ಇಂದಿನ ಪ್ರಚಲಿತ ವಿದ್ಯಮಾನಗಳು (03-09-2023)
▶ ಇಸ್ರೋ ವಿಜ್ಞಾನಿ ವಲರ್ಮತಿ ನಿಧನ
ಚಂದ್ರಯಾನ-3 ಉಡಾವಣೆ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನರಾಗಿದ್ದಾರೆ. ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ. ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕ್ಷಣಗಣನೆಯಲ್ಲಿ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಇವರು ಕೊನೆಯ ಕ್ಷಣದವರೆಗೂ ದೇಶದ ಮೂರನೇ ಚಂದ್ರಯಾನ-3ರ ಉಡಾವಣೆಯಲ್ಲಿ ಹಿನ್ನೆಲೆ ಧ್ವನಿ ನೀಡಿದ್ದರು. ಮೂಲತಃ ತಮಿಳುನಾಡಿನ ಅರಿಯಾಲೂರ್ನವರಾದ ಇವರಿಗೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು.
▶ 12 ಸಿಕ್ಸರ್ ಸಹಿತ 45 ಎಸೆತಗಳಲ್ಲಿ ರಹಕೀಮ್ ಕಾರ್ನ್ವಾಲ್ ಸ್ಫೋಟಕ ಶತಕ
ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿಂಡೀಸ್ ತಂಡದ ಸ್ಫೋಟಕ ಬ್ಯಾಟರ್ ರಹಕೀಮ್ ಕಾರ್ನ್ವಾಲ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಲೀಗ್ನಲ್ಲಿ ಬಾರ್ಬಡೋಸ್ ರಾಯಲ್ಸ್ ಕಣಕ್ಕಿಳಿಯುತ್ತಿರುವ ಕಾರ್ನ್ವಾಲ್ ಪಂದ್ಯಾವಳಿಯ 18 ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 45 ಎಸೆತಗಳ ಶತಕ ಸಿಡಿಸಿದ್ದಾರೆ. ಕಾರ್ನ್ವಾಲ್ ಕೇವಲ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 12 ಬೃಹತ್ ಸಿಕ್ಸರ್ಗಳು ಸೇರಿದಂತೆ 102 ರನ್ ಚಚ್ಚಿದರು. ಅದರಲ್ಲೂ ಕಾರ್ನ್ವಾಲ್ ಬಾರಿಸಿದ ಎರಡು ಸಿಕ್ಸರ್ಗಳು 110 ಮತ್ತು 111 ಮೀಟರ್ಗಳಷ್ಟು ದೂರ ಹೋಗಿ ಬಿದ್ದವು.
▶ ಮತ್ತೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್
ಚಂದ್ರಯಾನ-3 ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಕಾಲಿಟ್ಟ ಹಲವು ದಿನಗಳ ಬಳಿಕ ವಿಕ್ರಮ್ ಮತ್ತೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡ್ ಆಗಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್ ಲ್ಯಾಂಡರ್ ಚಂದ್ರಯಾನ-3 ಮಿಷನ್ ಉದ್ದೇಶಗಳನ್ನು ಮೀರಿದೆ ಹಾಗೂ ಯಶಸ್ವಿಯಾಗಿ ಹಾಪ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಹೇಳಿದೆ. ಆದೇಶದ ಮೇರೆಗೆ ಅದರ ಇಂಜಿನ್ಗಳು ಆರಂಭಗೊಂಡು ಅದು 40 ಸೆಂ.ಮೀ ಮೇಲಕ್ಕೆ ಹೋಗಿ ಸುರಕ್ಷಿತವಾಗಿ 30-40 ಸೆಂ.ಮೀ ದೂರದಲ್ಲಿ ಲ್ಯಾಂಡ್ ಆಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಮತ್ತು ಮಾನವ ಮಿಷನ್ಗಳಿಗೆ ಪ್ರೇರಣೆಯಾಗಿದೆ. ಕಳೆದ ವಾರ ಚಂದ್ರಯಾನ-3 ಮಿಷನ್ನ ಪ್ರಜ್ಞಾನ ರೋವರ್ ಅನ್ನು”ಸ್ಲೀಪ್ ಮೂಡ್ನಲ್ಲಿರಿಸಲಾಯಿತು. ಆದರೆ ಇದೀಗ ಅದರ ಬ್ಯಾಟರಿಗಳು ಚಾರ್ಜ್ ಆಗುತ್ತಿವೆ ಹಾಗೂ ರಿಸೀವರ್ ಆನ್ ಆಗಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ 3 ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸಂಕ್ಷಿಪ್ತವಾಗಿ ಮೇಲೆತ್ತಲು ತನ್ನ ಇಂಜಿನ್ಗಳನ್ನು ಹಾರಿಸುವ ‘ಹೋಪಿಂಗ್’ ಪ್ರಯೋಗದ ನಂತರ ಚಂದ್ರನ ಮೇಲೆ ಎರಡನೇ ಬಾರಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.
▶ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಜಿನ್ಪಿಂಗ್ ಗೈರು
ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಭಾಗವಹಿಸುತ್ತಿಲ್ಲ ಎಂದು ಚೀನಾ ಖಚಿತಪಡಿಸಿದೆ. ಚೀನಾ ಪ್ರತಿನಿಧಿಯಾಗಿ ಲಿ ಕಿಯಾಂಗ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯಲ್ಲಿ ಜಿ20 ಶೃಂಗಸಭೆ ಸೆಪ್ಟೆಂಬರ್ 9-10ರಂದು ನಡೆಯಲಿದೆ, ಇದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿ 20 ಗುಂಪಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಸೇರಿವೆ ಎಂದು ನಾವು ನಿಮಗೆ ಹೇಳೋಣ. ಮತ್ತು ಯುರೋಪಿಯನ್ ಯೂನಿಯನ್ (EU) ಅನ್ನು ಸೇರಿಸಲಾಗಿದೆ. 43 ದೇಶಗಳ ಮುಖ್ಯಸ್ಥರು, ಸಂಸ್ಥೆಗಳು ಮತ್ತು ಪ್ರಪಂಚದಾದ್ಯಂತದ ಅವರ ನಿಯೋಗಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. G20 ರಾಷ್ಟ್ರಗಳಲ್ಲದೆ, 9 ಇತರ ದೇಶಗಳ ಮುಖ್ಯಸ್ಥರು ಮತ್ತು 14 ಅಂತಾರಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಶೃಂಗಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
▶ ಅಮೆರಿಕದ ಏವಾ ಫಾರ್ಮಾ ಕಂಪನಿಯ ಘಟಕ ಖರೀದಿಸಿದ ಬಯೋಕಾನ್
ಬೆಂಗಳೂರು ಮೂಲದ ಫಾರ್ಮಾ ಕಂಪನಿ ಬಯೋಕಾನ್ ಇದೀಗ ಅಮೆರಿಕದ ಏವಾ ಫಾರ್ಮಾ ಸಂಸ್ಥೆಯ ಘಟಕವೊಂದನ್ನು ಖರೀದಿಸಿದೆ. ಬಯೋಕಾನ್ ಮಾಲಕತ್ವದ ಬಯೋಕಾನ್ ಜೆನೆರಿಕ್ಸ್ (Biocon Generics) 7.7 ಮಿಲಿಯನ್ ಡಾಲರ್ (ಸುಮಾರು 63 ಕೋಟಿ ರುಪಾಯಿ) ಮೊತ್ತಕ್ಕೆ ಏವಾ ಫಾರ್ಮಾದ (Eywa Pharma) ಉತ್ಪಾದನಾ ಘಟಕವನ್ನು ಪಡೆದಿದೆ. ಏವಾ ಫಾರ್ಮಾದ ಈ ಘಟಕ ಅಮೆರಿಕದ ನ್ಯೂಜೆರ್ಸಿಯ ಕ್ರಾನ್ಬುರಿಯಲ್ಲಿದ್ದು, ಓರಲ್ ಸಾಲಿಡ್ ಡೋಸೇಜ್ ತಯಾರಿಕಾ ಸೌಲಭ್ಯವನ್ನು ಹೊಂದಿದೆ. ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಬಯೋಕಾನ್ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಏವಾ ಫಾರ್ಮಾದ ನ್ಯೂಜೆರ್ಸಿ ಘಟಕದ ಖರೀದಿಯಿಂದ ಬಯೋಕಾನ್ನ ಔಷಧ ಉತ್ಪಾದನಾ ಸಾಮರ್ಥ್ಯಕ್ಕೆ ಪುಷ್ಟಿ ಸಿಗಲಿದೆ. ಒಂದು ವರ್ಷದಲ್ಲಿ 200 ಕೋಟಿ ಟ್ಯಾಬ್ಲೆಟ್ ಅಥವಾ ಕ್ಯಾಪ್ಸೂಲ್ಗಳನ್ನು ತಯಾರಿಸುವಷ್ಟು ಮಟ್ಟಕ್ಕೆ ಸಾಮರ್ಥ್ಯ ಹೆಚ್ಚುವ ನಿರೀಕ್ಷೆ ಇದೆ.
- ಇಂದಿನ ಪ್ರಚಲಿತ ವಿದ್ಯಮಾನಗಳು (01-09-2023)
- ಇಂದಿನ ಪ್ರಚಲಿತ ವಿದ್ಯಮಾನಗಳು (02-09-2023)
- ಇಂದಿನ ಪ್ರಚಲಿತ ವಿದ್ಯಮಾನಗಳು (28-08-2023
#CurrentAffairs, #DailyCurrentAffairs, #TodayCurrentAffairs, #CurrentAffairs, #SpardhaTimes, #CurrentAffairsToday, #CAToday, #ಪ್ರಚಲಿತವಿದ್ಯಮಾನಗಳು, #ಪ್ರಚಲಿತಘಟನೆಗಳು