GKSpardha Times

ಭಾರತದ ಪ್ರಮುಖ ನೃತ್ಯಗಳು

Share With Friends

• ಭರತನಾಟ್ಯ
ಭರತನಾಟ್ಯವು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಹೊರಹೊಮ್ಮಿದ ಕವಿತೆಯನ್ನು ಹಿನ್ನೆಲೆ ಗಾನವಾಗಿ ಅಳವಡಿಸಿಕೊಂಡಿರುವ ಏಕ ಕಲಾವಿದರ ನೃತ್ಯವಾಗಿದೆ. ಈ ನೃತ್ಯವು ಕ್ರಿ.ಪೂ 4000 ರಷ್ಟು ಹಿಂದೆ ಮಹಾಮುನಿ ಭರತನಿಂದ ರಚಿತವಾದ ನಾಟ್ಯಶಾಸ್ತ್ರದ ನಿಯಮಗಳ ಮೇಲೆ ರೂಪಿತವಾಗಿದೆ. ಈ ನೃತ್ಯವು ಕರ್ನಾಟಕದ ಶಾಸ್ತ್ರೀಯ ನೃತ್ಯವಾಗಿದೆ.

• ಒಡಿಸ್ಸಿ
ಕ್ರಿ.ಪೂ 2 ನೇ ಶತಮಾನದಲ್ಲಿ ಈ ನೃತ್ಯ ಪ್ರಕಾರವು ಒರಿಸ್ಸಾದಲ್ಲಿ ಬೆಳವಣಿಗೆಯಾಯಿತು. ಈ ನೃತ್ಯವನ್ನು ಮಹಿಲೆಯರು ಹಾಗೂ ಮಹಿಳೆಯರಂತೆ ವೇಷ ಧರಿಸಿರುವ ಪುರುಷರು ಮಾಡುತ್ತಾರೆ.

• ಕಥಕ್
ಈ ನೃತ್ಯ ಪ್ರಕಾರವು ಉತ್ತರ ಭಾರತದಲ್ಲಿ ಪ್ರಾರಂಭವಾಯಿತು. ಈ ನೃತ್ಯವು ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟಿದ್ದು, ಈ ನೃತ್ಯಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಲಾಗಿದೆ.

• ಕಥಕ್ಕಳಿ
ಇದು ಕೇರಳದ ನೃತ್ಯ ಪ್ರಕಾರವಾಗಿದ್ದು, ನೃತ್ಯದಲ್ಲಿ ಕಥೆಯನ್ನು ನಿರೂಪಿಸುವ ಒಂದು ಬಗೆಯ ನೃತ್ಯವಾಗಿದೆ.

• ಮಣಿಪುರಿ
ಇದು ಮಣಿಪುರ ರಾಜ್ಯದ ಪ್ರಮುಖ ನೃತ್ಯವಾಗಿದೆ.

• ಲಾವಣಿ
ಇದು ಮಹಾರಾಷ್ಟ್ರದ ಪ್ರಮುಖ ನೃತ್ಯವಾಗಿದೆ.

• ಚಕಿಯಾರ್‍ಕೂಟು
ಈ ನೃತ್ಯ ಪ್ರಕಾರವನ್ನು ಕೇರಳದಲ್ಲಿ ವಲಸೆ ಬಂದ ಆರ್ಯರು ಪ್ರಾರಂಭಿಸಿದರು. ಈ ನೃತ್ಯವು ಕೇರಳದ ಚಕಿಯಾರ್ ಜನರಿಗೆ ಮಾತ್ರ ಸೀಮಿತವಾಗಿದೆ.

• ಕೂಚಿಪುಡಿ
ಈ ನೃತ್ಯ ಪ್ರಕಾರವು ಆಂಧ್ರಪ್ರದೇಶದ ಕುಚೆಲ್‍ಪುರ ಎಂಬಲ್ಲಿ 17 ನೇ ಶತಮಾನದಲ್ಲಿ ಬೆಳವಣಿಗೆಯಾಯಿತು. ಈ ನೃತ್ಯವು ಹೆಚ್ಚು ಕಡಿಮೆ ಭರತನಾಟ್ಯಕ್ಕೆ ಸಾಮ್ಯತೆಯನ್ನು ಹೊಂದಿದೆ.

• ಮೋಹಿನಿ ಅಟ್ಟಂ
ಇದು ಕೇರಳದ ನೃತ್ಯ ಪ್ರಕಾರವಾಗಿದೆ.

• ಜಾನಪದ ನೃತ್ಯಗಳು
1. ಬಂಗ್ರಾ – ಪಂಜಾಬ್
2. ಬೌಲ್- ಪಶ್ಚಿಮ ಬಂಗಾಳ
3. ಬಿಹು- ಅಸ್ಸಾಂ
4. ಭವೈ- ಗುಜರಾತ್
5. ಭಕವತಾ- ಒರಿಸ್ಸಾ
6. ಚೌ – ಪಶ್ಚಿಮ ಬಂಗಾಳ
7. ಚಕ್ರಿ- ಜಮ್ಮು- ಕಾಶ್ಮೀರ
8. ದಾಂಡಿಯಾ- ಗುಜರಾತ್
9. ಗಂಗೋರ- ರಾಜಸ್ಥಾನ
10. ಗಫಾ – ಮಹಾರಾಷ್ಟ್ರ
11. ಗಿಡ್ಡಾ – ಪಂಜಾಬ್
12. ಗರ್ಬಾ – ಗುಜರಾತ್
13. ಜುಲನ್ ಲೀಲ- ರಾಜಸ್ಥಾನ
14. ಜುಮಾರ್- ರಾಜಸ್ಥಾನ
15. ಕುಕಿ ಜಂಬೂ- ನಾಗಲ್ಯಾಂಡ್
16. ಕುಮ್ಮಿ – ತಮಿಲುನಾಡು ಮತ್ತು ಕೇರಳ
17. ಕರಗಂ- ತಮಿಳುನಾಡು
18. ಕವಡಿ- ತಮಿಳುನಾಡು
19. ಲೋಟ- ಮಧ್ಯಪ್ರದೇಶ
20. ಕೊಟ್ಟಂ -ಆಂಧ್ರಪ್ರದೇಶ
21. ತಯ್ಯಂ- ಕೇರಳ
22. ತೇರುಕೂಟು- ತಮಿಳುನಾಡು
23. ರಾಸಿಲ- ಗುಜರಾತ್
24. ಮಹಾರಸ- ಮಣಿಪುರ
25. ಪಂಢ್ವಾನಿ – ಮಧ್ಯಪ್ರದೇಶ
26. ಖಾಯಲ್- ರಾಜಸ್ಥಾನ
27. ಮೌನಿ- ಮಹಾರಾಷ್ಟ್ರ
28. ಕಂಸಾಳೆ- ಕರ್ನಾಟಕ

 

error: Content Copyright protected !!