GKPersons and PersonaltySpardha Times

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

Share With Friends

1.ಶಂಕರಾಚಾರ್ಯರು
*   ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.
*   ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.
*   ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ ಸಿದ್ದಾಂತವನ್ನು ಬೋಧಿಸಲು ಭಾರತದಾದ್ಯಂತ ಸಂಚರಿಸಿದರು.ಶಂಕರರು ತಮ್ಮ ‘ಅದ್ವೈತ’ ಸಿದ್ದಾಂತದಲ್ಲಿ ಲೋಕದಲ್ಲಿ ಬ್ರಹ್ಮನೇ ಸತ್ಯ, ಅವನು ನಿರ್ಗುಣ, ನಿರಾಕಾರ ಮತ್ತು ಸ್ವಪ್ರಕಾಶ. ಅವನನ್ನು ಬಿಟ್ಟರೆ ಜಗತ್ತೆಲ್ಲಾ ಬರಿಯ ಮಾಯೆ ಎಂದು ಬೋಧಿಸಿದರು.
*  ವಿವೇಕ ಚೂಡಾಮಣಿ, ದಕ್ಷಿಣಾಮೂರ್ತಿ ಸ್ತೋತ್ರ, ಆನಂದಲಹರಿ, ಸೌಂದರ್ಯ ಲಹರಿ, ಆತ್ಮಬೋಧ, ಭಜಗೋವಿಂದ ಸ್ತೋತ್ರ, ವೇದಾಂತ ಸಾರ, ವೇದಾಂತ ಸಂಗ್ರಹ ಮುಂತಾದ ಗ್ರಂತಗಳನ್ನು ರಚಿಸಿದರು.
*  ಶಂಕರರು ಭಾರತದಾದ್ಯಂತ ಹಲವು ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದವುವೆಂದರೆ, ಪೂರ್ವ ದಿಕ್ಕಿನಲ್ಲಿ ಒರಿಸ್ಸಾದ ಪುರಿಯಲ್ಲಿ ಸ್ಥಾಪಿಸಿರುವ ಗೋವರ್ಧನ ಪೀಠ, ಪಶ್ಚಿಮ ದಿಕ್ಕಿನಲ್ಲಿ ಗುಜರಾತ್‍ನ ದ್ವಾರಕಾದಲ್ಲಿ ಸ್ಥಾಪಿಸಿರುವ ಕಾಳಿಕಾಮಠ, ಉತ್ತರ ದಿಕ್ಕಿನಲ್ಲಿ ಉತ್ತರಪ್ರದೇಶದ ಬದರಿಯಲ್ಲಿ ಸ್ಥಾಪಿಸಿರುವ ಜ್ಯೋತಿರ್ಮಠ ಹಾಗೂ ದಕ್ಷಿಣದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿ ಸ್ಥಾಪಿಸಿರುವ ಶಾರದಾಪೀಠ.


2.ರಾಮಾನುಜಾಚಾರ್ಯ
*  ರಾಮಾನುಜಾಚಾರ್ಯರು ಕ್ರಿ.ಶ 1017 ರಲ್ಲಿ ತಮಿಳುನಾಡಿನ ಪೆರಂಬದೂರ್ ಎಂಬಲ್ಲಿ ‘ಅಸುರಿಕೇಶವ ಸೋಮಯಾಜಿ’ ಮತ್ತು ‘ಕಾಂತಿಮತಿ’ ಎಂಬ ಬ್ರಾಹ್ಮಣ ದಂಪತಿಗಳ ಪುತ್ರನಾಗಿ ಜನಿಸಿದರು.
*  ಅವರು 16 ನೇ ವಯಸ್ಸಿನಲ್ಲಿ ರಕ್ಷಂಬಾಳ್ ಅಥವಾ ‘ತಂಗಮ್ಮ’ ಎಂಬುವರನ್ನು ವಿವಾಹವಾದರು. ನಂತರ ಸಂಸಾರವನ್ನು ತೊರೆದು ಸನ್ಯಾಸ ಸ್ವೀಕರಿಸಿದರು.
*  ಶಂಕರಾಚಾರ್ಯರ ಅದ್ವೈತ ಸಿದ್ದಾಂತವನ್ನು ನಿರಾಕರಿಸಿದ ರಾಮಾನುಜಾಚಾರ್ಯರು ‘ವಿಶಿಷ್ಟಾದ್ವೈತ’ ಸಿದ್ದಾಂತವನ್ನು ಪ್ರತಿಪಾದಿಸಿದರು. ಅವರು ದೇವರು ನಿರ್ಗುಣನಲ್ಲ, ಸತ್ಯಗುಣ, ಎಲ್ಲಾ ಉದಾತ್ತ ಗುಣಗಳನ್ನುಳ್ಳ ಸ್ವಪ್ರಜ್ಞ, ಶಾಶ್ವತ, ಆನಂದಮಯ ಎಂದು ಬೋಧಿಸಿದರು.
*  ರಾಮಾನುಜಾಚಾರ್ಯರು ಶ್ರೀಭಾಷ್ಯ, ಗೀತಭಾಷ್ಯ, ಶ್ರೀರಂಗಗದ್ಯ, ಶ್ರೀಕಂಠಗದ್ಯ, ನಿತ್ಯಗದ್ಯ ಮುಂತಾದ ಗ್ರಂಥಗಳನ್ನು ರಚಿಸಿದರು.


ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು


3.ಮಧ್ವಾಚಾರ್ಯರು
*   ಮಧ್ವಾಚಾರ್ಯರು ಉಡುಪಿಯ ಸಮೀಪದ ‘ಪಾಜಕ’ ಎಂಬ ಗ್ರಾಮದಲ್ಲಿ ಮಧ್ವಗೃಹ ‘ನಾರಾಯಣ ಬಟ್ಟ’ ಮತ್ತು ‘ವೇದವತಿ’ ದಂಪತಿಗಳ ಮಗನಾಗಿ ಕ್ರಿ.ಶ.1238 ರಲ್ಲಿ ಜನಿಸಿದರು.
*   ಇವರ ಮೊದಲ ಹೆಸರು ವಾಸುದೇವ.
*  ಅವರು ಉತ್ತರ ಭಾರತ ಪ್ರವಾಸ ಮುಗಿಸಿ ವಾಪಾಸಾಗುವಾಗ ಅವರಿಗೆ ದ್ವಾರಕೆಯಲ್ಲಿ ದೊರಕಿದ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು.
*  ಅದ್ವೈತ ಸಿದ್ದಾಂತದ ತೀವ್ರ ವಿರೋಧಿಯಾಗಿದ್ದ ಅವರು ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಅವರ ಪ್ರಕಾರ ವಿಶ್ವದ ಕರ್ತೃ ಹಾಗೂ ಅದರ ಪಾಲಕರು ವಿಷ್ಣು ಮತ್ತು ಲಕ್ಷ್ಮೀ, ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಅಲ್ಲ, ಅವು ಬೇರೆ ಬೇರೆ, ಪರಮಾತ್ಮನನ್ನು ಒಲಿಸಿಕೊಳ್ಳಲು ಭಕ್ತಿ ಅತ್ಯಂತ ಸೂಕ್ತವಾದುದು ಮತ್ತು ಸರಳವಾದುದು.
*  ವೇದೊಪನಿಷತ್ತುಗಳಲ್ಲಿ ಪಾರಂಗತರಾಗಿದ್ದ ಮಧ್ವಾಚಾರ್ಯರು ಹಲವಾರು ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಗೀತಭಾಷ್ಯ, ಬ್ರಹ್ಮಸೂತ್ರ ಭಾಷ್ಯ, ತತ್ವವಿವೇಕ, ಅನುವ್ಯಾಕರಣ, ಅನುಭಾಷ್ಯ, ಗೀತಾತಾತ್ಪರ್ಯ ನಿರ್ಣಯ.

ಡೈಲಿ TOP-10 ಪ್ರಶ್ನೆಗಳು (22-12-2023)

 

Leave a Reply

Your email address will not be published. Required fields are marked *

error: Content Copyright protected !!