ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 19-ಜುಲೈ 25, 2021)
1. ನ್ಯಾಯಾಂಗದಲ್ಲಿ ಪಾರದರ್ಶಕತೆ ಸೃಷ್ಟಿಸಲು ನ್ಯಾಯಾಂಗ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡುತ್ತಿರುವ ಭಾರತದ ಮೊದಲ ನ್ಯಾಯಾಲಯ ಯಾವುದು..?
➤ ಗುಜರಾತ್ ಹೈಕೋರ್ಟ್
2. ಇತ್ತೀಚೆಗೆ (ಜುಲೈ 21 ರಲ್ಲಿ) 600 ಕಿ.ಮೀ ವ್ಯಾಪ್ತಿಯ “ಎಸ್-500 ವಾಯು ರಕ್ಷಣಾ ಕ್ಷಿಪಣಿ (S-500 Air Defence Missile Systems)ಯ ಯಶಸ್ವಿ ಪರೀಕ್ಷೆ ನಡೆಸಿದ ದೇಶ ಯಾವುದು..?
➤ ರಷ್ಯಾ
3. ಗಡಿ ರಸ್ತೆಗಳ ಸಂಸ್ಥೆ (Border Roads Organisation-BRO) ನಿರ್ಮಿಸುತ್ತಿರುವ ವಿಶ್ವದ ಅತಿದೊಡ್ಡ ಸುರಂಗಗಳಲ್ಲಿ ಒಂದಾದ ‘ಸೆಲಾ ಸುರಂಗ’ ಎಲ್ಲಿದೆ..?
➤ಅರುಣಾಚಲ ಪ್ರದೇಶ
4. ವಿಶ್ವ ದರ್ಜೆಯ ಸಂರಕ್ಷಣೆ ಮತ್ತು ಸಂಶೋಧನಾ ಸೌಲಭ್ಯಗಳೊಂದಿಗೆ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹೆರಿಟೇಜ್’ನ್ನು ಎಲ್ಲಿ ಸ್ಥಾಪಿಸಲು ಭಾರತ ಸರ್ಕಾರ ನಿರ್ಧರಿಸಿದೆ..?
➤ನೋಯ್ಡಾ, ಉತ್ತರ ಪ್ರದೇಶ
5. ಗಲ್ಫ್ ಪ್ರದೇಶದಲ್ಲಿ ಭಾರತೀಯ ಹಡಗುಗಳನ್ನು ರಕ್ಷಿಸಲು ಭಾರತೀಯ ನೌಕಾಪಡೆ ಪ್ರಾರಂಭಿಸಿದ ಕಾರ್ಯಾಚರಣೆಯ ಹೆಸರೇನು..?
➤ಆಪರೇಷನ್ ಸಂಕಲ್ಪ
6. ಜುಲೈ 2021ರಲ್ಲಿ, ಭಾರತವು ತನ್ನ ಮೊದಲ ಹೈ-ಸ್ಪೀಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಇದು ಬಿಹಾರದ ಜಯನಗರ ಮತ್ತು ಯಾವ ದೇಶದ ಯಾವ ನಗರವನ್ನು ಸಂಪರ್ಕಿಸುತ್ತದೆ.. ?
➤ ನೇಪಾಳದ ಕುರ್ತಾ
7. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಬಾಹ್ಯಾಕಾಶದ ಅಂಚಿನಲ್ಲಿ ಎಷ್ಟು ನಿಮಿಷ ಹಾರಾಟ ನಡೆಸಿದರು..?
➤ 11 ನಿಮಿಷ
8. ಹೊಸ ಅಧ್ಯಯನದ ಪ್ರಕಾರ, ಯಾವ ಮಳೆಕಾಡು ಹೀರಿಕೊಳ್ಳುವುದಕ್ಕಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ (CO2) ಅನ್ನು ಹೊರಸೂಸುತ್ತಿದೆ..?
➤ ಅಮೆಜಾನ್ ಮಳೆಕಾಡು
9. ಪುರುಷ ರಕ್ಷಕರಿಲ್ಲದೆ ಮಹಿಳೆಯರಿಗೆ ಹಜ್ಗೆ ಹಾಜರಾಗಲು ಯಾವ ರಾಷ್ಟ್ರ ಅವಕಾಶ ನೀಡಿದೆ..?
➤ ಸೌದಿ ಅರೇಬಿಯಾ
10. ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (YEIDA-Yamuna Expressway Industrial Development Authority’)ವು ಭಾರತದ ಮೊದಲ ಪಾಡ್ ಟ್ಯಾಕ್ಸಿ ಸೇವೆ (Pod Taxi Service )ಯನ್ನು ಎಲ್ಲಿ ಪ್ರಾರಂಭಿಸಲು ಮುಂದಾಗಿದೆ..?
➤ ಉತ್ತರ ಪ್ರದೇಶ
11. 2021ರ ಎರಡನೇ ತ್ರೈಮಾಸಿಕದಲ್ಲಿ ಯಾವ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಬ್ರಾಂಡ್ ಎನಿಸಿತು..?
-1) Xiaomi
12. 600 ಕಿ.ಮೀ ವೇಗದ ವಿಶ್ವದ ಅತೀ ವೇಗದ ಮ್ಯಾಗ್ಲೆವ್ ರೈಲನ್ನು ಯಾವ ರಾಷ್ಟ್ರ ಅನಾವರಣಗೊಳಿಸಿದೆ..?
➤ ಚೀನಾ
13. ಜುಲೈ 2021ರಲ್ಲಿ, ಕ್ಲಿಯೋಪಾಸ್ ಡ್ಲಮಿನಿ ಯಾವ ದೇಶದ ಹೊಸ ಪ್ರಧಾನಿಯಾದರು..?
➤ ಈಸ್ವತಿನಿ (ದಕ್ಷಿಣ ಆಫ್ರಿಕಾದ ಒಂದು ದೇಶ)
14. ಜುಲೈ 2021ರಲ್ಲಿ, ಸರ್ಕಾರ ರಚಿಸುವಲ್ಲಿ ವಿಫಲವಾದ ಕಾರಣ ಸಾದ್ ಹರಿರಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಯಾವ ದೇಶದ ಪ್ರಧಾನ ಮಂತ್ರಿಯಾಗಿದ್ದರು..?
➤ ಲೆಬನಾನ್
15. ಜುಲೈ 2021ರಲ್ಲಿ, ಭಾರತೀಯ ನೌಕಾಪಡೆ ಯಾವ ರಾಷ್ಟ್ರದಿಂದ 2 MH-60R ಮಲ್ಟಿ ರೋಲ್ ಹೆಲಿಕಾಪ್ಟರ್ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿತು, ಇದು 24 MH-60R ಹೆಲಿಕಾಪ್ಟರ್ಗಳ ಪೂರೈಸುವ ಭಾರತದ ಒಪ್ಪಂದದ ಒಂದು ಭಾಗವಾಗಿದೆ.
➤ ಅಮೆರಿಕಾ
16. ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಯಾವಾಗ..?
➤ ಜುಲೈ 23
17. ಟೋಕಿಯೋ 2020 ಒಲಿಂಪಿಕ್ಸ್ನಲ್ಲಿ ಈ ಕೆಳಗಿನ ಯಾವ ಕ್ರೀಡೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದೆ..?
➤ ಸರ್ಫಿಂಗ್
18. ಮಂಕಿ ಬಿ ವೈರಸ್(BV)ನ ಮೊದಲ ಮಾನವ ಸೋಂಕಿನ ಪ್ರಕರಣವು ಯಾವ ರಾಷ್ಟ್ರದಲ್ಲಿ ವರದಿಯಾಗಿದೆ..?
➤ ಚೀನಾ
19. ಯುರೋಪಿಯನ್ ಯೂನಿಯನ್ ಕಾರ್ಬನ್-ತೀವ್ರ ಸರಕುಗಳ ಆಮದಿನ ಮೇಲೆ ಯಾವ ವರ್ಷದಿಂದ ವಿಶ್ವದ ಮೊದಲ ‘ಕಾರ್ಬನ್ ಬಾರ್ಡರ್ ಟ್ಯಾಕ್ಸ್’ ವಿಧಿಸಲು ಮುಂದಾಗಿದೆ..?
➤ 2026
20. ‘ಆಫ್ರಿಕಾ ಓಪನ್ ಡೀಲ್’ ಉಪಕ್ರಮದಡಿಯಲ್ಲಿ, ಆಫ್ರಿಕಾ ಸಂಪೂರ್ಣ ಭೂ ಬಳಕೆಯ ಡೇಟಾವನ್ನು ಹೊಂದಿರುವ ಮೊದಲನೇ ಖಂಡವಾಯಿತು. ಆಫ್ರಿಕಾದ ಡಿಜಿಟಲ್ ಭೂ ಸಮೀಕ್ಷೆ ನಡೆಸಲು ಬಳಸುವ ಸಾಫ್ಟ್ವೇರ್ “ಕಲೆಕ್ಟ್ ಅರ್ಥ್” ಅನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯನ್ನು ಯಾವುದು..? .
➤ ಆಹಾರ ಮತ್ತು ಕೃಷಿ ಸಂಸ್ಥೆ
21. ‘ಫಾಸ್ಟರ್’ ಅಥವಾ ‘Fast and Secure Transmission of Electronic Records’ ಹೆಸರಿನ ಹೊಸ ಯೋಜನೆಯನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ..?
➤ ಭಾರತದ ಸುಪ್ರೀಂ ಕೋರ್ಟ್
22. ಭಾರತೀಯ ತೈಲ ನಿಗಮ ಭಾರತದ ಮೊದಲ ‘ಗ್ರೀನ್ ಹೈಡ್ರೋಜನ್’ ಸ್ಥಾವರವನ್ನು ಎಲ್ಲಿ ನಿರ್ಮಿಸಲು ಯೋಜಿಸುತ್ತಿದೆ..?
➤ ಉತ್ತರ ಪ್ರದೇಶ
23. ಭಾರತೀಯ ನೌಕಾಪಡೆ ಇತ್ತೀಚೆಗೆ (ಜುಲೈ 21 ರಲ್ಲಿ) ಯುಕೆ ರಾಯಲ್ ನೇವಿಯೊಂದಿಗೆ ದ್ವಿಪಕ್ಷೀಯ ಪ್ಯಾಸೇಜ್ ಯುದ್ಧಾಭ್ಯಾಸ(Bilateral Passage Exercise )ವನ್ನು ಎಲ್ಲಿ ನಡೆಸಿತು..?
➤ ಬಂಗಾಳ ಕೊಲ್ಲಿ
24. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹೆರಿಟೇಜ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ,..?
➤ ನೋಯ್ಡಾ
25. ಇತ್ತೀಚೆಗೆ (ಜುಲೈ 21 ರಲ್ಲಿ) ಅಂತರರಾಷ್ಟ್ರೀಯ ಸೌರ ಒಕ್ಕೂಟದ (International Solar Alliance -ISA) ಸದಸ್ಯತ್ವ ಪಡೆದ ದೇಶ ಯಾವುದು..?
➤ ಸ್ವೀಡನ್
26. ಜುಲೈ 21ರಲ್ಲಿ, ಡಚ್ ರೊಬೊಟಿಕ್ಸ್ ಕಂಪನಿ ‘MX3D’ ವಿಶ್ವದ ಮೊದಲ 3D ಮುದ್ರಿತ 12 ಮೀಟರ್ ಉದ್ದದ ಸ್ಟೀಲ್ ಸೇತುವೆಯನ್ನು ಅಭಿವೃದ್ಧಿಪಡಿಸಿತು. ಈ ಸೇತುವೆ ಎಲ್ಲಿದೆ..?
➤ ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್
27. ಇತ್ತೀಚೆಗೆ (ಜುಲೈ 21 ರಲ್ಲಿ) ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಿಂದ ತೆಗೆದುಹಾಕಲಾದ ತಾಣ ಯಾವುದು..?
➤ ಲಿವರ್ಪೂಲ್ – ಮ್ಯಾರಿಟೈಮ್ ಮರ್ಕೆಂಟೈಲ್ ಸಿಟಿ – Liverpool – Maritime Mercantile City
28. 2032ರ ಬೇಸಿಗೆ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC-International Olympic Committee) ಯಾವ ನಗರವನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು..?
➤ ಬ್ರಿಸ್ಬೇನ್, ಆಸ್ಟ್ರೇಲಿಯಾ
29. ಟೋಕಿಯೊ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ನಡೆದ ರಾಷ್ಟ್ರಗಳ ಪೆರೇಡ್ನಲ್ಲಿ ಭಾರತ ಯಾವ ಸ್ಥಾನದಲ್ಲಿತ್ತು..?
➤ 25
30. ವಿಶ್ವದ ಅತಿದೊಡ್ಡ ಇಂಗಾಲದ ಮಾರುಕಟ್ಟೆಯನ್ನು ಯಾವ ರಾಷ್ಟ್ರ ಪ್ರಾರಂಭಿಸಿದೆ..?
➤ ಚೀನಾ
# ವಾರದ ಪ್ರಚಲಿತ ಘಟನೆಗಳು : Weekly Current Affairs
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020