Current AffairsLatest UpdatesPersons and Personalty

Manoj Kumar : ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್(87) ನಿಧನ

Share With Friends

Veteran Actor Manoj Kumar Passes Away at 87

ದೇಶಭಕ್ತಿ ಚಿತ್ರಗಳನ್ನು ನಿರ್ದೇಶಿಸಿ, ನಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರತ್ ಕುಮಾರ್ ಎಂದೇ ಪ್ರಸಿದ್ದರಾಗಿದ್ದ ಬಾಲಿವುಡ್ ಹಿರಿಯ ನಟ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ಅವರು ನಿಧನರಾದರು. ಅವರಿಗೆ 87ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮನೋಜ್ ಕುಮಾರ್ (87) ಮುಂಬೈನ ಕೋಕಿಲಾ ಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.

ನಿಜವಾದ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ (Harikrishan Giri Goswami) :
ಸಿನಿ ಜಗತ್ತಿಗೆ ಪ್ರವೇಶಿಸಿದ ನಂತರ ಅನೇಕ ನಟರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಮನೋಜ್ ಕುಮಾರ್ ಕೂಡ ಒಬ್ಬರು. ಸಿನಿಮಾದಿಂದ ಪ್ರಭಾವಿತರಾಗಿ ಹೆಸರು ಬದಲಾಯಿಸಿಕೊಂಡರು. ಆದರೆ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಭರತ್ ಕುಮಾರ್’ ಎಂದು ಕರೆಯುತ್ತಿದ್ದರು. ಮನೋಜ್ ಕುಮಾರ್ ಅವರ ನಿಜವಾದ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ ಎಂದಾಗಿತ್ತು.

ಹರಿಕಿಶನ್ ಗಿರಿ, ಜುಲೈ 24, 1937 ರಂದು ಅಬೋಟಾಬಾದ್‌ನಲ್ಲಿ ಜನಿಸಿದರು, ದೇಶ ವಿಭಜನೆ ನಂತರ ಅದು ಪಾಕಿಸ್ತಾನದ ಭಾಗವಾಯಿತು. ಆ ದಿನಗಳಲ್ಲಿ ಮನೋಜ್ ಕುಮಾರ್ ಪೋಷಕರು ಭಾರತವನ್ನು ಆರಿಸಿಕೊಂಡರು. ಮನೋಜ್ ಕುಮಾರ್​ಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವಿತ್ತು. ಅಶೋಕ್ ಕುಮಾರ್, ದಿಲೀಪ್ ಕುಮಾರ್ ಮತ್ತು ಕಾಮಿನಿ ಕೌಶಲ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ತಮ್ಮ ನೆಚ್ಚಿನ ನಟರ ಸಿನಿಮಾಗಳ ಪ್ರಭಾವಿತರಾಗಿ ತಮ್ಮ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು.

ಮನೋಜ್ ಕುಮಾರ್ ಕಾಲೇಜು ದಿನಗಳಲ್ಲಿ ತುಂಬಾ ಸುಂದರರಾಗಿದ್ದರು. ಸಿನಿಮಾ ಮೇಲಿನ ಹುಚ್ಚಿನಿಂದಾಗಿ ರಂಗಭೂಮಿ ಪ್ರವೇಶ ಮಾಡಿದರು. ರಂಗಭೂಮಿ ಮೂಲಕ ಶುರುವಾದ ನಂಟು ಅವರನ್ನು ಮುಂಬೈಗೆ ಕರೆದುಕೊಂಡು ಬಂದಿತು. 1957 ರಲ್ಲಿ ಬಿಡುಗಡೆಯಾಗಿದ್ದ ‘ಫ್ಯಾಷನ್’ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ‘ಕಚ್ಚಿ ಕಿ ಗುಡಿಯಾ’ 1960 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಇದು ಮನೋಜ್ ಕುಮಾರ್​ಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ‘ಉಪ್ಕಾರ್’, ‘ಪತ್ತರ್ ಕೆ ಸನಮ್’, ‘ರೋಟಿ ಕಪ್ಡಾ ಔರ್ ಮಕಾನ್’, ‘ಸನ್ಯಾಸಿ’ ಮತ್ತು ‘ಕ್ರಾಂತಿ’ಯಂತಹ ಅದ್ಭುತ ಚಿತ್ರಗಳನ್ನು ನೀಡಿದರು. ಸಿನಿರಂಗಕ್ಕೆ ಸಲ್ಲಿಸಿದ ಸೇವೆಗೆ ದಾದಾ ಸಾಹೇಬ್ ಫಾಲ್ಕೆ ( Dadasaheb Phalke) ಪ್ರಶಸ್ತಿ ಒಲಿದು ಬಂದಿತ್ತು.

ದೇಶಭಕ್ತಿ ಸಿನಿಮಾ(patriotic films)ಗಳ ಪ್ರೇಮಿ:
ಮನೋಜ್ ಕುಮಾರ್ ಅವರು ತಮ್ಮ ಅಭಿನಯದ ಸಿನಿಮಾಗಳಲ್ಲಿ ದೇಶಭಕ್ತಿ ಮೂಡಿಸುವಂತಹ ಕಥೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದರಿಂದ ಅವರನ್ನು ಇಂಡಸ್ಟ್ರಿಯವರು ಪ್ರೀತಿಯಿಂದ ಭಾರತ್ ಕುಮಾರ್ ಎಂದೇ ಕರೆಯುತ್ತಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಉಪಕಾರ್ (1968) ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಪೂರವ್ ಔರ್ ಪಶ್ಚಿಮ್, ಶೋರ್, ಕ್ರಾಂತಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು.

‘ಭಾರತ್ ಕುಮಾರ್’ ಬಿರುದು :
ಮನೋಜ್ ಕುಮಾರ್ ತಮ್ಮ ರಾಷ್ಟ್ರೀಯತಾವಾದಿ ಕಥೆಯ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡರು . ಸ್ವಯಂ ತ್ಯಾಗ, ದೇಶಭಕ್ತಿಯ ಪಾತ್ರಗಳ ಚಿತ್ರಣವು ಅವರಿಗೆ ‘ಭಾರತ್ ಕುಮಾರ್’ ಎಂಬ ಬಿರುದನ್ನು ತಂದುಕೊಟ್ಟಿತು . ಅವರ ಕೆಲವು ಪ್ರಸಿದ್ಧ ದೇಶಭಕ್ತಿ ಚಲನಚಿತ್ರಗಳು ಇಲ್ಲಿವೆ:

ಶಹೀದ್ (1965) – ಭಗತ್ ಸಿಂಗ್ ಅವರ ಜೀವನವನ್ನು ಆಧರಿಸಿದ .
ಉಪಕಾರ್ (1967) – ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯಿಂದ ಪ್ರೇರಿತವಾಗಿದೆ .
ಪೂರಬ್ ಔರ್ ಪಶ್ಚಿಮ್ (1970) – ಭಾರತೀಯ ಮೌಲ್ಯಗಳನ್ನು ಪಾಶ್ಚಿಮಾತ್ಯ ಪ್ರಭಾವದೊಂದಿಗೆ ವ್ಯತಿರಿಕ್ತಗೊಳಿಸುವ ಚಲನಚಿತ್ರ .
ಕ್ರಾಂತಿ (1981) – ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಐತಿಹಾಸಿಕ ನಾಟಕ .

ನಟನೆಯ ನಂಟು:
ಬಾಲ್ಯದಿಂದಲೂ ಬಣ್ಣದ ಲೋಕದ ನಂಟು ಇಟ್ಟುಕೊಂಡಿದ್ದ ಮನೋಜ್ ಕುಮಾರ್ ಅವರು ಫ್ಯಾಷನ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ನಟನ ವೃತ್ತಿ ಆರಂಭಿಸಿದರು. ಉಪಕಾರ್, ಆಫ್ರಿ, ಶೋರ್, ರೋಟಿ ಕಪಡಾ ಔರ್ ಮಕಾನ್, ಕ್ರಾಂತಿ, ಸನ್ಯಾಸಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗಮನಾರ್ಹ ಅಭಿನಯದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ನೆನಪು ಮೂಡಿಸಿದ್ದಾರೆ. 1995 ರಲ್ಲಿ ಬಿಡುಗಡೆಗೊಂಡ ಮೈದಾನ್ -ಇ- ಜಂಗ್ ಸಿನಿಮಾದಲ್ಲಿ ಮನೋಜ್ ಕುಮಾರ್ ಅಂತಿಮವಾಗಿ ನಟಿಸಿದ್ದರು.

ಸಂದ ಪ್ರಶಸ್ತಿಗಳು:
ಮನೋಜ್ ಕುಮಾರ್ ಅವರು ಚಿತ್ರರಂಗದಲ್ಲಿ ಸಲ್ಲಿಸಿದ ಆಮೋಘ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ 1992ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ 1968ರಲ್ಲಿ ತಮ್ಮ ಚೊಚ್ಚಲ ನಿರ್ದೇಶನದ ಉಪಕಾರ್ ಚಿತ್ರಕ್ಕಾಗಿ ಎರಡನೇ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ, 2016ರಲ್ಲಿ ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ(Dadasaheb Phalke Award)ಗೂ ಕೂಡ ಪಾತ್ರರಾಗಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ನೀಡುವ ಕಿಶೋರ್ ಕುಮಾರ್ ಪ್ರಶಸ್ತಿ (2008), ರಾಜ್‌ ಕಪೂರ್‌ ಪ್ರಶಸ್ತಿ (2010) ಅಲ್ಲದೆ 7ಬಾರಿ ಫಿಲಂಫೇರ್ ಪ್ರಶಸ್ತಿ, ಉಪಕಾರ್ ಸಿನಿಮಾದ ಅತ್ಯುತ್ತಮ ಸಂಭಾಷಣೆಗಾಗಿ ಬಿಎಫ್‌ಜೆಎ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮನೋಜ್ ಕುಮಾ‌ರ್ ಅವರಿಗೆ ಸಂದಿವೆ.

ಪದ್ಮಶ್ರೀ (1992) – ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2015) – ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ.
ಅವರ ಅತ್ಯುತ್ತಮ ಅಭಿನಯ ಮತ್ತು ನಿರ್ದೇಶನಕ್ಕಾಗಿ ಬಹು ಫಿಲ್ಮ್‌ಫೇರ್ ಪ್ರಶಸ್ತಿಗಳು .

ಹಿಟ್‌ ಚಿತ್ರಗಳು :
ಹರಿಯಾಲಿ ಔರ್ ರಾಸ್ತಾ (1962)
ವೋ ಕೌನ್ ಥಿ? (1964)
ಹಿಮಾಲಯ ಕಿ ಗೋಡ್ ಮೇ (1965)
ದೋ ಬದನ್ (1966)
ಪತ್ತರ್ ಕೆ ಸನಮ್ (1967)
ನೀಲ್ ಕಮಲ್ (1968)

error: Content Copyright protected !!