GKScienceSpardha Times

ಅದಿರುಗಳ ಕುರಿತ 25 ಬಹುಮುಖ್ಯ ಪ್ರಶ್ನೆಗಳು

Share With Friends

1. ಹೆಮಟೈಟ್ ಮತ್ತು ಮ್ಯಾಗ್ನಟೈಟ್ ಎಂಬವು ಯಾವ ಲೋಹದ ಅದಿರುಗಳು?
ಎ. ಮ್ಯಾಂಗನೀಸ್     ಬಿ. ಕಬ್ಬಿಣ
ಸಿ. ತಾಮ್ರ              ಡಿ. ಅಲ್ಯುಮಿನಿಯಂ

2. ಮ್ಯಾಂಗನೀಸನ್ನು ಕಬ್ಬಿಣದ ಅದಿರಿನ ಜೊತೆ ಶುದ್ದೀಕರಿಸಿ ಎನನ್ನು ಉತ್ಪಾದಿಸಲಾಗುತ್ತದೆ.?
ಎ. ತಾಮ್ರ         ಬಿ. ಕಬ್ಬಿಣ
ಸಿ. ಉಕ್ಕು       ಡಿ. ಬಾಕ್ಸೈಟ್

3. ‘ಅಚ್ಚರಿಯ ಲೋಹ’ದ ಉತ್ಪಾದನೆಯಲ್ಲಿ ಉಪಯೋಗಿಸಲ್ಪಡುವ ಖನಿಜ ಯಾವುದು?
ಎ. ಚಿನ್ನ              ಬಿ. ಪ್ಲಾಟಿನಂ
ಸಿ. ಬಾಕ್ಸೈಟ್     ಡಿ. ಮೈಕಾ

4. ಕೋಲಾರದ ಚಿನ್ನದ ಗಣಿಗಳಲ್ಲಿ ಚಿನ್ನದ ಗಣಿಗಾರಿಕೆಯನ್ನು ನಿಲ್ಲಿಸಲು ಕಾರಣವೇನು?
ಎ. ಕಾರ್ಮಿಕರ ಸಮಸ್ಯೆ         ಬಿ.ವಿದ್ಯುತ್ತಿನ ಕೊರತೆ
ಸಿ. ಸಾರಿಗೆ ಮತ್ತು ಸ್ಥಳೀಯ ಸಮಸ್ಯೆಗಳು
ಡಿ. ಅಲ್ಲಿ ಚಿನ್ನದ ನಿಕ್ಷೇಪಗಳು ಬರಿದಾಗಿರುವುದರಿಂದ

5. ಕಲ್ಲಿದ್ದಲನ್ನು ಹೀಗೆ ಕರೆಯಲಾಗಿದೆ?
ಎ. ದ್ರವ ಚಿನ್ನ        ಬಿ. ಮಿಶ್ರ ಲೋಹ
ಸಿ. ಕಪ್ಪು ವಜ್ರ     ಡಿ. ಅಚ್ಚರಿಯ ಲೋಹ

6. ಭಾರತದ ಅತಿ ದೊಡ್ಡ ಕಲ್ಲಿದ್ದಲಿನ ಗಣಿ ಯಾವುದು?
ಎ. ಗೊಂಡ್ವಾನಾ       ಬಿ. ರಾಣಿಗಂಜ್
ಸಿ. ಝಾರಿಯಾ        ಡಿ. ಕೋರ್ಬಾ

7. ಭಾರತದ ಅತಿದೊಡ್ಡ ಎಣ್ಣೆ ನಿಕ್ಷೇಪವಿರುವ ಸ್ಥಳ ಯಾವುದು?
ಎ.ದಿಗ್ಬಾಯ್           ಬಿ.ಬಾಂಬೆ ಹೈ
ಸಿ. ಅಂಕಲೇಶ್ವರ್      ಡಿ. ಬ್ರಹ್ಮಪುತ್ರ ಕಣಿವೆ

8. ಗಾಳಿ ಶಕ್ತಿ ಅಭಿವೃದ್ದಿಗಾಗಿ” ವಿಂಡ್ ಎನರ್ಜಿ ಟೆಕ್ನೊಲಾಜಿಕಲ್ ಸ್ಟೇಶನ್” ನ್ನು ಎಲ್ಲಿ ಸ್ಥಾಪಿಸಲಾಯಿತು?
ಎ. ಚೆನ್ನೈ         ಬಿ. ಮುಂಬಯಿ
ಸಿ. ಪುಣೆ             ಸಿ. ಬೆಂಗಳೂರು

9.ಹಿಮಾಚಲ ಪ್ರದೇಶವು ಈ ಕೆಳಗಿನ ಯಾವ ಉತ್ಪಾದನೆಗೆ ಹೆಸರಾಗಿದೆ?
ಎ. ಗಾಳಿ ಶಕ್ತಿ             ಬಿ. ಶಾಖೋತ್ಪನ್ನ ಶಕ್ತಿ
ಸಿ. ಭೂಶಾಖ ಶಕ್ತಿ       ಡಿ. ಉಬ್ಬರವಿಳಿತಗಳ ಶಕ್ತಿ

10. ಹಿಮಾಚಲ ಪ್ರದೇಶದಲ್ಲಿ ಭಾರತದ ಇನ್ನಿತರ ಪ್ರದೇಶಗಳಿಗಿಂತಲೂ ಹೆಚ್ಚು ಭೂಶಾಖ ಶಕ್ತಿಯನ್ನು ಉತ್ಪಾದಿಸಲು ಕಾರಣ ಯಾವುದು?
ಎ. ಅಲ್ಲಿನ ವಾಯುಗುಣ
ಬಿ.ಅಲ್ಲಿ ಅಧಿಕ ಸಂಖ್ಯೆಯ ಬಿಸಿನೀರಿನ ಬುಗ್ಗೆಗಳಿರುವುದು
ಸಿ.ಅಲ್ಲಿ ಪರ್ವತಗಳು ಹಿಮದಿಂದ ಮುಚ್ಚಿರುವುದು
ಡಿ. ಹಲವಾರು ಸರೋವರಗಳು ಅಲ್ಲಿರುವುದು

11. ಯಾವ ಶಕ್ತಿಯನ್ನು ‘ ಭವಿಷ್ಯದ ಶಕ್ತಿ’ ಮತ್ತು ಸಮ -ಭದ್ರತೆಯ ಶಕ್ತಿ ಎಂದು ಹೇಳಲಾಗುತ್ತದೆ.
ಎ. ಜೈವಿಕ ಅನಿಲ     ಬಿ. ಸೌರ ಶಕ್ತಿ
ಸಿ. ಗಾಳಿಯ ಶಕ್ತಿ      ಡಿ. ಉಬ್ಬರವಿಳಿತಗಳ ಶಕ್ತಿ

12.ಭಾರತದಲ್ಲಿ ಕಲ್ಲಿದ್ದಲಿನ ಅತಿ ಹೆಚ್ಚು ನಿಕ್ಷೇಪಗಳಿರುವ ರಾಜ್ಯ ಯಾವುದು?
ಎ. ಕರ್ನಾಟಕ         ಬಿ. ಛತ್ತೀಸಘಡ್
ಸಿ. ಉತ್ತರಪ್ರದೇಶ   ಡಿ. ಪಶ್ಚಿಮ ಬಂಗಾಳ

13. ಭಾರತದ ಪ್ರಥಮ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲ್ಪಟ್ಟ ಸ್ಥಳ ಯಾವುದು?
ಎ. ಶಿವನ ಸಮುದ್ರ      ಬಿ ತಾರಾಪುರ
ಸಿ.ದಿಗ್ಬಾಯ್              ಡಿ . ಕೈಗಾ

14. ಸೌರಶಕ್ತಿಯ ಬಳಕೆಯ ಬಗ್ಗೆ ವಿಶೇಷ ಸಂಶೋಧನೆಗಾಗಿ ಸ್ಥಾಪಿಸಿರುವ ಕೇಂದ್ರ ಯಾವುದು?
ಎ. ಗುಜರಾತ್‍ನ ಸೂರತ್           ಬಿ. ಮಹಾರಾಷ್ಟ್ರದ ತಾರಾಪುರ
ಸಿ. ಉತ್ತರಪ್ರದೇಶದ ನರೋರಾ    ಡಿ. ದೆಹಲಿಯ ಗುರ್‍ಗಾಂವ್

15. ಹಿಮಾಚಲ್ ಪ್ರದೇಶದಲ್ಲಿ ಮೊತ್ತಮೊದಲ ಜಲವಿದ್ಯುತ್ ಉತ್ಪಾದಿಸಿದ್ದು ಎಲ್ಲಿ?
ಎ. ಮಂಡಿ ಪವರ್‍ಹೌಸ್‍ನಲ್ಲಿ     ಬಿ. ಹಿರಾಕುಡ್‍ನಲ್ಲಿ
ಸಿ. ಕೋಯ್ನಾದಲ್ಲಿ               ಡಿ. ಭಾಕ್ರಾ- ನಂಗಲ್‍ನಲ್ಲಿ

16. ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳು ಎಲ್ಲಿವೆ.?
ಎ. ಕುದುರೆಮುಖ     ಬಿ ಹಟ್ಟಿ
ಸಿ. ಶಿವನಸಮುದ್ರ      ಡಿ. ಕೈಗಾ

17. ಪೈರೋಲೂಸೈಟ್ ಯಾವ ಲೋಹದ ಅದಿರು ಅಗಿದೆ.?
ಎ. ತಾಮ್ರ       ಬಿ. ಮ್ಯಾಂಗನೀಸ್
ಸಿ. ಕಬ್ಬಿಣ        ಡಿ. ಚಿನ್ನ

18. ‘ಕಾಗೆ ಬಂಗಾರ’ ಎಂದು ಯಾವ ಅದಿರನ್ನು ಕರೆಯುತ್ತಾರೆ.?
ಎ. ಕಲ್ಲಿದ್ದಲು       ಬಿ. ಅಭ್ರಕ
ಸಿ.ಬಾಕ್ಸೈಟ್       ಡಿ. ತಾಮ್ರ

19. ಜಗತ್ತಿನಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಲಭ್ಯವಿರುವ ದೇಶ ಯಾವುದು?
ಎ. ಅಮೆರಿಕಾ       ಬಿ ಬ್ರೆಜಿಲ್
ಸಿ. ಭಾರತ          ಡಿ. ಜಪಾನ್

20. ಮ್ಯಾಂಗನೀಸ್ ಅತಿ ಹೆಚ್ಚು ಲಭ್ಯವಿರುವ ದೇಶ ಯಾವುದು?
ಎ. ಜಪಾನ್      ಬಿ. ಚೀನಾ
ಸಿ. ರಷ್ಯಾ       ಡಿ. ದಕ್ಷಿಣ ಆಫ್ರಿಕಾ

21. ಅಭ್ರಕ ಉತ್ಪಾದನೆಯಲ್ಲಿ ಯಾವ ರಾಷ್ಟ್ರವು ಅಗ್ರ ಸ್ಥಾನದಲ್ಲಿದೆ?
ಎ. ಭಾರತ     ಬಿ. ರಷ್ಯಾ
ಸಿ. ಬ್ರೆಜಿಲ್      ಡಿ. ದಕ್ಷಿಣ ಆಫ್ರಿಕಾ

22. ಭಾರತ ಸರ್ಕಾರವು ಯಾವ ವರ್ಷದಲ್ಲಿ ನೂತನ ಖನಿಜ ನೀತಿಯನ್ನು ಘೋಷಿಸಿತು?
ಎ. 1990 ಅಗಸ್ಟ್ 9        ಬಿ 1991 ಅಗಸ್ಟ್ 9
ಸಿ. 1993 ನವೆಂಬರ್ 9    ಡಿ. 1993 ಅಗಸ್ಟ್ 9

ಪ್ರೋಟಿನ್‍ಗಳು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಮಾಹಿತಿ

23. ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಬಾರತ ಎಷ್ಟನೇ ಸ್ಥಾನವನ್ನು ಹೊಂದಿದೆ.?
ಎ. ಮೊದಲನೆಯ     ಬಿ. ಎರಡನೆಯ
ಸಿ. ಮೂರನೆಯ     ಡಿ. ನಾಲ್ಕನೇಯ

24. ಅಸಂಪ್ರದಾಯಕ ಶಕ್ತಿ ಮೂಲ ಎಂದರೇನು?
ಎ. ಪುನರ್ ಬಳಕೆ ಮಾಡಬಹುದಾದ ಶಕ್ತಿ
ಬಿ. ಪುನರ್ ಬಳಕೆ ಮಾಡಲಾಗದ ಶಕ್ತಿ
ಸಿ. ಅಣು ಖನಿಜಗಳು
ಡಿ. ಪೆಟ್ರೋಲಿಯಂ ಉತ್ಪನ್ನಗಳು

25. ಭಾರತದಲ್ಲಿ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ?
ಎ. ಮಹಾರಾಷ್ಟ್ರದ ಕೊಯ್ನಾ
ಬಿ. ರಾಜಸ್ಥಾನ ದ ಬಾರ್‍ಮರ್
ಸಿ. ಉತ್ತರ ಪ್ರದೇಶದ ನರೋರಾ
ಡಿ. ಗುಜರಾತ್ ನ ಸೂರತ್

ಉತ್ತರಗಳು :
1. ಬಿ. ಕಬ್ಬಿಣ
2. ಸಿ. ಉಕ್ಕು
3.ಸಿ. ಬಾಕ್ಸೈಟ್
4.ಡಿ. ಅಲ್ಲಿ ಚಿನ್ನದ ನಿಕ್ಷೇಪಗಳು ಬರಿದಾಗಿರುವುದರಿಂದ
5.ಸಿ. ಕಪ್ಪು ವಜ್ರ
6. ಬಿ. ರಾಣಿಗಂಜ್
7.  ಬಿ.ಬಾಂಬೆ ಹೈ
8.ಎ. ಚೆನ್ನೈ
9.ಸಿ. ಭೂಶಾಖ ಶಕ್ತಿ
10.ಬಿ.ಅಲ್ಲಿ ಅಧಿಕ ಸಂಖ್ಯೆಯ ಬಿಸಿನೀರಿನ ಬುಗ್ಗೆಗಳಿರುವುದು
11. ಬಿ. ಸೌರ ಶಕ್ತಿ
12.  ಬಿ. ಛತ್ತೀಸಘಡ್
13.ಬಿ ತಾರಾಪುರ
14. ಡಿ. ದೆಹಲಿಯ ಗುರ್‍ಗಾಂವ್
15.ಎ. ಮಂಡಿ ಪವರ್‍ಹೌಸ್‍ನಲ್ಲಿ
16.ಎ. ಕುದುರೆಮುಖ
17.  ಬಿ. ಮ್ಯಾಂಗನೀಸ್
18.  ಬಿ. ಅಭ್ರಕ
19.ಬಿ. ಬ್ರೆಜಿಲ್
20. ಸಿ. ರಷ್ಯಾ
21.ಎ. ಭಾರತ
22.ಎ. 1990 ಅಗಸ್ಟ್ 9
23.ಸಿ. ಮೂರನೆಯ
24.ಎ. ಪುನರ್ ಬಳಕೆ ಮಾಡಬಹುದಾದ ಶಕ್ತಿ
25.ಬಿ. ರಾಜಸ್ಥಾನ ದ ಬಾರ್‍ಮರ್

ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

 

Leave a Reply

Your email address will not be published. Required fields are marked *

error: Content Copyright protected !!