GKHistorySpardha Times

ವೇದಗಳು ಮತ್ತು ವೇದ ಕಾಲದ ನಾಗರಿಕತೆ

Share With Friends

* ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಪ್ರಚಲಿತವಿದ್ದ ಮತ್ತೊಂದು ಪ್ರಬುದ್ಧ ಜೀವನ ಕ್ರಮವೇ ವೇದಕಾಲದ ನಾಗರಿಕತೆಯಾಗಿದೆ.
* ಇದರ ಕರ್ತೃಗಳು “ಆರ್ಯರು” ಎಂದು ಹೇಳಲಾಗಿದೆ. ಆದರೆ ಆರ್ಯರು ಎಂಬುದು ಜನಾಂಗವಾಚಕ ಶಬ್ದವಲ್ಲ. ಕೇವಲ ಗೌರವ ಸೂಚಕ ಶಬ್ದ ಎಂಬ ಅಭಿಪ್ರಾಯವು ಇದೆ.
* ಇವರು ‘ಮಧ್ಯ ಏಷ್ಯಾ’ದಿಂದ ಭಾರತಕ್ಕೆ ವಲಸೆ ಬಂದವರೆಂದೂ ಹೇಳಲಾಗಿದೆ.
* ಅವರು ‘ಕೃಷಿ’ ಪ್ರಧಾನ ಕುಸುಬು ಹೊಂದಿದವರೆಂದೂ ಹೇಳಲಾಗಿದೆ.
* ವೇದಕಾಲದ ನಾಗರಿಕತೆಯ ಪೂರ್ಣ ವಿವರಣೆಯನ್ನು ‘ವೇದ’ಗಳ ಆಧಾರದಿಂದ ತಿಳಿಯಲಾಗಿದೆ. ಇವು ಪ್ರಪಂಚದ ಪ್ರಾಚೀನ ಗ್ರಂಥಗಳಾಗಿವೆ.
* ವೇದ ಎಂದರೆ”ಜ್ಞಾನ” ಎಂದರ್ಥ.
* ಒಟ್ಟು ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ , ಸಾಮವೇದ, ಅಥರ್ವಣವೇದ.
* ವೇದಗಳು ‘ಸಂಸ್ಕøತ’ ಭಾಷೆಯಲ್ಲಿ ರಚಿಸಲ್ಪಟ್ಟಿವೆ.

✦ವೇದಕಾಲದ ಇತಿಹಾಸದ ಆಕರಗಳು
1.ಸಾಹಿತ್ಯಕ
* ಸಾಹಿತ್ಯಕ ಆಧಾರಗಳಲ್ಲಿ ಚತುರ್ ವೇದಗಳು ಬರುತ್ತವೆ.
* ವೇದ ಎಂಬುದು “ವಿದ್” ಎಂಬ ಧಾತುವಿನಿಂದ ಬಂದಿದೆ. “ವಿದ್” ಎಂದರೆ ತಿಳಿ ಎಂದರ್ಥ.
* ವೇದಗಳು ಪ್ರಾರ್ಥನೆಗಳ ಹಾಗೂ ಸ್ತೋತ್ರಗಳ ಸಮುಚ್ಚಯವಾಗಿದೆ.
* ಮೌಖಿಕವಾಗಿ ಬೆಳೆದು ಬಂದದ್ದರಿಂದ ‘ಶ್ರುತಿ’ಯೆಂದು ಕರೆಯುವರು. ನಾಲ್ಕು ವೇದಗಳನ್ನು “ಸಂಹಿತಗಳೆಂದು” ಕರೆಯುವರು.

✦ನಾಲ್ಕು ವೇದಗಳು
1.ಋಗ್ವೇದ
* ಋಗ್ವೇದ 1028 ಸ್ತ್ರೋತ್ರಗಳನ್ನು ಒಳಗೊಂಡಿದೆ.
* ಹೋತ್ರಿ ಎಂಬ ಪುರೋಹಿತ ಇದನ್ನು ಹಾಡುತ್ತಿದ್ದ.
*‘ ಗಾಯತ್ರಿ ಮಂತ್ರ’ ಋಗ್ವೇದದ ಪ್ರಮುಖ ಮಂತ್ರ.
* ಋಗ್ವೇದವನ್ನು ಪ್ರಥಮ ವೈದಿಕ ಸಾಹಿತ್ಯ ಎಂದು ಪರಿಗಣಿಸಲಾಗಿದೆ.

2.ಯಜುರ್ವೇದ
* ಇದು ಸಂಸ್ಕಾರ ವೇದವಾಗಿ ಯಜ್ಞದ ಸಮಯದಲ್ಲಿ ಉಚ್ಛರಿಸಬೇಕಾದ ಹಲವು ಮಂತ್ರಗಳನ್ನು ಹೊಂದಿತ್ತು.
* “ಅದ್ವರ್ಯ” ಎಂಬ ಪುರೋಹಿತ ಇದನ್ನು ಹಾಡುತ್ತಿದ್ದನು.

3.ಸಾಮವೇದ
* “ಸಮನ್” ಎಂಬ ಮೂಲ ಧಾತುವಿನಿಂದ ಬಂದಿದೆ.
* “ಸಮನ್” ಎಂದರೆ ಸುಮುಧರ ಗಾಯನವಾಗಿದೆ.
* ಒಟ್ಟು 1603 ಸ್ತ್ರೋತ್ರಗಳಿದ್ದವು.
* ಇದನ್ನು “ ಉದ್ಗಾತ್ರಿ” ಎಂಬ ಪುರೋಹಿತನು ಹಾಡುತ್ತಿದ್ದನು.

4.ಅಥರ್ವಣವೇದ
* ಅಥರ್ವಣವೇದ ಅಂದರೆ ‘ರುಕ್ಮಿಣ’Â ಅಥವಾ ‘ಇಂದ್ರಜಾಲದ ಜ್ಞಾನ’
* ಇದು 20 ಖಂಡಗಳಾಗಿ ಭಾಗಗೊಂಡಿದ್ದು, 711 ಸ್ತ್ರೋತ್ರಗಳನ್ನೊಳಗೊಂಡಿದೆ.

2.ಪ್ರಾಕ್ತನ ಆಧಾರಗಳು
* ಪಂಜಾಬ್, ಉತ್ತರಪ್ರದೇಶ, ಉತ್ತರ ರಾಜಸ್ಥಾನ, ಹಾಗೂ ಸಿಂಧೂ ನದಿಗಳ ದಂಡೆಗಳ ಮೇಲೆ ದೊರೆತ ಉತ್ಖನನ ಆಧಾರಗಳು ಆ ಕಾಲದ ವಸತಿಗಳನ್ನು ಹೊಂದಿವೆ.
ನಾಲ್ಕು ವೇದಗಳ ಜೊತೆಗೆ ಇಲ್ಲಿ ಅನೇಕ ಇನ್ನಿತರ ಸಾಹಿತ್ಯಗಳು ದೊರೆತಿವೆ. ಬ್ರಾಹ್ಮಣಗಳು, ಉಪನಿಷತ್ಗಳು, ಅರಣ್ಯಗಳು, ಸ್ಮøತಿಗಳು, ವೇದಾಂಗಗಳು, ದರ್ಶನಗಳು, ಮತ್ತು ಉಪವೇದಗಳು
ಪ್ರಾರಂಭದ ವೇದಕಾಲವನ್ನು “ಪೂರ್ವ ವೇದಕಾಲ” ಅಥವಾ “ಋಗ್ವೇದ ಕಾಲ “ ಎಂದು ಕರೆಯಲಾಗುತ್ತದೆ. ಅನಂತರದ ವೇದಕಾಲವನ್ನು “ ಉತ್ತರ ವೇದಕಾಲ“ ಎನ್ನುವರು.

✦ ಪೂರ್ವ ವೇದಕಾಲ ಅಥವಾ ಋಗ್ವೇದ ಕಾಲ
* ಋಗ್ವೇದದ ಪ್ರಕಾರ ಆರ್ಯರು ವಾಸವಾಗಿದ್ದ ಪ್ರದೇಶವನ್ನು “ಸಪ್ತ-ಸಿಂಧೂ” ಅಥವಾ ‘ಏಳು ನದಿಗಳ ನಾಡೆಂದೂ’ ಕರೆಯುತ್ತಿದ್ದರು.
* ಋಗ್ವೇದದ ಪ್ರಕಾರ ಆರ್ಯ ಎಂದರೆ “ಶ್ರೇಷ್ಠ” ಅಥವಾ ಸುಸಂಸ್ಕøತಿಯುಳ್ಳ ವಿಚಾರಯುತ ಜನ ಎಂದರ್ಥ.
* ಆರ್ಯರಿಗೆ “ಸುರ” ಮತ್ತು ಸೋಮ ಎಂಬ ಪಾನೀಯಗಳ ಪರಿಚಯವಿತ್ತು.
* ವೇದ ಕಾಲದಲ್ಲಿ ಅನೇಕ ದೇವ – ದೇವಿಯರ ಪೂಜೆಯ ಉಲ್ಲೇಖವಿದ್ದರೂ, ಮೂರ್ತಿಯಾಗಲಿ ದೇವಾಲಯವಾಗಲಿ ದೊರೆತಿಲ್ಲ.
* ಇವರ ಕಾಲದಲ್ಲಿ ಪ್ರಕೃತಿಗೆ ಸಂಬಂಧಿಸಿದ ದೇವರುಗಳ ಆರಾಧಕರಾಗಿದ್ದರು.
* “ನಿಷ್ಕಾ” ಎಂಬ ಬಂಗಾರದ ನಾಣ್ಯ ರೂಡಿಯಲ್ಲಿತ್ತು..
* ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖವಾಗಿರುವ ನದಿ “ಸರಸ್ವತಿ”.
* ಋಗ್ವೇದ ಯುಗದ ಪ್ರಮುಖ ದೇವತೆ “ಇಂದ್ರ” ಮತ್ತು “ಅಗ್ನಿ”.
* ಅದರ ಜೊತೆಗೆ ಅವರು ಸೂರ್ಯ,( ಬೆಳಕಿನ ದೇವತೆ) ಸೋಮ( ಸಸ್ಯ ದೇವತೆ) ವರುಣ( ಜಲದೇವತೆ) ಮಿತ್ರ, ಯಮ (ಮೃತ್ಯು ದೇವತೆ), ರುದ್ರ( ಉಗ್ರ ಬಿರುಗಾಳಿ ದೇವತೆ), ಪ್ರಷನ್(ವಿವಾಹ ದೇವತೆ), ದಿಶಾನ( ವೃಕ್ಷ ದೇವತೆ), ಅರಣ್ಮನಿ( ವನ ದೇವತೆ), ಇಲಾ( ಕಾಣಿಕೆ ದೇವತೆ), ದ್ಯುಹಸ್( ಸ್ವರ್ಗದ ಅಧಿದೇವತೆ), ಅಶ್ವಿನಿ ಮುಂತಾದವನ್ನು ಆರಾಧಿಸುತ್ತಿದ್ದರು.
* ಋಗ್ವೇದ ಕಾಲದ ರಾಜ್ಯದ ಮುಖ್ಯಸ್ಥ – “ರಾಜನ್”
* ಋಗ್ವೇದ ಕಾಲದಲ್ಲಿ ಆಡಳಿತದ ಭಾಗಗಳು- ಸಭಾ ಮತ್ತು ಸಮಿತಿ, ವಿಧಾತಾ ಮತ್ತು ಗಣ. ಇವುಗಳಲ್ಲಿ ಸಭಾ ಮತ್ತು ಸಮಿತಿ ಪ್ರಮುಖ ಆಡಳಿತ ಭಾಗಗಳು.
* ಋಗ್ವೇದ ಕಾಲದ ತೆರಿಗೆಯ ಹೆಸರು –“ ಬಲಿ”
* ಋಗ್ವೇದ ಕಾಲದಲ್ಲಿ ಬೇಸಾಯ ಪ್ರಮುಖ ವೃತ್ತಿಯಾಗಿತ್ತು. “ ಪಶು ಸಂಗೋಪನೆ” ಪೂರಕ ವೃತ್ತಿಯಾಗಿತ್ತು.
* ಅವರ ಆಹಾರ ಬಾರ್ಲಿ, ಅಕ್ಕಿ, ಮೀನು ಮಾಂಸಗಳನ್ನು ಒಳಗೊಂಡಿತ್ತು.
* ಕಬ್ಬಿಣ ಮುಂತಾದ ಲೋಹಗಳ ಉಪಯೋಗವನ್ನು ಅವರು ಅರಿತಿದ್ದರು.
* ವೃತ್ತಿಗಳಲ್ಲಿ ವೈದ್ಯಕೀಯ ಮತ್ತು ಪುರೋಹಿತ ವೃತ್ತಿಗಳು ಮುಖ್ಯವಾಗಿದ್ದವು. ಯಾರು ಯಾವ ವೃತ್ತಿಯನ್ನಾದರೂ ಮಾಡಬಹುದಿತ್ತು.
* ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿತ್ತು.
* ಹಸುಗಳ (ಗೋಧನ)ಸಂಖ್ಯೆಯ ಆಧಾರದ ಮೇಲೆ ಆ ಕಾಲದ ಸಂಪತ್ತನ್ನು ಅಳೆಯಲಾಗುತ್ತಿತ್ತು. ಗೋವುಗಳನ್ನು ಕೊಲ್ಲಬಾರದು ಎಂಬ ನಂಬಿಕೆಯಿತ್ತು.
* ಗೋವುಗಳ ನಂತರ ಕುದುರೆಗೆ ಪ್ರಾಶಸ್ತ್ಯವಿತ್ತು. ರಥವನ್ನು ಎಳೆಯಲು ಕುದುರೆಗಳನ್ನು ಬಳಸುತ್ತಿದ್ದರು.
* ಈ ಕಾಲದಲ್ಲಿ ಯಜ್ಞಗಳ ಆಚರಣೆ ಸರಳವಾಗಿತ್ತು.

✦ ಸೃಷ್ಟಿಕರ್ತನ ವಿವಿಧ ಅಂಗಗಳಿಂದ ಉಗಮಿಸಿದವರು
* ಬಾಯಿಂದ- ಬ್ರಾಹ್ಣಣ
* ತೋಳುಗಳಿಂದ – ಕ್ಷತ್ರಿಯ
* ತೊಡೆಗಳಿಂದ -ವೈಶ್ಯ
* ಪಾದಗಳಿಂದ – ಶೂದ್ರ

✦ ಉತ್ತರ ವೇದಕಾಲ ಅಥವಾ ಋಗ್ವೇದದ ನಂತರದ ವೇದಗಳ ಕಾಲ
* ಋಗ್ವೇದದ ನಂತರದ ತ್ರಿವೇದಗಳು ಭಾರತದ ಮೂರು ಪ್ರದೇಶದ ಮುಖ್ಯ ವಿಭಾಗಗಳನ್ನು ಹೇಳಿದೆ. ಅವುಗಳುಸ ಉತ್ತರ ಭಾರತ, ಮಧ್ಯ ಬಾರತ, ದಕ್ಷಿಣ ಭಾರತ.
* ಉತ್ತರ ವೇದಕಾಲದಲ್ಲಿ ಜೀವನ ಕ್ರಮದಲ್ಲಿ ಬದಲಾವಣೆಗಳಾದವು. ವೇದಕಾಲದ ಪಂಗಡಗಳು ಹಂತಹಂತವಾಗಿ ಗಂಗಾ ಯಮುನಾ ನದಿ ಬಯಲಿಗೆ ವಲಸೆಹೋದವು. ಅವರು ಪೂರ್ವ ರಾಜಸ್ಥಾನ, ಪೂರ್ವ ಉತ್ತರಪ್ರದೇಶ, ಉತ್ತರ ಬಿಹಾರಕ್ಕೆ ವಿಸ್ತರಣಗೊಂಡರು.
* ಉತ್ತರ ವೇದಕಾಲದ ರಾಜರು ತಮ್ಮ ರಾಜ್ಯವನ್ನು ವಿಸ್ತರಿಸಲು ಬಯಸಿದರು. ಅವರು ‘ಸಾಮ್ರಾಟ್’, ಚಕ್ರವರ್ತಿಗಳೆಂಬ ಬಿರುದುಗಳನ್ನು ಧರಿಸತೊಡಗಿದರು.
* ಕಾಲಕ್ರಮೇಣದಲ್ಲಿ ಸಮಾಜದಲ್ಲಿ ವೃತ್ತಿ ಆಧಾರಿತ ಬ್ರಾಹ್ಮಣ (ಪುರೋಹಿತ), ಕ್ಷತ್ರಿಯ( ರಾಜ ಮತ್ತು ಸೈನಿಕ), ವೈಶ್ಯ( ವ್ಯಾಪಾರಿ ಮತ್ತು ಕೃಷಿಕ), ಶೂದ್ರ( ಊಳಿಗದವರು). ಎಂಬ ನಾಲ್ಕು ವರ್ಣಗಳಿದ್ದವು. ಇದನ್ನು “ ವರ್ಣವ್ಯವಸ್ಥೆ” ಎನ್ನುವರು. ವರ್ಣವ್ಯವಸ್ಥೆ ಋಗ್ವೇದ ಕಾಲಕ್ಕಿಂತ ಕಟ್ಟುನಿಟ್ಟಾಗಿತ್ತು.
* ಕಾಲಾಂತರದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಕಡಿಮೆಯಾಯಿತು. ಸ್ತ್ರೀಯರಿಗೆ ಅಷ್ಟೋಂದು ಸ್ವಾತಂತ್ರರವಿರಲಿಲ್ಲ. ಗಂಡು ಸಂತಾನವೇ ತಮ್ಮ ಉನ್ನತಿಗೆ ಸಾಧನವೆಂಬ ಭಾವನೆ ಅವರಲ್ಲಿತ್ತು.
* ಕುಟುಂಬ ಅಥವಾ ಕುಲ ಸಾಮಾಜಿಕ ವ್ಯವಸ್ಥೆಯ ಮೂಲವಾಗಿತ್ತು.
* ಉತ್ತರ ವೈದಿಕ ಕಾಲದಲ್ಲಿ “ಪ್ರಜಾಪತಿ” (ಸೃಷ್ಟಿಕರ್ತ) ಆರಾಧಿಸುತ್ತಿದ್ದರು. ರುದ್ರ (ಶಿವ), ವಿಷ್ಣು ( ವಿಶ್ವರಕ್ಷಕ)ಅವರು ಆರಾಧಿಸುವ ಪ್ರಮುಖ ದೇವತೆಗಳಾಗಿದ್ದವು.
ಪಶು ಸಂಗೋಪನೆ ಪ್ರಮುಖ ಕಸುಬಾಗಿತ್ತು.
* ಕುಶಲ ಕಸುಬುಗಳಾದ ಮರಗೆಲಸ, ಲೋಹಗಾರಿಕೆ, ನೇಯ್ಗೇ, ಮಡಕೆ ತಯಾರಿಕೆ, ಋಗ್ವೇದ ಕಾಲದಿಂದ ಬಳಕೆಯಲ್ಲಿತ್ತು.
* ಕಮ್ಮಾರ- ಆಯಾಸ್, ಅಕ್ಕಸಾಲಿಕ -ಹಿರಣ್ಯಕಾರ, ಕ್ಷೌರಿಕ- ವ್ಯಾಪ್ತ್ರಿ, ವೈದ್ಯ – ಬೀಷಿಕ ಎಂದು ಕರೆಯುತ್ತಿದ್ದರು.
* ಸಂಪತ್ತಿನ ಮೌಲ್ಯವಾದ ದನಗಳು ವ್ಯಾಪಾರ ವಿನಿಮಯದ ಮೂಲವಾಗಿದ್ದವು.
* ವಸ್ತು ವಿನಿಮಯ ವ್ಯಾಪರವೇ ಹೆಚ್ಚು ಪ್ರಚಲಿತದಲ್ಲಿತ್ತು.
* ಭತ್ತ ( ವ್ರಿಹಿ), ಬಾರ್ಲಿ( ಯವ), ದ್ವಿದಳ ಧಾನ್ಯಗಳು, ಎಳ್ಳು(ತಿಲ) ಮತ್ತು ಗೋಧಿಯನ್ನು ( ಗೋದಾಮ) ಬೆಳೆಯುತ್ತಿದ್ದರು. ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿತ್ತು.
* ಗಾರ್ಗಿ ಮತ್ತು ಮೈತ್ರೇಯಿ ಈ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದರು..
ಆಶ್ರಮ ಅಥವಾ ಜೀವನದ ಹಂತಗಳು-
1.ಬ್ರಹ್ಮಚರ್ಯ
2.ಗೃಹಸ್ಥ
3.ವಾನಪ್ರಸ್ಥ
4.ಸನ್ಯಾಸ
ನಾಲ್ಕನೇ ಆಶ್ರಮ “ ಸನ್ಯಾಸ” ಉತ್ತರ ವೈದಿಕ ಕಾಲದಲ್ಲಿ ಹೆಚ್ಚು ಪ್ರಚಲಿತವಾಯಿತು.

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

Leave a Reply

Your email address will not be published. Required fields are marked *

error: Content Copyright protected !!