ವಿಶ್ವಸಂಸ್ಥೆ ಕುರಿತ ಸಂಪೂರ್ಣ ಮಾಹಿತಿ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಮೊದಲನೆಯ, ಎರಡನೆಯ ಮಹಾಯುದ್ಧದ ಸಂದರ್ಭ, ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯ ಅಗತ್ಯವಿತ್ತು. ಆ ಪರಿಕಲ್ಪನೆಯಲ್ಲೇ ಹಲವು ರಾಷ್ಟ್ರಗಳು ಒಂದೆಡೆ ಸೇರಿ ಒಂದು ಸಮಿತಿ ರಚನೆಗೆ ಮುಂದಾದವು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶಗಳೆಂದರೆ ಬ್ರಿಟನ್ ಮತ್ತು ಅಮೆರಿಕ. ಇಂತಹ ಒಂದು ಸಮಿತಿಗೆ ಯುನೈಟೆಡ್ ನೇಷನ್ಸ್ ಎಂಬ ಹೆಸರನ್ನು 1942ರಲ್ಲಿ ಅಂದಿನ ಅಮೆರಿಕದ (ಯುಎಸ್) ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್-ಡಿ-ರೂಸ್ವೆಲ್ಡ್ ಸೂಚಿಸಿದ್ದರು.
1945ರ ಏಪ್ರಿಲ್ 25ರಿಂದ ಜೂನ್ 26ರ ವರೆಗೂ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಒಟ್ಟು 50 ರಾಷ್ಟ್ರಗಳು ಸಮಾವೇಶಗೊಂಡು ಯುನೈಟೆಡ್ ನೇಷನ್ಸ್ ಕರಡು (ಸನ್ನದು, ಚಾರ್ಟರ್) ರೂಪುರೇಷೆ ತಯಾರಿಸಿದವು. 1945ರ ಜೂನ್ 26ರಂದು 50 ದೇಶಗಳೂ ಚಾರ್ಟ ರ್ಗೆ ಸಹಿ ಹಾಕಿದವು.
ಸ್ಯಾನ್ಫ್ರಾನ್ಸಿಸ್ಕೋ ಸಮಾವೇಶದಲ್ಲಿ ಭಾಗವಹಿಸದೆ ಇದ್ದ ಪೋಲೆಂಡ್ ಚಾರ್ಟರ್ಗೆ ಸಹಿ ಮಾಡಿ 51ನೆ ಸದಸ್ಯ ರಾಷ್ಟ್ರವಾಗಿ ರೂಪು ತಳೆಯಿತು.
ಹೀಗೆ ಯುನೈಟೆಡ್ ನೇಷನ್ಸ್ನ ಸದಸ್ಯತ್ವದ ಸಂಖ್ಯೆ ಹೆಚ್ಚುತ್ತಾ ಹೋಯಿತು. 190ನೆ ಸದಸ್ಯನಾಗಿ ಸ್ವಿಟ್ಜರ್ ಲೆಂಡ್, 191ನೆ ಸದಸ್ಯನಾಗಿ ಪೂರ್ವ ತೈಮೋರ್ ದೇಶಗಳು ಇತ್ತೀಚೆಗಷ್ಟೆ ಸೇರ್ಪಡೆಗೊಂಡವು. 2006ರ ಜೂನ್ ಮೂರರಂದು ಸರ್ಬಿಯಾದಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಆವಿರ್ಭವಿಸಿದ ಮಾಂಟೆನಿಗ್ರೊ 2006ರ ಜೂನ್ 28ರಂದು ಯುನೈಟೆಡ್ ನೇಷನ್ಸ್ನ 192ನೆ ಸದಸ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿತು.
193ನೆ ಸದಸ್ಯನಾಗಿ ದಕ್ಷಿಣ ಸೂಡಾನ್ (ರಿಪಬ್ಲಿಕ್ ಆಫ್ ಸೌತ್ ಸೂಡಾನ್) 2011ರ ಜುಲೈ 14ರಂದು ಸಹಿ ಹಾಕುವ ಮೂಲಕ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ 193 ಆಯಿತು.
@ ಯುನೈಟೆಡ್ ನೇಷನ್ಸ್- ವಿಶ್ವಸಂಸ್ಥೆಯು 1945ರ ಅಕ್ಟೋಬರ್ 24 ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಪ್ರತಿವರ್ಷ ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಹಿಂದಿನ ಅಧ್ಯಕ್ಷ ಕೋಫಿ ಅನ್ನಾನ್ಗೆ (1997-2006) 2001ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ದೊರೆಯಿತು.
# ವಿಶ್ವಸಂಸ್ಥೆಯ ಹುಟ್ಟಿಗೆ ಕಾರಣವಾದ ಅಟ್ಲಾಂಟಿಕ್ ಚಾರ್ಟರ್ಗೆ ಅಂದಿನ ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್, ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ.ರೂಸ್ವೆಲ್ಟ್ 1941ರ ಆಗಸ್ಟ್ 14ರಂದು ಸಹಿ ಮಾಡಿದರು.
# ವಿಶ್ವಸಂಸ್ಥೆಯ ಮೊಟ್ಟ ಮೊದಲ ಸಮಾವೇಶ 1946ರ ಜನವರಿಯಲ್ಲಿ ಲಂಡನ್ನಲ್ಲಿ ನಡೆಯಿತು.
# ವಿಶ್ವಸಂಸ್ಥೆಯ ಧ್ವಜ (ಬಾವುಟ)ವನ್ನು 1947ರ ಅಕ್ಟೋಬರ್ 20ರಂದು ಸಾಮಾನ್ಯ ಸಭೆ ಅನುಮೋದಿಸಿತು. ಈ ಧ್ವಜದಲ್ಲಿ ತೆಳು ನೀಲಿ ಬಣ್ಣದ ಬ್ಯಾಕ್ಗ್ರೌಂಡ್ನಲ್ಲಿ (ಹಿನ್ನೆಲೆಯಲ್ಲಿ) ಶ್ವೇತವರ್ಣದ ಗ್ಲೋಬ್ ಇರುತ್ತದೆ. ಈ ಗ್ಲೋಬ್ಗೆ ಎರಡೂ ಕಡೆಗಳಲ್ಲಿ ಶಾಂತಿ ಚಿಹ್ನೆಯಾದ ಎರಡು ಆಲೀವ್ ಮರದ ಪುಟ್ಟ ಕೊಂಬೆಗಳಿರುತ್ತವೆ. ಬಾವುಟದ ಉದ್ದ-ಅಗಲಗಳು 3:2ರ ಅನುಪಾತದಲ್ಲಿರುತ್ತವೆ.
# ವಿಶ್ವಸಂಸ್ಥೆ ಚಿಹ್ನೆಯನ್ನು ಲಿಂಕನ್ ಲಂಡ್ಕ್ವಿಸ್ಟ್ ನೇತೃತ್ವದಲ್ಲಿ ಸಿದ್ಧಪಡಿಸಲಾಯಿತು.
# ವಿಶ್ವಸಂಸ್ಥೆಯ ಸಂವಿಧಾನದಲ್ಲಿನ ಪ್ರಸ್ತಾವನೆಯ ಫ್ರೇಮ್ವರ್ಕ್ (ಕಾರ್ಯ ಚೌಕಟ್ಟು) ರೂಪಿಸಿದವರು ದಕ್ಷಿಣ ಆಫ್ರಿಕದ ಜಾನ್ ಕ್ರಿಸ್ಟಿಯಾನ್ ಎಂಬುವವರು.
# ಜನರಲ್ ಅಸೆಂಬ್ಲಿ, ಸೆಕ್ರೆಟರಿಯಟ್ ಸೆಕ್ಯೂರಿಟಿ ಕೌನ್ಸಿಲ್, ಟ್ರಸ್ಟಿಷಿಪ್ ಕೌನ್ಸಿಲ್, ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್, ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್- ಇವು ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳು.
# ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪ್ಯಾನಿಷ್ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು.
# ಪ್ರಧಾನ ಕಾರ್ಯಾಲಯ (ಮುಖ್ಯ ಕಚೇರಿ) ನ್ಯೂಯಾರ್ಕ್ (ಅಮೆರಿಕ)ನಲ್ಲಿದೆ.
# ಯೂರೋಪ್ಗೆ ಸಂಬಂಧಿತ ಕಾರ್ಯಾಲಯ ಜಿನೀವಾದಲ್ಲಿದೆ.
# ಪ್ರಾದೇಶಿಕ ಕಾರ್ಯಾಲಯ ಬಾಗ್ದಾದ್ನಲ್ಲಿದೆ.
# ಪ್ರಸಕ್ತ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುರೆಟಸ್ (ಪೋರ್ಚುಗಲ್)- 2017ರ ಜನವರಿ 1ರಿಂದ ಅಧಿಕಾರದಲ್ಲಿದ್ದಾರೆ.
# ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸೇನೆಯನ್ನು ಬ್ಲ್ಯೂ ಆರ್ಮಿ ಎನ್ನುತ್ತಾರೆ.
# ವಿಶ್ವಸಂಸ್ಥೆಯಲ್ಲಿ ಸಂಗೀತ ಕಚೇರಿ (1966) ನೀಡಿದ ಭಾರತೀಯ ಮಹಿಳೆ ಡಾ.ಎಂ.ಎಸ್.ಸುಬ್ಬುಲಕ್ಷ್ಮಿ. ಆ ಬಳಿಕ 2016ರಲ್ಲಿ ಭಾರತೀಯರೇ ಆದ ಎ.ಆರ್. ರೆಹಮಾನ್ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು.
ವಿಶ್ವಸಂಸ್ಥೆಯ ಪ್ರಮುಖ ಅಂಗಗಳು
@ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ)
# ಸಾಮಾನ್ಯ ಸಭೆಯನ್ನು ವಿಶ್ವ ಪಾರ್ಲಿಂಟ್ (ಸಂಸತ್) ಎನ್ನುತ್ತಾರೆ.
# ವಿಶ್ವಸಂಸ್ಥೆಯಲ್ಲಿನ ಸದಸ್ಯ ರಾಷ್ಟ್ರಗಳನ್ನೆಲ್ಲಾ ಜನರಲ್ ಅಸೆಂಬ್ಲಿಯ ಸದಸ್ಯರೆಂದೇ ಕರೆಯುತ್ತಾರೆ. ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ವೋಟ್ (ಮತ) ಮಾಡುವ ಹಕ್ಕು ಇರುತ್ತದೆ. ಆದರೆ ಪ್ರತಿ ಸದಸ್ಯ ರಾಷ್ಟ್ರಗಳು ಐವರು ಜನಪ್ರತಿನಿಧಿಗಳನ್ನು ಸಭೆಗೆ ಕಳುಹಿಸಬಹುದಾಗಿರುತ್ತದೆ. ಸಾಮಾನ್ಯ ಸಬೆಯನ್ನು ವರ್ಷಕ್ಕೊಮ್ಮೆಯಾದರೂ ಕರೆಯಲೇಬೇಕು.
# ಅಧ್ಯಕ್ಷ, ಉಪಾಧ್ಯಕ್ಷರ ಪದವಿಯ ಅವಧಿ ಒಂದು ವರ್ಷ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಪ್ರಥಮ ಭಾರತೀಯ ಮಹಿಳೆ ವಿಜಯಲಕ್ಷ್ಮಿ ಪಂಡಿತ್.
# ಸಾಮಾನ್ಯ ಸಭೆಯ ಮೊದಲ ಸಭೆ (ಸಮಾವೇಶ) 1948ರ ಜನವರಿ 10ರಂದು ನ್ಯೂಯಾರ್ಕ್ನಲ್ಲಿ ನಡೆಯಿತು.
# ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎರಡನೆಯವರು ಪ್ರಧಾನಿ ನರೇಂದ್ರ ಮೋದಿ.
# ಪ್ರಸ್ತುತ ಅಧ್ಯಕ್ಷರು ಪೀಟರ್ ಥಾಮ್ಸನ್ (ಫಿಜಿ). ಪ್ರಧಾನ ಕಾರ್ಯಾಲಯ ನ್ಯೂಯಾರ್ಕ್ನಲ್ಲಿದೆ.
@ ಭದ್ರತಾ ಮಂಡಳಿ (ಸೆಕ್ಯೂರಿಟಿ ಕೌನ್ಸಿಲ್)
ತಾತ್ಕಾಲಿಕ (ಟೆಂಪರರಿ) ಸದಸ್ಯ ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಸಾಮಾನ್ಯ ಸಭೆಯಿಂದ 2-3ರ ಬಹು ಮತದಿಂದ ಆಯ್ಕೆಯಾಗುತ್ತವೆ. ಶಾಶ್ವತ ಸದಸ್ಯ ದೇಶಗಳಿಗೆ ವಿಟೋ ಪವರ್ ಇರುತ್ತದೆ. ಭದ್ರತಾ ಮಂಡಳಿ ಅಧ್ಯಕ್ಷ ಪದವಿಯನ್ನು ಸದಸ್ಯ ರಾಷ್ಟ್ರಗಳು ಆಲ್ಫಬೆಟಿಕಲ್ ಪ್ರಕಾರ (ಎ,ಬಿ,ಸಿ,ಡಿ) ರೊಟೇಷನ್ ಪದ್ಧತಿಯಲ್ಲಿ ಆರಿಸುತ್ತವೆ.
ಭದ್ರತಾ ಮಂಡಳಿಗೆ 1998ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಲಭಿಸಿತು. 1951, 1967, 1922, 1977, 1984, 1991, 2001ರಲ್ಲಿ ಒಟ್ಟಾರೆ ಏಳು ಬಾರಿ ಭಾರತ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
# ಪ್ರಸಕ್ತ ಆಧಿವೇಶನದಲ್ಲಿ ಭಾರತವು ಖಾಯಂ ಸದಸ್ಯತ್ವ ಪಡೆದಿದ್ದು ಹೊಸ ಇತಿಹಾಸ.
# ಸದಸ್ಯ ರಾಷ್ಟ್ರಗಳ ಸಂಖ್ಯೆ-15, ತಾತ್ಕಾಲಿಕ ಸದಸ್ಯರು-10.
✦ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಅವುಗಳ ಅನ್ವರ್ಥನಾಮಗಳು
# ಶಾಶ್ವತ ಸದಸ್ಯ ರಾಷ್ಟ್ರಗಳು-5 (ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ (ಬ್ರಿಟನ್-ಯುಕೆ) ಅಮೆರಿಕ.
# ಸದಸ್ಯ ರಾಷ್ಟ್ರಗಳ ನಡುವೆ ವಿವಾದಗಳ ಪರಿಹಾರ, ಶಾಂತಿ ಕಾಪಾಡುವ ಕ್ರಮಗಳನ್ನು ತೆಗೆದುಕೊಳ್ಳುವುದು. ಸೆಕ್ರೆಟರಿ ಜನರಲ್ ಆಯ್ಕೆ ಮಾಡುವುದು ಭದ್ರತಾ ಮಂಡಳಿಯ ಮುಖ್ಯ ಕರ್ತವ್ಯಗಳು.
@ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ನೇತೃತ್ವದಲ್ಲಿ ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಆರ್ಥಿಕ, ಸಾಮಾ ಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮನ್ವಯತೆಗಾಗಿ ಶ್ರಮಿಸುತ್ತದೆ.
ಮಂಡಳಿಯು ತನ್ನ ಕಾರ್ಯಕ್ರಮಗಳ ನಿರ್ವಹಣೆಗಾಗಿ ಕೆಲ ಪ್ರಾದೇಶಿಕ (ಕಮಿಷನ್) ಸಮಿತಿ (ಆಯೋಗ)ಗಳನ್ನು ರಚಿಸಿಕೊಂಡಿದೆ.
@ ಧರ್ಮದರ್ಶಿತ್ವ ಮಂಡಳಿ
ಬೇರೆ ದೇಶಗಳ ಆಡಳಿತದ ಅಡಿ ಬರುವ ಭೂ ಭಾಗಗಳ ಹಿತರಕ್ಷಣೆಗಾಗಿ ಶ್ರಮಿಸುವುದು ಈ ಮಂಡಳಿ ಉದ್ದೇಶ. ಅವುಗಳಿಗೆ ಸ್ವಾತಂತ್ರ್ಯ ಲಭಿಸುವಂತೆ ಮಾಡುವುದು ಅಥವಾ ಸ್ವಯಂ ಆಡಳಿತಕ್ಕೆ ಪರಿಸ್ಥಿತಿಯನ್ನು ಸಿದ್ಧಗೊಳಿಸುವುದು ಕೂಡ ಈ ಮಂಡಳಿ ಕಾರ್ಯವೇ.
@ ಅಂತಾರಾಷ್ಟ್ರೀಯ ನ್ಯಾಯಾಲಯ
ಅಂತಾರಾಷ್ಟ್ರೀಯ ನ್ಯಾಯಾಲಯವು ಒಂದು ಅಂತಾರಾಷ್ಟ್ರೀಯ ಒಪ್ಪಂದದ ಮೂಲಕ ರಚಿತವಾಗಿದೆ. ಜಾಗತಿಕ ನ್ಯಾಯಾಲಯದ ಕಾಯ್ದೆಗಳು ವಿಶ್ವಸಂಸ್ಥೆ ಚಾರ್ಟರ್ನ ಒಂದು ಭಾಗವೇ ಆಗಿವೆ. ವಿವಿಧ ದೇಶಗಳ ನಡುವೆ ತಲೆ ಎತ್ತುವ ವಿವಾದಗಳು, ಅಧಿಕೃತ ಅಂತರಾಷ್ಟ್ರೀಯ ಸಂಸ್ಥೆಗಳು ಸಮರ್ಪಿಸುವ ನ್ಯಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಲಹೆ ನೀಡುವುದು ಈ ನ್ಯಾಯಾಲಯದ ಜವಾಬ್ದಾರಿ.
ಅಂತಾರಾಷ್ಟ್ರೀಯ ನ್ಯಾಯಾಲಯವು ವಿವಿಧ ದೇಶಗಳಿಗೆ ಸೇರಿದ 15 ನ್ಯಾಯಾಧೀಶರನ್ನು ಹೊಂದಿರುತ್ತದೆ. ಈ ನ್ಯಾಯಾಧೀಶರು 9 ವರ್ಷಗಳ ಅಧಿಕಾರಾವಧಿಗೆ, ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಿಂದ ಆಯ್ಕೆಯಾಗುತ್ತಾರೆ. ಮೂರನೇ ಒಂದು ರಷ್ಟು ನ್ಯಾಯಮೂರ್ತಿಗಳು ಮೂರು ವರ್ಷಗಳಿಗೊಮ್ಮೆ ನಿರ್ಗಮಿಸುತ್ತಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮೂರು ವರ್ಷಗಳಿಗೆ ಒಮ್ಮೆ ಆಯ್ಕೆ ಮಾಡಲಾಗುತ್ತದೆ. ಹಾಜರಿದ್ದ ನ್ಯಾಯಮೂರ್ತಿಗಳೊಂದಿಗೆ ಮೆಜಾರಿಟಿ (ಬಹುಮತ) ಆಧಾರದಲ್ಲಿ ತೀರ್ಪು ಅಂತಿಮವಾಗಿರುತ್ತದೆ.
# ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿ ಸಿದ ಭಾರತೀಯರು-ಬಿ.ಎನ್.ರಾವ್, ನಾಗೇಂದರ್ಸಿಂಗ್, ಆರ್.ಎಸ್.ಪಾಠಕ್, ದಲ್ವೀಂದರ್ ಸಿಂಗ್ ಭಂಡಾರಿ.
# ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಆಯ್ಕೆಯಾದ ಮೊದಲ ಮಹಿಳಾ ಅಧ್ಯಕ್ಷರು ರೋಸಲಿನ್ ಹಿಗ್ಗಿನ್ಸ್ (ಬ್ರಿಟನ್)
# ಅಧಿಕೃತ ಭಾಷೆಗಳು ಇಂಗ್ಲಿಷ್ ಮತ್ತು ಫ್ರೆಂಚ್
# ಮುಖ್ಯ ಕಾರ್ಯಾಲಯ `ದಿ ಹೇಗ್’ (ನೆದರ್ಲ್ಯಾಂಡ್ಸ್)
# ಸದಸ್ಯ ರಾಷ್ಟ್ರಗಳ ಸಂಖ್ಯೆ -193
@ ಸಚಿವಾಲಯ (ಸೆಕ್ರೆಟೇರಿಯಟ್)
ವಿಶ್ವಸಂಸ್ಥೆಯ ಇತರ ಅಂಗ ಸಂಸ್ಥೆಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಚಿವಾಲಯ ಪರಿಶೀಲಿಸುತ್ತದೆ. ಸಚಿವಾಲಯದ ಮುಖ್ಯಸ್ಥರಾದ ಸೆಕ್ರೆಟರಿ ಜನರಲ್ ಅವರನ್ನು ಸಾಮಾನ್ಯ ಸಭೆಯು ಭದ್ರತಾ ಮಂಡಳಿ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತದೆ. ಸೆಕ್ರೆಟರಿ ಜನರಲ್ರ ಅಧಿಕಾರಾವಧಿ 5 ವರ್ಷಗಳು. ಸಾಮಾನ್ಯಸಭೆ ರೂಪಿಸಿದ ನಿಯಮಾವಳಿಗನುಸಾರವಾಗಿ ಸೆಕ್ರೆಟರಿ ಜನರಲ್ ಅಂತಾರಾಷ್ಟ್ರೀಯ ಸಿಬ್ಬಂದಿಯನ್ನು ನೇಮಕ ಮಾಡುತ್ತಾರೆ.
1998ರಿಂದ ಡೆಪ್ಯೂಟಿ (ಉಪ) ಸೆಕ್ರೆಟರಿ ಜನರಲ್ ಹುದ್ದೆ ಸೃಷ್ಟಿಸಲಾಗಿದೆ.
ಮೊದಲ ಡೆಪ್ಯೂಟಿ ಸೆಕ್ರೆಟರಿ ಜನರಲ್ ಆಗಿ ಕೆನಡಾದ ಲೂಯಿಸ್ ಫ್ರಿಚೆಟ್ಟಿ ಆಯ್ಕೆಯಾಗಿದ್ದಾರೆ.