Current AffairsSpardha TimesUncategorized

ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 13-07-2021

Share With Friends

# ”ಟಿ20 ಕ್ರಿಕೆಟ್‌ನ ಸಚಿನ್‌” ಎನಿಸಿಕೊಂಡ ಗೇಲ್ : 
ವೆಸ್ಟ್‌ಇಂಡೀಸ್‌ನ ದೈತ್ಯ ಪ್ರತಿಭೆ, ಚುಟುಕು ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ. ಕೇವಲ 38 ಎಸೆತ ಎದುರಿಸಿದ ಅವರು 4 ಬೌಂಡರಿ 7 ಸಿಕ್ಸರ್‌ ಸಹಿತ 67 ರನ್‌ ಗಳಿಸಿದರು.

ವೆಸ್ಟ್‌ ಇಂಡೀಸ್‌ ಹಾಗೂ ವಿವಿಧ ಪ್ರಾಂಚೈಸ್‌ಗಳ ಪರ ಇದುವರೆಗೆ ಒಟ್ಟು 431 ಪಂದ್ಯಗಳ 423 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಗೇಯ್ಲ್‌, 14,038 ರನ್‌ ಕಲೆಹಾಕಿದ್ದಾರೆ. 22 ಶತಕ ಮತ್ತು ಬರೋಬ್ಬರಿ 87 ಅರ್ಧಶತಕಗಳು ಇದರಲ್ಲಿವೆ. ವಿಂಡೀಸ್‌ನವರೇ ಆದ ಕೀರನ್‌ ಪೊಲಾರ್ಡ್‌ 545 ಪಂದ್ಯಗಳ 484 ಇನಿಂಗ್ಸ್‌ಗಳಿಂದ 10,836 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

425 ಪಂದ್ಯಗಳ 397 ಇನಿಂಗ್ಸ್‌ಗಳಿಂದ 10,741 ರನ್‌ ಗಳಿಸಿರುವ ಪಾಕಿಸ್ತಾನದ ಶೋಯೆಬ್‌ ಮಲಿಕ್‌, 304 ಪಂದ್ಯಗಳ 303 ಇನಿಂಗ್ಸ್‌ಗಳಿಂದ 10,017 ಕಲೆಹಾಕಿರುವ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಮತ್ತು 310 ಪಂದ್ಯಗಳ 295 ಇನಿಂಗ್ಸ್‌ಗಳಿಂದ 9,922 ರನ್‌ ಗಳಿಸಿರುವ ಭಾರತದ ವಿರಾಟ್‌ ಕೊಹ್ಲಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ. ಸಚಿನ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 463 ಪಂದ್ಯಗಳ 452 ಇನಿಂಗ್ಸ್‌ಗಳಿಂದ 18426 ರನ್‌ ಗಳಿಸಿದ್ದಾರೆ.

# ವಿಶ್ವದ ಮೊದಲ ಕೈ -ಮುಖ ಕಸಿ ಮಾಡಿದ್ದ ವೈದ್ಯ ಇನ್ನಿಲ್ಲ
ಕೈಗಳು ಹಾಗೂ ಮುಖದ ಕಸಿಯನ್ನು ಮೊಟ್ಟ ಮೊದಲ ಬಾರಿಗೆ ನೆರವೇರಿಸಿದ ಫ್ರೆಂಚ್‌ ಸರ್ಜನ್ ಜೀನ್ ಮೈಕೇಲ್ ಡುಬರ್ನಾರ್ಡ್ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರಿಗೆ 1998ರಲ್ಲಿ ಕೈ ಕಸಿ ಮಾಡಿದ್ದ ಡುಬರ್ನಾರ್ಡ್ ವೈದ್ಯಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು. ಸಹ ಸರ್ಜನ್‌ಗಳೊಂದಿಗೆ ಸೇರಿಕೊಂಡ ಡುಬರ್ನಾರ್ಡ್, ರೋಗಿಯ ರಕ್ತನಾಳಗಳು, ನರಗಳು, ಟೆಂಡನ್‌ಗಳು, ಸ್ನಾಯುಗಳು ಹಾಗೂ ಚರ್ಮಗಳನ್ನು ಹೊಂದಿಸಿ, ಮುಂಗೈನ ಎಲುಬುಗಳನ್ನು ಹೆಣೆದು, 13 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದರು.

ಈ ಸಾಧನೆಯ ಬೆನ್ನಿಗೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಡುಬರ್ನಾರ್ಡ್ ಅವರು ಎರಡು ಕೈಗಳನ್ನು ಒಮ್ಮೆಲೇ ಕಸಿ ಮಾಡಿದ್ದರು. 2005ರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಈ ಖ್ಯಾತ ವೈದ್ಯ ಮುಖವೊಂದರ ಭಾಗಶಃ ಕಸಿ ಮಾಡಿ ಖ್ಯಾತಿ ಉತ್ತುಂಗಕ್ಕೇರಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ದಾನಿಯೊಬ್ಬರಿಂದ ಮೂಗು, ತುಟಿಗಳು, ಗಲ್ಲಗಳನ್ನು ತೆಗೆದು, ನಾಯಿಯಿಂದ ಕಚ್ಚಿಸಿಕೊಂಡು ಮುಖ ಹಾಳು ಮಾಡಿಕೊಂಡಿದ್ದ ಫ್ರೆಂಚ್‌ ಮಹಿಳೆ ಇಸಾಬೆಲ್ಲೆ ಡಿನಾರ್ಯ್ ಅವರಿಗೆ ಕಸಿ ಮಾಡಿದ್ದರು ಡುಬರ್ನಾರ್ಡ್.

# ಮೊದಲ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಯಶ್ ಪಾಲ್ ಶರ್ಮಾ ಇನ್ನಿಲ್ಲ

# ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ
ನೇಪಾಳ ರಾಜಕೀಯ ಬಿಕ್ಕಟ್ಟು ವಿಚಾರದಲ್ಲಿ ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆನೀಡಿದ್ದಾರೆ. ನೇಪಾಳಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶೇರ್‌ ಬಹದ್ದೂರ್‌ ದೇವುಬಾ ಅವರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಕ ಮಾಡುವಂತೆ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರಿಗೆ ನೇಪಾಳದ ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ. ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ ಕೆಲ ದಿನಗಳ ಹಿಂದೆಷ್ಟೇ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದರು. ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.ಈ ಹಿನ್ನೆಲೆಯಲ್ಲಿ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಐದನೇ ಬಾರಿಗೆ ದೇಶದ ಪ್ರಧಾನಿಯಾದರು. ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಯವರು, ಅವರನ್ನು ಸಂವಿಧಾನದ 76 (5) ನೇ ವಿಧಿಗೆ ಅನುಗುಣವಾಗಿ ನೇಮಕ ಮಾಡಿದ್ದಾರೆ. 74 ವರ್ಷದ ಡ್ಯೂಬಾ ನೇಪಾಳದ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುತ್ತಿರುವುದು ಇದು ಐದನೇ ಬಾರಿ.

275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಓಲಿ ಸೋಲನ್ನನುಭವಿಸಿದ ನಂತರವೂ ಕೂಡ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಅವರ ಅಧಿಕಾರ ಮತ್ತೆ ಕೈಜಾರಲಿದೆ.

ನೇಪಾಳದ ಹಾಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಷ್ಟ್ರಪತಿ ವಿದ್ಯಾ ಭಂಡಾರಿ ಅವರು ಐದು ತಿಂಗಳಲ್ಲಿ ಎರಡು ಬಾರಿ ಸಂಸತ್ತಿನ ಕೆಳಮನೆ ವಿಸರ್ಜಿಸಿದ್ದರು. ಸಂಸತ್ತಿನ ವಿಸರ್ಜನೆಯ ನಂತರ, ನವೆಂಬರ್ 12 ಮತ್ತು 19 ರಂದು ಮಧ್ಯಂತರ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಲಾಗಿತ್ತು. ಚುನಾವಣೆಗೆ ಸಂಬಂಧಿಸಿದನೆ ಹಾಗೂ ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ನೇಪಾಳದ ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು 30 ಅರ್ಜಿಗಳನ್ನು ದಾಖಲಿಸಲಾಗಿದ್ದವು.

ರಾಷ್ಟ್ರಪತಿಗಳ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ವಿರೋಧ ಪಕ್ಷಗಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ, ಸಂಸತ್ತಿನ ಕೆಳಮನೆ ವಿಸರ್ಜಿಸಲು ರಾಷ್ಟ್ರಪತಿಗಳ ಆದೇಶವನ್ನು ರದ್ದುಪಡಿಸಬೇಕು ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದು ಕೋರಲಾಗಿತ್ತು. ಪ್ರತಿಪಕ್ಷಗಳು ಸಲ್ಲಿಸಿದ್ದ ಈ ಅರ್ಜಿಗೆ 146 ಸಂಸದರು ಸಹಿ ಹಾಕಿದ್ದರು.

# ರಾಜ್ಯಪಾಲರ ‘ಒಂದು ದಿನದ ಉಪವಾಸ’
ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ‘ವರದಕ್ಷಿಣೆ ವಿರೋಧಿ ಉಪವಾಸ ದಿನ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ದಿನದ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ.

# ಗೂಗಲ್‌ಗೆ ಫ್ರಾನ್ಸ್‌ನಲ್ಲಿ 4,417 ಕೋಟಿ ದಂಡ
ವಿವಿಧ ಸಂಸ್ಥೆಗಳ ಸುದ್ದಿಗಳನ್ನು ತನ್ಮೂಲಕ ಓದುಗರಿಗೆ ತಲುಪಿಸುತ್ತಿರುವ ಗೂಗಲ್‌, ಅದಕ್ಕೆ ಪ್ರತಿಯಾಗಿ ಆಯಾ ಸುದ್ದಿ ಸಂಸ್ಥೆಗಳಿಗೆ ನೀಡಬೇಕಿರುವ ಸಂಭಾವನೆಯನ್ನು ನೀಡದಿರುವುದ ಹಿನ್ನೆಲೆಯಲ್ಲಿ ಆ ಸಂಸ್ಥೆಯ ಮೇಲೆ ಫ್ರಾನ್ಸ್‌ನ ಆಡಳಿತ 4,417 ಕೋಟಿ ರೂ.ಗಳ ದಂಡ ವಿಧಿಸಿದೆ.

# ▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021) | Current Affairs Quiz

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)

# ಜೂನ್-2021 : 
▶ ಪ್ರಚಲಿತ ಘಟನೆಗಳ ಕ್ವಿಜ್ (01/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (02/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (03/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (04/06/2021) | Current Affaires Quiz
▶ ಪ್ರಚಲಿತ ಘಟನೆಗಳ ಕ್ವಿಜ್ (05/06/2021) | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (06/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (07 to 21/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (22/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (23/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (24/06/2021) | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (25/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (26/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (27/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (28/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (29/06/2021) | Current Affairs Quiz
▶ ಪ್ರಚಲಿತ ಘಟನೆಗಳ ಕ್ವಿಜ್ (30/06/2021) | Current Affairs Quiz

———————————-

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

error: Content Copyright protected !!