GeographyGKScienceSpardha Times

ಜೀವಿಗೋಳದ ಪರಿಕಲ್ಪನೆ

Share With Friends

ಭೂಮಿಯ ಜಲಾವರಣ, ಶಿಲಾವರಣ ಹಾಗೂ ವಾತಾವರಣ ಸೇರಿ ಜೀವಿಗೋಳವಾಗಿದೆ. ಇದು ಎಲ್ಲಾ ಜೀವಿಗಳನ್ನು ಹಾಗೂ ಅವುಗಳ ವಾಸನೆಲೆಗಳನ್ನು ಒಳಗೊಂಡಿದೆ. ಇದು ಭೂಮಿಯ ಮೇಲ್ಮೈಯಿಂದ ಕೆಲವು ಕೀಲೋಮೀಟರ್‍ಗಳಷ್ಟು ಮಾತ್ರ ಒಳಹೊಕ್ಕು ವಾತಾವರಣದ ಒಳಗೆ ಕೆಲವು ಕೀಲೋಮೀಟರ್‍ಗಳಷ್ಟು ಮಾತ್ರ ವ್ಯಾಪಿಸಿದೆ.

• ಜಲಗೋಲ ಅಥವಾ ಜಲಾವರಣ
ಭೂಮಿಯ ಮೇಲೆ ವಸ್ತುವಿನ ಮೂರು ರೂಪಗಳಲ್ಲಿ ಲಭ್ಯವಿರುವ ಒಂದೇ ಒಂದು ಸಂಯುಕ್ತವೆಂದರೆ, ನೀರು. ಭೂಮಿಯ ಮೇಲಿನ ನೀರೆಲ್ಲಾ ಜಲಗೋಲದಲ್ಲಿ ಸೇರಿದೆ. ಸಾಗರದಲ್ಲಿಯ ಜೀವಿಗಳು ನಡೆಸಿದ ದ್ಯುತಿ ಸಂಶ್ಲೇಷಣೆಯಂಥ ಜೈವಿಕ ಪ್ರಕ್ರಿಯೆಗಳ ಪರಿಣಾಮವಾಗಿ ವಾತಾವರಣದಲ್ಲಿನ ಆಕ್ಸಿಜನ್ ಪ್ರಮಾಣವು ಕ್ರಮೇಣ ಹೆಚ್ಚಾಗುತ್ತಾ ಹೋಯಿತು. ಇದಾಗಿದ್ದು ಸುಮಾರು 3.5 ಬಿಲಿಯನ್ ವರ್ಷಗಳ ಹಿಂದೆ. ಆಕ್ಸಿಜನ್ ಉತ್ಪಾದನೆಯ ತರುವಾಯ ಓಜೋನ್ ರೂಪುಗೋಳ್ಳುವುದು ಆರಂಭವಾಯಿತು. ಆದರಿಂದಾಗಿ ಭೂ ನೆಲದ ಮೇಲೆ ಜೀವದ ವಿಕಾಸವೂ ಆಯಿತು. ಆಲಗೋಲದಲ್ಲಿ ನಡೆಯುವ ಪ್ರಕ್ರಿಯೆಗಳು ವಾತಾವರಣದ ರಚನೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಜೀವಿ ವ್ಯವಸ್ಥೆಯೇ ನೀರಿನಂಥ ದ್ರವ್ಯದ ರಚನೆ ಹಾಗೂ ಸ್ವಭಾವಕ್ಕೆ ಒಗ್ಗಿಕೊಂಡಿದೆ.

• ಶಿಲಾವರಣ:
ಭೂಮಿಯ ಮೇಲ್ಫದರ ಭಾಗವೇ ಶಿಲಾವರಣ. ಇದು ಬೆಟ್ಟ ಗುಡ್ಡಗಳು, ಸಾಗರ ತಳಗಳು ಮತ್ತು ಸಮತಟ್ಟಾದ ಭೂಭಾಗಳನ್ನು ಪ್ರತಿನಿಧಿಸುತ್ತದೆ. ಭೂಮಿಯ ಮೇಲ್ಪದರವು ತಂಪಾಗಿಯೂ ಘನರೂಪದಲ್ಲಿಯೂ ಇದೆ. ಶಿಲಾವರನವು ಜೀವ ಕುದುರಲು ಅನುವು ಮಾಡಿಕೊಡುತ್ತದೆ.

• ವಾತಾವರಣ
ಭೂಮಿಯ ವಿಶಿಷ್ಟತೆಯೆಂದರೆ ಅದರ ವಾತಾವರಣ. ವಾತಾವರಣವು ಭೂಮಿಗೆ ಮಾತ್ರವಲ್ಲ, ಇತರ ಆಕಾಶಕಾಯಗಳಿಗೂ ಇರುತ್ತದೆ. ಇದು ಗ್ರಹಗಳ ಸುತ್ತ ಇರುವ ಅನಿಲಗಳ ಚಿಪ್ಪಿನ ಹೆಸರು. ಈ ಅನಿಲಗಳ ಪದರಿನ ಸಂಯೋಜನೆಯು ಗ್ರಹದಿಂದ ಗ್ರಹಕ್ಕೆ ಭಿನ್ನವಾಗಿರುತ್ತದೆ. ಭೂಮಿಯ ರಚನೆ ಮತ್ತು ಉಷ್ಣತೆಯನ್ನು ಆಧರಿಸಿ ವಾತಾವರಣವನ್ನು ವಿವಿಧ ಸ್ತರಗಳಾಗಿ ವರ್ಗೀಕರಿಸಲಾಗಿದೆ. ವಾಯುಮಂಡಲದ ಸ್ತರಗಳು ಯಾವುದೆಂದರೆ,

1. ಟ್ರೋಪೋಸ್ಫಿಯರ್
ಭೂ ಚಿಪ್ಪಿಗೆ ಅತ್ಯಂತ ಹತ್ತಿರವಿರುವ ಸ್ತರವನ್ನು “ ಟ್ರೋಪೋಸ್ಪಿಯರ್” ಅಥವಾ “ ಉಷ್ಣಗೋಲ” ಎನ್ನುವರು.(ಟ್ರೋಪೋಸ್ ಎಂದರೆ- ಉಷ್ಣ). ಸಮುದ್ರ ಮಟ್ಟದಿಂದ ಪ್ರಾರಂಭಿಸಿ, ಟ್ರೋಪೋಸ್ಫಿಯರ್ 4 ರಿಂದ 12 ಮೈಲುಗಳಷ್ಟು ( 6 ರಿಂದ 20 ಕಿ.ಮೀ) ಎತ್ತರದಲ್ಲಿದೆ. ಇಡೀ ವಾಯುಂಡಲದಲ್ಲಿರುವ ಸುಮಾರು ಶೇಕಡ 75% ಭಾಗದಷ್ಟು ವಾಯುವಿನ ಅಣುಗಳು ಈ ಉಷ್ಣಗೋಲದಲ್ಲಿ ಇವೆ. ಆಕ್ಸಿಜನ್ ಮತ್ತು ನೈಟ್ರೋಜನ್‍ಗಳು ಈ ಭಾಗದಲ್ಲಿಯೇ ಹರಡಿಕೊಂಡಿವೆ. ಸಹಜವಾಗಿಯೇ, ನಮ್ಮ ಅಸ್ತಿತ್ವವು ಉಷ್ಣಗೋಲದ ರಚನೆಯನ್ನು ನೇರವಾಗಿ ಅವಲಂಬಿಸಿದೆ.
ಮೋಡ, ಬಿರುಗಾಳಿ, ಹಿಮ, ಮಳೆ ಮುಂತಾದ ಹವಾಮಾನದ ವೈಪರೀತ್ಯಗಳನ್ನು ನಿರ್ಧರಿಸುವಲ್ಲಿ ಉಷ್ಣಗೋಲವು ಪ್ರಮುಖ ಪಾತ್ರ ವಹಿಸುತ್ತದೆ.

2. ಸ್ಟ್ರಾಟೋಸ್ಫಿಯರ್ :
ಉಷ್ಣಗೋಲದ ಮೇಲಿನ ಸ್ತರವನ್ನು “ ಸ್ಟ್ರ್ಯಾಟೋಸ್ಫಿಯರ್” ಅಥವಾ ಸ್ತರ ಗೋಲ’ ಎನ್ನುವರು. ಇದು ಉಷ್ಣ ಗೋಲದಿಂದ ಸುಮಾರು 40 ಕಿ.ಮೀ ವರೆಗೆ ಹೊರ ಚಾಚಿದೆ. ಸ್ತರ ಗೋಲವು ಆಕ್ಸಿಜನ್‍ನ ಬಹುರೂಪಿಯಾದ ಓಜೋನ್ ನೆಲೆಯಾಗಿದೆ.

3. ಮೆಸೋಸ್ಫಿಯರ್:
ಇದನ್ನು ‘ದಿ ಮಿಡ್ಲ್ ಅಟ್ಮಾಸ್ಫಿಯರ್” ಎಂದು ಕರೆಯುತ್ತಾರೆ. ಇದು ಭೂಮಿಯ ಮೇಲ್ಮೈಯಲ್ಲಿ ಸುಮಾರು 31 ಮೈಲುಗಳಷ್ಟು ( 50 ಕಿ.ಮೀ) ಆರಂಭಗೊಂಡು ಮತ್ತು 53 ಮೈಲುಗಳಷ್ಟು (80 ಕಿ.ಮೀ) ವರೆಗೆ ವಿಸ್ತರಿಸಿದೆ. ಮೆಸೋಸ್ಫಿಯರ್‍ನಲ್ಲಿನ ತಾಪಮಾನದ ವರ್ತನೆಯು ಉಷ್ಣವಲಯದಂತೆಯೇ ಇರುತ್ತದೆ. ಏಕೆಂದರೆ ಅದು ಎತ್ತರದಲ್ಲಿ ಇಳಿಯುತ್ತದೆ. ಇಲ್ಲಿ ಗಾಳಿಯ ಉಷ್ಣತೆಯು ಎತ್ತರದೊಂದಿಗೆ ಕಡಿಮೆಯಾಗುತ್ತಲೇ ಇರುತ್ತದೆ. ವಾತಾವರಣದ ಈ ಪದರವು ಶೀತವಾಗಿದ್ದೂ, ವಾತಾವರಣದ ತೆಳುವಾದ ಪದರಾಗಿದೆ.
ಮೆಸೋಸ್ಫಿಯರ್‍ನ ಕೊನೆಯಲ್ಲಿ ಇದೆ “ ಮೆಸೋಪಾಸ್” ಇದು ಮೆಸ್ಫಸ್ಫಿಯರ್ ಮತ್ತು ಥರ್ಮೋಸ್ಫಿಯರ್‍ನ್ನು ಬೇರ್ಪಡಿಸುವ ಗಡಿ ಪದರಾಗಿದೆ.

4. ಥರ್ಮೋಸ್ಫಿಯರ್:
ಇದು ವಾತಾರಣದ ವಿಶಾಲ ಪದರಾಗಿದೆ. ಭೂಮಿಯ ಮೇಲೆ 53 ಮೈಲು ಮತ್ತು 375( 90- 640 ಕಿ.ಮೀ) ಮೈಲ್ ನಡುವೆ ಈ ಪದರವು ಹರಡಿಕೊಂಡಿದೆ. ಈ ಪದರಿನಲ್ಲಿ ಉತ್ತರದ ದೀಪಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನಿಂದ ಹೊರಹೊಮ್ಮುವ ಕಾಸ್ಮಿಕ್ ವಿಕಿರಣ ಮತ್ತು ವಿಕಿರಣದ ಕ್ರಿಯೆಯಿಂದಾಗಿ ಅವು ಕಾಣಿಸಿಕೊಳ್ಳುತ್ತವೆ.

5. ಎಕ್ಸೋಸ್ಪೀಯರ್:
ಇದು ವಾತಾವರಣದ ಕೊನೆಯ ಪದರಾಗಿದೆ. ಇದು ಭೂಮಿಯ ಮೇಲ್ಮೈಯಿಂದ ಹೆಚ್ಚು ದೂರದಲ್ಲಿರುವ ಪದರವಾಗಿದೆ. ಇದರ ಎತ್ತರದಿಂದಾಗಿ ಇದು ಅತ್ಯಂತ ಅನಿರ್ದಿಷ್ಟವಾಗಿದೆ. ಭೂಮಿಯ ಮೇಲಿಂದ 600 ರಿಂದ 10000 ಕಿ.ಮೀ ಗಳ ವಾತಾವರಣದ ಹೊರ ಅಂಚಿನಲ್ಲಿದೆ. ವಾತಾವರಣದ ಈ ಪದರವು ಭೂಮಿಯನ್ನು ಬಾಹ್ಯಾಕಾಶದಿಂದ ಬೇರ್ಪಡಿಸುತ್ತದೆ.

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು
ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
ಕನ್ನಡ ಪ್ರಮುಖ ಕವಿಗಳ ಬಿರುದುಗಳು
ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ

error: Content Copyright protected !!