Writer Vaidehi : ಲೇಖಕಿ ವೈದೇಹಿ ಕಿರು ಪರಿಚಯ
Writer Vaidehi ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ’ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ‘ವಾಸಂತಿ’ ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
ವೈದೇಹಿ ಅವರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 1945 ರಲ್ಲಿ ಜನಿಸಿದರು. ಇವರ ತಂದೆ ಎವಿ.ಎನ್. ಹೆಬ್ಬಾರ್, ತಾಯಿ ಮಹಾಲಕ್ಷ್ಮೀ. ವಾಸಂತಿ ಎನ್ನುವುದು ಇವರ ಮೂಲ ಹೆಸರು. ಮದುವೆಯ ನಂತರ ಇವರು ಜಾನಕಿ ಶ್ರೀನಿವಾಸಮೂರ್ತಿ ಎಂದು ಹೆಸರನ್ನು ಬದಲಿಸಿಕೊಂಡರು. ಇವರು ‘ ನೀರೆಯರ ಮನ” ಎಂಬ ಲೇಖನವನ್ನು ಪ್ರಕಟಿಸುವಾಗ ‘ವೈದೇಹಿ’ ಎಂಬ ಕಾವ್ಯನಾಮವನ್ನು ರೂಢಿಸಿಕೊಂಡರು. ಇವರ ಹಲವಾರು ಕಥೆಗಳು ಕರ್ಮವೀರ, ಮಯೂರ, ಸುಧಾ ಪ್ರಜಾವಾಣಿ, ಉದಯವಾಣಿ,ಕಸ್ತೂರಿ, ಸಾಕ್ಷಿ ಸಂಕ್ರಮಣ, ಗೆಳತಿ ಮುಂತಾದ ಪತ್ರಿಕೆಗಳಲ್ಲೂ ಪ್ರಕಟಗೊಂಡವು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಕರ್ನಾಟಕ ಸರಕಾರದ ‘ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ‘ಕ್ರೌಂಚಪಕ್ಷಿಗಳು’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಇವರು ‘ ಬಿಂದು ಬಿಂದಿಗೆ’, ‘ ಪಾರಿಜಾತ’ ಹೂವಕಟ್ಟುವ ಕಾಯಕ, ದೀಪದೊಳಗಿನ ದೀಪ ಎಂಬ ಕವನ ಸಂಕಲನಗಳನ್ನು ಹಾಗೂ ಮರಗಿಡಬಳ್ಳಿ, ಅಂತರಂಗದ ಪುಟಗಳು, ಗೋಲ, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿ, ಕತೆಕತೆಕಾರಣ, ‘ಅಮ್ಮಚ್ಚಿಯೆಂಬ ನೆನಪು’, ಮುಂತಾದ ಪ್ರಮುಖ ಕಥಾಸಂಕಲನಗಳನ್ನು ರಚಿಸಿದ್ದಾರೆ. ಇದರ ಜೊತೆಗೆ ‘ಅಸ್ಟಶ್ಯರು’, ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಮಲ್ಲಿನಾಥನ ಧ್ಯಾನ, ‘ಮೇಜು ಮತ್ತು ಬಡಗಿ’, ‘ಜಾತ್ರೆ’ ಎಂಬ ಪ್ರಂಬಂಧಗಳನ್ನು ರಚಿಸಿದ್ದಾರೆ.
ಕಥಾಸಂಕಲನ :
*ಮರ ಗಿಡ ಬಳ್ಳಿ (1979)
*ಅಂತರಂಗದ ಪುಟಗಳು (1984)
*ಗೋಲ (1986)
*ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ (1991)
*ಅಮ್ಮಚ್ಚಿ ಎಂಬ ನೆನಪು (2000)
*ಕ್ರೌಂಚ ಪಕ್ಷಿಗಳು (2005)
*ಕತೆಕತೆ ಕಾರಣ (2016)
ಕವನಗಳ ಸಂಗ್ರಹಗಳು :
*ಬಿಂದು ಬಿಂದಿಗೆ (1990)
*ಪಾರಿಜಾತ (1999)
*ಹೂವಕಟ್ಟುವ ಕಾಯಕ(2011)
*ದೀಪದೊಳಗಿನ ದೀಪ (2020)
ಕಾದಂಬರಿ :
*ಅಸ್ಪೃಶ್ಯರು (1992)
ಮಕ್ಕಳ ಸಾಹಿತ್ಯ :
*ಧಾಂ ಧೂಂ ಸುಂಟರಗಾಳಿ (1992)
*ಮೂಕನ ಮಕ್ಕಳು (1992)
*ಗೊಂಬೆ ಮ್ಯಾಕ್ ಬೆಥ್ (1992)
*ಢಣಾಡಂಗೂರ (1992)
*ನಾಯಿಮರಿ ನಾಟಕ (1992)
*ಸೂರ್ಯ ಬಂದ (1997)
*ಜುಂ ಜಾಂ ಆನೆ ಮತ್ತು ಪುಟ್ಟ (1997)
*ಕೋಟು ಗುಮ್ಮ (1997)
*ಹಕ್ಕಿ ಹಾಡು (2002)
*ಅರ್ಧಚಂದ್ರ ಮಿಠಾಯಿ (2002)
*ಸೋಮಾರಿ ಓಳ್ಯಾ (2004)
*ಅಳಿಲು ರಾಮಾಯಣ (2009)
*ಸತ್ರು ಅಂದ್ರೆ ಸಾಯ್ತಾರ? (2009)
*ಆನೆ ಬಂತೋ ಆನೆ (2015)
*ರಾಜಾ ಲಿಯರ್ (2015)
ಪ್ರಬಂಧಗಳು :
*ಮಲ್ಲಿನಾಥನ ಧ್ಯಾನ (1996)
*ಮೇಜು ಮತ್ತು ಬಡಗಿ (2007)
*ಜಾತ್ರೆ (1998)
ಅನುವಾದ ಸಾಹಿತ್ಯ :
*ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ.
*ಬೆಳ್ಳಿಯ ಸಂಕೋಲೆಗಳು (ಮೈತ್ರೇಯಿ ಮುಖ್ಯೋಪಾಧ್ಯಾಯಅವರ ‘Silver Shackles’ನಿಂದ ಅನುವಾದಿಸಿದ್ದು)
*ಸೂರ್ಯಕಿನ್ನರಿಯರು (ಸ್ವಪ್ನ ದತ್ತ ಅವರ ‘Sun Fairies’ನಿಂದ ಅನುವಾದಿಸಿದ್ದು)
ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳಿಂದ)
ಆತ್ಮಕಥೆ ನಿರೂಪಣೆ
*ಕೋಟ ಲಕ್ಷ್ಮೀನಾರಾಯಣ ಕಾರಂತ (ಕೋ ಲ ಕಾರಂತ)ರ ಆತ್ಮಕಥೆ “ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು”
ಸೇಡಿಯಾಪು ಕೃಷ್ಣಭಟ್ಟರ “ಸೇಡಿಯಾಪು ನೆನಪುಗಳು”
ಬಿ.ವಿ.ಕಾರಂತರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ”.
ಇತರೆ ವಿಷಯಗಳು :
*ಇವರ ‘ಅಸ್ಪೃಶ್ಯರು’ ಕಾದಂಬರಿ, ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
*’ವೈದೇಹಿಯವರ ಸಣ್ಣ ಕಥೆಗಳು’ ಬೆಂಗಳೂರು ವಿಶ್ವ ವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
*ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.
ಪ್ರಶಸ್ತಿಗಳು :
1.’ಕರ್ನಾಟಕ ಲೇಖಕಿಯರ ಸಂಘ’ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ -‘ಅಂತರಂಗದ ಪುಟಗಳು’ ಮತ್ತು ‘ಬಿಂದು ಬಿಂದಿಗೆ’ ಕೃತಿಗಳಿಗೆ.
2.’ವರ್ಧಮಾನ ಪ್ರಶಸ್ತಿ ಪೀಠ’, ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ- ‘ಗೊಲ’ ಕೃತಿಗೆ.
3.’ಕಥಾ ಆರ್ಗನೈಝೆಶನ್’ ನವದೆಹಲಿ ಯಿಂದ ಕಥಾ ಪುರಸ್ಕಾರ -‘ಹಗಲು ಗೀಚಿದ ನೆಂಟ’ ಕೃತಿಗೆ.
4.’ಕರ್ನಾಟಕ ಲೇಖಕಿಯರ ಸಂಘ’ದಿಂದ ಅನುಪಮಾ ಪುರಸ್ಕಾರ -‘ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ’ ಕೃತಿಗೆ.
5.’ಕರ್ನಾಟಕ ಸಂಘ’ ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ -‘ಅಸ್ಪೃಶ್ಯರು’ ಕೃತಿಗೆ.
6.ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ -‘ಐದು ಮಕ್ಕಳ ನಾಟಕಗಳು’ ಕೃತಿಗೆ
7.’ಅತ್ತಿಮಬ್ಬೆ ಪ್ರತಿಷ್ಠಾನ’ ದಿಂದ ಅತ್ತಿಮಬ್ಬೆ ಪುರಸ್ಕಾರ.
8.ಸಾಹಿತ್ಯ ಅಕಾಡೆಮಿ ಪುರಸ್ಕಾರ -‘ಮಲ್ಲಿನಾಥನ ಧ್ಯಾನ’ ಕೃತಿಗೆ.
9.ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
10.’ಕ್ರೌಂಚ ಪಕ್ಷಿಗಳು’ ಎಂಬ ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
11.ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ
12.ನಿರಂಜನ ಪ್ರಶಸ್ತಿ
13.ಸುನಂದಮ್ಮ ಸಾಹಿತ್ಯ ಪ್ರಶಸ್ತಿ-2019