GKScienceSpardha Times

ತಾಪಮಾಪಕ ಅಥವಾ ಉಷ್ಣತಾಮಾಪಕ

Share With Friends

ಒಂದು ವ್ಯವಸ್ಥೆಯ ತಾಪವನ್ನು ಪರಿಮಾಣಾತ್ಮಕವಾಗಿ ಅಳೆಯುವ ಸಾಧನವೇ ತಾಪಮಾಪಕ.
ಹೆಚ್ಚಿನ ತಾಪಮಾಪಕಗಳಲ್ಲಿ ದ್ರವಗಳಿಗೆ ಉಷ್ಣ ನೀಡಿದಾಗ ವ್ಯಾಕೋಚಿಸುವ ಗುಣವನ್ನು ಉಪಯೋಗಿಸಿ ತಾಪವನ್ನು ಅಳೆಯಲಾಗುತ್ತದೆ. ತಾಪ ಹೆಚ್ಚುವುದರೊಂದಿಗೆ ತಾಪಮಾಪಕದ ಸ್ತಂಭದಲ್ಲಿರುವ ದ್ರವರೂಪದ ಪಾದರಸ ಸ್ಥಂಭದ ಉದ್ದ ಹೆಚ್ಚುತ್ತದೆ. ದೈನಂದಿನ ಜೀವನದಲ್ಲಿ ತಾಪಮಾಪಕವನ್ನು ನಾವು ಸಾಮಾನ್ಯವಾಗಿ ಉಪಯೋಗಿಸುತ್ತೇವೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಾಪಮಾಪಕಗಳನ್ನು ನೋಡಬಹುದು.

• ಪ್ರಯೋಗಶಾಲಾ ಉಷ್ಣತಾ ಮಾಪಕ
ಪ್ರಯೋಗಶಾಲಾ ಉಷ್ಣತಾ ಮಾಪಕವನ್ನು ತಾಪವನ್ನು ಅಳೆಯಲು ಅಥವಾ ತಾಪದ ಬದಲಾವಣೆಗಳನ್ನು ಕರಾರುವಕ್ಕಾಗಿ ಅಳೆಯಲು ಉಪಯೋಗಿಸುತ್ತಾರೆ. ಇದನ್ನು ಲೋಹ ಅಥವಾ ಗಾಜಿನಿಮದ ಮಾಡಿರುತ್ತಾರೆ ಮತ್ತು ಇದನ್ನು ಹದಮಾಡುವಿಕೆ ಅಥವಾ ಅನಿಲನದ ವಿಧಾನದಿಂದ ಹೆಚ್ಚಿಗೆ ಬಾಳಿಕೆ ಬರುವಂತೆ ಮಾಡಲಾಗುತ್ತದೆ.

ಗಾಜಿನ ಬುರುಡೆಯಲ್ಲಿರುವ ದ್ರವ ಹೊರಗೆ ಸ್ರವಿಸದಂತೆ ಉಷ್ಣತಾಮಾಪಕವನ್ನು, ಗಾಜಿನಿಂದ ಮೊಹರ್ ಮಾಡಿರುತ್ತಾರೆ. ಸಾಮಾನ್ಯವಾಗಿ ಈ ದ್ರವಗಳು ಪಾದರಸ ಅಥವಾ ಕೆಂಪು ಅಲ್ಕೋಹಾಲ್ ಆಗಿರುತ್ತವೆ. ತಾಪದೊಂದಿಗೆ ಇದರ ಗಾತ್ರವು ಬದಲಾಗುತ್ತದೆ.

ದ್ವಿಲೋಹ ಪಟ್ಟಿಯಿಂದ ಮಾಡಲ್ಪಟ್ಟ ಉಷ್ಣತಾಮಾಪದಲ್ಲಿ ಎರಡು ಬೇರೆ ಲೋಹಗಳನ್ನು ಜೋಡಿಸಿರುತ್ತಾರೆ. ಬಿಸಿಯಾದಂತೆ ಅವುಗಳ ವ್ಯಾಕೋಚನೆಯ ದರವು ಬೇರೆಯಾಗಿರುತ್ತದೆ. ಹಲವುಬಾರಿ ಉದ್ದ ದ್ವಿಲೋಹ ಪಟ್ಟಿಯನ್ನು ಸುರುಳಿಯಂತೆ ಸುತ್ತಿ, ಸೂಚೀಫಲಕದೊಂದಿಗೆ ಉಪಯೋಗಿಸುತ್ತಾರೆ.

• ವೈದ್ಯಕೀಯ ತಾಪಮಾಪಕ ಅಥವಾ ಉಷ್ಣತಾಮಾಪಕ
ಮಾನವರ ಅಥವಾ ಪ್ರಾಣಿಗಳ ವೈದ್ಯಕೀಯ ಉಪಯೋಗಕ್ಕಾಗಿ ರಚಿಸಿರುವ ತಾಪಮಾಪಕಕ್ಕೆ ವೈದ್ಯಕೀಯ ತಾಪಮಾಪಕ ಎನ್ನುವರು. ಈ ಉಷ್ಣತಾಮಾಪಕದಲ್ಲಿ ಪಾದರಸವನ್ನು ಬಳಸಲಾಗಿದೆ. ತಾಪಮಾಪಕವು ಲೋಮನಾಳದಿಂದ ಮಾಡಲ್ಪಟ್ಟಿದೆ. ಅದರ ಒಂದು ತುದಿ ಮುಚ್ಚಿದ್ದು, ಇನ್ನೊಂದು ತುದಿಯನ್ನು ಬುರುಡುಗೆ ಸೆರಿಸಲಾಗಿದೆ.

ಬುರುಡೆಯ ಸಮೀಪ ಲೋಮನಾಳವನ್ನು ಬಗ್ಗಿಸಲಾಗಿದೆ. ಇದನ್ನು ‘ ಅದುಮುವಿಕೆ’ ಎನ್ನುವರು. ರೋಗಿಗಳ ಬಾಯಿ ಅಥವಾ ಕಂಕುಳದಲ್ಲಿಟ್ಟ ತಾಪಮಾಪಕವನ್ನು ಹೊರತೆಗೆದಕೂಡಲೇ ಪಾದರಸವು ಹಿಂದಕ್ಕೆ ಹೋಗುವುದನ್ನು ನಾಳದ ವಕ್ರತೆಯು ತಡೆಯುತ್ತದೆ. ತಾಪಮಾಪಕವನ್ನು ಉಪಯೋಗಿಸುವ ಮೊದಲು, ಅದನ್ನು ಜೋರಾಗಿ ಅಲುಗಾಡಿಸಿ ಪಾದರಸವನ್ನು ಬುರುಡೆಯೊಳಕ್ಕೆ ಹೋಗುವಂತೆ ಮಾಡಬೇಕು.

ಆರೋಗ್ರವಂತ ಮಾನವನ ದೇಹದ ತಾಪ ಸುಮಾರು 37 ಡಿಗ್ರಿ ಸೆಲ್ಸಿಯಸ್. ಇದು 98.6 ಡಿಗ್ರಿ ಪ್ಯಾರನ್‍ಹೀಟ್‍ಗೆ ಸಮನಾಗಿರುತ್ತದೆ. ಯಾವುದೇ ಕಾರಣಕ್ಕೂ, ನಮ್ಮ ದೇಹದ ತಾಪವು 37 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಮತ್ತು 42 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಇರುವುದಿಲ್ಲ. ಆದ್ದರಿಂದ ವೈದ್ಯಕೀಯ ತಾಪಮಾಪಕದ ವ್ಯಾಪ್ತಿಯು 35 ಡಿಗ್ರಿ ಸೆಲ್ಸಿಯಸ್ ಮತ್ತು 42 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

• ಸಾಮಾನ್ಯವಾಗಿ ಮೂರು ರೀತಿಯ ಪಟ್ಟಿಗಳನ್ನು ಉಪಯೋಗಿಸುತ್ತಾರೆ.
1. ಸೆಲ್ಸಿಯಸ್ ಪಟ್ಟಿ
2. ಫ್ಯಾರನ್ ಹೀಟ್ ಪಟ್ಟಿ
3. ಕೆಲ್ವಿನ್ ಪಟ್ಟಿ
1. ಸೆಲ್ಸಿಯಸ್ ಪಟ್ಟಿ: ತಾಪವನ್ನು ಸಾಮಾನ್ಯವಾಗಿ ಡಿಗ್ರಿ ಸೆಲ್ಸಿಯಸ್‍ನಿಂದ(ಸಿ) ಅಳೆಯುತ್ತಾರೆ. ಇದನ್ನು ಸಾಂಕೇತಿಕವಾಗಿ ‘ಸಿ’ ಎಂದು ಸೂಚಿಸುತ್ತಾರೆ.
ಸೆಲ್ಸಿಯಸ್ ಮಾಪಕದಲ್ಲಿ ಮಂಜುಗಡ್ಡೆಯ ದ್ರವನ ಬಿಂದುವನ್ನು ಸೊನ್ನೆ ಎಂತಲೂ ಮತ್ತು ನೀರಿನ ಕುದಿಬಿಂದುವನ್ನು 100 ಡಿಗ್ರಿ ಎಂದು ಗುರುತಿಸಲಾಗಿದೆ.

2. ಫ್ಯಾರನ್ ಹೀಟ್ ಪಟ್ಟಿ : ತಾಪದ ಇನ್ನೊಂದು ಮಾನವು ಫ್ಯಾರನ್‍ಹೀಟ್ ಆಗಿದೆ. ಇದನ್ನು ಸಾಂಕೇತಿಕವಾಗಿ ‘ ಎಫ್’ ಎಂದು ಸೂಚಿಸುತ್ತಾರೆ.
ಫ್ಯಾರನ್‍ಹೀಟ್‍ನಲ್ಲಿ ಮಂಜುಗಡ್ಡೆಯ ದ್ರವನ ಬಿ0ದುವನ್ನು 32 ಡಿಗ್ರಿ ಎಂದೂ, ನೀರಿನ ಕುದಿಯುವ ಬಿಂದುವನ್ನು 212 ಡಿಗ್ರಿ ಎಂದೂ ಗುರುತಿಸಲಾಘಿದೆ. ಇವುಗಳ ನಡುವಿನ ದೂರವನ್ನು 180 ಸಮಪಾಲು ಮಾಡಲಾಗಿದೆ. ಪ್ರತಿ ಒಂದು ಪಾಲು ಒಂದು ಡಿಗ್ರಿಯಾಗಿರುತ್ತದೆ.

3. ಕೆಲ್ವಿನ್ ಪಟ್ಟಿ : ತಾಪದ ಎಸ್. ಐ ಮಾನ ‘ ಕೆಲ್ವಿನ್’ ಆಗಿರುತ್ತದೆ.ಇದನ್ನು ಸಾಂಕೇತಿಕವಾಗಿ
‘ ಕೆ’ ಎಂದು ಸೂಚಿಸುತ್ತಾರೆ.
ಕೆಲ್ವಿನ್ ಮಾಪಕದಲ್ಲಿ ಮಂಜುಗಡ್ಡೆಯ ದ್ರವನ ಬಿಂದು 273 ಕೆ ಮತ್ತು ನೀರಿನ ಕುದಿಬಿಂದು 373 ಕೆ ಎಂದು ಗುರುತಿಸಲಾಗಿದೆ. ಸೆಲ್ಸಿಯಸ್ ಮಾಪಕದಲ್ಲಿರುವಂತೆ ಇ ಎರಡು ಬಿಂದುಗಳ ನಡುವಿನ ದೂರವನ್ನು 100 ಸಮಪಾಲು ಮಾಡಲಾಗಿದೆ. ಆದ್ದರಿಂದ ಕೆಲ್ವಿನ್ ಮಾಪಕವು ಸೆಲ್ಸಿಯಸ್ ಮಾಪಕದೊಂದಿಗೆ ಸೃಶ್ಯತೆಯನ್ನು ಹೊಂದಿದೆ.

• ಈ ಮೊದಲು ಸೆಲ್ಸಿಯಸ್ ಉಷ್ಣತಾಮಾಪಕವನ್ನು ಸೆಂಟಿಗ್ರೇಡ್ ಎಂದು ಪರಿಗಣಿಸಲಾಗಿತ್ತು. ಸ್ವೀಡನ್ ದೇಶದ ಖಗೋಳವಿಜ್ಞಾನಿ “ ಆಂಡ್ರೋಸ್ ಸೆಲ್ಸಿಯಸ್” ರವರು ಈ ಮಾಪಕವನ್ನು ಅಭಿವೃದ್ಧಿಪಡಿಸಿದರು.ಅದರಲ್ಲಿ ನೀರಿನ ಘನೀಭವಿಸುವ ಬಿಂದು ಮತ್ತು ಕುದಿಯುವ ಬಿಂದುವಿನ ನಡುವೆ ಇರುವ ದೂರವನ್ನು 100 ಸಮಪಾಲು ಮಾಡಲಾಗಿತ್ತು. ಹಾಗಾಗಿ ಇದನ್ನು “ ಸೆಂಟಿಗ್ರೇಡ್ ಮಾಪಕ” ಎನ್ನುವರು. ಆದರೆ 1648 ರಲ್ಲಿ ತೂಕ ಮತ್ತು ಅಳತೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ‘ ಸೆಲ್ಸಿಯಸ್ ಎಂಬ ಪದವನ್ನು ಬಳಕೆಗೆ ತರಲಾಯಿತು.

error: Content Copyright protected !!