆರ್ಕಾಟ್ನ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು. ಚಂದಾಸಾಹೇಬ ತಂಜಾವೂರಿಗೆ ಓಡಿಹೋದನು. ಅಲ್ಲಿ ಅವನ ಹತ್ಯೆಯಾಯಿತು. ಎರಡನೆ ಕರ್ನಾಟಿಕ್ ಯುದ್ಧದಲ್ಲಿ ಸೋಲು ಗೆಲವು ಸರಿಯಾಗಿ ಇತ್ಯರ್ಥವಾಗಲಿಲ್ಲ. ಆದರೆ ಇಂಗ್ಲಿಷರು ಮತ್ತು ಫ್ರೆಂಚರು ಸಾಕಷ್ಟು ಪ್ರದೇಶಗಳನ್ನು ತಮ್ಮದಾಗಿಸಿಕೊಂಡರು. ಕರ್ನಾಟಕದಲ್ಲಿ ಇಂಗ್ಲಿಷರ ಪ್ರಾಬಲ್ಯ ಮುಂದುವರಿಯಿತು. ಹೈದರಾಬಾದಿನಲ್ಲಿ ಫ್ರೆಂಚರು ತಮ್ಮ ಸಾಮಥ್ರ್ಯವನ್ನು ಬೆಳೆಸಿಕೊಂಡರು.
3.ಮೂರನೇ ಕರ್ನಾಟಿಕ್ ಯುದ್ಧಗಳು-(1758-1763)
1758 ರಲ್ಲಿ ಮೂರನೇ ಬಾರಿಗೆ ಕರ್ನಾಟಕದಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ಯುದ್ಧ ಪ್ರಾರಂಭವಾಯಿತು. ಇದಕ್ಕೆ ಯುರೋಪಿನಲ್ಲಿ ಅವರೊಳಗೆ ಪ್ರಾರಂಭವಾದ “ಸಪ್ತ ವಾರ್ಷಿಕ ಯುದ್ಧ”(1756-1763) ಕಾರಣವಾಯಿತು. ಫ್ರೆಂಚ್ ಸರ್ಕಾರ ಇಂಗ್ಲೀಷರ ಪ್ರಾಬಲ್ಯವನ್ನು ಮುರಿಯಲು ಭಾರತಕ್ಕೆ “ಕೌಂಟ್ -ಡಿ- ಲಾಲಿಯನ್ನು” ಗವರ್ನರ್ ಆಗಿ ಕಳಿಸಿತು. ಅವನು ಮದ್ರಾಸಿನ ಮೆಲೆ ಮುತ್ತಿಗೆ ಹಾಕಲು ಹೈದರಾಬಾದನಲ್ಲಿದ್ದ ಫ್ರೆಂಚ್ ದಂಡನಾಯಕ “ಕ್ಯಾಪ್ಟನ್ ಬುಸ್ಸಿ” ಯನ್ನು ಕರೆಸಿಕೊಂಡನು. ಈ ಅವಕಾಶವನ್ನು ಉಪಯೋಗಿಸಿಕೊಂಡು ಇಂಗ್ಲಿಷರು ಹೈದರಾಬಾದ್ನ್ನು ವಶಪಡಿಸಿಕೊಂಡು ಅಲ್ಲಿಂದ ಫ್ರೆಂಚರನ್ನು ಓಡಿಸಿದರು.
ಇಂಗ್ಲಿಷರ ಸೇನಾನಿ “ಐರ್ ಕೂಟನಿಗೂ ಫ್ರೆಂಚರ ನಾಯಕ “ಬುಸ್ಸಿ”ಗೂ ಪಾಂಡಿಚೇರಿ ಸಮೀಪ “ವಾಂಡಿವಾಷ್”ನಲ್ಲಿ 1760ರಲ್ಲಿ ಯುದ್ಧ ನಡೆಯಿತು. ಇದರಲ್ಲಿ ಫ್ರೆಂಚರ ಸೋಲಾಯಿತು. ಬುಸ್ಸಿಯನ್ನು ಸೆರೆ ಹಿಡಿಯಲಾಯಿತು. 1761ರಲ್ಲಿ ‘ಕೌಂಟ್-ಡಿ- ಲಾಲಿಯು’ ಪಾಂಡಿಚೇರಿಯಲ್ಲಿ ಇಂಗ್ಲಿಷರಿಗೆ ಶರಣಾದನು. ವಾಂಡಿವಾಷ್ ಯುದ್ದವು ಭಾರತದಲ್ಲಿ ಫ್ರೆಂಚರ ಪ್ರಾಬಲ್ಯವನ್ನು ಕೊನೆಗೊಳಿಸಿತು.
ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ, ಏನಿದರ ವಿಶೇಷತೆಗಳು..?