Nobel Prize 2025 : 2025ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟ : ಇಲ್ಲಿದೆ ವಿಜೇತರ ಪಟ್ಟಿ
Nobel Prize 2025 : ಅಕ್ಟೋಬರ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಪ್ರತಿಯೊಬ್ಬ ವಿಜ್ಞಾನಿ, ಬರಹಗಾರ ಮತ್ತು ಸಮಾಜ ಸೇವಕರು ಕನಸು ಕಾಣುವ ಪ್ರಶಸ್ತಿಯತ್ತ ಪ್ರಪಂಚದ ಗಮನ ತಿರುಗುತ್ತದೆ. ನಾವು ಮಾತನಾಡುತ್ತಿರುವುದು ನೊಬೆಲ್ ಪ್ರಶಸ್ತಿ (Nobel Prize) ಬಗ್ಗೆ. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 6ರಿಂದ ಆರಂಭವಾಗಿದ್ದು ಅಕ್ಟೋಬರ್ 13ರವರೆಗೆ ಮುಂದುವರೆಯುತ್ತದೆ. ವೈದ್ಯಕೀಯ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರದಲ್ಲಿ ಸಾಧನೆ ಮಾಡಿರುವ ವಿಶ್ವದ ಅತ್ಯಂತ ವಿಶಿಷ್ಟ ವ್ಯಕ್ತಿಗಳಿಗೆ ಈ ಗೌರವ ಸಲ್ಲುತ್ತದೆ. ನೊಬೆಲ್ ಪ್ರಶಸ್ತಿ ಸಂಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯಾದ ಡಿ.10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
✶ ಅಕ್ಟೋಬರ್ 6 : ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್ ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

Nobel Prize 2025 : ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇಯಾದ ಅಂಗಗಳ ಮೇಲೆ ದಾಳಿ ಮಾಡದಂತೆ ತಡೆಯಲು ಹೇಗೆ ಸ್ವಯಂ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ವಿವರಿಸುವ ನವೀನ ಸಂಶೋಧನೆಗಳಿಗಾಗಿ 2025ರ ಫಿಸಿಯಾಲಜಿ ಅಥವಾ ಮೆಡಿಸಿನ್ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್ ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ ಪ್ರದಾನ ಮಾಡಲಾಗಿದೆ.
ಅಂದಹಾಗೆ, ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಸನ್ಮಾನ ಎಂದು ಪರಿಗಣಿಸಲಾಗಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿ ವಾರ್ಷಿಕವಾಗಿ ಈ ಗೌರವವನ್ನು ನೀಡಲಾಗುತ್ತದೆ. ಈ ಬಾರಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಮೂವರು ಭಾಜನರಾಗಿದ್ದಾರೆ.
ಮೇರಿ ಇ. ಬ್ರಂಕೋವ್ (ಜನನ 1961) ಅವರು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ ಮತ್ತು ಪ್ರಸ್ತುತ ಸಿಯಾಟಲ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಫ್ರೆಡ್ ರಾಮ್ಸ್‌ಡೆಲ್ (ಜನನ 1960) ಅವರು 1987ರಲ್ಲಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ ಮತ್ತು ಈಗ ಸ್ಯಾನ್ ಫ್ರಾನ್ಸಿಸ್ಕೋದ ಸೊನೊಮಾ ಬಯೋಥೆರಪಿಟಿಕ್ಸ್‌ನಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.
ಇನ್ನು ಕಿಮೊನ್ ಸಕಾಗುಚಿ (ಜನನ 1951) ಅವರು 1976 ರಲ್ಲಿ ತಮ್ಮ ಎಂ.ಡಿ. ಮತ್ತು 1983 ರಲ್ಲಿ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು ಮತ್ತು ಒಸಾಕಾ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್‌ನಲ್ಲಿ ವಿಶೇಷ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರಶಸ್ತಿಯನ್ನು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುವ “ಪೆರಿಫೆರಲ್ ಇದ್ರೂನ್ ಟಾಲರೆನ್ಸ್” (ಬಾಹ್ಯ ರೋಗನಿರೋಧಕ ಸಹಿಷ್ಣುತೆ)ಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ನೀಡಲಾಗಿದೆ. ರೋಗನಿರೋಧಕ ವ್ಯವಸ್ಥೆಯನ್ನು ದೇಹದ ಸ್ವಂತ ಕಣಗಳಿಂದ ರಕ್ಷಿಸುವ ರೆಗ್ಯುಲೇಟರಿ ಟಿ ಸೆಲ್‌ಗಳನ್ನು (Tregs) ಗುರುತಿಸಿ, ಕ್ಯಾನ್ಸರ್ ಮತ್ತು ಆಟೋಇನ್ಯೂನ್ ರೋಗಗಳಿಗೆ ಹೊಸ ಚಿಕಿತ್ಸೆಗಳಿಗೆ ಮಾರ್ಗವನ್ನು ಈ ಸಂಶೋಧನೆ ಸುಗಮಗೊಳಿಸಿವೆ.
ರೋಗನಿರೋಧಕ ವ್ಯವಸ್ಥೆಯು ವೈರಸ್‌ಗಳು ಮತ್ತು ಬ್ಯಾಕ್ಟಿರಿಯಾಗಳಂತಹ ದಾಳಿಗಳನ್ನು ತಡೆಯುತ್ತದೆ. ಆದರೆ, ಅದೇ ಸಮಯದಲ್ಲಿ ಅದು ದೇಹದ ಸ್ವಂತ ಕಣಗಳನ್ನು ದಾಳಿ ಮಾಡದಂತೆ ನಿಯಂತ್ರಣದಲ್ಲಿರಬೇಕು. ಇಲ್ಲದೇ ಹೋದರೆ ಆಟೋಇಮ್ಯೂನ್ ರೋಗಗಳು ಉಂಟಾಗುತ್ತವೆ. ಥೈಮಸ್ ಗ್ರಂಥಿಯಲ್ಲಿ (ಸೆಂಟ್ರಲ್ ಟಾಲರೆನ್ಸ್) ಕೆಲವು ಟಿ ಸೆಲ್ಗಳನ್ನು ನಾಶಪಡಿಸಲಾಗುತ್ತದೆ ಆದರೆ, ಕೆಲವು ತಪ್ಪಿಸಿಕೊಂಡು ಹೊರಬರುತ್ತವೆ. ಅವುಗಳನ್ನು “ರೆಗ್ಯುಲೇಟರಿ ಟಿ ಸೆಲ್ಗಳು” (Tregs) ಎಂದು ಕರೆಯಲಾಗುತ್ತದೆ. ಇವುಗಳು ರೋಗನಿರೋಧಕ ವ್ಯವಸ್ಥೆಯ “ಸುರಕ್ಷತಾ ಗಾರ್ಡ್ಗಳು” ಎಂದು ಕರೆಯಬಹುದು. ಇವುಗಳು ದೇಹದ ತಂತಿಗಳನ್ನು ರಕ್ಷಿಸುತ್ತವೆ.
ಮೇರಿ ಇ. ಬ್ರಂಕೋವ್ (ಜನನ 1961) ಅವರು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು ಮತ್ತು ಪ್ರಸ್ತುತ ಸಿಯಾಟಲ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯಲ್ಲಿ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ರೆಡ್ ರಾಮ್ಸ್‌ಡೆಲ್ (ಜನನ 1960) 1987 ರಲ್ಲಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು ಮತ್ತು ಈಗ ಸ್ಯಾನ್ ಫ್ರಾನ್ಸಿಸ್ಕೋದ ಸೊನೊಮಾ ಬಯೋಥೆರಪಿಟಿಕ್ಸ್‌ನಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.
ಶಿಮೊನ್ ಸಕಾಗುಚಿ (ಜನನ 1951) 1976 ರಲ್ಲಿ ತಮ್ಮ ಎಂಡಿ ಪದವಿ ಮತ್ತು 1983 ರಲ್ಲಿ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು ಮತ್ತು ಒಸಾಕಾ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್‌ನಲ್ಲಿ ಡಿಸ್ಟಿಂಗ್ವಿಶ್ಡ್ ಪ್ರೊಫೆಸರ್ ಆಗಿದ್ದಾರೆ.
ಥೈಮಸ್‌ನಲ್ಲಿರುವ ಹಾನಿಕಾರಕ ಪ್ರತಿರಕ್ಷಣಾ ಕೋಶಗಳನ್ನು ನಿರ್ಮೂಲನೆ ಮಾಡುವ ಮೂಲಕ ಮಾತ್ರ ರೋಗನಿರೋಧಕ ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬಹುದು ಎಂಬ ಚಾಲ್ತಿಯಲ್ಲಿರುವ ಅಭಿಪ್ರಾಯವನ್ನು ಪ್ರಶ್ನಿಸುವ ಮೂಲಕ ಶಿಮೊನ್ ಸಕಾಗುಚಿ 1995 ರಲ್ಲಿ ದಾರಿ ಮಾಡಿಕೊಟ್ಟರು. ಈ ಪ್ರಕ್ರಿಯೆಯನ್ನು ಕೇಂದ್ರ ಸಹಿಷ್ಣುತೆ ಎಂದು ಕರೆಯಲಾಗುತ್ತದೆ. ಅವರ ಸಂಶೋಧನೆಯು ಪ್ರತಿರಕ್ಷಣಾ ವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿದೆ ಎಂದು ತೋರಿಸಿದೆ, ಇದು ದೇಹವನ್ನು ಸ್ವಯಂ ನಿರೋಧಕ ಅಸ್ವಸ್ಥತೆಗಳಿಂದ ರಕ್ಷಿಸುವ ಸಂಪೂರ್ಣವಾಗಿ ಹೊಸ ರೀತಿಯ ಪ್ರತಿರಕ್ಷಣಾ ಕೋಶ – ನಿಯಂತ್ರಕ ಟಿ ಕೋಶಗಳನ್ನು ಗುರುತಿಸುತ್ತದೆ.
2001 ರಲ್ಲಿ, ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್‌ಡೆಲ್ ಜೆನೆಟಿಕ್ ಸಂಶೋಧನೆಯ ಮೂಲಕ ಈ ಕ್ಷೇತ್ರವನ್ನು ಮುನ್ನಡೆಸಿದ್ದರು. ಆಟೋಇಮ್ಯೂನ್ ಕಾಯಿಲೆಗೆ ಗುರಿಯಾಗುವ ಇಲಿಯ ತಳಿಯನ್ನು ಅಧ್ಯಯನ ಮಾಡುವಾಗ, ಅವರು ಫಾಕ್ಸ್‌ಪಿ3 ಎಂದು ಹೆಸರಿಸಿದ ಜೀನ್‌ನಲ್ಲಿ ರೂಪಾಂತರವನ್ನು ಕಂಡುಹಿಡಿದರು. ಈ ರೂಪಾಂತರವು ಪ್ರತಿರಕ್ಷಣಾ ವ್ಯವಸ್ಥೆಯ ನಿಯಂತ್ರಕ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸಿತು, ಇದು ತೀವ್ರ ಅನಾರೋಗ್ಯಕ್ಕೆ ಕಾರಣವಾಯಿತು. ನಿರ್ಣಾಯಕವಾಗಿ, ಫಾಕ್ಸ್‌ಪಿ3 ಗೆ ಸಮಾನವಾದ ಮಾನವರಲ್ಲಿನ ರೂಪಾಂತರಗಳು ಐಪಿಇಎಕ್ಸ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಅಪರೂಪದ ಆದರೆ ಗಂಭೀರವಾದ ಸ್ವಯಂ ನಿರೋಧಕ ಸ್ಥಿತಿಯನ್ನು ಉಂಟುಮಾಡುತ್ತವೆ ಎಂದು ಅವರು ದೃಢಪಡಿಸಿದರು.
✶ ಅಕ್ಟೋಬರ್ 7 : ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಭೌತಶಾಸ್ತ್ರದ ನೊಬೆಲ್ :
John Clarke, Michel Devoret and John Martinis get Nobel Prize in Physics 2025
ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಶಕ್ತಿ ಪರಿಮಾಣೀಕರಣದ ಆವಿಷ್ಕಾರಕ್ಕಾಗಿ” ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

‘ವಿದ್ಯುತ್ ಸಕ್ರ್ಯೂಟ್ ನಲ್ಲಿಮ್ಯಾಕ್ರೊಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಎನರ್ಜಿ ಕ್ವಾಂಟೈಜೇಸನ್ ‘ ಆವಿಷ್ಕಾರಕ್ಕಾಗಿ ಈ ಮೂವರಿಗೆ ನೊಬೆಲ್ ಗೌರವ ಒಲಿದಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಮೂವರನ್ನು ಗುರುತಿಸಿ ಗೌರವಿಸಿದೆ. ಈ ಮೂವರು ಮಾಡಿದ ಪ್ರಯೋಗಗಳು ಅಣುಗಳು ಮತ್ತು ಕಣಗಳ ಜಗತ್ತನ್ನು ನಿಯಂತ್ರಿಸುವ ಕ್ವಾಂಟಮ್ ಪರಿಣಾಮಗಳನ್ನು ಹೆಚ್ಚು ದೊಡ್ಡ ವಸ್ತುಗಳಲ್ಲಿಕಾಣಬಹುದೆಂದು ತೋರಿಸಿವೆ.
ಕ್ವಾಂಟಮ್ ಕಂಪ್ಯೂಟರ್ ಗಳಂತಹ ತಂತ್ರಜ್ಞಾನಧಿಗಳಿಗೆ ಈ ಆವಿಷ್ಕಾರವೇ ಆಧಾರವಾಗಿದೆ. 83 ವರ್ಷದ ಬ್ರಿಟನ್ ಮೂಲದ ಜಾನ್ ಕ್ಲಾರ್ಕ್ ಅವರು ಬಕ್ರ್ಲಿಯಲ್ಲಿರುವ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದು, 1968ರಲ್ಲಿಕೇಂಬ್ರಿಜ್ ವಿಶ್ವಧಿವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ.
ಫ್ರಾನ್ಸ್ ಮೂಲದ ಮೈಕೆಲ್ ಎಚ್ . ಡೆವೊರೆಟ್ ಅವರು ಯೇಲೆ ವಿಶ್ವವಿದ್ಯಾಲಯ ಹಾಗೂ ಸ್ಯಾಂಟಾ ಬಾರ್ಬರಾದ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದು, 1982ರಲ್ಲಿಪ್ಯಾರಿಸ್ -ಸುಡ್ ವಿಶ್ವವಿದ್ಯಾಲಯಧಿದಿಂದ ಪಿಎಚ್ ಡಿ ಪದವಿ ಪಡೆದರು. ಜಾನ್ ಎಂ. ಮಾರ್ಟಿನಿಸ್ ಅವರು ಸ್ಯಾಂಟಾ ಬಾರ್ಬರಾದ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯ ಪ್ರೊಫೆಸರ್ ಆಗಿದ್ದು, 1987ರಲ್ಲಿಬಕ್ರ್ಲಿ ಕ್ಯಾಲಿಫೋರ್ನಿಯಾ ವಿಶ್ವಧಿವಿದ್ಯಾಧಿಲಯದಿಂದ ಪಿಎಚ್ ಡಿ ಪಡೆದಿದ್ದಾರೆ.
ಏನಿದು ಸಂಶೋಧನೆ?:
ಸಾಮಾನ್ಯವಾಗಿ ಎಲೆಕ್ಟ್ರಿಕ್ ಸರ್ಕಿಟ್(ವಯರ್‌ನಿಂದ ಮಾಡಲಾದ ವೃತ್ತ)ನಲ್ಲಿ ತಡೆಗಳನ್ನು ಒಡ್ಡದ ಹೊರತು ವಿದ್ಯುತ್ ಸರಾಗವಾಗಿ ಹರಿಯುತ್ತವೆ. ಒಂದೊಮ್ಮೆ ಸರ್ಕಿಟ್‌ನ ನಡುವೆ ಪ್ರತಿರೋಧಕಗಳನ್ನು ಅಳವಡಿಸಿದರೆ, ಹರಿಯುತ್ತಿದ್ದ ಎಲೆಕ್ಟ್ರಾನ್‌ಗಳ ಚಲನೆ ನಿಲ್ಲುವುದು ಸ್ವಾಭಾವಿಕ. ಆದರೆ ಕೆಲವೊಮ್ಮೆ ಆ ತಡೆಗಳನ್ನೂ ಭೇದಿಸಿ ಕೆಲ ಎಲೆಕ್ಟ್ರಾನ್ ಕಣಗಳು ಸರ್ಕಿಟ್‌ನಲ್ಲಿ ಮುಂದೆ ಸಾಗುತ್ತವೆ. ಈ ಪ್ರಕ್ರಿಯೆಯನ್ನು ಕ್ವಾಂಟಂ ಮೆಕ್ಯಾನಿಕಲ್ ಟನಲಿಂಗ್ ಎನ್ನಲಾಗುತ್ತದೆ.
ಈ ಪ್ರಕ್ರಿಯೆಯನ್ನು ಸ್ಥಾಪಿಸಲು ಕ್ಲಾರ್ಕ್, ಮಾರ್ಟಿನಿಸ್, ಡೆವೊರೆಟ್ ಸರ್ಕಿಟ್ ಒಂದನ್ನು ತಯಾರಿಸಿ, ಅದರ ನಡುವೆ ತೆಳುವಾದ ಅರೆ-ವಾಹಕಗಳನ್ನು ಅಳವಡಿಸಿದರು. ಬಳಿಕ ಅದರಲ್ಲಿ ವಿದ್ಯುತ್ ಹರಿಸಿದಾಗ, ಕೆಲ ಎಲೆಕ್ಟ್ರಾನ್‌ಗಳು ತಡೆಗಳನ್ನು ದಾಟಿ ಮುಂದುವರೆದವು. ಇದನ್ನು ಸಂಶೋಧಿಸಿದ್ದಕ್ಕಾಗಿ ಅವರಿಗೆ ನೊಬೆಲ್ ಲಭಿಸಿದೆ.
✶ ಅಕ್ಟೋಬರ್ 8 : ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ
Nobel Prize in Chemistry for 2025 was awarded to Susumu Kitagawa, Richard Robson, and Omar M. Yaghi
ಜಪಾನ್‌ನ ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್ ರಾನ್ ಮತ್ತು ಜೋರ್ಡಾನ್ ಒಮರ್ ಎಂ.ಯಾಫಿ ಅವರು 2025ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.
‘ಲೋಹ ಸಾವಯವ ಚೌಕಟ್ಟು’ (ಎಂಒಎಫ್) ಅಭಿವೃದ್ಧಿಯಲ್ಲಿ ಈ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳನ್ನು ಪರಿಗಣಿಸಿ, ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹನ್ಸ್ ಎಲೆಗ್ರೆನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
ಸುಸುಮು ಕಿಟಾಗವಾ ಜಪಾನ್ ನ ಕ್ಯೂಟೊ ವಿಶ್ವವಿದ್ಯಾಲಯದಲ್ಲಿ, ರಿಚರ್ಡ್ ರಾನ್ ಆಸ್ಟ್ರೇಲಿಯಾದ ಮೆಲ್ಬರ್ನ್ ವಿ.ವಿಯಲ್ಲಿ ಹಾಗೂ ಒಮರ್ ಕ್ಯಾಲಿಫೋರ್ನಿಯಾ ವಿ.ವಿಯಲ್ಲಿ ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಈ ಮೂವರೂ ವಿಜ್ಞಾನಿಗಳು ಒಟ್ಟು 1.2 ದಶಲಕ್ಷ ಡಾಲರ್ (₹10.65 ಕೋಟಿ) ನೊಬೆಲ್ ನಗದು ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ.ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ.
ಮೇರಿ ಬ್ರಂಕೋ, ಫ್ರೆಡ್ ರಾಮ್ ಡೆಲ್ ಹಾಗೂ ಜಪಾನ್‌ನ ಶಿಮೊನ್ ಸಕಾಗುಚಿ ಅವರಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸೋಮವಾರ ಘೋಷಣೆಯಾಗಿತ್ತು. ಭೌತಶಾಸ್ತ್ರ ವಿಭಾಗದಲ್ಲಿ ‘ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್” ಸಂಬಂಧಿತ ಮಹತ್ವದ ಸಂಶೋಧನೆಗಾಗಿ ಬ್ರಿಟನ್ ಜಾನ್ ಕ್ಲಾರ್ಕ್, ಫ್ರಾನ್ಸ್‌ನ ಮೈಕಲ್ ಎಚ್. ಡೆವೊರೆಟ್ ಮತ್ತು ಅಮೆರಿಕದ ಜಾನ್ ಎಂ. ಮಾರ್ಟಿನಿಸ್ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.
✶ ಅಕ್ಟೋಬರ್ 9 : ಹಂಗೇರಿಯನ್ ಲೇಖಕ ಲಾಸ್ಲೊಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
Nobel Prize in literature awarded to Hungarian writer Laszlo Krasznahorkai
2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದ್ದು, ಹಂಗೇರಿಯನ್ ಲೇಖಕ ಲಾಸ್ಲೊ ಕ್ರಾಸ್ನಹೊರ್ಕೈ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಭಾರೀ ನಿರೀಕ್ಷೆ ಮೂಡಿಸಿದ್ದ ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ಲಾಸ್ಲೊ ಕ್ರಾಸ್ನಹೊರ್ಕೈ ಅವರ “Herscht 07769” ಕಾದಂಬರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ‘ಸ್ವೀಡಿಷ್ ಅಕಾಡೆಮಿ’ ತಿಳಿಸಿದೆ.

ವಿನಾಶಕಾರಿ ಭೀತಿಯ ಮಧ್ಯೆ, ಕಲೆಯ ಶಕ್ತಿಯನ್ನು ಪುನರುಚ್ಚರಿಸುವ ಅವರ ಅಪಾರ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ” ಕ್ರಾಸ್ನಹೊರ್ಕೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಘೋಷಿಸಿದೆ.
2024ರ ಸಾಹಿತ್ಯ ಗೌರವವು ದಕ್ಷಿಣ ಕೊರಿಯಾದ ಕಾದಂಬರಿಗಾರ್ತಿ ಹಾನ್ ಕಾಂಗ್ ಅವರಿಗೆ ಸಂದಿತ್ತು. ನೊಬೆಲ್ ಪ್ರಶಸ್ತಿಯ ಪ್ರಾರಂಭದಿಂದಲೂ, ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯು 117 ಬಾರಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಒಟ್ಟು 121 ಪುರಸ್ಕೃತರಿಗೆ ಈ ಗೌರವ ಸಂದಿದೆ.
1954ರಲ್ಲಿ ಹಂಗೇರಿಯನ್‌ನಲ್ಲಿ ಜನಿಸಿದ ಲಾಸ್ಟೋ ಕ್ರಾಸ್ಟ್ರಾ ಹೋರ್ಕೈ, 1985ರಲ್ಲಿ ತಮ್ಮ ಮೊದಲ ಕಾದಂಬರಿ ಸಟಾಂಟ್ಯಾಂಗೊದೊಂದಿಗೆ ಪ್ರಸಿದ್ದಿಗೆ ಬಂದರು. ಇದನ್ನು ಸ್ವೀಡಿಪ್ ಅಕಾಡೆಮಿ “ಸಾಹಿತ್ಯ ಸಂವೇದನೆ” ಎಂದು ಪ್ರಶಂಸಿದೆ. ಈ ಕಾದಂಬರಿಯನ್ನು ನಂತರ ನಿರ್ದೇಶಕಿ ಬೇಲಾ ಟಾರ್ ಏಳು ಗಂಟೆಗಳ ಕಪ್ಪು-ಬಿಳುವು ಚಲನಚಿತ್ರವಾಗಿ ಅಳವಡಿಸಿಕೊಂಡರು.
ಲಾಕ್ಷ್ಮೀ ಅವರ ಇತರ ಪ್ರಮುಖ ಕೃತಿಗಳಲ್ಲಿ ದಿ ಮೆಲಾಂಚಲಿ ಆಫ್ ರೆಸಿಸ್ಟೆನ್ಸ್ (1989), ವಾರ್ ಅಂಡ್ ವಾರ್ (1999), ಮತ್ತು ಸೀಯೊಬೊ ದೇರ್ ಬಿಲೋ (2008) ಸೇರಿವೆ. ಅವರು ಈ ಹಿಂದೆ 2015 ರ ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು 2013 ರ ಅತ್ಯುತ್ತಮ ಅನುವಾದಿತ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯಾರೀ ಲಾಸ್ಲೋ ಕ್ರಾಸ್ನಹೋರ್ಕೈ? : ಈ ವರ್ಷದ ಸಾಹಿತ್ಯ ಪ್ರಶಸ್ತಿ ವಿಜೇತ ಲಾಸ್ಲೋ ಕ್ರಾಸ್ನಹೋರ್ಕೈ ಅವರ ‘ಹರ್ಷ್ಟ್ 07769’, 1985 ರಲ್ಲಿ ಪ್ರಕಟವಾದ ಮೊದಲ ಕಾದಂಬರಿ ಸತಾಂಟಾಂಗೋ ಶ್ರೇಷ್ಠ ಸಮಕಾಲೀನ ಜರ್ಮನ್ ಕಾದಂಬರಿ ಎಂಬ ಹೆಗ್ಗಳಿಕೆ ಪಡೆದಿವೆ. ಹರ್ಷ್ಟ್ 07769 ಸಮಾಜದಲ್ಲಿನ ಅಶಾಂತಿಯನ್ನು ನಿಖರವಾಗಿ ಚಿತ್ರಿಸಿದರೆ, ಸತಾಂಟಾಂಗೋ ಹಂಗೇರಿಯಲ್ಲಿನ ಸಾಹಿತ್ಯಿಕ ಸಂವೇದನೆಯನ್ನು ಅರಹುತ್ತದೆ.
ಲಾಸ್ಲೋ ಕ್ರಾಸ್ನಹೋರ್ಕೈ ಅವರು 1954 ರಲ್ಲಿ ಆಗ್ನೇಯ ಹಂಗೇರಿಯ ಸಣ್ಣ ಪಟ್ಟಣವಾದ ಗ್ಯುಲಾದಲ್ಲಿ ರೊಮೇನಿಯನ್ ಗಡಿಯ ಬಳಿ ಜನಿಸಿದರು. ಸಾಮಾಜಿಕ ಅರಾಜಕತೆ, ಹತ್ಯಾಕಾಂಡದ ಮೇಲೆ ಅವರ ಕಾದಂಬರಿಗಳು ವಿರಚಿತವಾಗಿವೆ.
ಕ್ರಾಸ್ನಹೋರ್ಕೈ ಮಧ್ಯ ಯುರೋಪಿನ ಸಾಂಪ್ರದಾಯಿಕ ಖ್ಯಾತ ಬರಹಗಾರರಾಗಿದ್ದಾರೆ. ಇವರ ಬರವಣಿಗೆಯು ಕಾಫ್ಕಾದಿಂದ ಥಾಮಸ್ ಬರ್ನ್‌ಹಾರ್ಡ್‌ವರೆಗೆ ವಿಸ್ತರಿಸಿದೆ. ಅವರ ಬರಹಗಳು ತರ್ಕಬದ್ಧ, ಅಸಾಧಾರಣವಾಗಿ ನಿರೂಪಿಸಲ್ಪಟ್ಟಿವೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ. 1901 ರಿಂದ 2024 ರವರೆಗೆ 117 ಸಾಹಿತ್ಯ ನೊಬೆಲ್ ಪ್ರಕಟಿಸಲಾಗಿದೆ. ಅದರಲ್ಲಿ 121 ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಬಂಗಾಳಿ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
112 ವರ್ಷಗಳ ಹಿಂದೆ ಅಂದರೆ 1913 ರಲ್ಲಿ ಬಂಗಾಳಿ ಲೇಖಕ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ಸಾಹಿತ್ಯ ನೊಬೆಲ್ ಸಿಕ್ಕಿತ್ತು. ಈ ಪ್ರಶಸ್ತಿ ಪಡೆದ ಭಾರತದ ಏಕೈಕ ಲೇಖಕರಾಗಿದ್ದಾರೆ.
✶ ಅಕ್ಟೋಬರ್ 10 :ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ
Nobel Peace Prize 2025 awarded to Venezuela’s María Corina Machado

ವೆನೆಜುವೆಲಾದ ವಿರೋಧ ಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೋಗೆ ಪ್ರಶಸ್ತಿ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸಲು ಅವರು ಮಾಡಿದ ನಿರಂತರ ಕೆಲಸಕ್ಕಾಗಿ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರು ನಡೆಸಿದ ಹೋರಾಟಕ್ಕಾಗಿ ಈ ಗೌರವವನ್ನು ನೀಡಲಾಗಿದೆ.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಲು ನಿರಂತರ ಕೆಲಸ, ಸರ್ವಾಧಿಕಾರಿ ವಿರುದ್ಧ ನ್ಯಾಯಯುತ ಹೋರಾಟ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಹೋರಾಟ ನಡೆಸುತ್ತಿರುವ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸಿದೆ.
1977 ರಲ್ಲಿ ಗ್ರೀನ್ ಬೆಲ್ಸ್ ಚಳುವಳಿಯ ಮೂಲಕ ಗ್ರಾಮೀಣ ಭಾಗದಲ್ಲಿ ಮರಗಳನ್ನು ನೆಡುವುದು, ಪರಿಸರ ಜಾಗೃತಿ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ 2004ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.ಇವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಆಫ್ರಿಕಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ :
ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ11 ಮಿಲಿಯನ್ ಸ್ವೀಡಿಶ್ ಕ್ರೊನೊರ್. ಸ್ವೀಡಿಶ್ ಕರೆನ್ಸಿಯಲ್ಲಿರುವ ಮೊತ್ತವನ್ನ ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿದರೆ ಸರಿಸುಮಾರು 1.17 ಮಿಲಿಯನ್ ಡಾಲರ್. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ 10.36 ಕೋಟಿ ರೂಪಾಯಿ. ನೊಬೆಲ್ ಶಾಂತಿ ಪ್ರಶಸ್ತಿ ಮೊತ್ತ ಬರೋಬ್ಬರಿ 10.36 ಕೋಟಿ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.
ಬಹುತೇಕ ವರ್ಷಗಳಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಇಬ್ಬರು ಅಥವಾ ಮೂವರು ಹಂಚಿಕೊಂಡಿದ್ದೆ ಹೆಚ್ಚು. ಹೀಗಾಗಿ ಪ್ರಶಸ್ತಿ ಮೊತ್ತ ಕೂಡ ಹಂಚಿಕೆ ಮಾಡಲಾಗಿತ್ತು. ಈದರೆ ಈ ಬಾರಿ ವೆನೆಜುವೆಲಾಯದ ಮರಿಯಾ ಕೊರಿನಾ ಮಚಾಡೋ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಯಾರ ಜೊತೆಗೂ ಹಂಚಿಕೆಯಾಗಿಲ್ಲ. ಹೀಗಾಗಿ ಮರಿಯಾ ಕೊರಿನಾ ಮಚಾಡೋ ನೊಬೆಲ್ ಶಾಂತಿ ಮೊತ್ತದ ಸಂಪೂರ್ಣ ಹಣ ಅಂದರೆ 10.36 ಕೋಟಿ ರೂಪಾಯಿ ಪಡೆಯಲಿದ್ದಾರೆ.
2025 ನೊಬೆಲ್ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ
ವರ್ಗ | ದಿನಾಂಕ | ಪ್ರಾಯೋಜಕರು | ವಿಜೇತರು | ಸಂಶೋಧನೆಗಳು |
ಶರೀರಶಾಸ್ತ್ರ ಅಥವಾ ವೈದ್ಯಕೀಯ (Physiology or Medicine) | ಅಕ್ಟೋಬರ್ 6 | ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್, ಸೋಲ್ನಾದ ನೊಬೆಲ್ ಅಸೆಂಬ್ಲಿ | ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್‌ಡೆಲ್ ಮತ್ತು ಶಿಮೊನ್ ಸಕಾಗುಚಿ | ಬಾಹ್ಯ ರೋಗನಿರೋಧಕ ಸಹಿಷ್ಣುತೆಯ ಕುರಿತಾದ ಅವರ ಸಂಶೋಧನೆಗಳಿಗಾಗಿ |
ಭೌತಶಾಸ್ತ್ರ | ಅಕ್ಟೋಬರ್ 7 | ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಸ್ಟಾಕ್‌ಹೋಮ್ | ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ | ವಿದ್ಯುತ್ ಸಕ್ರ್ಯೂಟ್ ನಲ್ಲಿಮ್ಯಾಕ್ರೊಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಎನರ್ಜಿ ಕ್ವಾಂಟೈಜೇಸನ್ ‘ ಆವಿಷ್ಕಾರಕ್ಕಾಗಿ |
ರಸಾಯನಶಾಸ್ತ್ರ | ಅಕ್ಟೋಬರ್ 8 | ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಸ್ಟಾಕ್‌ಹೋಮ್ | ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್ ರಾನ್ ಮತ್ತು ಜೋರ್ಡಾನ್ ಒಮರ್ ಎಂ.ಯಾಫಿ | ‘ಲೋಹ ಸಾವಯವ ಚೌಕಟ್ಟು’ (metal organic frameworks) ಅಭಿವೃದ್ಧಿಯಲ್ಲಿ ಸಂಶೋಧನೆ |
ಸಾಹಿತ್ಯ | ಅಕ್ಟೋಬರ್ 9 | ಸ್ವೀಡಿಷ್ ಅಕಾಡೆಮಿ, ಸ್ಟಾಕ್‌ಹೋಮ್ | ಲಾಸ್ಲೊ ಕ್ರಾಸ್ನಹೊರ್ಕೈ | “Herscht 07769” ಕಾದಂಬರಿಗೆ |
ಶಾಂತಿ | ಅಕ್ಟೋಬರ್ 10 | ನಾರ್ವೇಜಿಯನ್ ನೊಬೆಲ್ ಸಮಿತಿ, ಓಸ್ಲೋ, | ಮರಿಯಾ ಕೊರಿನಾ ಮಚಾಡೋ | ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸಲು ಅವರು ಮಾಡಿದ ನಿರಂತರ ಕೆಲಸಕ್ಕಾಗಿ |
ಆರ್ಥಿಕ ವಿಜ್ಞಾನಗಳು | ಅಕ್ಟೋಬರ್ 13 | ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಸ್ಟಾಕ್‌ಹೋಮ್ | ಘೋಷಿಸಲಾಗುವುದು | ಘೋಷಿಸಲಾಗುವುದು |
✶ ನೊಬೆಲ್ ಪ್ರಶಸ್ತಿ ಎಂದರೇನು?
ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಆದರೆ ಅವರ ಈ ಆವಿಷ್ಕಾರವು ಅವರಿಗೆ ಟೀಕೆಯಷ್ಟೇ ಖ್ಯಾತಿಯನ್ನೂ ತಂದುಕೊಟ್ಟಿತು. ನಂತರ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆಯನ್ನು ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು. ಈ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.
✶ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?
ನೊಬೆಲ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯು ಯಾವಾಗಲೂ ಕುತೂಹಲದ ಮೂಲವಾಗಿದೆ. ವಾಸ್ತವವಾಗಿ, ವ್ಯಕ್ತಿಗಳು ತಮ್ಮನ್ನು ತಾವು ನಾಮ ನಿರ್ದೇಶನ ಮಾಡಲು ಸಾಧ್ಯವಿಲ್ಲ. ಅರ್ಹ ಸಂಸ್ಥೆಗಳು ಅಥವಾ ತಜ್ಞರು ಮಾತ್ರ ನಾಮನಿರ್ದೇಶನ ಸಲ್ಲಿಸಬಹುದು. ಅತ್ಯಂತ ಕುತೂಹಲಕಾರಿಯಾಗಿ ಈ ಚರ್ಚೆಗಳು ಮತ್ತು ನಾಮನಿರ್ದೇಶನಗಳನ್ನು 50 ವರ್ಷಗಳ ಕಾಲ ರಹಸ್ಯವಾಗಿಡಲಾಗುತ್ತದೆ.
ವಿಜ್ಞಾನ ಪ್ರಶಸ್ತಿಗಳನ್ನು ನೀಡುವ ತೀರ್ಪುಗಾರರು ಅತ್ಯಂತ ಸೂಕ್ಷ್ಮವಾಗಿರುತ್ತಾರೆ. ಒಂದು ಆವಿಷ್ಕಾರವು ಮಾನವ ಜೀವನಕ್ಕೆ ಶಾಶ್ವತ ಪ್ರಯೋಜನಗಳನ್ನು ಹೊಂದಿದೆ ಎಂದು ಸಾಬೀತಾಗದ ಹೊರತು ಅದನ್ನು ಗುರುತಿಸಲಾಗುವುದಿಲ್ಲ.
ಶಾಂತಿ ಪ್ರಶಸ್ತಿಯು ಸಾಮಾನ್ಯವಾಗಿ ಪ್ರಸ್ತುತ ಸಂದರ್ಭಗಳು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಸಂದೇಶವನ್ನು ಹೊಂದಿರುತ್ತದೆ. ಒಂದು ಪ್ರಶಸ್ತಿಯನ್ನು ಗರಿಷ್ಠ ಮೂವರು ವಿಜೇತರ ನಡುವೆ ಹಂಚಿಕೊಳ್ಳಬಹುದು, ಆದರೆ ನಿಜವಾದ ಬಹುಮಾನವೆಂದರೆ ಅವರ ಕಠಿಣ ಪರಿಶ್ರಮ, ಆಲೋಚನೆಗಳು ಮತ್ತು ಕೊಡುಗೆಗಳನ್ನು ಇಡೀ ಪ್ರಪಂಚದ ಮುಂದೆ ಅಮರಗೊಳಿಸುವ ಮನ್ನಣೆ.
- Nobel Prize 2025 : 2025ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟ : ಇಲ್ಲಿದೆ ವಿಜೇತರ ಪಟ್ಟಿ
- RRB Recruitment : ರೈಲ್ವೆ ನೇಮಕಾತಿ ಮಂಡಳಿ (RRB)ಯಲ್ಲಿ 8050 ಹುದ್ದೆಗಳಿಗೆ ಅರ್ಜಿ ಆಹ್ವಾನ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (30-09-2025)
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (29-09-2025)
- Asia Cup 2025 : ಏಷ್ಯಾಕಪ್ 2025 ಗೆದ್ದ ಭಾರತ