ಜೀವದ ಉಗಮ ಮತ್ತು ವಿಕಾಸ
ಈ ಭೂಮಿಯ ಮೇಲೆ ಉಂಟಾದ ಜೀವಗಳ ಉಗಮವನ್ನು ವಿವಿಧ ತತ್ವಜ್ಞಾನಿಗಳು, ವಿದ್ವಾಂಸರು ತಮ್ಮದೇ ಆದ ವಾದವನ್ನು ಮುಂದಿಟ್ಟು ವಾದಿಸುತ್ತಾರೆ.
• ವಿಶೇಷ ಸೃಷ್ಠಿವಾದ :
ಈ ವಾದದ ಪ್ರಕಾರ ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ದೇವರು ಒಂದೇ ಸಲ ಸೃಷ್ಟಿಸಿದರು. ಈ ವಾದವನ್ನು ಪ್ರಪಂಚದ ಎಲ್ಲಾ ಧರ್ಮಗಳು ಮತ್ತು ನಾಗರಿಕತೆಗಳು ಬೆಂಬಲಿಸುತ್ತವೆ. ಆದರೆ ಈ ವಾದಕ್ಕೆ ಮನ್ನಣೆಯಿಲ್ಲ. ಏಕೆಂದರೆ ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ಆಧಾರಗಳಲ್ಲಿ.
• ಜೀವ ಬೀಜವಾದ :
ಈ ವಾದದ ಪ್ರಕಾರ ಜೀವಿಗಳು ಬೇರೆ ಬೇರೆ ಗ್ರಹಗಳಲ್ಲಿ ಮೊದಲೇ ಇದ್ದವು. ಅವುಗಳ ಧೂಳಿನ ರೂಪದಲ್ಲಿ ಈ ಭೂಮಿಯ ಮೇಲೆ ಬಿದ್ದವು. ಅವು ಹುಟ್ಟಿ ಜೀವಿಗಳ ಬೆಳವಣಿಗೆಯಾದವು. ಆದರೆ ಈ ವಾದವನ್ನು ಸಹ ಯಾರೂ ಒಪ್ಪಲೂ ತಯಾರಿಲ್ಲ. ಏಕೆಂ ದರೆ ಬೇರೆ ಗ್ರಹಗಳಲ್ಲಿ ಜೀವಿಗಳಿರುವುದು ಇನ್ನೂ ದೃಡಪಟ್ಟಿಲ್ಲ ಮತ್ತು ಬಾಹ್ಯಾಕಾಶದಲ್ಲಿರುವ ವಿಕಿರಣದ ತೀವ್ರತೆಗೆ ಮತ್ತು ಹವಾಮಾನದ ವೈಪರೀತ್ಯಗಳಿಗೆ ಇವು ಬದುಕಿ ಉಳಿಯಲು ಸಾಧ್ಯವಿಲ್ಲ.
• ನಿರ್ಜೀವಜನನವಾದ :
ಈ ವಾದವನ್ನು ಸ್ವಯಂ ಜನನವಾದ ಎಂದೂ ಕರೆಯಲಾಗುತ್ತದೆ. ಈ ವಾದವನ್ನು ಸೃಷ್ಠಿಸಿ ಪ್ರಚಾರ ಮಾಡಿದವನು ಅರಿಸ್ಟಾಟಲ್. ಇವನ ಪ್ರಕಾರ ಕೆಲವು ವಸ್ತುಗಳಲ್ಲಿ ಒಂದು ರೀತಿಯ ಕ್ರಿಯಾಶೀಲ ವಸ್ತುವಿರುತ್ತದೆ. ಇದು ಸೂರ್ಯನ ಕಿರಣಗಳಲ್ಲಿ ಕೊಳೆಯುತ್ತಿರುವ ಸಾವಯವ ವಸ್ತುಗಳಲ್ಲಿ ಮಣ್ಣು, ಸಗಣಿ ಮುಂತಾದ ವಸ್ತುಗಳಲ್ಲಿ ಈ ತತ್ವ ಅಡಗಿರುತ್ತದೆ. ಅನುಕೂಲಕರ ಸಂದರ್ಭಗಳು ಇದಗಿ ಬಂದಾಗ, ಇವುಗಳಲ್ಲಿರುವ ಈ ಕ್ರಿಯಾಶೀಲ ನಿರ್ಜೀವ ವಸ್ತು ಜೀವ ಪಡೆದು ಜೀವಿಯಾಗುತ್ತವೆ.
• ಜೀವ ಜನನವಾದ :
ಈ ವಾದದ ಪ್ರತಿಪಾದಕರು ಫ್ರಾನ್ಸಿಸ್ಕೋರೇಡೆ, ಸ್ಪಲಾಂಜನಿ ಹಾಗೂ ಲೂಯಿಪಾಶ್ಚರ್. ಇವರ ಪ್ರಕಾರ ಜೀವಿಗಳು ತಮ್ಮಂತೆಯೇ ಇರುವ ಜೀವಿಗಳಿಂದಷ್ಟೆ ಹುಟ್ಟಬಲ್ಲವು. ನಿರ್ಜೀವ ವಸ್ತುಗಳಿಗೆ ಜೀವಿಗಳನ್ನು ಸೃಷ್ಟಿಸುವ ಶಕ್ತಿ ಇರುವುದಿಲ್ಲ ಎಂದು ಈ ವಾದ ನಂಬುತ್ತದೆ. ಇವರು ಸರಳ ಪ್ರಯೋಗಗಳ ಮೂಲಕ ಈ ವಾದವನ್ನು ಎಲ್ಲರೂ ಒಪ್ಪುವಂತೆ ವಿವರಿಸಿದರು. ಮತ್ತು ನಿರ್ಜೀವ ಜನನವಾದವನ್ನು ತಪ್ಪು ಎಂದು ನಿರೂಪಿಸಿದರು.
• ರಾಸಾಯನಿಕ ಜನನವಾದ :
1922 ರಲ್ಲಿ ರಷ್ಯಾದ ವಿಜ್ಞಾನಿ ಒಪ್ಯಾರಿನ್ ತನ್ನ ‘ ಭೂಮಿಯ ಮೇಲೆ ಜೀವದ ಉಗಮ’ ಎಂಬ ತನ್ನ ಪುಸ್ತಕದಲ್ಲಿ ಈ ವಾದವನ್ನು ಸಮರ್ಥವಾಗಿ ಮಂಡಿಸಿದನು. 1928 ರಲ್ಲಿ ಇವನ ವಾದವನ್ನು ಹ್ಯಾಲ್ಡೇನ್ ಎಂಬ ವಿಜ್ಞಾನಿ ಸಮರ್ಥಿಸಿದನು.
ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಭೂಮಿ ರಚನೆಯಾದಾಗ ಅದರ ಉಷ್ಣತೆಯು 4000- 8000 ಡಿಗ್ರಿ ಸೆಲ್ಸಿಯಸ್ ಇತ್ತು. ಕ್ರಮೇಣ ಭೂಮಿ ತಣ್ಣಗಾಗುತ್ತ ಬಂದು ಕ್ರಮೇಣ 100 ಡಿಗ್ರಿ ಸೆಲ್ಸಿಯಸ್ ಗೆ ಇಳಿದಾಗ ನೀರಿನ ಆವಿ ಘನೀಕೃತವಾಗಿ ಅನೇಕ ವರ್ಷಗಳ ಕಾಲ ಸತತವಾಗಿ ಮಳೆ ಸುರಿಯತೊಡಗಿತು. ಇದರಿಂದ ಭೂಮಿ ತಾಪವು ಈಗಿರುವಷ್ಟರ ಮಟ್ಟಿಗೆ ತಣ್ಣಗಾಯಿತು. ಸತತವಾಗಿ ಸುರಿದ ಮಳೆಯಿಂದ ಭೂಮಿಯ ಮೇಲೆ ನೀರು ಹರಿದು ತಗ್ಗು ಪ್ರದೇಶಗಳಲ್ಲಿ ಹರಿದು ಒಂದೆಡೆ ಸಂಗ್ರಹವಾದವು. ಇವು ಸರೋವರ, ನದಿ, ಸಮುದ್ರ, ಸಾಗರಗಳು ಎತ್ತರವಾದ ಭಾಗವು ಭೂಮಿಯಾಯಿತು. ಭೂಮಿಯಲ್ಲಿದ್ದ ತಾಪವು ತಣ್ಣಗಾಗಿ ಅದರಲ್ಲಿದ್ದ ಅನಿಲಗಳು ಆವಿಯಾಗಿ ವಾತಾವರಣ ಸೃಷ್ಠಿಯಾಯಿತು.
ವಾತಾವರಣದಲ್ಲಿ ಹೈಡ್ರೋಜನ್ , ನೈಟ್ರೋಜನ್, ಆಕ್ಸಿಜನ್ , ಕಾರ್ಬನ್ ಮುಂತಾದ ಅನಿಲಗಳು ತುಂಬಿದ್ದವು. ಇವುಗಳ ನಡುವೆ ನಡೆದ ರಾಸಾಯನಿಕ ಕ್ರಿಯೆಗಳಿಂದಾಗಿ ಗ್ಲೂಕೋಸ್, ಅಮೋನಿಯಾ, ಇಂಗಾಲದ ಡೈ ಆಕ್ಸೈಡ್ ಮುಂತಾದ ಅಣುಗಳು ರೂಪುಗೊಂಡವು. ಈ ಅಣುಗಳ ಸಂಯೋಜನೆಯಿಂದ ಶರ್ಕರಗಳು , ಸಾವಯವ ಆಮ್ಲಗಳು, ಆಲ್ಕೋಹಾಲ್ ಮತ್ತು ಅಮೈನೋ ಆಮ್ಲಗಳು ರೂಪುಗೊಂಡವು. ಈ ಬೃಹತ್ರೂಪದ ಜೈವಿಕ ಅಣುಗಳು ರೂಪಗೊಂಡ ನಂತರ ಕ್ರಮೇಣ ಸಾಂದ್ರಗೋಳ್ಳುವ ಮೂಲಕ ಕೋಶಗಳ ರೂಪದಲ್ಲಿ ಮೊದಲ ಜೀವ ಉಗಮವಾಗಿರಬೇಕೆಂದು ನಂಬಲಾಗಿದೆ. ಆದಿಯಲ್ಲಿ ಈ ರೀತಿ ಉಗಮವಾದ ಮೊದಲ ಜೀವಿಗಳೇ ಆದಿ ಜೀವಿಗಳು ಏಕಕೋಶ ಜೀವಿಗಳು, ಪ್ರೋಟೋಸೋವಾಗಳು.
• ಜೀವವಿಕಾಸ
ಆದಿಯಲ್ಲಿ ಈ ಭೂಮಿಯ ಮೇಲೆ ಏಕಕೋಶ ಜೀವಿಗಳು ಸೃಷ್ಟಿಯಾದ ನಂತರ ಅವು ಹಾಗೆಯೇ ಉಳಿಯಲಿಲ್ಲ. ಅವು ವಿಕಾಸವಾಗುತ್ತ ಭಿನ್ನ- ವಿಭಿನ್ನವಾ ಜೀವಿಗಳು ಈ ಭೂಮಿಯ ಮೇಲೆ ರೂಪಗೊಂಡವು. ಇಂದು ಈ ಭೂಮಿಯ ಮೇಲೆ ಏಕಕೋಶ ಮತ್ತು ಬಹುಕೋಶ ಜೀವಿಗಳು ವಿವಿಧ ಆಕಾರ, ಗಾತ್ರ, ಬಣ್ಣ ಮತ್ತು ಆಂತರಿಕ ರಚನೆಯನ್ನು ಹೊಂದಿವೆ.
ಪೂರ್ವದಲ್ಲಿ ಅಸ್ತತ್ವದಲ್ಲಿದ್ದ ಸರಳ ಜೀವಿಗಳಿಂದ ನಿಧಾನಗತಿಯಲ್ಲಿ ಹೆಚ್ಚು ಹೆಚ್ಚು ಸಂಕೀರ್ಣವಾದ ಜೀವಿಗಳ ರೂಪುಗೊಳ್ಳುವಿಕೆಯೇ ಜೀವ ವಿಕಾಸ.
ಜೀವ ವಿಕಾಸದ ಸಿದ್ಧಾಂತಗಳು
1. ಅರಿಸ್ಟಾಟಲ್ನ ಸಿದ್ಧಾಂತ
ಇವನ ಪ್ರಕಾರ ಮಣ್ಣು, ಅಗ್ನಿ, ನೀರು ಮತ್ತು ಗಾಳಿಗಳೆಂಬ ಧಾತುಗಳಿಂದ ಜೀವ ಉತ್ಪತ್ತಿಯಾಗಿದೆ. ಇವನ ಪ್ರಕಾರ ಜೀವವಿಕಾಸಕ್ಕೆ ಕಾರಣ ಜೀವಿಗಳ ಸ್ವರೂಪದಲ್ಲಿ ‘ ಬದಲಾವಣೆಯು’ ಪ್ರಮುಖವಾದದ್ದು.
2. ಲೆಮಾರ್ಕ್ನ ಸಿದ್ಧಾಂತ :
1809 ರಲ್ಲಿ ಫ್ರೆಂಚ್ ದೇಶದ ಜೀವ ವಿಜ್ಞಾನಿ ಬ್ಯಾಪ್ಪಿಸ್ಟ್ ಲೆಮಾರ್ಕ್ ಜೀವ ವಿಕಾಸದ ಬಗ್ಗೆ ತನ್ನ ಸಿದ್ಧಾಂತವನ್ನು ‘ ಫಿಲಾಸಫಿಕಲ್ ಜುವಾಲಾಜಿಕ್’ ಎಂಬ ಗ್ರಂಥದಲ್ಲಿ ಪ್ರಕಟಪಡಿಸಿದ.
ಲೆಮಾರ್ಕ್ನ ನಿಯಮಗಳು
• ಅಂಗಾಂಗಳ ಉಪಯೋಗ ಮತ್ತು ಅನುಪಯೋಗ
ಯಾವ ಅಂಗಗಳನ್ನು ಜೀವಿಗಳು ಹೆಚ್ಚು ಬಳಸುತ್ತವೆಯೋ, ಆ ಅಂಗಗಳು ಹೆಚ್ಚು ವೃದ್ಧಿಗೊಳ್ಳುತ್ತವೆ.
ಉದಾ- ಜಿರಾಫೆಗಳ ಪೂರ್ವಜರು ಚಿಕ್ಕ ಕುತ್ತಿಗೆ ಹೊಂದಿದ್ದು, ನೆಲಮಟ್ಟದಲ್ಲಿ ದೊರಕುತ್ತಿದ್ದ ಹುಲ್ಲು ಮತ್ತು ಸಸ್ಯಗಳನ್ನು ತಿನ್ನುತ್ತಿದ್ದವು. ಅನಂತರ ಆಹಾರವು ನೆಲಮಟ್ಟದಲ್ಲಿ, ಸಿಗದೇ ಹೋದುದರಿಂದ ಇವು ಮೇಲ್ಮಟ್ಟದಲ್ಲಿನ ಎಲೆಗಳನ್ನು ತಿನ್ನಲು ಕುತ್ತಿಗೆಯನ್ನು ಚಾಚಲು ಪ್ರಾರಂಭಿಸಿ ಕಾಲ ಕ್ರಮೇಣ ಉದ್ದವಾದ ಕುತ್ತಿಗೆಯನ್ನು ಪಡೆದವು.
ಯಾವ ಅಂಗಗಳನ್ನು ಜೀವಿಗಳು ಹೆಚ್ಚಾಗಿ ಬಳಸಲಾರವೋ ಅವು ಕೃಶಗೊಂಡು ಕಾಲಕ್ರಮೇಣ ಕಾರ್ಯರಹಿತವಾಗಿ ನಂತರ ಸಂಪೂರ್ಣವಾಗಿ ಮರೆಯಾಗುತ್ತವೆ.
ಉದಾ- ಹಾವುಗಳ ಪೂರ್ವಜ ಕಾಲುಗಳನ್ನು ಹೊಂದಿದ್ದರೂ, ಅವುಗಳನ್ನು ಬಳಸದೇ ತೆವಳಲು ಪ್ರಾರಂಭಿಸಿದ್ದರಿಂದ ಅವುಗಳ ಕಾಲುಗಳು ಕಾಲಕ್ರಮೇಣ ನಶಿಸಿಹೋದವು.
• ಅರ್ಜಿಸಿದ ಅಥವಾ ಗಳಿಸಿದ ಲಕ್ಷಣಗಳು ಅನುವಂಶೀಯವಾಗಿ ಪ್ರವಹಿಸುತ್ತದೆ.
ಜೀವಿಗಳಲ್ಲಿ ಹೊಸದಾಗಿ ಗಳಿಸಿದ ಲಕ್ಷಣಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅನುವಂಶೀಯವಾಗಿ ವರ್ಗಾವಣೆಗೊಳ್ಳುತ್ತವೆ.
ಲೆಮಾರ್ಕ್ನ ಸಿದ್ಧಾಂತಗಳನ್ನು ತಪ್ಪು ಎಂದು ‘ ಆಗಸ್ಟ್ ವೈಸ್ಮನ್’ ತನ್ನ ಪ್ರಯೋಗದ ಮೂಲಜ ತೋರಿಸಿಕೊಟ್ಟನು. ಇವನು ಇಲಿಗಳ ಬಾಲವನ್ನು ಕತ್ತರಿಸಿ, ನಂತರ ಅವುಗಳ ಮುಂದಿನ ಪೀಳಿಗೆಯಲ್ಲಿ ಬಾಲಗಳು ಸ್ವಾಭಾವಿಕವಾಗಿ ಇರುವುದನ್ನು ನಿರೂಪಿಸಿದನು. ಇದರಿಂದಾಗಿ ಲೆಮಾರ್ಕ್ನ ಜೀವ ವಿಕಾಸ ಸಿದ್ಧಾಂತ ಬಿದ್ದು ಹೋಯಿತು.
3. ಡಾರ್ವಿನ್ನ ಜೀವ ವಿಕಾಸ ಸಿದ್ಧಾಂತ
ಜೀವ ವಿಕಾಸದ ಸಿದ್ಧಾಂತಕ್ಕೆ ಎಲ್ಲರು ಒಪ್ಪುವಂತಹ ವೈಜ್ಞಾನಿಕ ವಿವರಣೆಯನ್ನು ಚಾಲ್ರ್ಸ್ ಡಾರ್ವಿನ್ನು ನೀಡಿದನು. ಆದ್ದರಿಂದ ಇವನನ್ನು ‘ ಜೀವ ವಿಕಾಸದ ಪಿತಾಮಹಾ’ ಎನ್ನುವರು.
ಇವನು ಎಚ್.ಎಮ್.ಎಸ್ ಬೀಗಲ್ ಎಂಬ ಹಡಗಿನಲ್ಲಿ ತನ್ನ ಯಾನವನ್ನು ಪ್ರಾರಂಭಿಸಿ ಆಸ್ಟ್ರೇಲಿಯಾ, ಗ್ಯಾಲಪೋಗಾಸ್ ದ್ವೀಪಗಳು, ದಕ್ಷಿಣ ಅಮೇರಿಕ, ಅಟ್ಲಾಂಟಿಕ್ ದ್ವೀಪಗಳಲ್ಲಿ ಸಂಚರಿಸಿ, ತನು ಕಂಡು ಕೊಂಡ ವಿಚಾರಗಳಿಗೆ ನಿರ್ದಿಷ್ಟ ಉದಾಹರಣೆಗಳನ್ನು ನಿದರ್ಶಿಸಿದ. ಸುಮಾರು 20 ವರ್ಷಗಳ ಕಾಲ ತನ್ನ ವೀಕ್ಷಣೆಯನ್ನು ದಾಖಲಿಸಿ 1859ರಲ್ಲಿ “ ಆರಿಜನ್ ಆಫ್ ಬೈ ನ್ಯಾಚುರಲ್ ಸೆಲೆಕ್ಷನ್’ ಎಂಬ ಗ್ರಂಥವನ್ನು ಪ್ರಕಟಿಸಿದನು.
4. ಡಾರ್ವಿನ್ ಸಿದ್ಧಾಂತದ ನಿಯಮಗಳು
• ಮೀತಿಮೀರಿದ ಸಂತಾನೋತ್ಪತ್ತಿ : ಜೀವಿಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯವನ್ನು ಪಡೆದಿವೆ. ಏಕೆಂದರೆ ಜನ್ಮತಾಳಿದ ಮರಿಗಳೆಲ್ಲವೂ ಉಳಿದು ಸಂತಾನೋತ್ಪತ್ತಿ ಮಾಡಲಾರವು.
• ಉಳಿವಿಗಾಗಿ ಹೋರಾಟ:
ಮಿತಿ ಮೀರಿದ ಸಂತಾನೋತ್ಪತ್ತಿಯಿಂದಾಗಿ ಜೀವಿಗಳಲ್ಲಿ ಉಳಿವಿಗಾಗಿ ಹೋರಾಟ ಉಂಟಾಗುವುದು. ಈ ಹೋರಾಟ ಆಹಾರ, ವಾಸಸ್ಥಳ ಮತ್ತು ಸಂಗಾತಿಗಾಗಿ ನಡೆಯುವುದು.
• ನಿಸರ್ಗದಲ್ಲಾಗುವ ವಿಭಿನ್ನತೆಗಳು:
ಯಾವಾಗ ಜೀವಿಗಳ ನಡುವೆ ಪ್ರಬಲವಾದ ಸ್ಫರ್ಧೆ ಏರ್ಪಡುತ್ತದೆಯೋ, ಆಗ ನಿಸರ್ಗದ ಅಂಶಗಳು ಅವುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಆಗ ಅವುಗಳಲ್ಲಿ ಕೆಲವು ಭಿನ್ನವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವೇ ವಿಭಿನ್ನತೆಗಳು.
• ಬಲಿಷ್ಟವಾಗಿರುವುಗಳ ಉಳಿಕೆ:
ಪರಿಸರಕ್ಕೆ ಹೊಂದಿಕೊಂಡ ಜೀವಿಗಳೇ ಬಲಿಷ್ಟ ಜೀವಿಗಳು. ಇವು ಮಾತ್ರ ಉಳಿಯಲು ಸಾಧ್ಯವಾಗುತ್ತದೆ. ದುರ್ಬಲವಾದ , ಪರಿಸರಕ್ಕೆ ಹೊಂದಿಕೊಳ್ಳದ ಜೀವಿಗಳು ನಶಿಸಿಹೋಗುತ್ತವೆ.
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕರ್ನಾಟಕದ ಮುಖ್ಯ ನದಿಗಳು ಮತ್ತು ಅವುಗಳು ಉಗಮ ಸ್ಥಳ