ಈ ದಿನದ ಪ್ರಮುಖ ಪ್ರಚಲಿತ ಘಟನಾವಳಿಗಳು (07-01-2020)
# ಗಣರಾಜ್ಯೋತ್ಸವ ಪೆರೇಡ್ ಗೆ ಉತ್ತರಾಖಂಡದ ಸ್ತಬ್ಧಚಿತ್ರ
ಗಣರಾಜ್ಯೋತ್ಸವ ಪೆರೇಡ್ 2021ಕ್ಕೆ ಉತ್ತರಾಖಂಡದ ಸ್ತಬ್ಧಚಿತ್ರ ಆಯ್ಕೆ ಮಾಡಲಾಗಿದೆ. ‘ಕೇದಾರಖಂಡ್’ ಅನ್ನು ಪ್ರತಿನಿಧಿಸುವ ಉತ್ತರಾಖಂಡದ ಸ್ತಬ್ಧಚಿತ್ರವನ್ನು 2021ರ ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆ ಮಾಡಲಾಗಿದೆ. ಉತ್ತರಾಖಂಡ ರಾಜ್ಯ ರಚನೆಯಾದ ನಂತರ ಇದು 12ನೇ ಬಾರಿಗೆ ಗಣರಾಜ್ಯೋತ್ಸವದ ಮೆರವಣಿಗೆಗೆ ರಾಜ್ಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಕೋಷ್ಟಕದ ವಿಷಯವೆಂದರೆ ‘ಕೇದಾರಖಂಡ್’, ಇದರ ಮುಂಭಾಗದ ಭಾಗವು ರಾಜ್ಯ ಪ್ರಾಣಿಗಳ ಕಸ್ತೂರಿ ಜಿಂಕೆ, ರಾಜ್ಯ ಪಕ್ಷಿ ಮೋನಾಲ್ ಫೆಸೆಂಟ್ ಮತ್ತು ಹೂವಿನ ಬ್ರಹ್ಮಕಮಲ್ ಅನ್ನು ಪ್ರದರ್ಶಿಸುತ್ತದೆ, ಹಿಂಭಾಗದ ಭಾಗವು ಭಕ್ತರೊಂದಿಗೆ ಕೇದಾರನಾಥ ದೇವಾಲಯದ ಸಂಯುಕ್ತದ ಮಾದರಿಯನ್ನು ಪ್ರದರ್ಶಿಸುತ್ತದೆ.
➤ ಪುರುಷರ ಟೆಸ್ಟ್ ಪಂದ್ಯದಲ್ಲಿ ಮೊದಲ ಮಹಿಳಾ ಅಂಪೈರ್
➤ ತೆಲಂಗಾಣ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ನ್ಯಾ. ಹಿಮಾ ಕೊಹ್ಲಿ
# ಶುಭ್ಮನ್ ಗಿಲ್ ಚೊಚ್ಚಲ ಅರ್ಧಶತಕ :
ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಅರ್ಧ ಶತಕವನ್ನು ಬಾರಿಸಿದ್ದಾರೆ. ಇದು ಶುಭ್ಮನ್ ಗಿಲ್ ಅವರ ಎರಡನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ. ಶುಭ್ಮನ್ ಗಿಲ್ 101 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿದರು. ಶುಭ್ಮನ್ ಗಿಲ್ ಮೆಲ್ಬರ್ನ್ನಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದರು. ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕವನ್ನು ಬಾರಿಸುವಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ.
# ಜಾರ್ಜಿಯಾದ ಮೂಲಕ ಕಪ್ಪು ವರ್ಣದ ಸೆನೆಟರ್ ರಫೆಲ್ ವಾರ್ನಾಕ್ :
ಡೆಮಾಕ್ರಾಟಿಕ್ ಪಕ್ಷದ ರಫೆಲ್ ವಾರ್ನಾಕ್ ಅವರು ಜಾರ್ಜಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಈ ರಾಜ್ಯದ ಇತಿಹಾಸದಲ್ಲೇ ಮೊದಲ ಕಪ್ಪು ಸೆನೆಟರ್ ಎನಿಸಿಕೊಂಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಬೋಧನೆ ಮಾಡುತ್ತಿದ್ದ ಅಟ್ಲಾಂಟಾ ಚರ್ಚ್ ನಲ್ಲಿ ಕಳೆದ 15 ವರ್ಷಗಳಿಂದ ಕಳೆದ ಪಾದ್ರಿ/ ಪಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾರ್ನಾಕ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಉದ್ಯಮಿ ಕೆಲ್ಲಿ ಲೋಫ್ಲರ್(50 ವರ್ಷ) ಅವರನ್ನು ಸೋಲಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.
# ಕೇರಳದ ಮಾಜಿ ಸಚಿವ ಕೆಕೆ ರಾಮಚಂದ್ರನ್ ನಿಧನ :
ಕೇರಳದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆಕೆ ರಾಮಚಂದ್ರನ್ ನಿಧನರಾಗಿದ್ದಾರೆ, ಅವರಿಗೆ 78 ವರ್ಷ ವಯಸ್ಸಾಗಿತ್ತು. ಕೇರದಳಲ್ಲಿ ರಾಮಚಂದ್ರನ್ ಮಾಸ್ಚರ್ ಎಂದೇ ಖ್ಯಾತಿ ಗಳಿಸಿದ್ದ ಕೆಕೆ ರಾಮಚಂದ್ರನ್ ಅವರು, ಈ ಹಿಂದೆ ಎಕೆ ಆಯಂಟಿನಿ ಅವರ ಸರ್ಕಾರದಲ್ಲಿ 1995-96ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಬಳಿಕ 2004ರಲ್ಲಿ ಊಮನ್ ಚಾಂಡಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.ರಾಮಚಂದ್ರನ್ ಅವರು ಸುಲ್ತಾನ್ ಬಾಥೆರಿ ಮತ್ತು ಕಾಲ್ಪೆಟ್ಟಾ ಕ್ಷೇತ್ರಗಳನ್ನು ತಲಾ ಮೂರು ಬಾರಿ ಪ್ರತಿನಿಧಿಸಿದ್ದರು.
# ಆಫ್ರಿಕನ್ ದೇಶಗಳಿಗೆ ಭಾರತದಿಂದ ನೆರವು :
ಚೀನಾದಿಂದ ರಿಯಾಯಿತಿ ದರದಲ್ಲಿ ಸಾಲ ಪಡೆದ ಹಲವು ಆಫ್ರಿಕನ್ ದೇಶಗಳು ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಆಫ್ರಿಕಾದ ಆದ್ಯತೆಗಳಿಗೆ ಅನುಗುಣವಾಗಿ ಯಾವುದೇ ಷರತ್ತುಗಳಿಲ್ಲದೇ ಆಫ್ರಿಕನ್ ದೇಶಗಳಿಗೆ ನೆರವು ನೀಡುವುದಾಗಿ ಭಾರತ ಘೋಷಿಸಿದೆ. 37 ಆಫ್ರಿಕನ್ ದೇಶಗಳಲ್ಲಿ 189 ಅಭಿವೃದ್ಧಿ ಯೋಜನೆಗಳನ್ನು ಭಾರತ ಕಾರ್ಯಗತಗೊಳಿಸಿದೆ. 12.86 ಶತಕೋಟಿ ಡಾಲರ್ ಮೌಲ್ಯದ ಸುಮಾರು 77 ಯೋಜನೆಗಳು ಕಾರ್ಯಗತಗೊಳ್ಳುವ ಹಂತದಲ್ಲಿವೆ. ಅಂತರರಾಷ್ಟ್ರೀಯ ಸೌರ ಕೂಟದ ಬದ್ಧತೆಗೆ ಅನುಗುಣವಾಗಿ ಆಫ್ರಿಕನ್ ದೇಶಗಳ ಸೌರಶಕ್ತಿ ಯೋಜನೆಗಳಿಗೆ 1.7 ಶತಕೋಟಿ ಡಾಲರ್ ನೆರವು ನೀಡಲಾಗುವುದು. ಆಫ್ರಿಕನ್ ವಿದ್ಯಾರ್ಥಿಗಳಿಗೆ ಭಾರತ 50 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಿದೆ.