History

ಮೈಸೂರಿನ ಒಡೆಯರು (ಮೈಸೂರು ಸಂಸ್ಥಾನ) (1399–1947)

Share With Friends

ಮೈಸೂರು ಸಂಸ್ಥಾನದ ಯದುವಂಶ ವಿಶಿಷ್ಟವಾದ ರಾಜಮನೆತನ. ಭಾರತಕ್ಕೆ ಸ್ವಾಂತಂತ್ರ್ಯ ಬಂದ ನಂತರವೂ ಒಡೆಯರ್ ಅಥವಾ ವಡೀಯಾರ್ ಸರ್ ನೇಮ್ ಬಳಕೆ ರಾಜಮನೆತನದ ಸದಸ್ಯರಲ್ಲೇ ಉಳಿಸಿಕೊಳ್ಳಲಾಗಿತ್ತು. 1399 ರಿಂದ 1947ರ ತನಕ ರಾಜ್ಯಭಾರ ಮಾಡಿದ ಯದುವಂಶ ಸ್ಥಾಪಕ ಯದುರಾಯ ಅಥವಾ ವಿಜಯ

ಮೈಸೂರು ಸಂಸ್ಥಾನ (1399 – 1947) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. 1399ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. 1565ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. 1565ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.

ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ, ಒಡೆಯರ್ ಕುಟುಂಬದಿಂದ ಆಳ್ವಿಕೆಗೆ ಒಳಪಟ್ಟಿದ್ದ ಇವರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಂತೆ ಕಾರ್ಯನಿರ್ವಹಿಸಿದರು. ವಿಜಯನಗರ ಸಾಮ್ರಾಜ್ಯ (1565) ಪತನದೊಂದಿಗೆ ಈ  ಸಾಮ್ರಾಜ್ಯವು  ಸ್ವತಂತ್ರವಾಯಿತು. 17  ನೇ ಶತಮಾನದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ನರಸರಾಜ ಒಡೆಯರ್-1 ಮತ್ತು ಚಿಕ್ಕ ದೇವರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ, ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳನ್ನು ವಶಪಡಿಸಿಕೊಳ್ಳುತ್ತ ಪ್ರಬಲ ರಾಜ್ಯವಾಯಿತು.

ಸಾಮ್ರಾಜ್ಯದ ಇತಿಹಾಸ ಮೂಲಗಳು, ಅನೇಕ ಉಪಲಬ್ಧ ಕಲ್ಲಿನ ಮತ್ತು ತಾಮ್ರದ ತಟ್ಟೆಯ ಶಾಸನಗಳಲ್ಲಿ, ಮೈಸೂರು ಅರಮನೆ ಮತ್ತು ಸಮಕಾಲೀನ ಸಾಹಿತ್ಯ,ಕನ್ನಡ, ಪರ್ಷಿಯನ್ ಮತ್ತು ಇತರ ಭಾಷೆಗಳ ದಾಖಲೆಗಳಲ್ಲಿ ಕಾಣಬಹುದು. ಸಾಂಪ್ರದಾಯಿಕ ದಾಖಲೆಗಳ ಪ್ರಕಾರ, ಮೈಸೂರು ಸಾಮ್ರಾಜ್ಯವು ಒಂದು ಸಣ್ಣ ರಾಜ್ಯವಾಗಿ ಹುಟ್ಟಿಕೊಂಡಿತು ಮತ್ತು ಇಬ್ಬರು ಸಹೋದರರು, ಯದುರಾಯ(ವಿಜಯ ಎಂದೂ ಕರೆಯಲಾಗುತ್ತಿತ್ತು) ಮತ್ತು ಕೃಷ್ಣರಾಯ ಸ್ಥಾಪಿಸಿದರು. ಯದುರಾಯ  ಸ್ಥಳೀಯ ರಾಜಕುಮಾರಿ, ಚಿಕ್ಕದೇವರಸಿಯನ್ನು ವಿವಾಹವಾಗಿ, ರಾಜ್ಯವನ್ನು ಉಳಿಸಿ ಒಡೆಯರ್ ಎಂಬ ಬಿರುದನ್ನು ಗಳಿಸಿದರು. ಒಡೆಯರ್ ಕುಟುಂಬದ ಬಗ್ಗೆ ಮೊದಲ ಮಾತುಗಳು ವಿಜಯನಗರದ ರಾಜ ಅಚ್ಯುತ ದೇವ ರಾಯನ ಕಾಲದ (16 ನೆ ಶತಮಾನ)  ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಿದೆ.

ಚಿಕ್ಕ ದೇವರಾಜ ಒಡೆಯರ್ ಅವರು ಬೇರೆ ರಾಜ್ಯಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ ರಾಜ್ಯವನ್ನು ವಿಸ್ತರಿಸಿದರು. ಸಾಮ್ರಾಜ್ಯವು ಶೀಗ್ರದಲ್ಲೇ  ಪೂರ್ವದಲ್ಲಿ ಸೇಲಂ ಮತ್ತು ಬೆಂಗಳೂರು,  ಪಶ್ಚಿಮದಲ್ಲಿ ಹಾಸನ, ಉತ್ತರಕ್ಕೆ ಚಿಕ್ಕಮಗಳೂರು ಮತ್ತು ತುಮಕೂರು ಮತ್ತು ದಕ್ಷಿಣದ ಉಳಿದ ಭಾಗದಲ್ಲಿ ಕೊಯಮತ್ತುರ್ ವಶಪಡಿಸಿಕೊಂಡಿತು.

ಅನಕ್ಷರಸ್ಥನಾದರೂ, ಹೈದರ್ ಅಲಿ ತನ್ನ ಹೋರಾಟ ಕೌಶಲ್ಯ ಮತ್ತು ಆಡಳಿತ ಕುಶಾಗ್ರಮತಿಯಿಂದಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ. ಹೈದರ್ ಅಲಿಯ ಉನ್ನತಿಯನ್ನು ಸಹಿಸದ ಬ್ರಿಟಿಷರು ಮರಾಠರು ಮತ್ತು ಗೊಲ್ಕೊಂಡಾ ನಿಜಾಮ್ ಜತೆ ಮೈತ್ರಿ ಮಾಡಿಕೊಂಡು ಹೈದರ್ ಅಲಿಯ ಮೇಲೆ ಯುದ್ಧ ಸಾರಿದರು ( ಮೊದಲ  ಆಂಗ್ಲೋ ಮೈಸೂರು ಯುದ್ಧ 1767). ಚೆಂಗಮ್ ಮತ್ತು ತಿರುವಣ್ಣಮಲೈ ಯುದ್ಧಗಳಲ್ಲಿ ಹೈದರ್ ಅಲಿ ಸೋಲನ್ನು ಅನುಭವಿಸಿದರು. 1770 ರಲ್ಲಿ, ಮಾಧವರಾವ್ ಪೇಶ್ವರ ಮರಾಠಾ ಸೇನೆಯ ಮೈಸೂರು ಮೇಲೆ ದಾಳಿ ನಡೆಸಿತು (1764 -1772 ಸಮಯದಲ್ಲಿ 3 ಯುದ್ಧಗಳು ನಡೆದಿದ್ದು ಹೈದರ್ ಅಲಿ ಸೋಲನ್ನು ಕಂಡರು) ಹೈದರ್ 1769  ಒಪ್ಪಂದದ ಪ್ರಕಾರ ಬ್ರಿಟಿಷರ ಬೆಂಬಲ ನಿರೀಕ್ಷಿಸಿದ್ದರಾದರು ಬ್ರಿಟಿಷರು ಬೆಂಬಲವನ್ನು ಕೊಡದೆ ದ್ರೋಹವೆಸೆಗಿದರು. ಬ್ರಿಟಿಷರ ಈ ದ್ರೋಹದಿಂದ ಯುದ್ಧಗಳನ್ನು ಹೈದರ್ ಅಲಿ ಯುದ್ದಗಳನ್ನು ಸೋತರು ಮತ್ತು ಅವರ ಮೇಲೆ ಅಪನಂಬಿಕೆ ಟಿಪ್ಪುಸುಲ್ತಾನ ಕೂಡ ಬೆಳೆಸಿಕೊಂಡಿದ್ದರು.

ಕೃಷ್ಣರಾಜ -4, ಹನ್ನೊಂದು ವರುಷದ ಹುಡುಗ,  1895  ರಲ್ಲಿ ಸಿಂಹಾಸನವನ್ನು ಏರಿದರು. ಅವರು ದೊಡ್ಡವರಾಗುವ ತನಕ ಅವರ ತಾಯಿ ಕೆಂಪರಾಜಮ್ಮಣ್ಣಿಯವರು ಆಳ್ವಿಕೆ ನಡೆಸಿದರು. ಇವರ ಆಳ್ವಿಕೆಯಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿದ್ದು ಮೈಸೂರನ್ನು  ಕೈಗಾರಿಕೆ, ಶಿಕ್ಷಣ, ಕೃಷಿ ಮತ್ತು ಕಲೆಯಲ್ಲಿ, ಪ್ರಗತಿಪರ ಮತ್ತು ಆಧುನಿಕ ರಾಜ್ಯವಾಗಿ ಪರಿವರ್ತಿಸಿದರು. ಗಾಂಧೀಜಿ ಅವರು ಇವರನ್ನು ರಾಜರ್ಷಿ ಎಂದು ಕರೆಯುತ್ತಿದ್ದರು. ಮಹಾರಾಜ ಸ್ವತಃ ನಿಪುಣ ಸಂಗೀತಗಾರರಾಗಿದ್ದು, ತಮ್ಮ ಹಿರಿಯರಂತೆ,  ಲಲಿತಕಲೆಗಳ ಅಭಿವೃದ್ಧಿಗೆ  ಆಶ್ರಯ ನೀಡಿದರು

ಚಿಕ್ಕ ದೇವರಾಜರ ಆಳ್ವಿಕೆಯು  ಅನೇಕ ಸುಧಾರಣೆಗಳನ್ನು ತಂದಿತು. ಆಂತರಿಕ ಆಡಳಿತ  ಬೆಳೆಯುತ್ತಿರುವ ಅಗತ್ಯಗಳಿಗೆ ಸರಿಹೊಂದುವಂತೆ ನವೀಕರಿಸಿ ಹೆಚ್ಚು ಪರಿಣಾಮಕರಿಸಲಾಯಿತು ಮತ್ತು ಅಂಚೆ ವ್ಯವಸ್ಥೆಯನ್ನು  ಅಸ್ತಿತ್ವಕ್ಕೆ ತರಲಾಯಿತು. ಆರ್ಥಿಕ ಸುಧಾರಣೆಗಳನ್ನು ಕೂಡ ಪರಿಚಯಿಸಲಾಗಿ, ಆದಾಯದ ಸಂಗ್ರಹಣೆಯಲ್ಲಿ ವೈಯಕ್ತಿಕ ಆಸಕ್ತಿಯನ್ನು ರಾಜ ಹೊಂದಿದ್ದರು, ಖಜಾನೆ 90, 00, 000 ಪಗೋಡಾಗಳಷ್ಟು ವೃದ್ಧಿಸಿದ್ದರಿಂದ ಅವರನ್ನು ನವಕೋಟಿ ನಾರಾಯಣ ಎಂಬ ಬಿರುದನ್ನಿಟ್ಟಿದ್ದರು

ಆಧುನಿಕ ಮೈಸೂರಿನ ಹರಿಕಾರ ಎಂದು ಕರೆಯಲ್ಪಡುವ ಸರ್ ಎಂ.  ವಿಶ್ವೇಶ್ವರಯ್ಯ ನವರು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. 1909 ರಲ್ಲಿ ದಿವಾನರಾಗಿ ನೇಮಕಗೊಂಡರು. ಇವರ ಅವಧಿಯಲ್ಲಿ, ಮೈಸೂರು ವಿಧಾನಸಭೆಯ ಸದಸ್ಯತ್ವವನ್ನು  18 ರಿಂದ 24 ಗೆ ಹೆಚ್ಚಿಸಲಾಯಿತು ಮತ್ತು ರಾಜ್ಯದ ಬಜೆಟ್ ಚರ್ಚೆಗಳಲ್ಲಿ ವಿಮರ್ಶಿಸುವ ಅಧಿಕಾರವನ್ನು ನೀಡಲಾಯಿತು. ಅವರ ಅವಧಿಯಲ್ಲಿ ಕಾರ್ಯಾರಂಭಗೊಂಡ  ಪ್ರಮುಖ ಯೋಜನೆಗಳೆಂದರೆ: ಕನ್ನಂಬಾಡಿ ಆಣೆಕಟ್ಟು ನಿರ್ಮಾಣ, ಭದ್ರಾವತಿಯಲ್ಲಿನ ಮೈಸೂರು ಐರನ್ ವರ್ಕ್ಸ್, 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಮೈಸೂರು ರಾಜ್ಯದ ರೈಲ್ವೆ ಇಲಾಖೆ ಮತ್ತು ಮೈಸೂರಿನ ಹಲವಾರು ಕೈಗಾರಿಕೆಗಳ ಸ್ಥಾಪನೆ. 1955  ರಲ್ಲಿ,  ಭಾರತದ ಅತ್ಯುನ್ನತ ನಾಗರಿಕ ಗೌರವ  “ಭಾರತ ರತ್ನ” ಅವರಿಗೆ ನೀಡಲಾಯಿತು. ಸರ್ ಮಿರ್ಜಾ ಇಸ್ಮಾಯಿಲ್ 1926 ರಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡರು. ಅವರ ಕೊಡುಗೆಗಳೆಂದರೆ: ಭದ್ರಾವತಿಯಲ್ಲಿನ ಐರನ್ ವರ್ಕ್ಸ್ ನ ವಿಸ್ತರಣೆ, ಭದ್ರಾವತಿಯಲ್ಲಿ ಒಂದು ಸಿಮೆಂಟ್ ಮತ್ತು ಕಾಗದ ಕಾರ್ಖಾನೆ ಸ್ಥಾಪನೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆರಂಭಿಸುವಿಕೆ.

1894 ರಲ್ಲಿ, ರಾಜ್ಯವು ಎಂಟು ವರ್ಷಕ್ಕಿಂತ ಕೆಳಗಿನ ಹುಡುಗಿಯರ ಮದುವೆಯನ್ನು  ನಿಷೇಧಿಸುವಂತ ಕಾನೂನುಗಳನ್ನು ಜಾರಿಗೆ ತಂದಿತು. ನಿರ್ಗತಿಕ ಮಹಿಳೆಯರು, ವಿಧವೆ ಮಹಿಳೆಯರ ಮರುಮದುವೆ ಪ್ರೇರೇಪಿಸಿದರು, ಮತ್ತು 1923  ರಲ್ಲಿ, ಕೆಲವು ಮಹಿಳೆಯರು ಚುನಾವಣೆಗಳಲ್ಲಿ ತಮ್ಮಹಕ್ಕನ್ನು ಚಲಾಯಿಸುವ ಅಧಿಕಾರವನ್ನು ನೀಡಿದರು. ಪ್ರಾಚೀನ ಮತ್ತು ಸಮಕಾಲೀನ ಕನ್ನಡ ಪುಸ್ತಕಗಳ ಪ್ರಕಟಣೆ (ಪಂಪ ಭಾರತ ಮತ್ತು ಜೈಮಿನಿ ಭಾರತ) , ಕನ್ನಡ ಸಮಾಚಾರ ಎಂಬ  ಕನ್ನಡ ದಿನಪತ್ರಿಕೆ ಮತ್ತು ದ್ವಿಭಾಷಾ ನಿಘಂಟು.

ಮೈಸೂರು ಸಾಮ್ರಾಜ್ಯದ ಕಾಲವು  ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು ಮತ್ತು ಸ್ವತಃ ರಾಜರುಗಳೇ ಲಲಿತಕಲೆಗಳಲ್ಲಿ ಪಾರಂಗತರಾಗಿದ್ದರು. ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರ ಸಾಂಪ್ರದಾಯಿಕ ಸಾಹಿತ್ಯದಲ್ಲಿ ಜನಪ್ರಿಯ ಉಳಿಸಿಕೊಂಡಿದ್ದು;  ಜೀವನಚರಿತ್ರೆ, ಇತಿಹಾಸ, ವಿಶ್ವಕೋಶ, ಕಾದಂಬರಿ, ನಾಟಕ, ಮತ್ತು ಸಂಗೀತ ಗ್ರಂಥಗಳ  ಹೊಸ ಪ್ರಕಾರಗಳ ಬರಹಗಳು ಜನಪ್ರಿಯವಾದವು. ಶ್ರೀರಂಗಪಟ್ಟಣದ ಗೋವಿಂದ ವೈದ್ಯ, ಕಂಠೀರವ ನರಸರಾಜ ವಿಜಯ ಬರೆದರು. ಲಕ್ಷ್ಮೀಶ ಮತ್ತು ಸರ್ವಜ್ಞ ರು ಕನ್ನಡ ಮಾತಾಡುವ ಪ್ರದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸಿದರು.

ಕವಿಯಿತ್ರಗಳಾದ ಚೆಲುವಾಂಬೆ, ಹೆಳವನಕಟ್ಟೆ ಗಿರಿಯಮ್ಮ, ಶ್ರೀ ರಂಗಮ್ಮ, ಮತ್ತು ಸಾಂಚಿ ಹೊನ್ನಮ್ಮ ಸಾಹಿತ್ಯದ  ಬೆಳವಣಿಗೆಗಳಲ್ಲಿ ತಮ್ಮ ಪಾತ್ರ ನಿರ್ವಹಿಸಿದರು.” ಅಭಿನವ ಭೋಜ” ಬಿರುದಾಂಕಿತ ಮಹಾರಾಜ ಕೃಷ್ಣರಾಜ-3  ನಲವತ್ತು ಬರಹಗಳನ್ನು ನೀಡಿದ್ದಾರೆ. (ಶ್ರೀ ತತ್ವನಿಧಿ, ಸೌಗಂಧಿಕ ಪರಿಣಯ). ಮುದ್ದಣ್ಣನವರ  ಐತಿಹಾಸಿಕ  ಪ್ರಮುಖ ಬರಹಗಳಾದ ಅದ್ಭುತ ರಾಮಾಯಣ (1895) ಮತ್ತು ರಾಮಾಶ್ವಮೇಧಂ (1898)  ನಿಂದ ಸಾಹಿತ್ಯಕ್ಕೆ ದೊಡ್ಡ ತಿರುವು ಬಂದಿತು. ಮಹಾರಾಜ ಕೃಷ್ಣರಾಜ-3 ಮತ್ತು ಚಾಮರಾಜ-9 ಆಶ್ರದಲ್ಲಿದ್ದ ಬಸವಪ್ಪ ಶಾಸ್ತ್ರಿ ಅವರನ್ನು ಕನ್ನಡ ನಾಟಕ ಪಿತಾಮಹ ಎಂದು ಕರೆಯುತ್ತಾರೆ. ಅವರ ಹಲವಾರು ಅನುವಾದಗಳಲ್ಲಿ ಕಾಳಿದಾಸ, ಅಭಿಜ್ಞಾನ ಶಾಕುಂತಲ ಜನಪ್ರಿಯವಾದವು.

ಮಹಾರಾಜ ಕೃಷ್ಣರಾಜ -3,  ಸ್ವತಃ ಸಂಗೀತಗಾರರಾಗಿದ್ದು, ಜವಳಿಗಳನ್ನು (ಲಘು  ಸಾಹಿತ್ಯ) ಮತ್ತು ಕನ್ನಡ ಭಕ್ತಿ ಗೀತೆಗಳನ್ನು ಸಂಯೋಜಿಸಿದ್ದರು. ಮಹಾರಾಜ ಚಾಮರಾಜ-9  ಆಸ್ಥಾನದಲ್ಲಿದ್ದ ವೀಣೆ ಶೇಷಣ್ಣ ನವರನ್ನು  ವೀಣಾ ಶ್ರೇಷ್ಠ ಪ್ರತಿಪಾದಕ ಒಂದು ಪರಿಗಣಿಸಲಾಗುತ್ತದೆ. ಮಹಾರಾಜ ಕೃಷ್ಣರಾಜ ಒಡೆಯರ್ ಅವರಿಗೆ ವೈಣಿಕ ಶಿಖಾಮಣಿ ಎಂದು ಬಿರುದನ್ನು ನೀಡಿದರು. ಮೈಸೂರು ವಾಸುದೇವಾಚಾರ್ಯ, ಮುತ್ತಯ್ಯ ಭಾಗವತರ್, ಚೌಡಯ್ಯ (ಸಂಗೀತ ರತ್ನ, ಸಂಗೀತ ಕಲಾನಿಧಿ) ಆಸ್ಥಾನದ ಶೋಭೆಗಳಾಗಿದ್ದರು.

ಮೈಸೂರು ರಾಜಮನೆತನದ ಅರಮನೆಗಳಿಗೆ  ಹೆಸರುವಾಸಿಯಾಗಿದ್ದು ಅದನ್ನು  “ಅರಮನೆಗಳ ನಗರ” ಎಂದೂ ಕರೆಯಲಾಗುತ್ತದೆ. ನಗರದ ಮೈಸೂರ ಅರಮನೆ, “ಅಂಬ ವಿಲಾಸ” ( ಮೊದಲಿನ ಅರಮನೆ ಬೆಂಕಿಯಲ್ಲಿ ಸುಟ್ಟು ಹೆನ್ರಿ ಇರ್ವಿನ್ 1897 ವಿನ್ಯಾಸಗೊಳಿಸಿದರು) ಮತ್ತು “ಜಗಮೋಹನ ಅರಮನೆ” ಗಳು ( ಈಗ ಚಾಮರಾಜೇಂದ್ರ ಆರ್ಟ್ ಗ್ಯಾಲೆರಿ) ನೋಡ ತಕ್ಕವು.

# ಮೈಸೂರು ಸಂಸ್ಥಾನವನ್ನು ಆಳಿದ ಅರಸರು : 
➤ ಯದುರಯರುರು (ಸುಮಾರು 1399-1423)
➤ ಬೆಟ್ಟದ ಚಾಮರಾಜ ಒಡೆಯರು (1423-1459)
➤ ತಿಮ್ಮರಾಜ ಒಡೆಯರು (1459-1478)
➤ ಹಿರಿಯ ಚಾಮರಾಜ ಒಡೆಯರು (1478-1513)
➤ ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
➤ ತಿಮ್ಮರಾಜ ಒಡೆಯರು
➤ ಬೋಳ ಚಾಮರಾಜ ಒಡೆಯರು
➤ ಬೆಟ್ಟದ ಚಾಮರಾಜ ಒಡೆಯರು ( ಈ ಮೂರೂ ಜನ 1553-1578)
➤ ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
➤ ಚಾಮರಾಜ ಒಡೆಯರು (1617-1637)
➤ ಎರಡನೆ ರಾಜ ಒಡೆಯರು (1637-1638)ಕೇವಲ 1 ವರ್ಷದ ಆಳ್ವಿಕೆ
➤ ರಣಧೀರ ಕಂಠೀರವ ನರಸರಾಜ ಒಡೆಯರು (1638-1659)
➤ ದೊಡ್ಡದೇವರಾಜ ಒಡೆಯರು (1659-1673)
➤ ಚಿಕ್ಕದೇವರಾಜ ಒಡೆಯರು (1673-1704)
➤ ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714)( ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
➤ ದೊಡ್ಡ ಕೃಷ್ಣರಾಜ ಒಡೆಯರು (1714-1734)
➤ ಅಂಕನಹಳ್ಳಿ ಚಾಮರಾಜ ಒಡೆಯರು
➤ ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
➤ ನಂಜರಾಜ ಒಡೆಯರು (1766-1770)
➤ ಬೆಟ್ಟದ ಚಾಮರಾಜ ಒಡೆಯರು (1770-1776)
➤ ಖಾಸಾ ಚಾಮರಾಜ ಒಡೆಯರು (1776-1796) ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನದಲ್ಲಿದ್ದಾಗ…
➤ ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟುಕೊಡಬೇಕಾಯಿತು.
➤ ಚಾಮರಾಜ ಒಡೆಯರು (1881-1902)
➤ ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ, ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)(ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು, ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)

➤ಮೈಸೂರು ರಾಜ್ಯದ ರಾಜಪ್ರಮುಖರು (1947 – 1956)
➤ ಮೈಸೂರು ರಾಜ್ಯದ ರಾಜ್ಯಪಾಲರು (1956 – 1964)
➤ಮದ್ರಾಸ್ ರಾಜ್ಯದ ರಾಜ್ಯಪಾಲರು (1964-1966)
➤1971ರ ಸಂವಿಧಾನದ 26ನೇ ತಿದ್ದುಪಡಿ ಅನ್ವಯ ಮೈಸೂರಿನ ಅರಸರ ‘ಮಹಾರಾಜ ‘ ಪದವಿ ಸರ್ಕಾರಕ್ಕೆ
➤ ಶ್ರೀಕಂಠದತ್ತ ಒಡೆಯರ್ 1974 ರಲ್ಲಿ ಪಟ್ಟಕ್ಕೆ ಬಂದರು. ಖಾಸಗಿ ದರ್ಬಾರಿಗೆ ಅವಕಾಶ (1953-2013)
ರಾಜರ ವಂಶಾವಳಿ ಗಮನಿಸಿದರೆ ರಾಜ ಒಡೆಯರ್ , ರಣಧೀರ ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್,ಕೃಷ್ಣರಾಜ ಒಡೆಯರ್ ಅವರ ಕಾಲಗಳನ್ನು ಸುವರ್ಣ ಯುಗ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.

➤ಮುಂದೆ ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದರು. ಬ್ರಿಟಿಷರ ಸೇನೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು, ಟಿಪ್ಪುಯುದ್ಧದಲ್ಲಿ ಹತನಾದದ್ದು ಮೈಸೂರಿನ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಆ ನಂತರ ಒಡೆಯರ್ ವಂಶದ ಐದು ವರ್ಷ ಪ್ರಾಯದ ಬಾಲಕ(ಮುಮ್ಮಡಿ ಕೃಷ್ಣರಾಜ ಒಡೆಯರ್) ಮೈಸೂರಿನ ದೊರೆಯಾಗಿ ಪ್ರತಿಷ್ಠಾಪಿಸಲ್ಪಟ್ಟದ್ದು ಯದುವಂಶದ ಮರುಚಾಲನೆಗೆ ಕಾರಣಕರ್ತೃವಾಯಿತು.

➤1831ರಲ್ಲಿ ಮುಮ್ಮಡಿಯವರ ಕೈಯಿಂದ ಅಧಿಕಾರ ನಿರ್ವಹಣೆಯನ್ನು ಕಿತ್ತುಕೊಂಡು ಬ್ರಿಟಿಷರೇ ನೇರವಾಗಿ ಆಡಳಿತ ನಡೆಸತೊಡಗಿದರು. 1867ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ಹಿಂದಕ್ಕೊಪ್ಪಿಸುವ ತೀರ್ಮಾನ ಕೈಗೊಂಡಿತು.

➤ಮುಮ್ಮಡಿಯವರ ದತ್ತು ಪುತ್ರ 10ನೆ ಚಾಮರಾಜೇಂದ್ರ ಒಡೆಯರ್ 18 ವರ್ಷದ ಪ್ರಾಯಕ್ಕೆ ಬಂದಾಗ ಬ್ರಿಟಿಷರು 1881ರಲ್ಲಿ ರಾಜ್ಯಾಧಿಕಾರವನ್ನು ಮತ್ತೆ ಹಿಂತಿರುಗಿಸಿದರು. ಚಾಮರಾಜೇಂದ್ರ ಒಡೆಯರ್ 1894ರಲ್ಲಿ ಕೇವಲ 14 ವರ್ಷಗಳ ಆಡಳಿತದ ನಂತರ ಅನಿರೀಕ್ಷಿತವಾಗಿ ಗಂಟಲು ನೋವಿನಿಂದ ನಿಧನರಾದರು.

➤ನಾಲ್ವಡಿಯವರು ನಿಧನರಾದದ್ದು 3-8-1940ರಂದು. ಅವರಿಗೆ ಪುತ್ರ ಸಂತತಿಯಿರಲಿಲ್ಲ. ಹೀಗಾಗಿ ಅವರ ಸೋದರ ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರರಾದ ಜಯ ಚಾಮರಾಜ ಒಡೆಯರು ಮಹಾರಾಜರಾಗಿ ಪಟ್ಟಾಭಿಷಿಕ್ತರಾದರು.

➤ ಮೈಸೂರಿನ ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಯದುವಂಶದ 25ನೆ ದೊರೆ. ನಿಧನರಾಗಿದ್ದು ಸೆ.22, 1957ರಂದು ಶ್ರೀ ಜಯಚಾಮರಾಜೇಂದ್ರ ಒಡೆಯರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಯದುವಂಶದ ಕೊನೆಯ ಕುಡಿಯಾಗಿದ್ದರು. ಡಿ. 10, 2013ರಂದು ಇಹಲೋಕದ ವ್ಯಾಪರ ಮುಗಿಸಿದರು.

# ದತ್ತು ದೊರೆಗಳು : 
ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಅದರಲ್ಲಿ ನಾಲ್ಕು ಮಂದಿ ಯದುವಂಶದವರೇ ಆಗಿದ್ದು ಮೂರು ಬಾರಿ ಹೊರಗಿನವರಾಗಿದ್ದಾರೆ.
➤ ರಣಧೀರ ಕಂಠೀರವ -1617
➤ ಇಮ್ಮಡಿ ಚಿಕ್ಕದೇವರಾಜ ಒಡೆಯರ್ – 1638
➤ ದೊಡ್ಡಕೃಷ್ಣರಾಜ ಒಡೆಯರ್ -1714
➤ ಮುಮ್ಮಡಿ ಕೃಷ್ಣರಾಜ ಒಡೆಯರ್ (ರಾಣಿ ಲಕ್ಷ್ಮಮ್ಮಣ್ಣಿ ಆಡಳಿತ, ಬೆಟ್ಟದಕೋಟೆ)-1776
➤ ಹತ್ತನೇ ಚಾಮರಾಜ ಒಡೆಯರ್ -1868
➤ ಜಯಚಾಮರಾಜ ಒಡೆಯರ್ -1940
➤ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-2015

Leave a Reply

Your email address will not be published. Required fields are marked *

error: Content Copyright protected !!