9,741.7 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದ ಬಿಸಿಸಿಐ (BCCI)
BCCI posts record revenue of ₹9741 crore in FY 2023-24
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತಷ್ಟು ಶ್ರೀಮಂತಗೊಂಡಿದೆ. 2023-24ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 9,741.7 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಐಪಿಎಲ್‌ನಿಂದಲೇ 5,761 ಕೋಟಿ ರೂ. ಆದಾಯ ಬಂದಿದೆ. ಪ್ರತಿ ವರ್ಷ 1000 ಕೋಟಿ ರು. ಬಡ್ಡಿ ಗಳಿಸುತ್ತಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.
2008ರಲ್ಲಿ ಆರಂಭಗೊಂಡಿದ್ದ ಐಪಿಎಲ್ ಈಗ ಬಿಸಿಸಿಐ ಗಳಿಸಿರುವುದರಲ್ಲಿ ಶೇ. 59ರಷ್ಟು ಪಾಲು, ಐಪಿಎಲ್‌ನಿಂದ ಲಭಿಸಿದೆ!. ಮಹಿಳಾ ಪ್ರೀಮಿಯರ್ ಲೀಗ್ 378 ಕೋಟಿ ರೂ. ಆದಾಯ ತಂದಿತ್ತಿದೆ. ಕಳೆದ ವರ್ಷ, ಅಂದರೆ 2022-23ರ ಹಣಕಾಸು ವರ್ಷದಲ್ಲಿ ಬಿಸಿಸಿಐಗೆ ಎಲ್ಲ ಮೂಲಗಳಿಂದ ಸುಮಾರು 6,820 ಕೋಟಿ ರೂ.ನಷ್ಟು ಆದಾಯ ಲಭಿಸಿತ್ತು. ಇದಕ್ಕೂ ಹಿಂದೆ 2021-22ರಲ್ಲಿ ಸುಮಾರು 7,600 ಕೂಟಿ ರೂ.ನಷ್ಟು ಗಳಿಸಿತ್ತು. ಈ ಬಾರಿ ದಾಖಲೆಯ ಮೊತ್ತ ಗಳಿಸಿದೆ.
ಐಸಿಸಿಯಿಂದಲೂ ಬಹುಪಾಲು ಮೊತ್ತ ಬಿಸಿಸಿಐಗೆ ಲಭಿಸುತ್ತದೆ. ಐಪಿಎಲ್ ಅಲ್ಲದ ಟೂರ್ನಿಗಳ ಮಾಧ್ಯಮ ಪ್ರಾಯೋಜಕತ್ವದಲ್ಲಿ ಬಿಸಿಸಿಐ ₹361 ಕೋಟಿ ಗಳಿಸಿದೆ. ಭಾರತದ ಪುರುಷರ ಕ್ರಿಕೆಟ್ ತಂಡದ ಸರಣಿಗಳ ಮೂಲಕ ₹350 ಕೋಟಿಗೂ ಹೆಚ್ಚು ಲಾಭವಾಗಿದೆ. ಬಡ್ಡಿ ಮೂಲಕ ₹987 ಕೋಟಿ, ಇತರ ಮೂಲಗಳಿಂದ ₹400ಕ್ಕೂ ಹೆಚ್ಚು ಕೋಟಿ ಆದಾಯ 2023-24ರಲ್ಲಿ ಬಿಸಿಸಿಐಗೆ ಲಭಿಸಿದೆ ಎಂದು ವರದಿಯಾಗಿದೆ.
ಐಪಿಎಲ್ ಅಲ್ಲದೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಸಿ.ಕೆ.ನಾಯ್ಡು ಟ್ರೋಫಿಯಂತಹ ದೇಸಿ ಟೂರ್ನಿಗಳನ್ನು ವಾಣಿಜ್ಯೀಕರಿಸುವ ಮೂಲಕ ಬಿಸಿಸಿಐ ದೊಡ್ಡ ಆದಾಯ ಗಳಿಸುತ್ತಿದೆ. ಬಿಸಿಸಿಐ 30,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಮೀಸಲು ಠೇವಣಿಯಾಗಿ ಇಟ್ಟಿದೆ. ಇದರಿಂದಲೇ ವಾರ್ಷಿಕ 1,000 ಕೋಟಿ. ರೂ.ನಷ್ಟು ಬಡ್ಡಿ ಸಿಗುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಿಸಿಸಿಐ ಆದಾಯದಲ್ಲಿ ಶೇ. 10-12ರಷ್ಟು ಏರಿಕೆ ಕಾಣುತ್ತಲೇ ಇದೆ.
ಜಾಗತಿಕ ಕ್ರಿಕೆಟ್‌ನ ಆರ್ಥಿಕತೆಯಲ್ಲಿ ಭಾರತ ಕೊಡುಗೆ ಶೇ.70ರಿಂದ 80ರಷ್ಟಿದೆ. ಅಂದರೆ ವಾರ್ಷಿಕವಾಗಿ ₹5000 ಕೋಟಿಗೂ ಹೆಚ್ಚಿನ ಹಣ ಸಂಪಾದಿಸುವ ಐಸಿಸಿ, 4000 ಕೋಟಿಯಷ್ಟು ಮೊತ್ತವನ್ನು ಬಿಸಿಸಿಐ ಮೂಲಕವೇ ಗಳಿಸುತ್ತದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಹಂಚುವ ಆದಾಯದಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯುತ್ತದೆ.
ಬಿಸಿಸಿಐ ತನ್ನ ಆದಾಯವನ್ನು ಎಲ್ಲಿಂದ ಗಳಿಸಿತು..?
ಐಪಿಎಲ್ – 5761 ಕೋಟಿ ರೂ.
ಐಸಿಸಿ ವಿತರಣೆ- 1042 ಕೋಟಿ ರೂ.
ಬಡ್ಡಿ ಆದಾಯ – 987 ಕೋಟಿ ರೂ.
ಮಾಧ್ಯಮ ಹಕ್ಕುಗಳು (ಐಪಿಎಲ್ ಅಲ್ಲದ) – 361 ಕೋಟಿ ರೂ.
ಮಹಿಳಾ ಪ್ರೀಮಿಯರ್ ಲೀಗ್ – 378 ಕೋಟಿ ರೂ.
ಭಾರತೀಯ ಪುರುಷರ ತಂಡದ ವಿದೇಶ ಪ್ರವಾಸ – 361 ಕೋಟಿ ರೂ.
ಇತರೆ- 400 ಕೋಟಿ ರೂ.
2023-24ನೇ ಹಣಕಾಸು ವರ್ಷದ ಒಟ್ಟು ಆದಾಯ- ರೂ 9741.7 ಕೋಟಿ
- Important Battles : ಭಾರತೀಯ ಇತಿಹಾಸದಲ್ಲಿನ ಪ್ರಮುಖ ಯುದ್ಧಗಳ ಸಂಕ್ಷಿಪ್ತ ಮಾಹಿತಿ
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (Pradhan Mantri Gram Sadak Yojana – PMGSY)
- 2025 ರ ಪ್ರಮುಖ ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕ (Ranking)
- ವಿಶ್ವಸಂಸ್ಥೆ-ಪ್ರವಾಸೋದ್ಯಮ(UN-Tourism)ದ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಶೈಖಾ ನಾಸರ್ ಅಲ್ ನೊವೈಸ್
- ಭಾರತೀಯ ಪುರಾತತ್ತ್ವ ಶಾಸ್ತ್ರದ ಪಿತಾಮಹ (Father of Indian Archaeology) ಯಾರು..?

